ವೈಶಾಖ ಮಾಸದ ಪೂಜೆಗೆ ಇದೆ ಇನ್ನಿಲ್ಲದ ಪ್ರಾಮುಖ್ಯತೆ; ಈ ವ್ರತ, ಹೋಮಗಳನ್ನು ಮಾಡಿದರೆ ಸಕಲ ಸಮಸ್ಯೆಗೂ ಪರಿಹಾರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೈಶಾಖ ಮಾಸದ ಪೂಜೆಗೆ ಇದೆ ಇನ್ನಿಲ್ಲದ ಪ್ರಾಮುಖ್ಯತೆ; ಈ ವ್ರತ, ಹೋಮಗಳನ್ನು ಮಾಡಿದರೆ ಸಕಲ ಸಮಸ್ಯೆಗೂ ಪರಿಹಾರ

ವೈಶಾಖ ಮಾಸದ ಪೂಜೆಗೆ ಇದೆ ಇನ್ನಿಲ್ಲದ ಪ್ರಾಮುಖ್ಯತೆ; ಈ ವ್ರತ, ಹೋಮಗಳನ್ನು ಮಾಡಿದರೆ ಸಕಲ ಸಮಸ್ಯೆಗೂ ಪರಿಹಾರ

Vaishaka Masa: ವೈಶಾಖ ಮಾಸದ ಪೂಜೆಗೆ ಬಹಳ ಪ್ರಾಮುಖ್ಯತೆ ಇದೆ. ಈ ಸಮಯದಲ್ಲಿ ವಿಷ್ಣುವಿನ ಆರಾಧನೆಗೆ ಬಹಳ ಮಹತ್ವವಿದೆ. ಶ್ರೀಪುರುಷ ಸೂಕ್ತ ಹೋಮ, ಮನ್ಯು ಸೂಕ್ತ ಹೋಮ ಸೇರಿದಂತೆ ಇನ್ನಿತರ ಪೂಜೆಗಳನ್ನು ಮಾಡಿದರೆ ಸಕಲ ಸಮಸ್ಯೆಗೂ ಪರಿಹಾರ ದೊರೆಯುತ್ತದೆ.

ವೈಶಾಖ ಮಾಸದ ಪೂಜೆಗೆ ಇದೆ ಇನ್ನಿಲ್ಲದ ಪ್ರಾಮುಖ್ಯತೆ; ಈ ವ್ರತ, ಹೋಮಗಳನ್ನು ಮಾಡಿದರೆ ಸಕಲ ಸಮಸ್ಯೆಗೂ ಪರಿಹಾರ
ವೈಶಾಖ ಮಾಸದ ಪೂಜೆಗೆ ಇದೆ ಇನ್ನಿಲ್ಲದ ಪ್ರಾಮುಖ್ಯತೆ; ಈ ವ್ರತ, ಹೋಮಗಳನ್ನು ಮಾಡಿದರೆ ಸಕಲ ಸಮಸ್ಯೆಗೂ ಪರಿಹಾರ

ಪಾಡ್ಯದಿಂದ ಅಮಾವಾಸ್ಯೆಯವರೆಗೂ ಕೃಷ್ಣಪಕ್ಷ ಎಂದು ಕರೆಯುತ್ತೇವೆ. ಅಮಾವಾಸ್ಯೆ ನಂತರ ಬರುವ ಪಾಡ್ಯದಿಂದ ಹುಣ್ಣಿಮೆಯ ದಿನದವರೆಗೂ ಶುಕ್ಲಪಕ್ಷ ಎಂದು ಕರೆಯುತ್ತೇವೆ. ಶುಕ್ಲ ಪಕ್ಷದಲ್ಲಿ ಯಾವುದೇ ರೀತಿಯ ಶುಭಕರ ಕೆಲಸ ಕಾರ್ಯಗಳನ್ನು ಮಾಡಬಹುದು. ಆದರೆ ಕೃಷ್ಣಪಕ್ಷದಲ್ಲಿ ಶುಭ ಕೆಲಸಗಳನ್ನು ಮಾಡಲು ನಿಷೇಧವಿದೆಯೆಂದು ಧಾರ್ಮಿಕ ಗ್ರಂಥಗಳಿಂದ ತಿಳಿದು ಬರುತ್ತದೆ. ಆದರೆ ವೈಶಾಖ ಮಾಸದಲ್ಲಿ ಕೃಷ್ಣಪಕ್ಷವೂ ನಮಗೆ ಅತಿ ಮುಖ್ಯವಾಗುತ್ತದೆ.

ವಿಷ್ಣುವಿನ ಪೂಜೆಗಿದೆ ಬಹಳ ಪ್ರಾಮಖ್ಯತೆ

ಜೂನ್‌ ತಿಂಗಳ ಅಮಾವಾಸ್ಯೆವರೆಗೂ ವೈಶಾಖ ಮಾಸ ಇರುತ್ತದೆ. ನಂತರ ಜ್ಯೇಷ್ಠ ಮಾಸ ಆರಂಭವಾಗುತ್ತದೆ. ಈ ಅವಧಿಯಲ್ಲಿ ಧಾರ್ಮಿಕ ಕ್ರಿಯಾ ವಿಧಿಗಳಲ್ಲಿ ನಂಬಿಕೆ ಇದ್ದವರಿಗೆ ಗಂಧ, ಹೂವು, ಬೆಲ್ಲದಿಂದ ಮಾಡಿದ ಪಾನಕ ಮತ್ತು ಬಾಳೆಹಣ್ಣನ್ನು ದಾನ ನೀಡಬೇಕು. ಇದರಿಂದಾಗಿ ಜನ್ಮಜನ್ಮಾಂತರದಲ್ಲಿ ಮಾಡಿದ ಪಾಪವು ದೂರವಾಗುತ್ತದೆ. ಸೂರ್ಯೋದಯದ ವೇಳೆಗೆ ದೇವರ ಪೂಜೆಯನ್ನು ಮುಗಿಸಿ ದೇವರಿಗೆ ಮಂಗಳಾರತಿಯನ್ನು ಮಾಡಿದಲ್ಲಿ ವಿಶೇಷ ಫಲಗಳು ದೊರೆಯುತ್ತವೆ. 

ಈ ಅವಧಿಯಲ್ಲಿ ತುಳಸಿ ದಳಗಳಿಂದ ವಿಷ್ಣುವಿನ ಪೂಜೆಯನ್ನು ಮಾಡಬೇಕು. ಆನಂತರ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಮಾಡಿದ ನಂತರ ಗಿಡದ ಬುಡಕ್ಕೆ ನೀರನ್ನು ಹಾಕಬೇಕು. ಈ ದಿನಗಳಲ್ಲಿ 3 ಕಾಲ ಪೂಜೆ ಮಾಡಿದಲ್ಲಿ ಕುಲದ ಉದ್ಧಾರವಾಗುವುದು. ವಂಶಕ್ಕಿರುವ ಶಾಪವೂ ನಶಿಸಿಹೋಗುವುದು. ಈ ದಿನಗಳಲ್ಲಿ ಗೋವಿಗೆ ಮಾಡುವ ಪ್ರತಿಯೊಂದು ಸೇವೆಯೂ ಬಹಳ ಶುಭ ಫಲಗಳನ್ನು ನೀಡುತ್ತವೆ. ಕೆಲವು ಕಡೆ ಈ ಮಾಸದಲ್ಲಿ ಬೀಸಣಿಗೆ ಮತ್ತು ಚಪ್ಪಲಿಗಳನ್ನು ದಾನ ನೀಡುತ್ತಾರೆ.

ಈ ಸಮಯದಲ್ಲಿ ಪ್ರತಿದಿನ ಶ್ರೀವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದಲೂ, ಕನಿಷ್ಠ ಪಕ್ಷ ಕೇಳುವುದರಿಂದಲೂ ಶುಭಫಲಗಳನ್ನು ಪಡೆಯಬಹುದು. ಶ್ರೀಪುರುಷ ಸೂಕ್ತ ಹೋಮ ಮಾಡುವುದರಿಂದ ಕುಟುಂಬಕ್ಕೆ ಆಗಿರುವ ದೃಷ್ಠಿಯು ನಿವಾರಣೆ ಆಗುವುದು. ಈ ಹೋಮದಿಂದ ಮನೆಯಲ್ಲಿ ಇರುವ ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ. ಈ ಹೋಮದ ರಕ್ಷೆಯನ್ನು ಹಣೆಯಲ್ಲಿ ಧರಿಸಿದಲ್ಲಿ ಕಣ್ಣು ದೃಷ್ಠಿ ದೂರವಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸುಲಭ ಯಶಸ್ಸು ದೊರೆಯುತ್ತದೆ. ಮನ್ಯು ಸೂಕ್ತ ಹೋಮವನ್ನು ಮಾಡಿದಲ್ಲಿ ಉದ್ಯೋಗದಲ್ಲಿನ ತೊಂದರೆಗಳು ಮರೆಯಾಗುತ್ತದೆ. ಸಾಲವಾಗಿ ಕೊಟ್ಟ ಹಣವು ಮರಳಿ ಕೈಸೇರುತ್ತದೆ. ಬಹಳ ಮುಖ್ಯವಾಗಿ ಕುಟುಂಬದ ವಿಚಾರದಲ್ಲಾಗಲೀ ಅಥವಾ ಉದ್ಯೋಗದ ವಿಚಾರದಲ್ಲಾಗಲಿ ನಿಮ್ಮ ವಿರೋಧಿಗಳು ತೊಂದರೆ ನೀಡುವುದನ್ನು ನಿಲ್ಲಿಸುತ್ತಾರೆ.

ಮೇ 26ಕ್ಕೆ ಸಂಕಷ್ಟಹರ ಚತುರ್ಥಿ

ಈ ಬಾರಿ ಸಂಕಷ್ಟಹರ ಸಂಕಷ್ಟಹರ ಚತುರ್ಥಿಯು ಮೇ 26, ಭಾನುವಾರ ದಿನಾಂಕದಂದು ಬಂದಿದೆ. ಆದ್ದರಿಂದ ಅಂದಿನ ಪೂಜೆಯಿಂದ ಮುಖ್ಯವಾಗಿ ಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ. ಅಂದು ಉದಯದಲ್ಲಿ ಮೂಲ ನಕ್ಷತ್ರವಿದೆ. ಇದರಿಂದಾಗಿ ವಿದ್ಯಾರ್ಜನೆಯಲ್ಲಿನ ಅಡಚಣೆಗಳು ದೂರವಾಗುತ್ತವೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಕುಟುಂಬದ ಹಿರಿಯರ ಜೊತೆ ಉತ್ತಮ ಸಂಬಂಧ ರೂಪುಗೊಳ್ಳುತ್ತದೆ. ಈ ದಿನ ಗಣಪತಿಗೆ 21 ಗರಿಕೆಗಳುಳ್ಳ 21 ಗುಚ್ಚವಿರುವ ಹಾರವನ್ನು ಅರ್ಪಿಸುವುದರಿಂದ ಶುಭಫಲಗಳನ್ನು ಪಡೆಯಬಹುದು. ಈ ದಿನ ಶಕ್ತಿಗಣಪತಿ ಪೂಜೆ ಮಾಡುವುದರಿಂದ ಜೀವನದ ಸಂಕಷ್ಟಗಳು ದೂರವಾಗುತ್ತವೆ. ಮಾತ್ರವಲ್ಲದೆ ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಜೂನ್ 2ರಂದು ಏಕಾದಶಿ ಬರಲಿದೆ. ಆ ದಿನ ಉಪವಾಸ ಮಾಡುವುದರಿಂದ 7 ಜನ್ಮಗಳ ಪಾಪಕರ್ಮಗಳಿಂದ ಮುಕ್ತಿ ಪಡೆಯಬಹುದು. ಈ ದಿನ ವೃದ್ಧರಿಗೆ ಅವಲಕ್ಕಿಯಿಂದ ಮಾಡಿದ ತಿಂಡಿ ಮತ್ತು ತಿಳಿ ಮಜ್ಜಿಗೆಯನ್ನು ನೀಡುವುದರಿಂದ ಬಡತನ ನಿವಾರಣೆ ಆಗುತ್ತದೆ. ಜೂನ್‌ 4 ರಂದು ಭರಣಿ ನಕ್ಷತ್ರ ಇದ್ದು ಈ ದಿನ ಪ್ರದೋಷ ಪೂಜೆ ಮಾಡುವುದರಿಂದ ಅಕಾಲ ಮೃತ್ಯುವಿನಿಂದ ಪಾರಾಗಬಹುದು. ಕುಟುಂಬದಲ್ಲಿ ಮುಖ್ಯವಾಗಿ ದಂಪತಿ ನಡುವೆ ಪ್ರೀತಿ ವಿಶ್ವಾಸಗಳು ಹೆಚ್ಚುತ್ತವೆ. ಜೂನ್ 6ರಂದು ಅಮಾವಾಸ್ಯೆ ಇದ್ದು ಇದನ್ನು ಬಾದಾಮಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನ ಚಂದ್ರ ಶಾಂತಿ ಮತ್ತು ಚಂದ್ರಪೂಜೆಗೆ ಪ್ರಾಮುಖ್ಯತೆ ಇರುತ್ತದೆ. ಶ್ರೀ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಕುಟುಂಬಕ್ಕೆ ಶ್ರೀ ದುರ್ಗಾಮಾತೆಯ ರಕ್ಷಣೆ ದೊರೆಯುತ್ತದೆ. ಶ್ರೀ ದುರ್ಗಾಪೂರ್ಜೆ ಮತ್ತು ದುರ್ಗೆಗೆ ಸಂಬಂಧಿಸಿದ ಶ್ಲೋಕಗಳು ಮತ್ತು ಸೂಕ್ತಗಳ ಪಠಣೆಯೂ ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.