ಕನ್ನಡ ಸುದ್ದಿ  /  Astrology  /  Vastu Tips Why Food Not To Be Eaten On Bed What Vastushastra Says Vastu Rules To Eating Food Rsm

Vastu Tips: ಹಾಸಿಗೆ ಮೇಲೆ ಕುಳಿತು ಏಕೆ ಊಟ ಮಾಡಬಾರದು? ವಾಸ್ತು ನಿಯಮ ಏನು ಹೇಳುತ್ತದೆ?

Vastu Tips for Food: ವಾಸ್ತುಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿ ಮನೆಯಲ್ಲಿ ಹಾಸಿಗೆ ಮೇಲೆ ಕುಳಿತು ಊಟ ಮಾಡುವುದು ತಪ್ಪು. ಈ ರೀತಿ ಮಾಡುವುದರಿಂದ ಮನೆಗೆ ಶುಭವಲ್ಲ,ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ. ಹೀಗೆ ಊಟ ಮಾಡುವುದರಿಂದ ಇನ್ನೂ ಏನೆಲ್ಲಾ ಸಮಸ್ಯೆ ಉಂಟಾಗಬಹುದು? ಇಲ್ಲಿದೆ ಮಾಹಿತಿ.

ಹಾಸಿಗೆ ಮೇಲೆ ಕುಳಿತು ಏಕೆ ಊಟ ಮಾಡಬಾರದು? (ಸಾಂದರ್ಭಿಕ ಚಿತ್ರ)
ಹಾಸಿಗೆ ಮೇಲೆ ಕುಳಿತು ಏಕೆ ಊಟ ಮಾಡಬಾರದು? (ಸಾಂದರ್ಭಿಕ ಚಿತ್ರ) (PC: Pixabay)

Vastu Tips: ಊಟ ತನ್ನಿಚ್ಛೆ ನೋಟ ಪರರ ಇಚ್ಛೆ ಎಂಬ ಮಾತಿದೆ. ಆದರೆ ಜ್ಯೋತಿಷ್ಯ, ವಾಸ್ತು ಪ್ರಕಾರ ನೀವು ಶಿಸ್ತುಬದ್ಧವಾಗಿ ಊಟ ಮಾಡಬೇಕು. ಎಲ್ಲೆಂದರಲ್ಲಿ, ಹೇಗೆಂದರಲ್ಲಿ ಕುಳಿತು ಊಟ ಮಾಡುವುದು ಶ್ರೇಯಸ್ಸಲ್ಲ ಎಂಬುದನ್ನು ಮನೆಯ ಹಿರಿಯರು ಹೇಳಿರುವ ಮಾತನ್ನು ನಾವು ಆಗ್ಗಾಗ್ಗೆ ಕೇಳುತ್ತೇವೆ. ಹಾಗಾದರೆ ಊಟ ಮಾಡುವ ಸರಿಯಾದ ವಿಧಾನ ಯಾವುದು ನೋಡೋಣ.

ಕೆಲವರಿಗೆ ನೆಲದ ಮೇಲೆ ಕುಳಿತು ತಟ್ಟೆಯನ್ನು ತೊಡೆಯ ಮೇಲೆ ಹಿಡಿದು ತಿಂದರೆ ತೃಪ್ತಿ, ಕೆಲವರು ಡೈನಿಂಗ್‌ ಟೇಬಲ್‌ ಮೇಲೆ ಕುಳಿತು ತಿನ್ನಲು ಖುಷಿ ಪಡುತ್ತಾರೆ. ಆದರೆ ಇನ್ನೂ ಕೆಲವರು ಹಾಸಿಗೆ ಮೇಲೆ ಕುಳಿತು ಊಟ ಮಾಡುತ್ತಾರೆ. ಆದರೆ ವಾಸ್ತು ಪ್ರಕಾರ, ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಹೀಗೆ ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು ಮತ್ತು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.

ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ದಿನಚರಿಯಲ್ಲಿ ಇಂತಹ ಅನೇಕ ಅಭ್ಯಾಸಗಳನ್ನು ಉಲ್ಲೇಖಿಸಲಾಗಿದೆ, ಇದು ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕತೆಯನ್ನು ಉಂಟುಮಾಡಬಹುದು. ಇದಲ್ಲದೆ, ಈ ತಪ್ಪು ಅಭ್ಯಾಸಗಳು ವಾಸ್ತು ದೋಷಗಳನ್ನು ಉಂಟುಮಾಡುತ್ತವೆ. ಹಾಸಿಗೆಯ ಮೇಲೆ ಕುಳಿತು ತಿನ್ನುವುದರಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಪ್ರಕಾರ ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗಬಹುದು ನೋಡೋಣ.

  • ವಾಸ್ತು ಪ್ರಕಾರ ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವುದರಿಂದ ಮನೆಯಲ್ಲಿ ಬಡತನ ಉಂಟಾಗುತ್ತದೆ.
  • ಪ್ರತಿ ದಿನ ಹಾಸಿಗೆ ಮೇಲೆ ಕುಳಿತು ಆಹಾರ ಸೇವಿಸುವುದರಿಂದ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
  • ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಎಂದು ನಂಬಲಾಗಿದೆ.
  • ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ ಮತ್ತು ವಾಸ್ತು ದೋಷಗಳೂ ಉಂಟಾಗುತ್ತವೆ.
  • ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವುದರಿಂದ ರಾಹುವಿಗೆ ಅಶುಭ ಫಲ ನೀಡುತ್ತದೆ ಮತ್ತು ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
  • ಈ ರೀತಿ ಮಾಡುವುದರಿಂದ ತಾಯಿ ಅನ್ನಪೂರ್ಣ ಕೋಪಗೊಳ್ಳಬಹುದು. ಆದ್ದರಿಂದ, ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ಸೇವಿಸದಿರಿ.

ಇದನ್ನೂ ಓದಿ: ನಿಮ್ಮ ಮನೆಗೆ ಧನಾತ್ಮಕ ಶಕ್ತಿ ನೀಡತ್ತೆ ನಿಸರ್ಗಕ್ಕೆ ಸಂಬಂಧಿಸಿದ ಈ 7 ವರ್ಣಚಿತ್ರಗಳು

ಆಹಾರಕ್ಕೆ ಸಂಬಂಧಿಸಿದ ವಾಸ್ತು ಸಲಹೆಗಳು

  • ರಾತ್ರಿ ಊಟವಾದ ನಂತರ ಪಾತ್ರೆಗಳನ್ನು ತಕ್ಷಣ ಸ್ವಚ್ಛಗೊಳಿಸಬೇಕು. ಅಡುಗೆ ಮನೆಯನ್ನು ಕೊಳಕು ಇಟ್ಟುಕೊಳ್ಳುವುದರಿಂದ ತಾಯಿ ಅನ್ನಪೂರ್ಣೆ ಕೋಪಗೊಳ್ಳಬಹುದು ಎಂದು ನಂಬಲಾಗಿದೆ.
  • ವಾಸ್ತು ಪ್ರಕಾರ ಯಾವಾಗಲೂ ನೆಲದ ಮೇಲೆ ಕಾಲು ಮಡಚಿಕೊಂಡು ಆರಾಮವಾಗಿ ಊಟ ಮಾಡಬೇಕು. ಡೈನಿಂಗ್ ಟೇಬಲ್ ಮೇಲೆ ಕೂತು ಆಹಾರ ಸೇವಿಸಬಹುದು.
  • ಊಟ ಮಾಡುವಾಗ ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.