Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ನೀವು ಸಂಪಾದಿಸುವ ಹಣ ಉಳಿಯುವುದಿಲ್ಲ; ಇನ್ನಾದರೂ ಜಾಗ್ರತೆಯಿಂದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ನೀವು ಸಂಪಾದಿಸುವ ಹಣ ಉಳಿಯುವುದಿಲ್ಲ; ಇನ್ನಾದರೂ ಜಾಗ್ರತೆಯಿಂದಿರಿ

Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ನೀವು ಸಂಪಾದಿಸುವ ಹಣ ಉಳಿಯುವುದಿಲ್ಲ; ಇನ್ನಾದರೂ ಜಾಗ್ರತೆಯಿಂದಿರಿ

Vastu Tips: ಜೀವನದಲ್ಲಿ ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಬಹಳ ಇದೆ. ಆದರೆ ಸಂಪಾದನೆ ಮಾಡಿದ ಹಣವೆಲ್ಲಾ ಒಂದೇ ಸಮ ಪೋಲಾಗುತ್ತಿದ್ದರೆ ಬಹಳ ಬೇಸರವಾಗುತ್ತದೆ. ನಿಮ್ಮ ಮನೆಯಲ್ಲಿರುವ ವಾಸ್ತು ದೋಷ ಕೂಡಾ ಇದಕ್ಕೆ ಕಾರಣವಿರಬಹುದು. ಆದ್ದರಿಂದ ಇನ್ನಾದರೂ ಈ ವಾಸ್ತು ದೋಷಗಳನ್ನು ಸರಿಪಡಿಸಿಕೊಳ್ಳಿ.

ವಾಸ್ತು ಸಲಹೆ
ವಾಸ್ತು ಸಲಹೆ

ವಾಸ್ತು ಸಲಹೆ: ಮನೆ, ಕಚೇರಿ ಎಲ್ಲದಕ್ಕೂ ವಾಸ್ತು ಬಹಳ ಮುಖ್ಯವಾಗಿದೆ. ಹಾಗೇ ಮನೆಯ ಪ್ರತಿ ಕೋಣೆಗೂ, ದಿಕ್ಕಿಗೂ ವಾಸ್ತು ಅಳವಡಿಸಿಕೊಂಡರೆ ಎಲ್ಲವೂ ಸುಸೂತ್ರವಾಗಿ ಸಾಗಲಿದೆ. ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರ ಬಹಳ ಮುಖ್ಯ. ವಾಸ್ತು ನಿಯಮಗಳು ಮತ್ತು ದೋಷಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ವಾಸ್ತು ಸರಿ ಇದ್ದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ವಾಸ್ತು ದೋಷವಿದ್ದಲ್ಲಿ ಅದು ಮನುಷ್ಯನ ಜೀವನದ ಮೇಲೂ ಪ್ರಭಾವ ಬೀರುತ್ತದೆ.

ವಾಸ್ತು ದೋಷ ಇದ್ದಲ್ಲಿ ಮನೆಯಲ್ಲಿ ಸುಖ, ಸಂತೋಷ ಇರುವುದಿಲ್ಲ. ಕಷ್ಟಪಟ್ಟು ದುಡಿದು ಹಣ ಸಂಪಾದಿಸಿದರೂ ಅದು ಯಾವುದೋ ರೂಪದಲ್ಲಿ ವ್ಯರ್ಥವಾಗುತ್ತದೆ ವಾಸ್ತು ದೋಷಗಳಿದ್ದರೆ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ನೀವು ಹಣವನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಪ್ರವೇಶಿಸುವ ಸಾಧ್ಯತೆಯಿದೆ. ಆದ್ದರಿಂದ ವಾಸ್ತು ದೋಷದ ಬಗ್ಗೆ ನೀವು ಸದಾ ಜಾಗರೂಕರಾಗಿರಬೇಕು. ಇಲ್ಲಿ ಸೂಚಿಸಿರುವ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಿ.

ನೀರು ಸೋರಲು ಬಿಡಬೇಡಿ

ನಲ್ಲಿ ನಿಲ್ಲಿಸುವಾಗ ಕೆಲವರಿಗೆ ಪೂರ್ತಿ ನಿಲ್ಲಿಸುವ ಅಭ್ಯಾಸವಿರುವುದಿಲ್ಲ. ಸಣ್ಣದಾಗಿ ನೀರು ಸೋರುವಂತೆ ಕೆಲವರು ನಲ್ಲಿ ನಿಲ್ಲಿಸುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ತೊಟ್ಟಿ ಅಥವಾ ನಲ್ಲಿಯಿಂದ ನೀರು ಸೋರುತ್ತಿದ್ದರೆ ತಕ್ಷಣ ಅದನ್ನು ಸರಿಪಡಿಸಬೇಕು. ಏಕೆಂದರೆ ಈ ರೀತಿ ನೀರು ಪೋಲಾಗುವುದು, ನಿಮ್ಮ ಮನೆಯಲ್ಲಿ ಹಣ ಖರ್ಚಾಗುವುದು ಎರಡೂ ಒಂದೇ ಎನ್ನುತ್ತಾರೆ ವಾಸ್ತುತಜ್ಞರು. ಆದ್ದರಿಂದ ನೀರನ್ನು ಪೋಲು ಮಾಡಬೇಡಿ.

ಬಾಗಿಲುಗಳನ್ನು ಶಬ್ಧ ಮಾಡಬೇಡಿ

ನಿಮ್ಮ ಮನೆಯಲ್ಲಿ ಬಾಗಿಲು ತೆರೆಯುವಾಗ ಹಾಗೂ ಮುಚ್ಚುವಾಗ ಶಬ್ದ ಮಾಡಬೇಡಿ. ಈ ರೀತಿಯ ಬಾಗಿಲಿನ ಶಬ್ದವು ಹಣಕಾಸಿನ ನಷ್ಟವನ್ನು ಉಂಟುಮಾಡುತ್ತದೆ. ಇದಲ್ಲದೆ, ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಪ್ರವೇಶಿಸುವ ಸಾಧ್ಯತೆಯಿದೆ. ಆದ್ದರಿಂದ, ಅಂತಹ ಬಾಗಿಲುಗಳಿದ್ದರೆ, ಅವುಗಳನ್ನು ತಕ್ಷಣವೇ ರಿಪೇರಿ ಮಾಡಿಸಬೇಕು ಅಥವಾ ಬದಲಾಯಿಸಬೇಕು.

ಸ್ನಾನಗೃಹ, ಟಾಯ್ಲೆಟ್‌ ಸ್ವಚ್ಛವಾಗಿಟ್ಟುಕೊಳ್ಳಬೇಕು

ಕೆಲವರು ಅಡುಗೆ ಮನೆ, ರೂಮ್‌ಗಳನ್ನು ಸ್ವಚ್ಛವಾಗಿಟ್ಟುಕೊಂಡರೂ ಟಾಯ್ಲೆಟ್‌, ಬಾತ್‌ ರೂಮ್‌ ಕಡೆಗೆ ಗಮನ ನೀಡುವುದಿಲ್ಲ. ಆದರೆ ನೀವು ಅವುಗಳನ್ನೂ ನಿರ್ಲಕ್ಷ್ಯ ಮಾಡುವಂತಿಲ್ಲ. ನಿಮ್ಮ ಸ್ನಾನಗೃಹವನ್ನು ಯಾವಾಗಲೂ ಸ್ವಚ್ಛವಾಗಿಡಿ. ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹ ಸದಾ ಒದ್ದೆಯಾಗಿದ್ದರೆ ಸಾಲ ಹೆಚ್ಚಾಗುವ ಸಾಧ್ಯತೆ ಇದೆ. ಇದರೊಂದಿಗೆ ಅನೇಕ ರೀತಿಯ ರೋಗಗಳು ಮನೆಯನ್ನು ಪ್ರವೇಶಿಸುತ್ತವೆ.

ಮೇಲ್ಛಾವಣಿಯಲ್ಲಿ ಕಸ ಬೇಡ

ಮನೆಗೆ ಬೇಡವಾದ ವಸ್ತುಗಳನ್ನು ಕೆಲವರು ಮೇಲ್ಛಾವಣಿಗೆ ಎಸೆಯುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮೇಲ್ಛಾವಣಿಯ ಮೇಲೆ ಅನಗತ್ಯ ವಸ್ತುಗಳನ್ನು ಅಥವಾ ಕಸವನ್ನು ಹಾಕಬಾರದು. ಈ ರೀತಿ ಮಾಡುವುದರಿಂದ ಪಿತೃ ದೋಷದ ಜೊತೆಗೆ ಕುಟುಂಬದ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಮನೆಯ ಮೇಲ್ಛಾವಣಿಯನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಬೇಕು. ಅನಗತ್ಯ ವಸ್ತುಗಳನ್ನು ಎಸೆಯಬೇಡಿ.

ಅಡುಗೆ ಮಾಡದ ಹೊರತು ಪಾತ್ರೆಗಳನ್ನು ಒಲೆ ಮೇಲೆ ಇಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಯಾವಾಗಲೂ ಗ್ಯಾಸ್ ಅಥವಾ ಒಲೆಯ ಮೇಲೆ ಇಡುವುದು ಶುಭವಲ್ಲ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಹಾಗಾಗಿ ಗ್ಯಾಸ್ ಸ್ಟೌವ್ ಮೇಲೆ ಅಥವಾ ಗ್ಯಾಸ್ ಮೇಲೆ ಅಡುಗೆ ಮಾಡದ ಹೊರತು ಪಾತ್ರೆಗಳನ್ನು ಇಡಬೇಡಿ. ಅಡುಗೆ ಮಾಡಿದ ಕೂಡಲೇ ಸ್ಟೌವ್‌ ಸ್ಚಚ್ಛಗೊಳಿಸಿ.

ಮನೆಯಲ್ಲಿ ಜೇಡ ಕಟ್ಟಿದ್ದರೆ ತೆರವುಗೊಳಿಸಿ

ಮನೆಯಲ್ಲಿ ಸಂಗ್ರಹವಾದ ಕೊಳಕು, ವಾಸ್ತು ದೋಷಗಳನ್ನು ಉಂಟುಮಾಡುತ್ತದೆ. ಜೇಡಗಳು, ಗೂಡುಗಳು, ಅನುಪಯುಕ್ತ ಕಸ ಮನೆಯಲ್ಲಿ ಸಂಗ್ರಹವಾದರೆ, ಆಗ ನಕಾರಾತ್ಮಕ ಶಕ್ತಿಗಳು ಮನೆಗೆ ಆಗಮಿಸುತ್ತವೆ. ಅಂತಹ ಸ್ಥಳದಲ್ಲಿ ಲಕ್ಷ್ಮಿ ದೇವಿಯು ಒಂದು ಕ್ಷಣವೂ ಇರುವುದಿಲ್ಲ. ಆದ್ದರಿಂದ ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner