ಡಿಸೆಂಬರ್‌ 22ರಂದು ಧನಿಷ್ಠ ನಕ್ಷತ್ರ ಬದಲಿಸುವ ಶುಕ್ರ; ಸಿಂಹ ಸೇರಿ ಈ 3 ರಾಶಿಯವರಿಗೆ ಹಣಕಾಸು, ವ್ಯಾಪಾರ, ಪ್ರೀತಿ ವಿಚಾರದಲ್ಲಿ ಅದೃಷ್ಟ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಡಿಸೆಂಬರ್‌ 22ರಂದು ಧನಿಷ್ಠ ನಕ್ಷತ್ರ ಬದಲಿಸುವ ಶುಕ್ರ; ಸಿಂಹ ಸೇರಿ ಈ 3 ರಾಶಿಯವರಿಗೆ ಹಣಕಾಸು, ವ್ಯಾಪಾರ, ಪ್ರೀತಿ ವಿಚಾರದಲ್ಲಿ ಅದೃಷ್ಟ

ಡಿಸೆಂಬರ್‌ 22ರಂದು ಧನಿಷ್ಠ ನಕ್ಷತ್ರ ಬದಲಿಸುವ ಶುಕ್ರ; ಸಿಂಹ ಸೇರಿ ಈ 3 ರಾಶಿಯವರಿಗೆ ಹಣಕಾಸು, ವ್ಯಾಪಾರ, ಪ್ರೀತಿ ವಿಚಾರದಲ್ಲಿ ಅದೃಷ್ಟ

Venus Transit 2024: ಡಿಸೆಂಬರ್‌ 22 ರಂದು ಶುಕ್ರನು ಧನಿಷ್ಠ ನಕ್ಷತ್ರವನ್ನು ಪ್ರವೇಶಿಸುತ್ತಿರುವುದರಿಂದ 12 ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರಲಿದೆ. ಅದರಲ್ಲಿ ಸಿಂಹ ರಾಶಿ ಸೇರಿ 3 ರಾಶಿಗಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ದೊರೆಯಲಿದೆ. ಪ್ರೀತಿ, ಪ್ರೇಮ, ಸಂಬಂಧಗಳ ವಿಚಾರದಲ್ಲೂ ಉತ್ತಮ ಅಭಿವೃದ್ಧಿಯಾಗಲಿದೆ.

ಧನಿಷ್ಠ ನಕ್ಷತ್ರಕ್ಕೆ ಶುಕ್ರ ಸಂಕ್ರಮಣ 2024
ಧನಿಷ್ಠ ನಕ್ಷತ್ರಕ್ಕೆ ಶುಕ್ರ ಸಂಕ್ರಮಣ 2024

ಶುಕ್ರ ಸಂಕ್ರಮಣ 2024: ಗ್ರಹಗಳು ಆಗ್ಗಾಗ್ಗೆ ರಾಶಿ, ನಕ್ಷತ್ರ ಸ್ಥಾನ ಬದಲಾವಣೆ ಮಾಡುವುದರಿಂದ ಎಲ್ಲಾ 12 ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ. ಡಿಸೆಂಬರ್‌ 22 ರಂದು ನಡೆಯಲಿರುವ ಶುಕ್ರ ಸಂಕ್ರಮಣ ಕೂಡಾ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ 3 ಚಿಹ್ನೆಗಳಿಗೆ ಮಾತ್ರ ವಿಬಿನ್ನ ರಾಜಯೋಗವಿದೆ. ಒಂಬತ್ತು ಗ್ರಹಗಳಲ್ಲಿ ಶುಕ್ರನು ಸಂಪತ್ತು, ಸಮೃದ್ಧಿ, ಐಷಾರಾಮಿ, ಪ್ರೀತಿ, ಸೌಂದರ್ಯದ ಅಧಿಪತಿ ಎನಿಸಿದ್ದಾನೆ.

ಶುಕ್ರನು ಒಂದು ರಾಶಿಯಲ್ಲಿ ಉಚ್ಛನಾಗಿದ್ದರೆ ಅವರಿಗೆ ಎಲ್ಲಾ ರೀತಿಯ ಯೋಗಗಳು ಸಿಗುತ್ತವೆ. ಎಲ್ಲಾ ರೀತಿಯ ಚಟುವಟಿಕೆಗಳು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ, ಗ್ರಹಗಳು ರಾಶಿ ಬದಲಾವಣೆ ಮಾತ್ರವಲ್ಲ, ನಕ್ಷತ್ರವನ್ನೂ ಬದಲಿಸುತ್ತವೆ. ಶುಕ್ರ ಡಿಸೆಂಬರ್ 22 ರಂದು ಧನಿಷ್ಠ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಶುಕ್ರ ಸಂಕ್ರಮಣವು ಖಂಡಿತವಾಗಿಯೂ ಎಲ್ಲಾ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮೂರು ಚಿಹ್ನೆಗಳಿಗೆ ರಾಜಯೋಗವಿದೆ. ಶುಕ್ರನ ನಕ್ಷತ್ರ ಸಂಕ್ರಮಣದಿಂದಾಗಿ, ಮದುವೆ ಮತ್ತು ಪ್ರೇಮ ವಿಷಯಗಳಲ್ಲಿಯೂ ಬದಲಾವಣೆಗಳಾಗಲಿವೆ. ಯಾವೆಲ್ಲಾ ರಾಶಿಗಳಿಗೆ ಶುಕ್ರನ ಆಶೀರ್ವಾದ ದೊರೆಯಲಿದೆ ನೋಡೋಣ.

ಸಿಂಹ ರಾಶಿ

ಶುಕ್ರ ಸಂಕ್ರಮಣದಿಂದ ಸಿಂಹ ರಾಶಿಯವರಿಗೆ ಅನೇಕ ಅನಿರೀಕ್ಷಿತ ಲಾಭಗಳು ಬರಲಿವೆ. ವ್ಯಾಪಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಇರಲಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ಕೆಲಸದಲ್ಲಿ ಬಡ್ತಿ ದೊರೆತು ಸಂಬಳ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿಗಳು ಅನುಕೂಲಕರವಾಗಿವೆ. ಆತ್ಮೀಯರೊಂದಿಗೆ ಸಂಬಂಧ ಇನ್ನಷ್ಟು ಸುಧಾರಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.

ಕನ್ಯಾ ರಾಶಿ

ಶುಕ್ರ ಸಂಕ್ರಮಣವು ಕನ್ಯಾ ರಾಶಿಯವರಿಗೆ ಬಹಳ ಅನುಕೂಲ ತರಲಿದೆ. ಡಿಸೆಂಬರ್ ಅಂತ್ಯದ ನಂತರ ನೀವು ಅದೃಷ್ಟಶಾಲಿಯಾಗುತ್ತೀರಿ. ವ್ಯಾಪಾರದಲ್ಲಿ ಸಾಕಷ್ಟು ಲಾಭವಿದೆ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಅವಕಾಶ ಪಡೆಯುತ್ತೀರಿ. ವ್ಯಾಪಾರದಲ್ಲಿ ದುಪ್ಪಟ್ಟು ಲಾಭವಿದೆ. ಶುಕ್ರನ ಆಶೀರ್ವಾದದಿಂದ ಉತ್ತಮ ಪ್ರಗತಿ ಇರುತ್ತದೆ. ವಿವಿಧ ಮೂಲಗಳಿಂದ ಹಣ ಹರಿದು ಬರಲಿದೆ. ಹಣ ಉಳಿಸುವ ಅವಕಾಶಗಳನ್ನು ಪಡೆಯುತ್ತೀರಿ. ಪ್ರೇಮ ಜೀವನ ಸುಖಮಯವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ. ಸಂಬಂಧಗಳ ನಡುವೆ ಪ್ರೀತಿ ಹೆಚ್ಚುತ್ತದೆ.

ಮಕರ ರಾಶಿ

ಶುಕ್ರನ ಸಂಚಾರವು ನಿಮಗೆ ಜೀವನದಲ್ಲಿ ಸಂತೋಷ ನೀಡುತ್ತದೆ. ಇಲ್ಲಿಯವರೆಗೆ ಎದುರಿಸಿದ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ. ವೃತ್ತಿಯ ವಿಷಯದಲ್ಲಿ ನೀವು ವಿವಿಧ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಗೌರವ ಹೆಚ್ಚುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆಯಲಿದ್ದೀರಿ. ಹೊಸ ಒಪ್ಪಂದಗಳು ನಿಮಗೆ ಉತ್ತಮ ಪ್ರಗತಿ ತರುತ್ತದೆ. ಪ್ರೀತಿಯ ಜೀವನ ಉತ್ತಮವಾಗಿರುತ್ತದೆ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ. ಪತಿ-ಪತ್ನಿಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ಅವಿವಾಹಿತರಿಗೆ ಶೀಘ್ರದಲ್ಲೇ ವಿವಾಹವಾಗಲಿದೆ. ಬಂಧುಗಳಿಂದ ಉಂಟಾಗಿದ್ದ ಸಮಸ್ಯೆಗಳೆಲ್ಲವೂ ಕಡಿಮೆಯಾಗುವುದು. ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.