ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Women Horoscope: ಈ ರಾಶಿಯ ಮಹಿಳೆಯರಿಗೆ ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ, ಸಣ್ಣ ಪುಟ್ಟ ವ್ಯಾಪಾರದಲ್ಲಿ ಲಾಭ; ಸ್ತ್ರೀ ವಾರ ಭವಿಷ್ಯ

Weekly Women Horoscope: ಈ ರಾಶಿಯ ಮಹಿಳೆಯರಿಗೆ ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ, ಸಣ್ಣ ಪುಟ್ಟ ವ್ಯಾಪಾರದಲ್ಲಿ ಲಾಭ; ಸ್ತ್ರೀ ವಾರ ಭವಿಷ್ಯ

ಶುಕ್ರವಾರ ಅದು ಲಕ್ಷ್ಮೀಯ ವಾರ. ನಮ್ಮ ಮನೆಯ ಹೆಣ್ಣುಮಕ್ಕಳೂ ದೇವಿ ಲಕ್ಷ್ಮೀಗೆ ಸಮ. ಮನಸ್ಸು ಮಾಡಿದರೆ ಹೆಣ್ಣಾದವಳು ಜಗತ್ತನ್ನೇ ಆಳಬಲ್ಲಳು. ಇಂಥಹ ಸ್ತ್ರೀಶಕ್ತಿಗೆ ಗೌರವ ಪೂರ್ವಕ ಜೋತಿಷ್ಯವೇ ಈ ದ್ವಾದಶ ಸ್ತ್ರೀ ವಾರಭವಿಷ್ಯ (Weekly Women Horoscope) (ಮೇ 26ರಿಂದ ಮೇ 02). ಖ್ಯಾತ ಜ್ಯೋತಿಷಿ ಎಚ್‌ ಸತೀಶ್‌ ಈ ಜೋತಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ.

ಈ ರಾಶಿಯ ಮಹಿಳೆಯರಿಗೆ ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ, ಸಣ್ಣ ಪುಟ್ಟ ವ್ಯಾಪಾರದಲ್ಲಿ ಲಾಭ; ಸ್ತ್ರೀ ವಾರ ಭವಿಷ್ಯ
ಈ ರಾಶಿಯ ಮಹಿಳೆಯರಿಗೆ ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ, ಸಣ್ಣ ಪುಟ್ಟ ವ್ಯಾಪಾರದಲ್ಲಿ ಲಾಭ; ಸ್ತ್ರೀ ವಾರ ಭವಿಷ್ಯ

ಮೇಷ

ತಡವಾದರೂ ಆದಾಯದಲ್ಲಿ ಹೆಚ್ಚಳ ಉಂಟಾಗುತ್ತದೆ. ಸೋದರನಿಂದ ಹಣದ ಸಹಾಯ ದೊರೆಯುತ್ತದೆ. ಲೋಹದ ಗೃಹಬಳಕೆಯ ಪದಾರ್ಥಗಳ ಲಾಭದಿಂದ ಲಾಭವಿರುತ್ತದೆ. ಸದಾ ಕಾಲ ಯಾವುದಾದರೊಂದು ಕೆಲಸವನ್ನು ಮಾಡುವಿರಿ. ಸ್ವಂತ ಮನೆಯ ಯೊಗವಿದೆ. ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವಿರಿ. ಸಾಲದ ವ್ಯವಹಾರ ಮಾಡದಿರಿ. ಲಾಭವಿಲ್ಲದ ಕೆಲಸವನ್ನು ಮಾಡುವುದಿಲ್ಲ.

ವೃಷಭ

ತಂದೆಯ ಮನೆಯಿಂದ ಹಣದ ಸಹಾಯ ಲಭಿಸುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಿ. ಹಠದ ಗುಣದಿಂದಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ಇರದು. ಉದ್ಯೋಗದಲ್ಲಿ ಉನ್ನತಿ ಇರುತ್ತದೆ. ವ್ಯಾಪಾರದಲ್ಲಿ ಲಾಭವಿರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಒತ್ತಡ ಇರುತ್ತದೆ. ಸಣ್ಣ ಪುಟ್ಟ ವ್ಯಾಪಾರದಲ್ಲಿ ಲಾಭವಿದೆ. ಕಣ್ಣಿನ ತೊಂದರೆ ಇರುತ್ತದೆ. ಖರ್ಚು ವೆಚ್ಚಗಳನ್ನು ಕಡಿಮ್ಮೆ ಮಾಡಲು ಪ್ರಯತ್ನಿಸಿ.

ಮಿಥುನ

ಹಣದ ತೊಂದರೆ ಬಾರದು. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಸಮಾಜದ ನಾಯಕಸ್ಥಾನ ಲಭಿಸುತ್ತದೆ. ಯಾವುದೇ ವಿಚಾರದಲ್ಲಿಯೂ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಲಾರಿರಿ. ಪ್ರತಿ ವಿಚಾರದಲ್ಲಿಯೂ ವಾದ ವಿವಾದದಲ್ಲಿ ತೊಡಗುವಿರಿ. ಬೇರೆಯವರ ಹಣಕಾಸಿನ ತೊಂದರೆಗೆ ಪರಿಹಾರವನ್ನು ಸೂಚಿಸುವಿರಿ. ಕಮೀಷನ್ ವ್ಯವಹಾರದಲ್ಲಿ ಲಾಭವಿರುತ್ತದೆ. ಬೇಸಾಯದ ಬಗ್ಗೆ ಆಸಕ್ತಿ ಇರುತ್ತದೆ.

ಕಟಕ

ಸೋಲನ್ನು ಸುಲಭವಾಗಿ ಒಪ್ಪುವುದಿಲ್ಲ. ಶ್ರೀಮಂತಿಕೆಯ ಆಸೆ ಇರದು ಆದರೆ ಸುಖಜೀವನ ನಡೆಸಲು ಚಿಕ್ಕ ವ್ಯಾಪಾರವನ್ನು ಆರಂಭಿಸುವಿರಿ. ಮಹಿಳೆಯರ ಪ್ರಸಾದನ ಕೇಂದ್ರದಿಂದ ಲಾಭವಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಪತಿಯ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ತವರು ಮನೆಯಿಂದ ಹಣದ ಸಹಾಯ ದೊರೆಯುತ್ತದೆ. ಸಂತಾನ ಲಾಭವಿದೆ

ಸಿಂಹ

ಆತ್ಮೀಯರ ಸಹಾಯ ಲಭಿಸುತ್ತದೆ. ಕುಟುಂಬದ ಒಳಗೂ ಹೊರಗೂ ಆಡುವ ಮಾತಿಗೆ ವೆಶೇಷವಾದ ಗೌರವ ದೊರೆಯುತ್ತದೆ. ಮಕ್ಕಳಿಗೆ ಉದ್ಯೋಗ ದೊರೆವ ಸಾಧ್ಯತೆಗಳಿವೆ. ಕುಟುಂಬದ ದೊಡ್ಡ ಜವಾಬ್ದಾರಿ ನಿಮ್ಮದಾಗಲಿದೆ. ಜನಸೇವೆಯಲ್ಲಿ ನಿರತರಾಗುವಿರಿ. ಗುರುಪೀಠಕ್ಕೆ ಭೇಟಿ ನೀಡುವಿರಿ. ಉಷ್ಣದ ತೊಂದರೆ ಇರಬಹುದು. ಜಗಳವಾಡದೆ ಬುದ್ಧಿವಂತಿಕೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ

ಕನ್ಯಾ

ಸಂಗೀತ ಬಲ್ಲವರಿಗೆ ರಾಜ್ಯಮಟ್ಟದ ಗೌರವ ಲಭ್ಯವಾಗುತ್ತದೆ. ಶಿಕ್ಷಕಿಯಾದಲ್ಲಿ ಸ್ವಂತ ಶಾಲಾ ಕಾಲೇಜಿನ ಸ್ಥಾಪನೆಗೆ ಕುಟುಂಬದವರ ಸಹಾಯ ದೊರೆಯುತ್ತದೆ. ಪತಿಯೊಂದಿಗೆ ವಿದೇಶಕ್ಕೆ ತೆರಳುವಿರಿ. ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯಲಿವೆ. ಕೇಳುಗರಿಗೆ ಬೇಸರ ಬರುವಂತೆ ಮಾತನಾಡುವಿರಿ. ಆರೋಗ್ಯದಲ್ಲಿ ಏರಿಳಿತ ಉಂಟಾಗಬಹುದು. ಸಂತಾನ ಲಾಭವಿದೆ. ಚಿನ್ನಾಭರಣ ಕೊಳ್ಳುವಿರಿ.

ತುಲಾ

ಆತುರದಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಮಾಡದ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ತಪ್ಪನ್ನು ಖಂಡಿಸುವದರಿಂದ ಜನರ ವಿರೋಧವನ್ನು ಎದುರಿಸಬೇಕಾದೀತು. ಉದ್ಯೋಗದಲ್ಲಿ ಮಾನಸಿಕ ಒತ್ತಡ ಇರುತ್ತದೆ. ಆದಾಯದ ಬಗ್ಗೆ ಯೋಚಿಸುವುದಿಲ್ಲ. ಸಂಧಾನ ಸಭೆಗಳನ್ನು ಆಯೋಜಿಸುವ ಸಲುವಾಗಿ ಸಂಸ್ಥೆಯನ್ನು ಸ್ಥಾಪಿಸುವಿರಿ. ಸ್ನೇಹಿತರೊಂದಿಗೆ ಹಣದ ವ್ಯವಹಾರ ಬೇಡ.

ವೃಶ್ಚಿಕ

ಹಠದಿಂದ ಕೈಹಿಡಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಆಹಾರ ಸೇವನೆಯಲ್ಲಿ ಇತಿಮಿತಿ ಇರಲಿ. ಶಾಂತಿಯಿಂದ ವರ್ತಿಸಿದಲ್ಲಿ ಜನರ ಸಹಾಯ ದೊರೆಯುತ್ತದೆ. ಮಾತಿಗೆ ಕಟ್ಟುಬಿದ್ದು ಹಣಕಾಸಿನ ವ್ಯವಹಾರವೊಂದನ್ನು ಆರಂಭಿಸುವಿರಿ. ಬೇಸಾಯದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡುವಿರಿ. ಕಮೀಷನ್ ವ್ಯವಹಾರದಲ್ಲಿ ಉತ್ತಮ ಹೆಸರು ಆದಯ ಗಳಿಸುವಿರಿ.

ಧನಸ್ಸು

ಸ್ಥಿರವಾದ ಮನಸ್ಸು ಇರುವುದಿಲ್ಲ. ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಸೇಡಿನ ಪ್ರವೃತ್ತಿ ಇರುತ್ತದೆ. ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ಸ್ವಂತಮನೆಯ ಕನಸು ನನಸಾಗಲಿದೆ. ಹಣವನ್ನು ಉಳಿಸುವ ಪ್ರಯತ್ನ ಮಾಡಿರಿ. ಹಣಕಾಸಿನ ವ್ಯವಹಾರವನ್ನು ಮಾಡದಿರಿ. ಸೋದರಿಯ ವಿವಾಹದ ಜವಾಬ್ದಾರಿ ನಿಮ್ಮದಾಗಲಿದೆ.

ಮಕರ

ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡುವಿರಿ. ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಕೆಲಸದ ನಡುವೆ ವಿಶ್ರಾಂತಿಯನ್ನು ಪಡೆಯಿರಿ. ಅತಿಯಾಗಿ ಮಾತನಾಡದಿರಿ. ಗಾಳಿ ಸುದ್ದಿಗಳನ್ನು ನಂಬಿ ಮನಸ್ಸು ಕೆಡಿಸಿಕೊಳ್ಳುವಿರಿ. ಷೇರಿನ ವಹಿವಾಟಿನಲ್ಲಿ ಅಚ್ಚರಿ ಪಡುವಂತೆ ಲಾಭ ಗಳಿಸುವಿರಿ. ವಾದ ವಿವಾದದಿಂದ ದೂರವಿರಿ.

ಕುಂಭ

ಪ್ರಯತ್ನಕ್ಕೆ ತಕ್ಕಂತಹ ಪ್ರತಿಫಲ ದೊರೆಯುತ್ತದೆ. ಸೋಲು ಗೆಲುವನ್ನು ಏಕ ರೂಪದಲ್ಲಿ ಸ್ವೀಕರಿಸುವಿರಿ. ಹಣದ ಬಗ್ಗೆ ಅತಿಯಾಸೆ ಇರುವುದಿಲ್ಲ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ಕ್ರೀಡಾಮನೋಭಾವನೆ ಇರುವ ಕಾರಣ ಸುಖ ಸಂತೃಪ್ತಿಯ ಜೀವನ ನಡೆಸುವಿರಿ. ಎಲ್ಲರನ್ನೂ ನಂಬಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಭೂವಿವಾದದಲ್ಲಿ ಜಯವನ್ನು ಗಳಿಸುವಿರಿ. ಅವಶ್ಯವಿದ್ದಲ್ಲಿ ಮಾತ್ರ ಹಣ ಖರ್ಚುಮಾಡುವಿರಿ.

ಮೀನ

ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸದಿರಿ. ಮನಸ್ಸಿಗೆ ಒಪ್ಪದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವಿರಿ. ಯಾರಿಂದಲೂ ಹಣದ ಸಹಾಯವನ್ನು ಬೇಡುವುದಿಲ್ಲ. ಪರಿಶುದ್ದ ಮನಸ್ಸಿಗೆ ಮಾರುಹೋಗಿ ಗಣ್ಯವ್ಯಕ್ತಿಯೊಬ್ಬರು ನೆರವಿಗೆ ಬರಲ್ಲಿದ್ದಾರೆ. ನೀರಿನ ಜೊತೆಯಲ್ಲಿ ಚೆಲ್ಲಾಟವಾಡದಿರಿ. ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆಯುವಿರಿ. ತಪ್ಪು ಒಪ್ಪುಗಳನ್ನು ಅರಿತು ಕೆಲಸದಲ್ಲಿ ತೊಡಗುವಿರಿ.

ವಿಭಾಗ