ಮೇಷ ರಾಶಿ ಭವಿಷ್ಯ 2025 - ವೃತ್ತಿ, ಪ್ರೀತಿ, ಆರೋಗ್ಯ, ಹಣಕಾಸು ಭವಿಷ್ಯ

ನಮಸ್ಕಾರ

ಮೇಷ ನೀವು

(March - April)

Aries Annual Horoscope

ಮೇಷ ರಾಶಿ 2025 ವರ್ಷ ಭವಿಷ್ಯದ ಮುಖ್ಯಾಂಶ

ಮೇಷ ರಾಶಿಯವರಿಗೆ 2025 ಮಿಶ್ರ ಫಲಗಳನ್ನು ನೀಡುತ್ತದೆ. ಶನಿಯು ಆರ್ಥಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಕಲಹಗಳನ್ನು ಉಂಟುಮಾಡಬಹುದು. ಉದ್ಯೋಗಿಗಳಿಗೆ ಕೆಲಸದ ಒತ್ತಡ ಮತ್ತು ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ ಉಂಟಾಗಬಹುದು. ಆರೋಗ್ಯದ ವಿಷಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಲಿವೆ.

ಪ್ರೀತಿ, ಸಂಬಂಧಗಳು:
ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಅಸ್ವಸ್ಥತೆ ಉಂಟಾಗಬಹುದು. ಪ್ರೇಮ ಸಂಬಂಧಗಳಲ್ಲಿ ತಪ್ಪು ತಿಳಿವಳಿಕೆ ಉಂಟಾಗುವ ಸಾಧ್ಯತೆ ಇದೆ.

ವೃತ್ತಿ, ಹಣಕಾಸು:
ಉದ್ಯೋಗಿಗಳಿಗೆ ಕೆಲಸದ ಒತ್ತಡ ಮತ್ತು ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ. ಕೆಲವು ಹಣಕಾಸಿನ ಅಸ್ಥಿರತೆ ಇರುತ್ತದೆ.

ಆರೋಗ್ಯ:
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿಶೇಷವಾಗಿ ವರ್ಷದ ಆರಂಭದಲ್ಲಿ ಆರೋಗ್ಯ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿದೆ.

ಶುಭ ತಿಂಗಳು:
ಜುಲೈ, ಅಕ್ಟೋಬರ್
ಅಶುಭ ತಿಂಗಳು: ಮಾರ್ಚ್, ಏಪ್ರಿಲ್, ನವೆಂಬರ್, ಡಿಸೆಂಬರ್

ಪರಿಹಾರ ಕ್ರಮಗಳು:
ದಕ್ಷಿಣಾಮೂರ್ತಿ ಸ್ತೋತ್ರ ಪಾರಾಯಣ ಮಾಡಿ, ಶನಿ ದೇವರನ್ನು ಪೂಜಿಸುವುದು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದು ಒಳ್ಳೆಯದು.

ಮತ್ತಷ್ಟು ಓದಿ

ಮೇಷ ರಾಶಿ

ಗುಣಲಕ್ಷಣಗಳುಹೊಂದಾಣಿಕೆ
  • ಮೇಷ ರಾಶಿಯ ವೈಶಿಷ್ಟ್ಯಗಳು

    ಮೇಷ ರಾಶಿಯು ಕಾಲ ಪುರುಷನ ಮೊದಲ ರಾಶಿ. ಮೇಷ ರಾಶಿಯನ್ನು ಅಸ್ಥಿರ ರಾಶಿಚಕ್ರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದು ಅಗ್ನಿಯ ಅಂಶದ ಸಂಕೇತವಾಗಿದೆ. ಈ ರಾಶಿಚಕ್ರದ ಚಿಹ್ನೆಯು ಟಗರು. ಈ ರಾಶಿಯಲ್ಲಿ ಅಶ್ವಿನಿ ಮತ್ತು ಭರಣಿ ನಕ್ಷತ್ರದ ಎಲ್ಲಾ ಪಾದಗಳು ಮತ್ತು ಕೃತಿಕಾ ನಕ್ಷತ್ರದ ಮೊದಲ ಪಾದ ಬರುತ್ತವೆ. ಮೇಷ ರಾಶಿಯ ವರ್ಣವು ಕ್ಷತ್ರಿಯ (ಯೋಧ). ಮಂಗಳವನ್ನು ಮೇಷ ರಾಶಿಯ ಅಧಿಪತಿ ಗ್ರಹವೆಂದು ಪರಿಗಣಿಸಲಾಗಿದೆ. ಮೇಷ ರಾಶಿಯಲ್ಲಿ ಜನಿಸಿದವರ ದೇಹ ರಚನೆಯು ಮಧ್ಯಮ ಎತ್ತರವನ್ನು ಹೊಂದಿರುತ್ತದೆ. ಅಂದರೆ ಇವರು ತೀರಾ ಕುಳ್ಳಗಿನವರೂ ಅಲ್ಲ, ತೀರಾ ಉದ್ದನೆಯವರೂ ಆಗಿರುವುದಿಲ್ಲ.
  • ಮೇಷ ರಾಶಿಯ ಸ್ವಭಾವ

    ಮೇಷ ರಾಶಿಯಲ್ಲಿ ಜನಿಸಿದವರು ಧೈರ್ಯದಿಂದ ವರ್ತಿಸುತ್ತಾರೆ. ಸದೃಢ ನಿರ್ಧಾರ ಮತ್ತು ಕ್ರಿಯಾಶೀಲತೆಯನ್ನು ಇಷ್ಟಪಡುತ್ತಾರೆ. ಅವರ ಸ್ವಭಾವವು ಕೆಲವು ಸಲ ಹಟಮಾರಿ ಎನ್ನುವಂತೆ ಭಾಸವಾಗುತ್ತದೆ. ತಮ್ಮ ಗುರಿಗಳ ವಿಚಾರದಲ್ಲಿ ಕಡೆಗೆ ರಾಜಿ ಮಾಡಿಕೊಳ್ಳಲು ಅವರು ಇಷ್ಟಪಡುವುದಿಲ್ಲ. ಎಂಥದ್ದೇ ಪರಿಸ್ಥಿತಿಗೆ ಹೊಂದಿಕೊಳ್ಳಲು ಮತ್ತು ಸವಾಲುಗಳಿಗೆ ಮುಖಾಮುಖಿಯಾಗಲು ಸದಾ ಸಿದ್ಧರಿರುತ್ತಾರೆ. ಕ್ರೀಡೆಯಲ್ಲಿಯೂ ಅವರಿಗೆ ಆಸಕ್ತಿ ಇರುತ್ತದೆ.
  • ಮೇಷ ರಾಶಿಯ ಅಧಿಪತಿ

    ಮಂಗಳವನ್ನು ಮೇಷ ರಾಶಿಯ ಅಧಿಪತಿ ಗ್ರಹವೆಂದು ಪರಿಗಣಿಸಲಾಗಿದೆ. ಹೀಗಾಗಿ ಮಂಗಳನ ಪ್ರಭಾವ ಈ ರಾಶಿಗೆ ಸೇರಿದವರ ಮೇಲೆ ನಿಚ್ಚಳವಾಗಿ ಇರುತ್ತದೆ. ಭೂಮಿ, ಕಟ್ಟಡ, ವಾಹನ, ಶೌರ್ಯ, ಧೈರ್ಯ, ಸಹೋದರರು, ಸಂಬಂಧಿಕರು ಮತ್ತು ಸ್ನೇಹಿತರ ವಿಚಾರದಲ್ಲಿ ಇವರು ಅದೃಷ್ಟಶಾಲಿಗಳು. ಇದಕ್ಕೆ ಮುಖ್ಯ ಕಾರಣ ಮಂಗಳನ ಕೃಪೆ. ಮೇಷ ರಾಶಿಯ ಜನರು ಮಂಗಳನ ಮಂಗಳಕರ ಪ್ರಭಾವದಿಂದ ಎಲ್ಲರೊಂದಿಗೆ ಸ್ನೇಹಪರವಾಗಿ ವರ್ತಿಸುತ್ತಾರೆ. ತಮ್ಮ ಗುರಿಗಳನ್ನೂ ಸುಲಭವಾಗಿ ಸಾಧಿಸಿಕೊಳ್ಳುತ್ತಾರೆ. ಮಂಗಳನ ಕೃಪಾಕಟಾಕ್ಷ ಬಲವಾಗಿದ್ದರೆ, ಎಲ್ಲಾ ರೀತಿಯ ಸಂತೋಷವು ಸುಲಭವಾಗಿ ಪ್ರಾಪ್ತಿಯಾಗುತ್ತದೆ.
  • ಮೇಷ ರಾಶಿಚಕ್ರದ ಚಿಹ್ನೆ

    ಈ ರಾಶಿಚಕ್ರ ಚಿಹ್ನೆಯ ಚಿಹ್ನೆ ಟಗರು. ಟಗರನ್ನು ಧೈರ್ಯ ಮತ್ತು ನಿರ್ಭಯದ ಸಂಕೇತವೆಂದು ಪರಿಗಣಿಸಲಾಗಿದೆ. ಜನಸಮೂಹ ಎಷ್ಟೇ ಇದ್ದರೂ, ಎಲ್ಲಿಯೇ ಇದ್ದರೂ ಟಗರುಗಳಿಗೆ ಹೆದರಿಕೆ ಇರುವುದಿಲ್ಲ. ಅದು ತನ್ನ ಕೆಲಸದಲ್ಲಿ ತಾನು ನಿರಂತರವಾಗಿ, ನಿರ್ಭಯದಿಂದ ತೊಡಗಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿ, ಮೇಷ ರಾಶಿಯ ಜನರು ತಮ್ಮ ಗುರಿಗಳ ಕಡೆಗೆ ನಿರಂತರ ಜಾಗರೂಕರಾಗಿ ಮತ್ತು ಸಕ್ರಿಯರಾಗಿ ಮುನ್ನುಗ್ಗುತ್ತಿರುತ್ತಾರೆ.
  • ಮೇಷ ರಾಶಿಯ ಗುಣಲಕ್ಷಣಗಳು

    ಮೇಷ ರಾಶಿಯ ಜನರು ಟಗರಿನಂತೆ ಹಟಮಾರಿ, ಶಕ್ತಿಶಾಲಿ, ಧೈರ್ಯಶಾಲಿ ಮತ್ತು ಸಂತೋಷದ ಸ್ವಭಾವವನ್ನು ಹೊಂದಿರುತ್ತಾರೆ. ಈ ರಾಶಿಗೆ ಸೇರಿದವರು ಧೈರ್ಯ ಮತ್ತು ಶೌರ್ಯಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ತಂಡಗಳನ್ನು ಮುನ್ನಡೆಸಲು ಇಷ್ಟಪಡುತ್ತಾರೆ. ಈ ರಾಶಿಗೆ ಸೇರಿದವರು ಯಾವುದೇ ಸ್ಥಾನದಲ್ಲಿದ್ದರೂ ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ. ಈ ಜನರು ತಮ್ಮ ಕೆಲಸದ ಬಗ್ಗೆ ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತಾರೆ. ಪ್ರಾಮಾಣಿಕತೆಗೆ ಬೆಲೆ ಕೊಡುತ್ತಾರೆ. ದೂರದೃಷ್ಟಿಯು ಇವರ ವ್ಯಕ್ತಿತ್ವದ ಭಾಗವೇ ಆಗಿರುತ್ತದೆ. ನಿಯಮಗಳಿಗೆ ವಿರುದ್ಧವಾಗಿ ಕೆಲಸ ಮಾಡುವುದನ್ನು ಸಹಿಸುವುದಿಲ್ಲ. ನಿಷ್ಠೆಯನ್ನು ಬಯಸುತ್ತಾರೆ, ನಿಷ್ಠರಾಗಿ ಇರುವವರನ್ನು ತುಂಬಾ ಇಷ್ಟಪಡುತ್ತಾರೆ.
  • ಮೇಷ ರಾಶಿಯವರ ಪ್ರತಿಕೂಲ ಸಂಗತಿಗಳು

    ಮೇಷ ರಾಶಿಗೆ ಸೇರಿದವರದ್ದು ಸಾಮಾನ್ಯವಾಗಿ ಆಕ್ರಮಣಕಾರಿ ಮತ್ತು ಮೊಂಡು ಸ್ವಭಾವ. ರಾಜಿ ಮಾಡಿಕೊಳ್ಳಲು, ಹೊಂದಾಣಿಕೆ ಮಾಡಿಕೊಳ್ಳಲು ಸಾಮಾನ್ಯವಾಗಿ ಇಷ್ಟಪಡುವುದಿಲ್ಲ. ಮುಂಗೋಪದಿಂದಾಗಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಜೀವನದಲ್ಲಿ ಸ್ಥಿರತೆ ಸಾಧಿಸುವುದು ಕಷ್ಟ. ಇತರರನ್ನು ಅನುಮಾನದಿಂದ ಕಾಣುವ ಗುಣದಿಂದಾಗಿ ಸ್ವಂತ-ಸಂತೋಷವನ್ನು ಹಾಳು ಮಾಡಿಕೊಳ್ಳುತ್ತಾರೆ. ಕುಟುಂಬದ ಸದಸ್ಯರನ್ನೂ ಸಂಕಷ್ಟಕ್ಕೆ ತಳ್ಳುವ ಅಪಾಯಗಳು ಇರುತ್ತವೆ. ಬಹುಕಾಲ ಒಂದೇ ಕೆಲಸದಲ್ಲಿ ಉಳಿಯುವುದು, ಹಿಡಿದ ಕೆಲಸವನ್ನು ಹಟದಿಂದ ಸಾಧಿಸುವುದು ಸಹ ಅಪರೂಪ.
  • ಮೇಷ ರಾಶಿಯ ವೃತ್ತಿ

    ಮೇಷ ರಾಶಿಗೆ ಸೇರಿದವರ ಮೇಲೆ ಮಂಗಳ ಗ್ರಹದ ಪ್ರಬಲ ಪ್ರಭಾವ ಇರುವುದರಿಂದ ಸಾಮಾನ್ಯವಾಗಿ ಇವರು ಸೇನೆ, ಪೊಲೀಸ್, ರಾಜಕಾರಣ, ರಕ್ಷಣಾ ವ್ಯವಸ್ಥೆ ಮತ್ತು ಕ್ರೀಡೆಗಳೊಂದಿಗೆ ಸಂಬಂಧ ಹೊಂದಿದ ವಿಭಾಗಗಳಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಇದಲ್ಲದೆ ಭೂಮಿ, ವಾಹನ, ಎಂಜಿನಿಯರಿಂಗ್, ಕಲೆ, ಬೋಧನೆ, ಶಸ್ತ್ರಾಸ್ತ್ರ ವಿಜ್ಞಾನ, ಮಾರಾಟ ವ್ಯವಸ್ಥಾಪಕ, ವಾಸ್ತುಶಿಲ್ಪಿ ಮತ್ತು ವಿದ್ಯುತ್ ವಿಭಾಗಗಳಲ್ಲಿ ಕೆಲಸ ಮಾಡುವುದು ಈ ರಾಶಿಯವರ ಸ್ವಭಾವಕ್ಕೆ ಹೊಂದಿಕೆಯಾಗುತ್ತದೆ. ಚಾಂಚಲ್ಯ ಇವರ ಸ್ವಭಾವದ ಒಂದು ಭಾಗವೇ ಆಗಿರುತ್ತದೆ. ಆದರೆ ಒಮ್ಮೊಮ್ಮೆ ಮಾತ್ರ ವ್ಯಾಪಾರದ ವಿಷಯದಲ್ಲಿ ಸ್ಥಿರತೆ ಪ್ರದರ್ಶಿಸುತ್ತಾರೆ.
  • ಮೇಷ ರಾಶಿಯ ಆರೋಗ್ಯ

    ಮೇಷ ರಾಶಿಯ ಅಧಿಪತಿ ಮಂಗಳ. ಈ ರಾಶಿಗಳ ಜಾತಕರಿಗೆ ಮಂಗಳ ಗ್ರಹವು ಪ್ರತಿಕೂಲ ಸ್ಥಾನದಲ್ಲಿದ್ದಾಗ ಗಾಯದ ಅಪಾಯ ಮತ್ತು ಬೆಂಕಿಯ ಭಯವಿದೆ. ವಿಶೇಷವಾಗಿ ಹೊಟ್ಟೆಗೆ ಸಂಬಂಧಿಸಿದೆ. ಪಿತ್ಥ, ವಾಯು ಮತ್ತು ಅಪಸ್ಮಾರದ ಸಮಸ್ಯೆಗಳು ಆಗಾಗ್ಗೆ ಕಾಡಬಹುದು. ಒಮ್ಮೊಮ್ಮೆ ಅತ್ಯುತ್ಸಾಹದ ಕಾರಣದಿಂದ ಮಾನಸಿಕ ಕಿರಿಕಿರಿ, ಒತ್ತಡ, ನಿದ್ರಾಹೀನತೆ ಮತ್ತು ಕೋಪದಂಥ ಸಮಸ್ಯೆಗಳು ಕಂಡುಬರುತ್ತವೆ. ಶನಿ ಮತ್ತು ರಾಹುಗಳ ಪ್ರಭಾವವು ಮಂಗಳ ಗ್ರಹದ ಮೇಲಿದ್ದಾಗ ಶಸ್ತ್ರಚಿಕಿತ್ಸೆ ಮತ್ತು ಹುಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿನ ತೊಂದರೆಗಳನ್ನು ಉಂಟುಮಾಡುತ್ತವೆ.
  • ಸಾಂಸಾರಿಕ ಬದುಕು

    ಮೇಷ ರಾಶಿಯ ಜನರು ಸ್ವಭಾವತಃ ಪ್ರಾಮಾಣಿಕತೆಯನ್ನು ಇಷ್ಟಪಡುತ್ತಾರೆ ಮತ್ತು ಸ್ವತಃ ಅವರು ಪ್ರಾಮಾಣಿಕರು. ಅವರು ತಮ್ಮ ಜೀವನ ಸಂಗಾತಿಯಲ್ಲಿಯೂ ನಿಷ್ಠೆ ಇರಬೇಕು ಎಂದು ಬಯಸುತ್ತಾರೆ. ಅಕ್ಕಪಕ್ಕದವರಿಗೆ ನೆರವಾಗಲು ಇಷ್ಟಪಡುತ್ತಾರೆ. ಮೇಷ ರಾಶಿಯ ಜನರು ತಮ್ಮ ಸಂಗಾತಿಯ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸಂಗಾತಿಯ ಭಾವನೆಗಳಿಗೆ ಸ್ಪಂದಿಸುವುದರೊಂದಿಗೆ ಅವರನ್ನು ಖುಷಿಯಾಗಿ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ.

ನಿಮ್ಮ ಪ್ರೀತಿಪಾತ್ರರ ಜಾತಕ ತಿಳಿಯಿರಿ