ಮಿಥುನ ರಾಶಿ ಭವಿಷ್ಯ 2025 - ವೃತ್ತಿ, ಪ್ರೀತಿ, ಆರೋಗ್ಯ, ಹಣಕಾಸು ಭವಿಷ್ಯ

ನಮಸ್ಕಾರ

ಮಿಥುನ ನೀವು

(May - June)

Gemini Horoscope for 2025

ಮಿಥುನ ರಾಶಿ 2025 ರ ರಾಶಿ ಫಲಗಳ ಮುಖ್ಯಾಂಶ
2025 ರ ವರ್ಷವು ಮಿಥುನ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ಸೂಚಿಸುತ್ತದೆ. ಗುರುವಿನ ಪ್ರಭಾವದಿಂದ ಕೆಲವು ಸವಾಲುಗಳು ಎದುರಾಗಬಹುದು. ಶನಿಯ ಪ್ರಭಾವದಿಂದ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಪ್ರೀತಿ, ಸಂಬಂಧಗಳು: ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.
ವೃತ್ತಿ, ಹಣಕಾಸು: ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನ ಅಸ್ಥಿರತೆ ಎದುರಿಸಬಹುದು.
ಆರೋಗ್ಯ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಶುಭ ತಿಂಗಳು: ಏಪ್ರಿಲ್, ಸೆಪ್ಟೆಂಬರ್, ನವೆಂಬರ್
ಅಶುಭ ತಿಂಗಳು: ಜನವರಿ, ಫೆಬ್ರುವರಿ, ಮಾರ್ಚ್, ಮೇ, ಜೂನ್, ಜುಲೈ, ಆಗಸ್ಟ್, ಡಿಸೆಂಬರ್
ಪರಿಹಾರ ಕ್ರಮ: ದಕ್ಷಿಣಾಮೂರ್ತಿಯನ್ನು ಆರಾಧಿಸಿ. ನವಗ್ರಹ ಸ್ತೋತ್ರ ಪಠಿಸಿ. ಶನಿ ದೇವರನ್ನು ಪ್ರಾರ್ಥಿಸಿ. ಮಿಥುನ ರಾಶಿಯವರಿಗೆ 2025 ಸವಾಲಿನ ವರ್ಷವಾಗಿರುತ್ತದೆ. ತಾಳ್ಮೆ, ಧೈರ್ಯ ಮತ್ತು ಆಧ್ಯಾತ್ಮಿಕ ಕ್ರಿಯೆಗಳ ಮೂಲಕ ಈ ಸವಾಲುಗಳನ್ನು ಜಯಿಸಬಹುದು.

ಮತ್ತಷ್ಟು ಓದಿ

ಮಿಥುನ ರಾಶಿ

ಗುಣಲಕ್ಷಣಗಳುಹೊಂದಾಣಿಕೆ
  • ಮಿಥುನ ರಾಶಿಯ ವೈಶಿಷ್ಟ್ಯಗಳು

    ಮಿಥುನ ರಾಶಿಯನ್ನು ದ್ವಂದ್ವ ಸ್ವಭಾವದ ರಾಶಿ ಎಂದು ಗುರುತಿಸಲಾಗಿದೆ. ಈ ರಾಶಿಚಕ್ರ ಚಿಹ್ನೆಯು ಅವಳಿ (ಗಂಡು-ಹೆಣ್ಣು). ಮಿಥುನ ರಾಶಿಯ ಆಧಿಪತಿ ಬುಧ. ಮಿಥುನ ರಾಶಿಗೆ ಪಶ್ಚಿಮ ಶುಭ ದಿಕ್ಕು. ಈ ರಾಶಿಚಕ್ರ ಚಿಹ್ನೆಯ ಅಕ್ಷರಗಳು ಕ, ಕಿ, ಕು, ಘ, ಢ, ಛ್, ಕೆ, ಕೋ, ಹ. ಮೃಗಶಿರ, ಆರ್ದ್ರಾ ಮತ್ತು ಪುನರ್ವಸು ನಕ್ಷತ್ರಗಳು ಮಿಥುನದಲ್ಲಿ ಬರುತ್ತವೆ. ಇದು ಗಾಳಿಯ ಅಂಶದ ರಾಶಿಚಕ್ರದ ಚಿಹ್ನೆ.
  • ಮಿಥುನ ರಾಶಿಯ ಸ್ವಭಾವ

    ಲವಲವಿಕೆ ಸ್ವಭಾವದ ಮಿಥುನ ರಾಶಿಯ ಜನರು ಸ್ವತಂತ್ರ ಮನಸ್ಸಿನವರು ಮತ್ತು ಸ್ವಭಾವತಃ ಬುದ್ಧಿಜೀವಿಗಳು. ರಾಜಕೀಯ ನಡೆಗಳನ್ನು ಮುಂಚಿತವಾಗಿಯೇ ಊಹಿಸುವ ಚಾಣಾಕ್ಷ ಬುದ್ಧಿ ಇವರದು. ಸಹಾನುಭೂತಿ ಮತ್ತು ಧಾರ್ಮಿಕತೆಯೂ ಇವರ ಸ್ವಭಾವದ ಭಾಗವಾಗಿರುತ್ತದೆ. ಪ್ರಾಮಾಣಿಕತೆ ಮತ್ತು ನಾಜೂಕುತನವನ್ನು ಇಷ್ಟಪಡುತ್ತಾರೆ. ವೃತ್ತಿಯ ಬಗ್ಗೆ ಕರಾರುವಾಕ್ಕಾಗಿ ಇರಲು ಬಯಸುತ್ತಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತಾರೆ. ಸದಾ ತಮ್ಮ ಕೆಲಸ ಮತ್ತು ಯೋಜನೆಗಳಲ್ಲಿ ತೊಡಗಿಸಿಕೊಂಡಿರಲು ಇಚ್ಛಿಸುತ್ತಾರೆ. ಹೊಸತನಕ್ಕಾಗಿ ಹಾತೊರೆಯುತ್ತಾರೆ.
  • ಮಿಥುನ ರಾಶಿಯ ಅಧಿಪತಿ

    ಬುಧ ಗ್ರಹವು ಮಿಥುನ ರಾಶಿಯ ಅಧಿಪತಿ. ಬುಧನನ್ನು ಗ್ರಹಗಳಲ್ಲಿ ರಾಜಕುಮಾರ ಎಂದು ಕರೆಯಲಾಗುತ್ತದೆ. ಮಿಥುನ ರಾಶಿಯ ಜನರು ಹೊಸ ವಿಚಾರಗಳ ಕಲಿಕೆ, ಜಿಜ್ಞಾಸೆಯ ಸ್ವಭಾವ ಹೊಂದಿರುತ್ತಾರೆ.ಇವರ ಮನಸ್ಸು ಒಂದೆಡೆ ನಿಲ್ಲುವುದಿಲ್ಲ. ಚಂಚಲ ಮನಸ್ಸು ಇವರ ಸ್ವಭಾವದ ಭಾಗವೇ ಆಗಿರುತ್ತದೆ. ಕಲೆಯ ಬಗ್ಗೆ ಒಲವು ಹೊಂದಿರುತ್ತಾರೆ. ಬರವಣಿಗೆಯ ಸಾಮರ್ಥ್ಯವೂ ಚೆನ್ನಾಗಿರುತ್ತದೆ. ಆಕರ್ಷಕ ಜೀವನಶೈಲಿ ರೂಢಿಸಿಕೊಳ್ಳಲು, ಸುಂದರವಾಗಿ ಕಾಣಿಸಿಕೊಳ್ಳಲು ಹಾತೊರೆಯುತ್ತಾರೆ.
  • ಮಿಥುನ ರಾಶಿಯ ಚಿಹ್ನೆ

    ಕಾಲ ಪುರುಷನ ಜಾತಕದಲ್ಲಿ ಮೂರನೆಯ ರಾಶಿ ಮಿಥುನ. ಈ ರಾಶಿಚಕ್ರದ ಚಿಹ್ನೆ ದಂಪತಿ.
  • ಮಿಥುನ ರಾಶಿಯವರ ಗುಣಲಕ್ಷಣಗಳು

    ಮಿಥುನ ರಾಶಿಗೆ ಸೇರಿದವರು ಸ್ವಭಾವತಃ ಧೈರ್ಯಶಾಲಿಗಳು. ಸಹಾನುಭೂತಿ ಮತ್ತು ದಯಾಪರತೆ ಇರುತ್ತದೆ. ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಂಡು ಸ್ಪಂದಿಸಬಲ್ಲರು. ಆದರೆ ನಿರ್ಧಾರಗಳು ಕೆಲವೊಮ್ಮೆ ಆಕ್ರಮಣಕಾರಿಯಾಗಿ ಹಾಗೂ ತೀಕ್ಷ್ಣವಾಗಿ ಇರುತ್ತವೆ. ಅಳುವ ಮತ್ತು ನಗುವ ದ್ವಿಗುಣ ಸ್ವಭಾವ ಇರುತ್ತದೆ.
  • ಮಿಥುನ ರಾಶಿಯವರ ಪ್ರತಿಕೂಲ ಸಂಗತಿಗಳು

    ಮಿಥುನ ರಾಶಿಯು ದ್ವಂದ್ವ ಸ್ವಭಾವ ಹೊಂದಿದೆ. ಈ ರಾಶಿಯಲ್ಲಿ ಜನಿಸಿದವರ ಸ್ವಭಾವ ಮತ್ತು ವರ್ತನೆ ಹಲವು ಬಾರಿ ಅನಿಶ್ಚಿತ ಮತ್ತು ಅನಿರೀಕ್ಷಿತ ರೀತಿಯಲ್ಲಿ ಇರುತ್ತದೆ. ತಮ್ಮ ಗುರಿಗಳ ವಿಚಾರದಲ್ಲಿ ಇವರಿಗೆ ಸ್ಥಿರತೆ ಇರುವುದಿಲ್ಲ. ಒಂದು ಗುರಿಯ ಮೇಲೆ ಹೆಚ್ಚು ಸಮಯ ಗಮನ ಕೇಂದ್ರೀಕರಿಸಲು ಆಗುವುದಿಲ್ಲ. ಇತರರಿಗೆ ಒಳಿತಾಗುವುದು ಎಂದಾದರೆ ತಮ್ಮ ಸ್ವಂತ ಹಿತವನ್ನು ಬಲಿಕೊಡಲು ಹಿಂಜರಿಯುವುದಿಲ್ಲ.
  • ಮಿಥುನ ರಾಶಿಯವರ ವೃತ್ತಿ ಬದುಕು

    ಮಿಥುನ ರಾಶಿಗೆ ಸೇರಿದವರಿಗೆ ಬಹುಮುಖ ಪ್ರತಿಭೆ ದೈವದತ್ತ ವರ. ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ. ಸಂವಹನ ಕೌಶಲ ಕಾರಣಕ್ಕೆ ರಾಜಕೀಯವಾಗಿಯೂ ಯಶಸ್ವಿಯಾಗುತ್ತಾರೆ. ಕಲಾ ಕ್ಷೇತ್ರದಲ್ಲೂ ತಮ್ಮ ಪಾರಮ್ಯವನ್ನು ಉಳಿಸಿಕೊಳ್ಳುತ್ತಾರೆ. ಶಿಕ್ಷಣ ಕ್ಷೇತ್ರ ಇವರಿಗೆ ಅನುಕೂಲಕರ. ಗುರು ಬಲ ಚೆನ್ನಾಗಿ ಇದ್ದಾಗ ಆಡಳಿತ ಸೇವೆಗಳತ್ತ ಅವಕಾಶ ಅರಸಿ ಹೋಗುತ್ತಾರೆ. ಸಾರಿಗೆ, ಪತ್ರಿಕೋದ್ಯಮ, ಧ್ವನಿ, ವಿದ್ಯುನ್ಮಾನ ಮಾಧ್ಯಮ, ಭಾಷಾಶಾಸ್ತ್ರ ಮತ್ತು ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ.
  • ಮಿಥುನ ರಾಶಿಯವರ ಆರೋಗ್ಯ

    ಮಿಥುನ ರಾಶಿಯವರು ಶೀತ, ಕೆಮ್ಮು, ಅಸ್ತಮಾ, ಶೀತಜ್ವರದಂಥ ಸಮಸ್ಯೆಗಳಿಂದ ಆಗಾಗ ಬಳಲುತ್ತಾರೆ. ಕಾಲಿಗೆ ಸಂಬಂಧಿಸಿದ ಸಮಸ್ಯೆ, ಚರ್ಮದ ಅಲರ್ಜಿ ಸಹ ಆಗಾಗ ಕಾಡುತ್ತವೆ.
  • ಗೆಳೆತನ

    ಸ್ವಭಾವತಃ ಸ್ನೇಹಶೀಲರು. ಸ್ನೇಹಿತರೊಂದಿಗೆ ಇರುವುದನ್ನು ಇಷ್ಟಪಡುತ್ತಾರೆ. ವೃಷಭ, ಸಿಂಹ, ಕನ್ಯಾ, ತುಲಾ, ಧನು ಮತ್ತು ಕುಂಭ ರಾಶಿಯವರೊಂದಿಗೆ ಸ್ನೇಹ ಬೇಗನೇ ಕುದುರುತ್ತದೆ. ಆದರೆ ಕೆಲಸಕ್ಕೆ ಅತಿಯಾಗಿ ಮಹತ್ವ ನೀಡುವುದರಿಂದ ಬೇಗನೆ ಹಗೆತನ ಉಂಟಾಗುತ್ತದೆ.
  • ಸಾಂಸಾರಿಕ ಬದುಕು

    ಉತ್ತಮ ಸಂಗಾತಿಗಳಾಗಿ ಸಂಸಾರವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರೇಮದ ವಿಷಯಗಳಲ್ಲಿ ಅಸ್ಥಿರರಾಗಿದ್ದಾರೆ. ಕೆಲವೊಮ್ಮೆ ಅವರ ವೈವಾಹಿಕ ಜೀವನವು ಒತ್ತಡದಿಂದ ಕೂಡಿರುತ್ತದೆ.

ನಿಮ್ಮ ಪ್ರೀತಿಪಾತ್ರರ ಜಾತಕ ತಿಳಿಯಿರಿ