ಮೀನ ರಾಶಿಯ ವೈಶಿಷ್ಟ್ಯಗಳು
ಮೀನ ರಾಶಿಯು ಕಾಲ ಪುರುಷನ ಜಾತಕದಲ್ಲಿ ಹನ್ನೆರಡನೆಯ ರಾಶಿಯಾಗಿದೆ. ಈ ರಾಶಿಚಕ್ರದ ಚಿಹ್ನೆಯು ಜೋಡಿ ಮೀನು. ಈ ರಾಶಿಯ ಅಧಿಪತಿ ಗುರು. ಮೀನ ರಾಶಿಯ ದಿಕ್ಕು ಉತ್ತರ ದಿಕ್ಕು. ಅವರ ಜನ್ಮನಾಮವು ಡಿ, ಡು, ಥ, ಝ, ನ, ಡೆ, ಡೊ, ಚ, ಚಿ ಅಕ್ಷರಗಳಿಂದ ಪ್ರಾರಂಭವಾಗುತ್ತದೆ. ಪೂರ್ವಾಭಾದ್ರ ನಾಲ್ಕನೇ ಪದ, ಉತ್ತರಾಭಾದ್ರಪದ ಮತ್ತು ರೇವತಿ ನಕ್ಷತ್ರದ ಎಲ್ಲಾ ಪಾದಗಳು ಮೀನ ರಾಶಿಯಲ್ಲಿ ಬರುತ್ತವೆ. ಇದು ನೀರಿನ ಅಂಶದ ರಾಶಿ. ಈ ರಾಶಿಚಕ್ರ ಚಿಹ್ನೆಯ ದೇವತೆಗಳೆಂದರೆ ಭಗವಾನ್ ಶಿವ, ಭೋಲೆನಾಥ್, ಹನುಮಂತ ಮತ್ತು ಲಕ್ಷ್ಮಿ ದೇವಿ.
ಮೀನ ರಾಶಿಯ ಸ್ವಭಾವ
ಮೀನ ರಾಶಿಯವರು ತುಂಬಾ ಕ್ಷಮಾಶೀಲರು. ಸಹಾನುಭೂತಿ, ವಿಶ್ವಾಸಾರ್ಹ, ದಯೆ ಸ್ವಭಾವದ ಜನರು. ಅವರ ವ್ಯಕ್ತಿತ್ವವು ವಿಭಿನ್ನ ಆಕರ್ಷಣೆಯನ್ನು ಹೊಂದಿದೆ. ಅವರು ಕ್ರೀಡೆಗಳನ್ನು ಪ್ರೀತಿಸುತ್ತಾರೆ. ಮೃದು ಸ್ವಭಾವದವರು. ಅವರು ಶಿಸ್ತು ಮತ್ತು ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯುತ್ತಾರೆ. ಧರ್ಮದಲ್ಲಿ ನಂಬಿಕೆಯನ್ನು ತೋರಿಸುತ್ತಾರೆ. ಹಣವನ್ನು ಪ್ರೀತಿಸುತ್ತಾರೆ.
ಮೀನ ರಾಶಿಯವರ ಅಧಿಪತಿ
ಗುರುವು ಮೀನ ರಾಶಿಯ ಅಧಿಪತಿ ಗ್ರಹವಾಗಿದೆ. ದೇವಗುರು ಬೃಹಸ್ಪತಿಯನ್ನು ವ್ಯಕ್ತಿಯ ಧಾರ್ಮಿಕ ಆಸಕ್ತಿ, ಜ್ಞಾನ, ಶಿಕ್ಷಣ, ಆಧ್ಯಾತ್ಮಿಕತೆ, ಆಲೋಚನೆಗಳು ಮತ್ತು ಜೀವನಶೈಲಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಮೀನ ರಾಶಿಯವರು ಆಧ್ಯಾತ್ಮಿಕ ಶಕ್ತಿಯಿಂದ ಆಶೀರ್ವದಿಸಲ್ಪಡುತಾರೆ. ಜ್ಞಾನವನ್ನು ಹಂಚಿಕೊಳ್ಳಲು ಇಚ್ಛಿಸುತ್ತಾರೆ. ಅವರದು ಸರಳ ವ್ಯಕ್ತಿತ್ವ. ಮೀನ ರಾಶಿಯ ಜನರಲ್ಲಿ ಸಂಸ್ಕೃತಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಕುಟುಂಬ ಮತ್ತು ಸ್ನೇಹಿತರ ಸೇವೆಯಲ್ಲಿ ಇವರಿಗೆ ಹೆಚ್ಚು ಆಸಕ್ತಿ. ದೇಶದ ಬಗ್ಗೆಯೂ ಪ್ರೀತಿ ಹೆಚ್ಚು. ಇವರು ಯಥಾಸ್ಥಿತಿ ವಾದಿಗಳು.
ಮೀನ ರಾಶಿಯ ಚಿಹ್ನೆ
ಮೀನ ರಾಶಿಯ ಚಿಹ್ನೆಯು ಒಂದು ಜೋಡಿ ಮೀನುಗಳು. ಇದು ಸಹೋದರತ್ವವನ್ನು ಪ್ರತಿನಿಧಿಸುತ್ತವೆ.
ಮೀನ ರಾಶಿಯ ಗುಣಲಕ್ಷಣಗಳು
ಮೀನ ರಾಶಿಯವರು ಸರಳ ಮತ್ತು ಸುಲಭವಾಗಿ ಹೊಂದಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ. ಧರ್ಮ ಮತ್ತು ಮೌಲ್ಯಗಳ ಕಡೆಗೆ ಆಕರ್ಷಣೆ ಇರುತ್ತದೆ. ಅವರಿಗೆ ಹಣದ ಕೊರತೆ ಇರುವುದಿಲ್ಲ. ವ್ಯಾಪಾರದ ದೃಷ್ಟಿಯಿಂದಲೂ ಸಮೃದ್ಧವಾಗಿ ಬದುಕುತ್ತಾರೆ. ಆಡಳಿತಾತ್ಮಕ ಸೇವೆಗಳು ಮತ್ತು ನಾಯಕತ್ವದ ಕಡೆಗೆ ಗಮನ ಕೊಡುತ್ತಾರೆ. ಇತರರ ಭಾವನೆಗಳನ್ನು ಗೌರವಿಸುವ ಸ್ವಭಾವ ರೂಢಿಗತವಾಗಿ ಬಂದಿರುತ್ತದೆ. ಕುಟುಂಬವನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಮತ್ತು ಸ್ನೇಹಿತರೊಂದಿಗೆ ಬೆರೆಯಲು ಯತ್ನಿಸುತ್ತಾರೆ. ಅವರು ಧಾರ್ಮಿಕ ವಿಷಯಗಳಲ್ಲಿ ಬಹಳ ಗಂಭೀರವಾಗಿರುತ್ತಾರೆ. ಸಣ್ಣ ತಪ್ಪನ್ನು ಸಹ ಒಪ್ಪಿಕೊಳ್ಳುವುದಿಲ್ಲ.
ಮೀನ ರಾಶಿಯವರ ಪ್ರತಿಕೂಲ ಸಂಗತಿಗಳು
ಮೀನ ರಾಶಿಯವರು ಭೋಜನವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರಿಗೆ ಪ್ರಾಪಂಚಿಕ ಸುಖಗಳ ಬಗ್ಗೆ ಅಪಾರವಾದ ಆಕರ್ಷಣೆ ಇರುತ್ತದೆ. ತಾಳ್ಮೆ ಕಡಿಮೆ.
ಮೀನ ರಾಶಿಯವರ ವೃತ್ತಿ ಬದುಕು
ಮೀನ ರಾಶಿಯವರು ಶೈಕ್ಷಣಿಕ ಕ್ಷೇತ್ರದೊಂದಿಗೆ ಅಂಟಿಕೊಂಡಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೇ ವೃತ್ತಿಯನ್ನು ಕಂಡುಕೊಳ್ಳಲು ಇಚ್ಛಿಸುತ್ತಾರೆ. ಆಡಳಿತಾತ್ಮಕ ಸೇವೆಗಳ ಬಗ್ಗೆಯೂ ವಿಶೇಷ ಆಸಕ್ತಿಯನ್ನು ತೋರಿಸುತ್ತಾರೆ. ವ್ಯಾಪಾರ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುತ್ತಾರೆ. ಎಂಬಿಎ, ಎಂಸಿಎ, ಕಾನೂನು, ಪೊಲೀಸ್ ಸೇವೆ, ಮಿಲಿಟರಿ ಸೇವೆ, ಅಗ್ನಿಶಾಮಕ ಕ್ಷೇತ್ರ, ಆರ್ಡಿನೆನ್ಸ್ ಫ್ಯಾಕ್ಟರಿ, ಎಲೆಕ್ಟ್ರಾನಿಕ್ ಎಂಜಿನಿಯರಿಂಗ್, ರೈಲ್ವೇ, ಬ್ಯಾಂಕಿಂಗ್, ರಾಜಕೀಯ ಮತ್ತು ಕೃಷಿ ಕ್ಷೇತ್ರದ ಕಡೆಗೆ ವಿಶೇಷ ಆಸಕ್ತಿಯೊಂದಿಗೆ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕ್ರೀಡೆಯ ಕಡೆಗೂ ಆಸಕ್ತಿ ಇರುತ್ತದೆ. ಕಬಡ್ಡಿ, ಕುಸ್ತಿ, ಓಟ, ಜಾವೆಲಿನ್ ಎಸೆತ, ಟೇಬಲ್ ಟೆನ್ನಿಸ್ ಮತ್ತಿತರ ಕ್ರೀಡೆಗಳಲ್ಲಿಯೂ ಮೀನ ರಾಶಿಯವರು ಮೇಲುಗೈ ಸಾಧಿಸುತ್ತಾರೆ.
ಮೀನ ರಾಶಿಯವರ ಆರೋಗ್ಯ
ಮೀನ ರಾಶಿಯವರು ಗಟ್ಟಿಮುಟ್ಟಾದ ಸ್ನಾಯುಗಳನ್ನು ಹೊಂದಿರುತ್ತಾರೆ. ಇವರಿಗೆ ಸಾಮಾನ್ಯವಾಗಿ ಮೂಳೆಯ ಸಮಸ್ಯೆಗಳ ಜೊತೆಗೆ ಹೊಟ್ಟೆ ಮತ್ತು ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುತ್ತವೆ. ಎದೆಯ ಸಮಸ್ಯೆಗಳು, ಅಲರ್ಜಿ, ಮೂಳೆಗಳು, ಸಂಧಿವಾತ, ಗ್ಯಾಸ್ಟ್ರಿಕ್, ರಕ್ತದೊತ್ತಡ, ಹೃದಯ ರೋಗಗಳು, ಮೊಣಕಾಲು ರೋಗಗಳು, ನರಗಳ ಜೊತೆಗೆ ಪ್ರಾಸ್ಟೇಟ್ ಸಮಸ್ಯೆಗಳು, ನೆಗಡಿ, ಕೆಮ್ಮು, ಅಲರ್ಜಿಗಳು ಇವರನ್ನು ಬಾಧಿಸುತ್ತವೆ.
ಗೆಳೆತನ
ಮೀನ ರಾಶಿಯವರು ಸರಳ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಬಹುಬೇಗ ಸ್ನೇಹಿತರಾಗುತ್ತಾರೆ. ಮೇಷ, ಮಿಥುನ, ಕಟಕ, ಕನ್ಯಾ, ವೃಶ್ಚಿಕ, ಧನು ಮತ್ತು ಮಕರ ರಾಶಿಯವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿರುತ್ತಾರೆ.
ಸಾಂಸಾರಿಕ ಬದುಕು
ಮೀನ ರಾಶಿಯವರು ವೈವಾಹಿಕ ಜೀವನದಲ್ಲಿ ತಮ್ಮ ಸಂಗಾತಿಯೊಂದಿಗೆ ಚೆನ್ನಾಗಿ ಬದುಕುವ ಮೂಲಕ ಮುನ್ನಡೆಯುತ್ತಾರೆ. ಅವರು ತಮ್ಮ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಹೊಂದಿಕೊಳ್ಳುತ್ತಾರೆ. ತಮ್ಮ ಸ್ವಾತಂತ್ರ್ಯ ಪ್ರೀತಿಸುವವರು ಮತ್ತು ಗೌರವಿಸುವವರನ್ನು ಬಯಸುತ್ತಾರೆ. ಮೇಷ, ವೃಷಭ, ಮಿಥುನ, ಕರ್ಕ, ಕನ್ಯಾ, ವೃಶ್ಚಿಕ, ಧನು, ಮಕರ ರಾಶಿಯವರು ಮೀನ ರಾಶಿಯವರಿಗೆ ಉತ್ತಮ ಜೀವನ ಸಂಗಾತಿಗಳಾಗಬಹುದು.