ವೃಶ್ಚಿಕ ರಾಶಿಯ ವೈಶಿಷ್ಟ್ಯಗಳು
ರಾಶಿಚಕ್ರದ ಎಂಟನೇ ರಾಶಿ ವೃಶ್ಚಿಕ. ಇದು ಸ್ತ್ರೀ ರಾಶಿಚಕ್ರ ಚಿಹ್ನೆ. ಇದರ ಸಂಕೇತ ಚೇಳು. ಇದು ನೀರಿನ ಅಂಶದ ರಾಶಿಚಕ್ರದ ಚಿಹ್ನೆ. ಇದು ಕಫ ಸ್ವಭಾವವನ್ನು ಹೊಂದಿದೆ. ಮಂಗಳ ಈ ರಾಶಿಯ ಅಧಿಪತಿ. ಉತ್ತರ ದಿಕ್ಕು ಈ ರಾಶಿಗೆ ಶುಭ ದಿಕ್ಕು. ತೊ, ನ, ನಿ, ನು, ನೆ, ನೊ, ಯ, ನಾ, ಯಿ, ಯು ಅಕ್ಷರಗಳಿಂದ ಆರಂಭವಾಗುವ ಹೆಸರುಗಳವರು ಸಾಮಾನ್ಯವಾಗಿ ಈ ರಾಶಿಗೆ ಸೇರಿರುತ್ತಾರೆ. ವಿಶಾಖ ನಕ್ಷತ್ರದ ನಾಲ್ಕನೇ ಪಾದ, ಅನುರಾಧಾ ಮತ್ತು ಜ್ಯೇಷ್ಠ ನಕ್ಷತ್ರದ ಎಲ್ಲಾ ಪಾದಗಳು ಈ ರಾಶಿಗೆ ಸೇರುತ್ತವೆ. ಆಂಜನೇಯ ಮತ್ತು ಶ್ರೀರಾಮನ ಪೂಜೆ ಈ ರಾಶಿಯವರಿಗೆ ಶುಭ ಪ್ರದ.
ವೃಶ್ಚಿಕ ರಾಶಿಯ ಸ್ವಭಾವ
ವೃಶ್ಚಿಕ ರಾಶಿಯವರು ಕಠಿಣ ಸ್ವಭಾವವನ್ನು ಹೊಂದಿರುತ್ತಾರೆ. ಭಾವನಾತ್ಮಕ ವರ್ತನೆ ಮತ್ತು ಸಂವೇದನಾಶೀಲತೆಯಿಂದ ವರ್ತಿಸುತ್ತಾರೆ. ಈ ಜನರು ಸಾಮಾನ್ಯವಾಗಿ ಅಂತರ್ಮುಖಿಗಳು. ಜೀವನದಲ್ಲಿ ಸ್ಥಿರತೆ ಸಾಧಿಸಲು ಕಠಿಣ ಪರಿಶ್ರಮ ಹಾಕುತ್ತಾರೆ. ಕಷ್ಟಪಡಲು ಹಿಂಜರಿಯುವುದಿಲ್ಲ.
ವೃಶ್ಚಿಕ ರಾಶಿಯ ಅಧಿಪತಿ
ವೃಶ್ಚಿಕ ಗ್ರಹದ ಅಧಿಪತಿ ಮಂಗಳ. ಹೀಗಾಗಿ ಈ ರಾಶಿಯ ಜನರಲ್ಲಿ ಕಟುತ್ವ ಹೆಚ್ಚು. ಶಿಸ್ತು, ಕಠಿಣ ಕೆಲಸ, ಹೋರಾಟದ ಜೀವನವನ್ನು ನಡೆಸುತ್ತಾರೆ, ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಆಡಳಿತಾತ್ಮಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಚರ್ಚೆಯಿಲ್ಲದೆ ಯಾವುದನ್ನೂ ಸುಲಭಕ್ಕೆ ಒಪ್ಪಲಾರರು.
ವೃಷಭ ರಾಶಿಯ ಚಿಹ್ನೆ
ವೃಶ್ಚಿಕ ರಾಶಿಯ ಚಿಹ್ನೆ ಚೇಳು.
ವೃಷಭ ರಾಶಿಯ ಗುಣಲಕ್ಷಣಗಳು
ವೃಶ್ಚಿಕ ರಾಶಿಯ ಜನರು ಧೈರ್ಯಶಾಲಿಗಳಷ್ಟೇ ಅಲ್ಲ, ಇವರಲ್ಲಿ ಮೊಂಡುತನ ಕೂಡ ಇರುತ್ತದೆ. ಇವರು ಪ್ರಾಮಾಣಿಕ ಸ್ನೇಹಿತರು, ಭಾವನಾತ್ಮಕ ಮತ್ತು ಬುದ್ಧಿವಂತ ಸ್ವಭಾವದವರು.
ವೃಷಭ ರಾಶಿಯವರ ಪ್ರತಿಕೂಲ ಸಂಗತಿಗಳು
ಮಂಗಳನು ಈ ರಾಶಿಯ ಅಧಿಪತಿಯಾಗಿರುವುದರಿಂದ, ವೃಶ್ಚಿಕ ರಾಶಿಯವರು ಬಹುಬೇಗ ಕೋಪಗೊಳ್ಳುತ್ತಾರೆ. ಎಲ್ಲರನ್ನೂ ಅಪನಂಬಿಕೆಯಿಂದ ನೋಡುವ ಕಾರಣ ವಿಶ್ವಾಸ ಉಳಿಸಿಕೊಳ್ಳುವುದು ಕಷ್ಟ.
ವೃಷಭ ರಾಶಿಯವರ ವೃತ್ತಿ ಬದುಕು
ವೃಶ್ಚಿಕ ರಾಶಿಯವರ ವೃತ್ತಿಜೀವನವು ಮುಖ್ಯವಾಗಿ ಆಡಳಿತ ಸೇವೆಯಲ್ಲಿ, ಶಿಕ್ಷಣ ಮತ್ತು ಬೋಧನಾ ಕ್ಷೇತ್ರದಲ್ಲಿ ಮೇಲ್ಮಗೆ ಬರುತ್ತದೆ. ಬೇಹುಗಾರಿಕೆ, ಪೊಲೀಸ್, ಮಿಲಿಟರಿ, ನಿರ್ವಹಣೆ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಶೋಧಕರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ವೃಶ್ಚಿಕ ರಾಶಿಯವರು ವಾಣಿಜ್ಯ ವ್ಯವಹಾರದಲ್ಲಿಯೂ ಯಶಸ್ವಿಯಾಗುತ್ತಾರೆ. ಮಾರುಕಟ್ಟೆ ವ್ಯವಹಾರ, ಲೆಕ್ಕಪತ್ರ ನಿರ್ವಹಣೆ, ಹೋಟೆಲ್ ನಿರ್ವಹಣೆ, ಮಾನವ ಸಂಪನ್ಮೂಲ, ರಾಜಕೀಯ ಮತ್ತು ಕಾನೂನು ಕ್ಷೇತ್ರಗಳಲ್ಲಿ ಅವರಿಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಬಹುಮುಖ ಪ್ರತಿಭೆ ಹೊಂದಿರುವ ವೃಶ್ಚಿಕ ರಾಶಿಯವರಿಗೆ ಹಲವು ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ.
ವೃಶ್ಚಿಕ ರಾಶಿಯವರ ಆರೋಗ್ಯ
ಸದಾ ಕೆಲಸದಲ್ಲಿ ನಿರತರಾಗುವ ಕಾರಣ ವ್ಯಾಯಾಮ ಸೇರಿದಂತೆ ಆರೋಗ್ಯದ ಕಡೆಗೆ ಈ ರಾಶಿಯವರು ನಿರ್ಲಕ್ಷ್ಯ ತೋರುತ್ತಾರೆ. ಇವರಲ್ಲಿ ಜೀರ್ಣಶಕ್ತಿ ದುರ್ಬಲವಾಗಿರುತ್ತದೆ. ಸೋಂಕುಗಳು ಮತ್ತು ಮರೆವಿನ ಸಮಸ್ಯೆ ಉದ್ಭವಿಸುತ್ತದೆ. ರಕ್ತ ಸಂಬಂಧಿ ಮತ್ತು ಇತರ ಹೆಸರಿಸಲು ಕಷ್ಟವಾಗುವ ಅಸ್ವಸ್ಥತೆಗಳಿಂದ ಬಳಲುತ್ತಾರೆ. ಕಣ್ಣಿನ ಪೊರೆ, ಶೀತ, ಮಲಬದ್ಧತೆ, ಕೀಲು ನೋವು, ಗಡ್ಡೆ, ಲ್ಯುಕೋರಿಯಾ, ಗಂಟಲಿನ ಸಮಸ್ಯೆಗಳು, ಹೃದಯ ಮತ್ತು ಹೊಟ್ಟೆಯ ಸಮಸ್ಯೆಗಳು ಈ ರಾಶಿಯವರಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ.
ಗೆಳೆತನ
ಸ್ನೇಹಿತರನ್ನು ತುಂಬಾ ಯೋಚಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಗುರಿ ಸಾಧನೆಗೆ ಪೂರಕವಾಗಿ ನೆರವಾಗುವಂಥವರಿಗೆ ಮಾತ್ರ ಸ್ನೇಹಿತರ ವಲಯದಲ್ಲಿ ಇರಲು ಅವಕಾಶ ಮಾಡಿಕೊಡುತ್ತಾರೆ. ಸದಾ ಕೆಲಸಗಳಲ್ಲಿ ನಿರತರಾಗಿರುವುದರಿಂದ ತಮ್ಮ ಸ್ನೇಹಿತರಿಗೆ ಹೆಚ್ಚು ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಆದರೆ ಕೆಲ ಸ್ನೇಹಿತರೊಂದಿಗೆ ಬಹುಕಾಲ ಸ್ನೇಹವನ್ನು ಉಳಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ವೃಷಭ, ಕಟಕ, ಸಿಂಹ, ವೃಶ್ಚಿಕ, ಮಕರ ಮತ್ತು ಮೀನ ರಾಶಿಯವರೊಂದಿಗೆ ಉತ್ತಮ ಸ್ನೇಹ ಬಾಂಧವ್ಯ ಉಳಿಸಿಕೊಳ್ಳುತ್ತಾರೆ.
ಸಾಂಸಾರಿಕ ಬದುಕು
ಜೀವನ ಸಂಗಾತಿಯ ವಿಚಾರದಲ್ಲಿ ವೃಶ್ಚಿಕ ರಾಶಿಯವರು ಸೌಮ್ಯ ಸ್ವಭಾವವನ್ನು ಹೊಂದಿರುತ್ತಾರೆ. ಪ್ರೇಮದ ವಿಚಾರಗಳಲ್ಲಿ ಧೈರ್ಯ ಹೆಚ್ಚು. ಸ್ವತಃ ಮುಂದೆ ಹೋಗಿ ಪ್ರೇಮ ಪ್ರಸ್ತಾಪ ಮಾಡುವ ಧೈರ್ಯ ಇರುತ್ತದೆ. ಇವರ ದಾಂಪತ್ಯ ಜೀವನವೂ ಚೆನ್ನಾಗಿರುತ್ತದೆ. ವೃಷಭ, ಕಟಕ, ಸಿಂಹ, ಮಕರ ಮತ್ತು ಮೀನ ರಾಶಿಯವರೊಂದಿಗೆ ವೈವಾಹಿಕ ಸಂಬಂಧ ಏರ್ಪಡುವ ಸಾಧ್ಯತೆ ಹೆಚ್ಚು. ವೃಶ್ಚಿಕ ರಾಶಿಯ ಪುರುಷನು ಜೀವನ ಸಂಗಾತಿಯಾಗಿ ಬಹುತೇಕ ಎಲ್ಲಾ ರಾಶಿಚಕ್ರದವರೊಂದಿಗೆ ಚೆನ್ನಾಗಿರುತ್ತಾರೆ. ತಮ್ಮ ವೈಯಕ್ತಿಕ ಬದುಕಿನ ವಿಚಾರದಲ್ಲಿ ಸಂಗಾತಿಯಿಂದಲೂ ತುಸು ಅಂತರ ಕಾಪಾಡಿಕೊಳ್ಳಲು ಇಚ್ಛಿಸುತ್ತಾರೆ. ದಾಂಪತ್ಯದ ವಿಚಾರದಲ್ಲಿ ಯಾರೊಬ್ಬರ ಹಸ್ತಕ್ಷೇಪವನ್ನೂ ಇವರು ಸಹಿಸುವುದಿಲ್ಲ.