ವೃಷಭ ರಾಶಿ ಭವಿಷ್ಯ 2025 - ವೃತ್ತಿ, ಪ್ರೀತಿ, ಆರೋಗ್ಯ, ಹಣಕಾಸು ಭವಿಷ್ಯ

ನಮಸ್ಕಾರ

ವೃಷಭ ನೀವು

(April - May)

Taurus Horoscope for 2025

ವೃಷಭ ರಾಶಿ 2025 ರ ರಾಶಿ ಫಲಗಳ ಮುಖ್ಯಾಂಶ
ಪ್ರೀತಿ, ಸಂಬಂಧಗಳು: ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧವ ಕಾಪಾಡಿಕೊಳ್ಳಿ.
ವೃತ್ತಿ, ಹಣಕಾಸು: ಆದಾಯ ಹೆಚ್ಚಾಗುತ್ತದೆ, ಹೊಸ ಆಸ್ತಿಗಳನ್ನು ಖರೀದಿಸುತ್ತೀರಿ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಅನುಕೂಲಕರ ಸಮಯ. ಉದ್ಯೋಗಿಗಳಿಗೆ ಬಡ್ತಿ, ವ್ಯಾಪಾರಸ್ಥರಿಗೆ ಲಾಭ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ.
ಆರೋಗ್ಯ: ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಶುಭ ತಿಂಗಳು: ಮೇ, ಜುಲೈ, ಅಕ್ಟೋಬರ್
ಅಶುಭ ತಿಂಗಳು: ಮಾರ್ಚ್, ಏಪ್ರಿಲ್, ನವೆಂಬರ್, ಡಿಸೆಂಬರ್
ಪರಿಹಾರ ಕ್ರಮ: ಲಕ್ಷ್ಮಿ ಮತ್ತು ಶ್ರೀಕೃಷ್ಣನನ್ನು ಪೂಜಿಸಿ. ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು.

ಮತ್ತಷ್ಟು ಓದಿ

ವೃಷಭ ರಾಶಿ

ಗುಣಲಕ್ಷಣಗಳುಹೊಂದಾಣಿಕೆ
  • ವೃಷಭ ರಾಶಿಯ ವೈಶಿಷ್ಟ್ಯಗಳು

    ವೃಷಭವನ್ನು ಸ್ಥಿರ ರಾಶಿಚಕ್ರದ ಭಾಗ ಎಂದು ಪರಿಗಣಿಸಲಾಗುತ್ತದೆ. ಇದು ಭೂಮಿಯ ಅಂಶದ ಚಿಹ್ನೆ. ಈ ರಾಶಿಚಕ್ರ ಚಿಹ್ನೆಯು ನಂದಿ ಅಂದರೆ ವೃಷಭ. ಈ ರಾಶಿಯಲ್ಲಿ ಕೃತ್ತಿಕಾ ನಕ್ಷತ್ರದ ಎರಡನೇ ಪಾದದಿಂದ ನಾಲ್ಕನೇ ಪಾದ, ರೋಹಿಣಿ ನಕ್ಷತ್ರದ ಎಲ್ಲಾ ಪಾದಗಳು ಮತ್ತು ಮೃಗಶಿರಾ ನಕ್ಷತ್ರದ ಮೊದಲ ಮತ್ತು ಎರಡನೇ ಪಾದಗಳು ಬರುತ್ತವೆ. ವೃಷಭ ರಾಶಿಯವರು ವೈಶ್ಯ (ವ್ಯಾಪಾರಿಗಳು) ವರ್ಣಕ್ಕೆ ಸೇರುತ್ತಾರೆ. ಶುಕ್ರ ಗ್ರಹವು ವೃಷಭ ರಾಶಿಯ ಅಧಿಪತಿ ಗ್ರಹವಾಗಿದೆ. ಸಾಮಾನ್ಯವಾಗಿ ಈ ರಾಶಿಗೆ ಸೇರಿದವರು ಮಧ್ಯಮ ಎತ್ತರವನ್ನು ಹೊಂದಿರುತ್ತಾರೆ.
  • ವೃಷಭ ರಾಶಿಯ ಸ್ವಭಾವ

    ವೃಷಭ ರಾಶಿಯ ಜನರು ಶಾಂತ ಸ್ವಭಾವದವರು.ಹೃದಯಾಂತರಾಳದಲ್ಲಿ ಸಾಮಾನ್ಯವಾಗಿ ಮೃದುವಾಗಿರುತ್ತಾರೆ. ದೃಢ, ಪ್ರಾಮಾಣಿಕ, ವಿಶ್ವಾಸಾರ್ಹ, ಪ್ರಾಯೋಗಿಕ ಮತ್ತು ನಿಶ್ಚಯ ಸ್ವಭಾವ ಹೊಂದಿರುತ್ತಾರೆ. ವೃಷಭ ರಾಶಿಗೆ ಸೇರಿದವರಿಗೆ ತಮ್ಮ ಸಾಮರ್ಥ್ಯಗಳ ಬಗ್ಗೆ ಅರಿವು ಇರುತ್ತದೆ. ಕಠಿಣ ಪರಿಶ್ರಮದಿಂದ ಸಂಪತ್ತು ಮತ್ತು ಪ್ರತಿಷ್ಠೆ ಗಳಿಸುತ್ತಾರೆ. ಮತ್ತೊಬ್ಬರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ನಿಷ್ಕಲ್ಮಷ ನಗು, ಹಾಸ್ಯ ಮತ್ತು ಮನರಂಜನೆಯ ಮೂಲಕ ಜನರನ್ನು ತಮ್ಮೆಡೆಗೆ ಸೆಳೆಯುವುದರಲ್ಲಿ ಇವರು ನಿಪುಣರು.
  • ವೃಷಭ ರಾಶಿಯವರ ಅಧಿಪತಿ

    ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ವೃಷಭ ರಾಶಿಯ ಜನರು ತಮ್ಮ ಕೆಲಸದಲ್ಲಿ ಕಠಿಣ ಪರಿಶ್ರಮ ತೋರುತ್ತಾರೆ, ಉದ್ಯಮಶೀಲತೆ, ದೃಢ ನಿರ್ಧಾರ ತೆಗೆದುಕೊಳ್ಳುವ ಸ್ವಭಾವ ಮತ್ತು ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಗುಣ ಅವರಿಗೆ ಇರುತ್ತದೆ. ಸಾಮಾನ್ಯವಾಗಿ ತಮ್ಮ ಕೆಲಸವನ್ನು ಯೋಜನೆಯ ಪ್ರಕಾರ ಮಾಡುತ್ತಾರೆ. ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸಲು ಬಯಸುತ್ತಾರೆಯೇ ವಿನಃ ಶಾರ್ಟ್‌ಕಟ್‌ಗಳನ್ನು ಆಶ್ರಯಿಸುವುದಿಲ್ಲ.
  • ವೃಷಭ ರಾಶಿಯ ಚಿಹ್ನೆ

    ವೈದಿಕ ಜ್ಯೋತಿಷ್ಯದ ಪ್ರಕಾರ ವೃಷಭ ರಾಶಿಯು ರಾಶಿ ಚಕ್ರದಲ್ಲಿ ಎರಡನೇ ರಾಶಿಯಾಗಿದೆ. ಈ ರಾಶಿಚಕ್ರದ ಚಿಹ್ನೆಯು ನಂದಿ (ವೃಷಭ) ಆಗಿದೆ. ನಂದಿಯು ಸ್ವಭಾವತಃ ಕಷ್ಟಪಟ್ಟು ದುಡಿಯುವ, ಕಠಿಣ ಪರಿಶ್ರಮಿ, ಧೈರ್ಯ ಮತ್ತು ಶಾಂತ ಸ್ವಭಾವವನ್ನು ಹೊಂದಿದೆ. ಆದರೆ ಒಮ್ಮೊಮ್ಮೆ ಸಿಟ್ಟಿನಲ್ಲಿ ಆಕ್ರಮಣಶೀಲತೆಯ ಮನೋಭಾವವನ್ನೂ ಪ್ರದರ್ಶಿಸುತ್ತದೆ. ಅಂಥ ಸಂದರ್ಭಗಳಲ್ಲಿ ವೃಷಭವನ್ನು ನಿಯಂತ್ರಿಸಲು ತುಂಬಾ ಕಷ್ಟವಾಗುತ್ತದೆ. ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ವೃಷಭ ರಾಶಿಯವರ ಅದೃಷ್ಟದ ಬಣ್ಣಗಳು ಕೆನೆ ಬಣ್ಣ, ನೀಲಿ, ನೇರಳೆ ಮತ್ತು ಹಸಿರು. ಅದೃಷ್ಟ ಸಂಖ್ಯೆ 6. ಶುಭ ರತ್ನಗಳು:- ವಜ್ರ, ನೀಲಮಣಿ ಮತ್ತು ಪಚ್ಚೆ.
  • ವೃಷಭ ರಾಶಿಯ ಗುಣಲಕ್ಷಣಗಳು

    ವೃಷಭ ರಾಶಿಯ ಜನರು ಹಟಮಾರಿ, ದೃಢನಿಶ್ಚಯ, ಮಹತ್ವಾಕಾಂಕ್ಷಿ, ಶಕ್ತಿಶಾಲಿ ಮತ್ತು ಪ್ರೀತಿಯ ಸ್ವಭಾವ ಹೊಂದಿರುತ್ತಾರೆ. ಸಾಮಾನ್ಯವಾಗಿ ಪ್ರಕೃತಿಪ್ರಿಯರು. ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಗುರಿ ಸಾಧಿಸಲು ಬಯಸುತ್ತಾರೆ. ಪ್ರೀತಿಯಿಂದ ಇತರರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ.
  • ವೃಷಭ ರಾಶಿಯವರ ಪ್ರತಿಕೂಲ ಸಂಗತಿಗಳು

    ವೃಷಭ ರಾಶಿಯ ಜನರು ಸ್ವಭಾವತಃ ಸ್ವಲ್ಪಮಟ್ಟಿಗೆ ಸಂಪ್ರದಾಯವಾದಿಗಳು. ಕುಟುಂಬ ಸದಸ್ಯರು ಮತ್ತು ಜೀವನ ಸಂಗಾತಿಗೆ ಪೂರ್ಣ ಸ್ವಾತಂತ್ರ್ಯ ಕೊಡಲು ಹಿಂದೇಟು ಹಾಕುತ್ತಾರೆ. ಕೆಲಸದ ವಿಷಯದಲ್ಲಿ ಇವರ ತುಂಬಾ ಹಟಮಾರಿ ಸ್ವಭಾವದಿಂದ ಕುಟುಂಬದ ಇತರ ಸದಸ್ಯರಿಗೆ ಕೋಪ ಬರಿಸುತ್ತಾರೆ. ಒಮ್ಮೊಮ್ಮೆ ಈ ರಾಶಿಯ ಜನರು ಅತಿಯಾದ ಸೋಮಾರಿತನಕ್ಕೆ ಬಲಿಯಾಗುತ್ತಾರೆ. ಇವರು ಸಾಮಾನ್ಯವಾಗಿ ಕೋಪಗೊಳ್ಳುವುದಿಲ್ಲ ಆದರೆ ಕೋಪಗೊಂಡಾಗ ನಿಯಂತ್ರಿಸುವುದು ಕಷ್ಟ.
  • ವೃಷಭ ರಾಶಿಯವರ ವೃತ್ತಿ ಬದುಕು

    ವೃಷಭ ರಾಶಿಯ ಜನರು ಸಂಶೋಧನೆ (ಅಧ್ಯಯನ) ಮತ್ತು ಬೋಧನೆ (ಶಿಕ್ಷಣ) ಕ್ಷೇತ್ರಗಳಿಗೆ ಸೇರಿದ ಸ್ಥಳಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ನ್ಯಾಯಾಂಗಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಕೃಷಿ ಕ್ಷೇತ್ರದಲ್ಲಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಾಧಿಸುತ್ತಾರೆ. ಪೊಲೀಸ್ ಸೇವೆಗಳು, ನಾಗರಿಕ ಆಡಳಿತ ಸೇವೆಗಳು (ಸರ್ಕಾರಿ ಕೆಲಸ) ಮತ್ತು ರಾಜಕೀಯದಲ್ಲಿ ಇವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಕಲಾ ಕ್ಷೇತ್ರದಲ್ಲಿ, ವಿಶೇಷವಾಗಿ ಚಲನಚಿತ್ರ ನಿರ್ಮಾಣ ಮತ್ತು ಅಭಿನಯದಲ್ಲಿ ಉನ್ನತ ಮಟ್ಟಕ್ಕೆ ತಲುಪುತ್ತಾರೆ.
  • ವೃಷಭ ರಾಶಿ ಆರೋಗ್ಯ

    ವೃಷಭ ರಾಶಿಯ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಸಮಸ್ಯೆಗಳು ಬಾಧಿಸುವುದಿಲ್ಲ. ಆದರೂ ಆಗಾಗ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು, ಅಲರ್ಜಿ, ಶೀತ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಮೂತ್ರಪಿಂಡದ ಕಾಯಿಲೆಗಳು ಕಾಡುತ್ತವೆ. ಹುಣ್ಣು, ಮೊಡವೆ ಮತ್ತು ರಕ್ತ ಸಂಬಂಧಿ ಸಮಸ್ಯೆಗಳಿಂದ ನೋವು ಇರುತ್ತದೆ. ಸಾಧಾರಣ ಆದರೆ ಸದೃಢವಾದ ಮೈಕಟ್ಟು ಇವರದು.
  • ಗೆಳೆತನ

    ವೃಷಭ ರಾಶಿಯ ಜನರು ವಿಶ್ವಾಸಾರ್ಹ ಮತ್ತು ಸ್ಥಿರ ಸ್ವಭಾವದ ಗೆಳೆಯರಾಗುತ್ತಾರೆ. ಸ್ನೇಹಕ್ಕೆ ಬದ್ಧರಾಗಿ ಉಳಿಯುತ್ತಾರೆ. ಮಿತ್ರದ್ರೋಹಿಗಳ ವಿಚಾರದಲ್ಲಿ ಕಠಿಣವಾಗಿ ವರ್ತಿಸುತ್ತಾರೆ.
  • ಸಾಂಸಾರಿಕ ಬದುಕು

    ವೃಷಭ ರಾಶಿಗೆ ಸೇರಿದವರು ಪ್ರೀತಿ ಮತ್ತು ಸಾಂಸಾರಿಕ ಬದುಕಿನಲ್ಲಿ ಆಸಕ್ತರು. ಶುಕ್ರವು ಅಧಿಪತಿ ಗ್ರಹವಾಗಿರುವ ಕಾರಣ ಸೌಂದರ್ಯ ಮತ್ತು ಪ್ರೀತಿಯ ಸೆಳೆತ ಹೆಚ್ಚು. ವೃಷಭ ರಾಶಿಯ ಜನರು ಉತ್ತಮ ಸಂಗಾತಿಗಳಾಗಿ (ಪತಿ-ಪತ್ನಿ) ತಮ್ಮ ಜೊತೆಗಾರರಲ್ಲಿ ಸಂತೃಪ್ತಿ ತರುತ್ತಾರೆ.

ನಿಮ್ಮ ಪ್ರೀತಿಪಾತ್ರರ ಜಾತಕ ತಿಳಿಯಿರಿ