ವಿರಾಟ್ ಕೊಹ್ಲಿ ಅವರನ್ನು ಐಪಿಎಲ್ನಿಂದಲೇ ಬ್ಯಾನ್ ಮಾಡಿ; ಗೆಳೆಯನ ವಿರುದ್ಧ ಕೆಎಲ್ ರಾಹುಲ್ ಅಚ್ಚರಿ ಹೇಳಿಕೆ
KL Rahul on Virat Kohli : ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಿಂದಲೇ ಬ್ಯಾನ್ ಮಾಡಬೇಕು ಎಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರು ಒತ್ತಾಯಿಸಿದ್ದಾರೆ.
ಮಾರ್ಚ್ 22ರಿಂದ 17ನೇ ಆವೃತ್ತಿಯ ಐಪಿಎಲ್ (IPL 2024) ಆರಂಭವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು (RCB vs CSK) ಸೆಣಸಾಟ ನಡೆಸಲಿವೆ. ಆದರೆ ಟೂರ್ನಿಗೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಅವರು, ಆರ್ಸಿಬಿ ವಿರಾಟ್ ಕೊಹ್ಲಿ (Virat Kohli) ಅವರನ್ನು ಐಪಿಎಲ್ನಿಂದ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ.
ಎಲ್‌ಎಸ್‌ಜಿ ಕ್ಯಾಪ್ಟನ್ ಕೆಎಲ್ ರಾಹುಲ್ ಅವರು ತಮ್ಮ ನೆಚ್ಚಿನ ಗೆಳೆಯ ವಿರಾಟ್ ಕೊಹ್ಲಿ ಕುರಿತು ನೀಡಿದ್ದ ಈ ಹೇಳಿಕೆಯ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ರಾಹುಲ್ ಗಂಭೀರವಾಗಿ ಈ ವಿಷಯ ಹೇಳಿದ್ದಲ್ಲ, ಕೊಹ್ಲಿ ಜೊತೆಗಿನ ವಿಡಿಯೋ ಕಾಲ್ನಲ್ಲಿ ತಮಾಷೆಯ ಮಾತಾಗಿದೆ. ಈ ವಿಡಿಯೋ ಇತ್ತೀಚಿನದ್ದು ಅಲ್ಲ, ಕೋವಿಡ್ ಅವಧಿಯಲ್ಲಿ ಇಬ್ಬರು ವಿಡಿಯೋ ಕಾಲ್ ಇದಾಗಿತ್ತು. ಆಗ ನಿಮ್ಮನ್ನು (ಕೊಹ್ಲಿ) ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಬ್ಯಾನ್ ಮಾಡಬೇಕು ಎಂದಿದ್ದರು.
ನಿಮ್ಮನ್ನು ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಐಪಿಎಲ್ನಿಂದಲೇ ನಿಷೇಧಿಸಬೇಕು. ಪ್ರತಿ ಸೀಸನ್ನಲ್ಲೂ ನಿಮ್ಮಿಬ್ಬರ ಜೊತೆಯಾಟ, ರನ್ ಗಳಿಕೆ, ರನ್ ಗಳಿಕೆ ಅಗ್ರಸ್ಥಾನದಲ್ಲಿರುತ್ತದೆ. ಹಾಗಾಗಿ ನಿಮ್ಮಿಬ್ಬರನ್ನು ನಿಷೇಧಿಸಿದರೆ ಉತ್ತಮ ಎಂದು ಕೆಎಲ್ ಹೇಳಿದ್ದಾರೆ. ರಾಹುಲ್ ಮಾತು ಕೇಳಿದ ತಕ್ಷಣ ಕೊಹ್ಲಿ ಜೋರಾಗಿ ನಕ್ಕಿದ್ದಾರೆ. ಮೂರು ವರ್ಷದ ಹಿಂದಿನ ಹಳೆಯ ವಿಡಿಯೋ ಇದಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಹ್ಲಿ ಮತ್ತು ಎಬಿಡಿ ಜೋಡಿ ಐಪಿಎಲ್ನಲ್ಲಿ ಅದ್ಭುತ ದಾಖಲೆಗಳನ್ನು ಸೃಷ್ಟಿಸಿದೆ.
ವಿರಾಟ್ ಮತ್ತು ರಾಹುಲ್ ಇಬ್ಬರು ಸಹ ಉತ್ತಮ ಗೆಳೆಯರು. ರಾಹುಲ್ ತನ್ನ ಆರಂಭಿಕ ಕ್ರಿಕೆಟ್ ವೃತ್ತಿಜೀವನದಲ್ಲಿ ಫಾರ್ಮ್ ಕಳೆದುಕೊಂಡ ಸಂದರ್ಭದಲ್ಲಿ ಅಂದು ನಾಯಕನಾಗಿದ್ದ ಕೊಹ್ಲಿ ಹೆಚ್ಚು ಬೆಂಬಲ ನೀಡಿದ್ದರು. ತಂಡದಿಂದಲೇ ರಾಹುಲ್ ಅವರನ್ನು ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಕೊಹ್ಲಿ, ಕೆಎಲ್ ರಾಹುಲ್ ಅವರನ್ನು ಬೆಂಬಲಿಸಿದ್ದರು. ರಾಹುಲ್ ಮತ್ತು ಕೊಹ್ಲಿ ಇಬ್ಬರ ಸ್ನೇಹ ಸಾಕಷ್ಟು ಬಾರಿ ಸಾಬೀತಾಗಿದೆ. ಕಳೆದ ಏಕದಿನ ವಿಶ್ವಕಪ್ನಲ್ಲಿ ಕೊಹ್ಲಿ ಶತಕ ಸಿಡಿಸಲು ರನ್ ಗಳಿಸದೆ ಸಹಕಾರ ನೀಡಿದ್ದರು.
ಕೆಎಲ್ ರಾಹುಲ್ ಫಿಟ್
ಗಾಯದ ಕಾರಣ ಇತ್ತೀಚೆಗೆ ಮುಕ್ತಾಯಗೊಂಡ ಭಾರತ - ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ 4 ಟೆಸ್ಟ್ ಪಂದ್ಯಗಳಿಂದಲೂ ಕೆಎಲ್ ರಾಹುಲ್ ಹೊರಬಿದ್ದಿದ್ದರು. ಹೀಗಾಗಿ ಐಪಿಎಲ್ ಆಡುತ್ತಾರೆ ಎಂಬುದು ಗೊಂದಲ ಇತ್ತು. ಸದ್ಯ ವರದಿಗಳ ಪ್ರಕಾರ, ಬಿಸಿಸಿಐ ವೈದ್ಯಕೀಯ ತಂಡವು ರಾಹುಲ್ ಅವರನ್ನು ಫಿಟ್ ಎಂದು ಘೋಷಿಸಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಎಲ್‌ಎಸ್‌ಜಿ ಶಿಬಿರ ಸೇರಿಕೊಳ್ಳಲಿದ್ದಾರೆ. ಕೆಎಲ್ ಫಿಟ್ ಆದರೂ ಆರಂಭದ ಕೆಲವು ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಫಿಟ್ ಆದ ಮೇಲೆ ಕೀಪಿಂಗ್ ಮಾಡಬಹುದಾಗಿದೆ.