ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಎಂಎಸ್ ಧೋನಿ ದುಲೀಪ್ ಟ್ರೋಫಿ ಆಡಬಹುದೇ? ಇಲ್ಲಿದೆ ಉತ್ತರ-can ms dhoni play duleep trophy despite retiring from international cricket here is the answer vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಎಂಎಸ್ ಧೋನಿ ದುಲೀಪ್ ಟ್ರೋಫಿ ಆಡಬಹುದೇ? ಇಲ್ಲಿದೆ ಉತ್ತರ

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಎಂಎಸ್ ಧೋನಿ ದುಲೀಪ್ ಟ್ರೋಫಿ ಆಡಬಹುದೇ? ಇಲ್ಲಿದೆ ಉತ್ತರ

MS Dhoni: ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಆಗಿರುವ ಎಂಎಸ್ ಧೋನಿ ಅವರನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡಬಹುದೇ? ಅವರು ದುಲೀಪ್ ಟ್ರೋಫಿ ಆಡಲು ಅರ್ಹರೇ? ಧೋನಿ ಲಭ್ಯವಿದ್ದರೆ ಅವರನ್ನು ಯಾವುದೇ ತಂಡಕ್ಕೆ ಸೇರಿಸಿಕೊಳ್ಳಬಹುದು?

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ.
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ.

2024/25ರ ದೇಶೀಯ ಕ್ರಿಕೆಟ್ ಋತುವು ಪ್ರತಿಷ್ಠಿತ ದುಲೀಪ್ ಟ್ರೋಫಿ ಮೂಲಕ ಸೆಪ್ಟೆಂಬರ್ 5 ರಿಂದ ಆರಂಭವಾಗಲಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ ನಾಲ್ಕು ಬಲಿಷ್ಠ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ರಿಷಭ್ ಪಂತ್ ಸೇರಿದಂತೆ ಕೆಲ ಸ್ಟಾರ್ ಪ್ಲೇಯರ್ಸ್ ಕಾಣಿಸಿಕೊಳ್ಳಲಿದ್ದಾರೆ.

ಹಾಗಾದರೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿರುವ ಎಂಎಸ್ ಧೋನಿ ಅವರನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡಬಹುದೇ? ಅವರು ದುಲೀಪ್ ಟ್ರೋಫಿ ಆಡಲು ಅರ್ಹರೇ? ಧೋನಿ ಲಭ್ಯವಿದ್ದರೆ ಅವರನ್ನು ಯಾವುದೇ ತಂಡಕ್ಕೆ ಸೇರಿಸಿಕೊಳ್ಳಬಹುದು?

ಹೌದು, ಎಂಎಸ್ ಧೋನಿ ದುಲೀಪ್ ಟ್ರೋಫಿ ಆಡಲು ಅರ್ಹರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅವರು ಯಾವುದೇ ವಿದೇಶಿ ಫ್ರಾಂಚೈಸಿ ಲೀಗ್‌ಗಳನ್ನು ಆಡಿಲ್ಲ. ಭಾರತೀಯ ಆಟಗಾರನು ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ ಬಿಟ್ಟು ಇನ್ನಾವುದೇ ಲೀಗ್ ಆಡಿದರೆ ಅವರನ್ನು ಆಡಲು ಅನುಮತಿಸಲಾಗುವುದಿಲ್ಲ. ಆದರೆ, ಧೋನಿ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಹೀಗಾಗಿ ಅವರು ದುಲೀಪ್ ಟ್ರೋಫಿಯನ್ನೂ ಆಡಲು ಅರ್ಹರಾಗಿದ್ದಾರೆ.

ಹಾಗಂತ ಧೋನಿ ದೇಶೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಪಂದ್ಯಗಳು ಯುವ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಅವಕಾಶಗಳನ್ನು ಒದಗಿಸುತ್ತವೆ ಮತ್ತು ಟೀಮ್ ಇಂಡಿಯಾದ ಆಯ್ಕೆಗಾಗಿ ಒಂದು ರೀತಿಯ ಪರೀಕ್ಷೆ ಆಗಿದೆ. ಹೀಗಾಗಿ ನಿವೃತ್ತಿ ಹೊಂದಿದ ಆಟಗಾರರಿಗೆ ದುಲೀಪ್ ಟ್ರೋಫಿಯಲ್ಲಿ ಆಡುವ ಅವಕಾಶವಿದೆ. ಆದರೆ, ಅವರನ್ನು ಆಯ್ಕೆಗೆ ಪರಿಗಣಿಸುವುದು ತೀರಾ ಕಡಿಮೆಯಲ್ಲ, ಸಾಧ್ಯತೆಯೂ ಇಲ್ಲ.

ಧೋನಿ ನಾಲ್ಕು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಜಾರ್ಖಂಡ್‌ಗಾಗಿ ದೇಶೀಯ ಕ್ರಿಕೆಟ್‌ ಆಡಿದ್ದರು. ವಿಜಯ್ ಹಜಾರೆ ಟ್ರೋಫಿಯ 2 ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ದೇಶೀಯ ಕ್ರಿಕೆಟ್​ನಿಂದ ದೂರ ಉಳಿದರು. ಇವರ ಅನುಪಸ್ಥಿತಿಯಲ್ಲಿ ಮತ್ತೊಬ್ಬ ವಿಕೆಟ್‌ಕೀಪರ್‌ಗೆ ನಿಯಮಿತ ಅವಕಾಶಗಳು ಲಭಿಸಿದವು.

ಎಂಎಸ್ ಧೋನಿ ವೃತ್ತಿಜೀವನ

ಆದರೆ, ಧೋನಿ ಐಪಿಎಲ್ ಆಡುವುದನ್ನು ಮುಂದುವರೆಸಿದ್ದಾರೆ. ಐಪಿಎಲ್ 2025 ರಲ್ಲೂ ಸಹ ಧೋನಿ ಕಣಕ್ಕಿಳಿಯಲಿದ್ದಾರೆ. ಧೋನಿ ಅವರ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಭಾರತಕ್ಕಾಗಿ 90 ಟೆಸ್ಟ್, 350 ಏಕದಿನ ಮತ್ತು 98 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 4876 ರನ್ ಗಳಿಸಿದ್ದಾರೆ. ಏಕದಿನದಲ್ಲಿ 10773 ರನ್ ಮತ್ತು ಟಿ20ಯಲ್ಲಿ 1617 ರನ್ ಕಲೆಹಾಕಿದ್ದಾರೆ.