PKL Auction: ಪರ್ದೀಪ್‌ ನರ್ವಾಲ್‌ ತೆಕ್ಕೆಗೆ ಹಾಕಿಕೊಂಡ ಬೆಂಗಳೂರು ಬುಲ್ಸ್;‌ ಪವನ್‌ ಸೆಹ್ರಾವತ್‌, ಮಣಿಂದರ್‌ ಸಿಂಗ್‌ ಖರೀದಿ ವಿಫಲ
ಕನ್ನಡ ಸುದ್ದಿ  /  ಕ್ರೀಡೆ  /  Pkl Auction: ಪರ್ದೀಪ್‌ ನರ್ವಾಲ್‌ ತೆಕ್ಕೆಗೆ ಹಾಕಿಕೊಂಡ ಬೆಂಗಳೂರು ಬುಲ್ಸ್;‌ ಪವನ್‌ ಸೆಹ್ರಾವತ್‌, ಮಣಿಂದರ್‌ ಸಿಂಗ್‌ ಖರೀದಿ ವಿಫಲ

PKL Auction: ಪರ್ದೀಪ್‌ ನರ್ವಾಲ್‌ ತೆಕ್ಕೆಗೆ ಹಾಕಿಕೊಂಡ ಬೆಂಗಳೂರು ಬುಲ್ಸ್;‌ ಪವನ್‌ ಸೆಹ್ರಾವತ್‌, ಮಣಿಂದರ್‌ ಸಿಂಗ್‌ ಖರೀದಿ ವಿಫಲ

Pro Kabaddi League:‌ ಸ್ಟಾರ್ ರೈಡರ್‌ ಪರ್ದೀಪ್‌ ನರ್ವಾಲ್‌ ಅವರನ್ನು ಕೇವಲ 70 ಲಕ್ಷ ರೂಪಾಯಿಗೆ ಖರೀದಿ ಮಾಡುವಲ್ಲಿ ಬೆಂಗಳೂರು ಬುಲ್ಸ್ ಯಶಸ್ವಿಯಾಗಿದೆ. ಪಿಕೆಎಲ್‌ ಹರಾಜು ಪ್ರಕ್ರಿಯೆಯಲ್ಲಿ ಸಚಿನ್‌ ತನ್ವರ್‌ ದುಬಾರಿ ಮೊತ್ತಕ್ಕೆ ಹರಾಜಾಗಿ ಗಮನ ಸೆಳೆದರು.

ಪರ್ದೀಪ್‌ ನರ್ವಾಲ್‌ ತೆಕ್ಕೆಗೆ ಹಾಕಿಕೊಂಡ ಬೆಂಗಳೂರು ಬುಲ್ಸ್;‌ ಪವನ್‌, ಮಣಿಂದರ್‌ ಖರೀದಿ ವಿಫಲ
ಪರ್ದೀಪ್‌ ನರ್ವಾಲ್‌ ತೆಕ್ಕೆಗೆ ಹಾಕಿಕೊಂಡ ಬೆಂಗಳೂರು ಬುಲ್ಸ್;‌ ಪವನ್‌, ಮಣಿಂದರ್‌ ಖರೀದಿ ವಿಫಲ

ಹನ್ನೊಂದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ (ಪಿಕೆಎಲ್‌) ಮುನ್ನ ಆಟಗಾರರ ಹರಾಜು ಪ್ರಕ್ರಿಯೆಯು ಮುಂಬೈನಲ್ಲಿ ನಡೆಯಿತು. ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಬಲಿಷ್ಠ ಆಟಗಾರರು ದುಬಾರಿ ಮೊತ್ತಕ್ಕೆ ಹರಾಜಾದರು. ಬೆಂಗಳೂರು ಬುಲ್ಸ್‌ ತಂಡವು ಮಾಜಿ ಆಟಗಾರ ಪವನ್‌ ಸೆಹ್ರಾವತ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ರೈಡರ್‌ ಮಣಿಂದರ್‌ ಸಿಂಗ್‌ ಖರೀದಿಗೆ ಸುಮಾರು ಹೊತ್ತು ಹಠಕ್ಕೆ ಬಿದ್ದು ಬಿಡ್‌ ಮಾಡಿತು. ಆದರೆ, ಆಟಗಾರರು ಕಳೆದ ಆವೃತ್ತಿಯಲ್ಲಿದ್ದ ತಂಡಗಳು FBM ಕಾರ್ಡ್‌ ಬಳಸಿ ತಮ್ಮಲ್ಲೇ ಉಳಿಸಿಕೊಂಡಿತು. ಇದೇ ವೇಳೆ ಸ್ಟಾರ್‌ ರೈಡರ್‌ ಭರತ್‌ ಅವರನ್ನು ಉಳಿಸಿಕೊಳ್ಳದೆ ತಂಡ ಅಚ್ಚರಿ ಮೂಡಿಸಿತು. ಉಳಿದಂತೆ ಸಚಿನ್‌ ತನ್ವರ್‌ ದುಬಾರಿ ಮೊತ್ತಕ್ಕೆ ಹರಾಜಾಗಿ ಗಮನ ಸೆಳೆದರು.

ಬೆಂಗಳೂರು ಬುಲ್ಸ್‌ ತಂಡವು, ಸ್ಟಾರ್‌ ರೈಡರ್‌ ಭರತ್ ಅವರನ್ನು ರಿಟೈನ್‌ ಮಾಡಿಕೊಳ್ಳದೆ ಅಚ್ಚರಿ ಮೂಡಿಸಿತ್ತು. ಆದರೆ ಹರಾಜು ಸಮಯದಲ್ಲಿ ಎಫ್‌ಬಿಎಂ ಕಾರ್ಡ್‌ ಬಳಸಿ ಮತ್ತೊಮ್ಮೆ ತಂಡಕ್ಕೆ ಕರೆಸಿಕೊಳ್ಳುವ ಅವಕಾಶ ತಂಡದ ಬಳಿ ಇತ್ತು. ಆದರೆ ತಂಡ ಭರತ್ ಖರೀದಿ ಮಾಡುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಹೀಗಾಗಿ ಯುಪಿ ಯೋಧಾಸ್‌ 1.30 ಕೋಟಿ ರೂಪಾಯಿಗೆ ಅವರನ್ನು ಖರೀದಿ ಮಾಡಿತು.

ಭಾರತ ಕಬಡ್ಡಿ ತಂಡದ ಸ್ಟಾರ್‌ ಆಟಗಾರ ಹಾಗೂ ಬೆಂಗಳೂರು ಬುಲ್ಸ್‌ ಮಾಜಿ ಆಟಗಾರ ಪವನ್‌ ಸೆಹ್ರಾವತ್‌ ಖರೀದಿಗೆ ಬುಲ್ಸ್‌ ಹಾಗೂ ಯು ಮುಂಬಾ ನಡುವೆ ಭಾರಿ ಬಿಡ್ಡಿಂಗ್‌ ನಡೆಯಿತು. ಆದರೆ, ಕಳೆದ ಬಾರಿ ಖರೀದಿ ಮಾಡಿದ್ದ ತೆಲುಗು ಟೈಟಾನ್ಸ್‌‌, FBM ಕಾರ್ಡ್‌ ಬಳಸಿ 1.725 ಕೋಟಿ ರೂಪಾಯಿಗೆ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿತು. ಬೆಂಗಾಲ್‌ ವಾರಿಯರ್ಸ್‌ ತಂಡದ ಸ್ಟಾರ್‌ ರೈಡರ್‌ ಮಣಿಂದರ್‌ ಸಿಂಗ್‌ ಖರೀದಿಗೂ ಬುಲ್ಸ್‌ ತಂಡ ಎಲ್ಲಾ ರೀತಿಯ ಕಸರತ್ತು ನಡೆಸಿತು. ಆದರೆ, ಬೆಂಗಾಲ್‌ ತಂಡವು ಕಾರ್ಡ್‌ ಬಳಸಿ ಮತ್ತೆ ತಂಡಕ್ಕೆ ಸೇರಿಸಿಕೊಂಡಿತು.

ಗೂಳಿಗಳ ಬಳಗಕ್ಕೆ ಪರ್ದೀಪ್‌ ನರ್ವಾಲ್‌

ಬಲಿಷ್ಠ ರೈಡರ್‌ ಪರ್ದೀಪ್‌ ನರ್ವಾಲ್‌ ಅವರನ್ನು 70 ಲಕ್ಷ ರೂಪಾಯಿಗೆ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಗೂಳಿಗಳ ಬಳಗೆ ಯಶಸ್ವಿಯಾಗಿದೆ. ಇವರು ದುಬಾರಿ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇತ್ತು. ಆದರೆ ಬುಲ್ಸ್‌ ಕಡಿಮೆ ಮೊತ್ತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.

ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರರು

  • ಸಚಿನ್ ತನ್ವಾರ್ -2.15 ಕೋಟಿ (ತಮಿಳ್‌ ತಲೈವಾಸ್)
  • ಮೊಹಮ್ಮದ್ರೇಜಾ ಶಾದ್ಲೋಯಿ ಚಿಯಾನೆಹ್ - 2.07 ಕೋಟಿ‌ (ಹರಿಯಾಣ ಸ್ಟೀಲರ್ಸ್)
  • ಗುಮನ್ ಸಿಂಗ್ - 1.97 ಕೋಟಿ‌ (ಗುಜರಾತ್‌ ಜೈಂಟ್ಸ್)
  • ಪವನ್ ಸೆಹ್ರಾವತ್ - 1.725 ಕೋಟಿ (ತೆಲುಗು ಟೈಟಾನ್ಸ್)
  • ಭರತ್‌ - 1.30 ಕೋಟಿ (ಯುಪಿ ಯೋಧಾಸ್‌)
  • ಮಣಿಂದರ್‌ ಸಿಂಗ್‌ -1.15 ಕೋಟಿ (ಬೆಂಗಾಲ್‌ ವಾರಿಯರ್ಸ್‌)
  • ಅಜಿಂಕ್ಯ ಅಶೋಕ್‌ ಪವಾರ್ -1.1075 ಕೋಟಿ ರೂ (ಬೆಂಗಳೂರು ಬುಲ್ಸ್‌)
  • ಸುನಿಲ್ ಕುಮಾರ್ - 1.015 ಕೋಟಿ‌ (ಯು ಮುಂಬಾ)

ಖರೀದಿಯಾದ ಇತರ ಆಟಗಾರರು

  • ಪರ್ದೀಪ್ ನರ್ವಾಲ್ 70 ಲಕ್ಷ (ಬೆಂಗಳೂರು ಬುಲ್ಸ್‌ಗ)
  • ಫಜೆಲ್ ಅತ್ರಾಚಲಿ -50 ಲಕ್ಷ (ಬೆಂಗಾಲ್ ವಾರಿಯರ್ಸ್‌)
  • ಕೃಷ್ಣನ್‌ - 70 ಲಕ್ಷ (ತೆಲುಗು ಟೈಟಾನ್ಸ್)
  • ಸಿದ್ಧಾರ್ಥ್‌ ದೇಸಾಯಿ -26 ಲಕ್ಷ (ದಬಾಂಗ್‌ ಡೆಲ್ಲಿ)

ಇನ್ನಷ್ಟು ಕಬಡ್ಡಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ಕ್ರೀಡಾ ನ್ಯಾಯ ಮಂಡಳಿ; ಕಮರಿತು ಒಲಿಂಪಿಕ್ ಪದಕದ ಕನಸು

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.