ಹಾರ್ದಿಕ್ ಪಾಂಡ್ಯ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಮುಂಬೈ ಇಂಡಿಯನ್ಸ್ ನಾಯಕನ ನಡೆಗೆ ಮೆಚ್ಚುಗೆ, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್ ಪಾಂಡ್ಯ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಮುಂಬೈ ಇಂಡಿಯನ್ಸ್ ನಾಯಕನ ನಡೆಗೆ ಮೆಚ್ಚುಗೆ, Video

ಹಾರ್ದಿಕ್ ಪಾಂಡ್ಯ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಮುಂಬೈ ಇಂಡಿಯನ್ಸ್ ನಾಯಕನ ನಡೆಗೆ ಮೆಚ್ಚುಗೆ, VIDEO

Hardik Pandya : ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಮಾನಿಯೊಬ್ಬ ಹಾರ್ದಿಕ್ ಪಾಂಡ್ಯ ಪಾದ ಮುಟ್ಟಿದ​ ನಮಸ್ಕರಿಸಿದ ವಿಡಿಯೋ ವೈರಲ್ ಆಗಿದೆ.

ಹಾರ್ದಿಕ್ ಪಾಂಡ್ಯ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ
ಹಾರ್ದಿಕ್ ಪಾಂಡ್ಯ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರ ವಿರುದ್ಧ ವಿರೋಧದ ಅಲೆ ಎದ್ದಿದೆ. ರೋಹಿತ್​ ಶರ್ಮಾ (Rohit Sharma) ಅವರ ಅಭಿಮಾನಿಗಳು ಹಾರ್ದಿಕ್ ಅವರನ್ನು ಕ್ರೂರವಾಗಿ ಟ್ರೋಲ್ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧದ ಪಂದ್ಯದಲ್ಲಿ ರೋಹಿತ್​ ಅಭಿಮಾನಿಗಳಿಂದ ಹಾರ್ದಿಕ್ ಪಾಂಡ್ಯ​, ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಇದರ ನಡುವೆಯೂ ಅಭಿಮಾನಿಯೊಬ್ಬ ಹಾರ್ದಿಕ್​ ಕಾಲ್ಮುಗಿದ ವಿಡಿಯೋ ವೈರಲ್ ಆಗಿದೆ.

ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಶುಭ್ಮನ್ ಗಿಲ್ ಸಾರಥ್ಯದ ಗುಜರಾತ್ ಟೈಟಾನ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಸೋತು ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ವಿರುದ್ಧ ತಜ್ಞರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬ್ಯಾಟಿಂಗ್ ಕ್ರಮಾಂಕಕ್ಕೆ ಸಂಬಂಧಿಸಿ ದೊಡ್ಡ ಪ್ರಮಾದ ಎಸಗಿದ ಕಾರಣ ಸೋಲಿನ ರುಚಿ ಅನುಭವಿಸಬೇಕಾಯಿತು ಎಂದು ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು.

ಹಾರ್ದಿಕ್ ಭೇಟಿಯಾಗಿ ಪಾದ ಮುಟ್ಟಿದ ಅಭಿಮಾನಿ

ಮಾರ್ಚ್​ 27ರಂದು ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಪಂದ್ಯಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಅಭಿಮಾನಿಯೊಬ್ಬರು ತಮ್ಮ ಆರಾಧ್ಯ ದೈವವನ್ನು ಭೇಟಿಯಾಗಿದ್ದಾರೆ. ಆ ಅಭಿಮಾನಿ, ಹಾರ್ದಿಕ್ ಅವರ ಪಾದಗಳನ್ನು ಮುಟ್ಟಿದ್ದಾರೆ. ಅಲ್ಲದೆ, ಎಂಐ ನಾಯಕರೊಂದಿಗೆ ಕೆಲವೊತ್ತು ಪ್ರೀತಿಯಿಂದ ಮಾತುಕತೆ ನಡೆಸಿದ್ದಾರೆ. ಹಾರ್ದಿಕ್ ಸಹ ಅತ್ಯಂತ ಸರಳತೆಯಿಂದ ವರ್ತಿಸಿ ಅವರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದರು. ಬಳಿಕ ಫೋಟೋಗೆ ಪೋಸ್ ನೀಡಿದರು. ಹಾರ್ದಿಕ್ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಹಾರ್ದಿಕ್​​ಗೆ ಮುಖಭಂಗ

ಮುಂಬೈ ನಾಯಕನಾಗಿ ಮೊದಲ ಬಾರಿಗೆ ಕಣಕ್ಕಿಳಿದ ಅವಧಿಯಲ್ಲಿ ಹಾರ್ದಿಕ್​​ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅದರಲ್ಲೂ ಟಾಸ್ ವೇಳೆ ಅಭಿಮಾನಿಗಳು ರೋಹಿತ್.. ರೋಹಿತ್​.. ಎಂದು ಸ್ಟೇಡಿಯಂ ರೂಫ್ ಕಿತ್ತು ಹೋಗುವಂತೆ ಕೂಗಿದ್ದರು. ಅಲ್ಲದೆ, ಮುಂಬೈ ಕಾ ರಾಜಾ ರೋಹಿತ್​ ಶರ್ಮಾ ಎಂದು ಕಿರುಚಿತ್ತಿದ್ದರು. ಅಲ್ಲದೆ, ಚೀಟರ್​ ಚೀಟರ್​ ಎಂದು ಕೂಗಿ ಅವಮಾನಿಸಿದ್ದರು. ಇದರ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದವು.

ಹಾರ್ದಿಕ್ ಪಾಂಡ್ಯಗೆ ಮುಂದಿನ ಹಾದಿ ಸುಲಭವಲ್ಲ. ಎಂಐ ವಾಂಖೆಡೆ ಸ್ಟೇಡಿಯಂನಲ್ಲೂ ಇದೇ ರೀತಿಯ ಸ್ವಾಗತ ಸಿಗುವ ಸಾಧ್ಯತೆ ಇದೆ. ಹಾರ್ದಿಕ್ ಮಾನಸಿಕವಾಗಿ ಕಠಿಣ ವ್ಯಕ್ತಿಯಾಗಿರುವುದರಿಂದ ನೆಗೆಟಿವ್ ವಿಚಾರಗಳತ್ತ ಕಿವಿಗೊಡದೆ ತಂಡವನ್ನು ಮುನ್ನಡೆಸುವತ್ತ ಗಮನ ಹರಿಸಬೇಕು. ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಹಿಟ್​ಮ್ಯಾನ್ ಫ್ಯಾನ್ಸ್ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್ ವಿರುದ್ಧ ಜೋರಾಗಿ ಕೂಗಬಹುದು ಎಂದು ಭಾವಿಸಿದ್ದಾರೆ.

ಮುಂಬೈನಲ್ಲಿ ಹಾರ್ದಿಕ್​ ಅವರನ್ನು ಅಭಿಮಾನಿಗಳು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಕೆಂದರೆ ಅಭಿಮಾನಿಗಳು ಇಲ್ಲಿ ಸ್ವಲ್ಪ ಜೋರಾಗಿ ಬೊಬ್ಬೆ ಹೊಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಮುಂಬೈ ಅಭಿಮಾನಿಗಳು ಅಥವಾ ರೋಹಿತ್ ಶರ್ಮಾ ಅಭಿಮಾನಿಗಳು ಯಾರೂ ಹಾರ್ದಿಕ್‌ಗೆ ನಾಯಕತ್ವ ನೀಡಲಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ತಿವಾರಿ ಪಿಟಿಐ ವಿಡಿಯೋಗಳಿಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಐದು ಟ್ರೋಫಿ ಗೆದ್ದುಕೊಟ್ಟರೂ ನೀಡಿದರೂ ನಾಯಕತ್ವ ಕಳೆದುಕೊಂಡಿದ್ದಕ್ಕೆ ಕಾರಣಗಳೇನು ಎಂದು ನನಗೆ ತಿಳಿದಿಲ್ಲ. ಆದರೆ ಫ್ರಾಂಚೈಸಿ ನಿರ್ಧಾರ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ ಎಂದು ನಾನು ಭಾವಿಸುತ್ತೇನೆ. ಪ್ರತಿಕ್ರಿಯೆಯ ಮೂಲಕವೇ ನಾವದನ್ನು ತಿಳಿದುಕೊಳ್ಳಬಹುದು. ಅಭಿಮಾನಿಗಳ ಪ್ರತಿಕ್ರಿಯೆನ್ನು ನಾನು ನೋಡಿದೆ, ರೋಹಿತ್​.. ರೋಹಿತ್​ ಎಂದು ಬೊಬ್ಬೆ ಹೊಡೆಯುತ್ತಿದ್ದರು ಎಂದು ಹೇಳಿದ್ದಾರೆ.

Whats_app_banner