ಇಂಡೋ-ಆಫ್ರಿಕಾ ಎರಡನೇ ಟೆಸ್ಟ್‌ಗೆ ಮಳೆ ಅಡ್ಡಿಯಾಗುತ್ತಾ; ನ್ಯೂಲ್ಯಾಂಡ್ಸ್ ಪಿಚ್, ಹವಾಮಾನ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಡೋ-ಆಫ್ರಿಕಾ ಎರಡನೇ ಟೆಸ್ಟ್‌ಗೆ ಮಳೆ ಅಡ್ಡಿಯಾಗುತ್ತಾ; ನ್ಯೂಲ್ಯಾಂಡ್ಸ್ ಪಿಚ್, ಹವಾಮಾನ ಹೀಗಿದೆ

ಇಂಡೋ-ಆಫ್ರಿಕಾ ಎರಡನೇ ಟೆಸ್ಟ್‌ಗೆ ಮಳೆ ಅಡ್ಡಿಯಾಗುತ್ತಾ; ನ್ಯೂಲ್ಯಾಂಡ್ಸ್ ಪಿಚ್, ಹವಾಮಾನ ಹೀಗಿದೆ

India vs South Africa: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.‌ ಕೇಪ್‌ಟೌನ್‌ ಹವಾಮಾನ ವರದಿ ಇಲ್ಲಿದೆ.

ನ್ಯೂಲ್ಯಾಂಡ್ಸ್ ಪಿಚ್, ಹವಾಮಾನ ಹೀಗಿದೆ
ನ್ಯೂಲ್ಯಾಂಡ್ಸ್ ಪಿಚ್, ಹವಾಮಾನ ಹೀಗಿದೆ (PTI)

ದಕ್ಷಿಣ ಆಫ್ರಿಕಾ ವಿರುದ್ಧದ (South Africa vs India) ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋತಿರುವ ಭಾರತ ತಂಡವು, ಜನವರಿ 3ರ ಬುಧವಾರ ಎರಡನೇ ಟೆಸ್ಟ್ ಪಂದ್ಯದಲ್ಲಿನ ಕಣಕ್ಕಿಳಿಯಲು ಸಜ್ಜಾಗಿದೆ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ (Newlands) ಮೈದಾನದಲ್ಲಿ ಇಂಡೋ ಆಫ್ರಿಕಾ ಟೆಸ್ಟ್‌ ಸರಣಿಯ ಎರಡನೆ ಪಂದ್ಯ ನಡೆಯುತ್ತಿದೆ. ಸದ್ಯ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ಆಯ್ಕೆ ಮಾತ್ರ ಭಾರತದ ಮುಂದಿದ್ದು, ಈ ಗೆಲುವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಪಾಯಿಂಟ್‌ ಪಟ್ಟಿಯಲ್ಲಿಯೂ ಭಾರತದ ಸ್ಥಾನವನ್ನು ನಿರ್ಣಯಿಸಲಿದೆ.

ಹೊಸ ವರ್ಷದಲ್ಲಿ ಭಾರತದ ಮೊದಲ ಪಂದ್ಯದ ಆತಿಥ್ಯಕ್ಕೆ ನ್ಯೂಲ್ಯಾಂಡ್ಸ್ ಮೈದಾನ ಸಜ್ಜಾಗಿದ್ದು, ಹೊಸ ವರ್ಷವನ್ನು ಗೆಲುವಿನೊಂದಿಗೆ ಪ್ರಾರಂಭಿಸುವುದು ಭಾರತದ ಗುರಿ. ಆದರೆ ಈ ಮೈದಾನದಲ್ಲಿ ಭಾರರತವು ಇದುವರೆಗೂ ಒಂದೇ ಒಂದು ಟೆಸ್ಟ್‌ ಪಂದ್ಯ ಕೂಡಾ ಗೆದ್ದಿಲ್ಲ. ಭಾರತದ ವಿರುದ್ಧ ಆತಿಥೇಯ ದಕ್ಷಿಣ ಆಫ್ರಿಕಾ ತಂಡವೇ ಇಲ್ಲಿ ಭಾರತದ ವಿರುದ್ಧ ಮೇಲುಗೈ ಸಾಧಿಸಿದೆ.

ಕೇಪ್‌ಟೌನ್‌ ಹವಾಮಾನ ಮತ್ತು ಪಿಚ್ ವರದಿ

ಬುಧವಾರದ ಪಂದ್ಯವು ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಪಂದ್ಯದ ವೇಳೆ 33ರಿಂದ 34 ಡಿಗ್ರಿ ತಾಪಮಾನ ಇರುವ ಮುನ್ಸೂಚನೆ ಇದ್ದು, ನ್ಯೂಲ್ಯಾಂಡ್ಸ್‌ನಲ್ಲಿ ಟಾಸ್ ಗೆಲುವು ನಿರ್ಣಾಯಕವಾಗಲಿದೆ. ಈ ಪಿಚ್ ಬ್ಯಾಟರ್‌ಗಳ ಸ್ವರ್ಗವಾಗಿದ್ದು, ಸ್ಪಿನ್ನರ್‌ಗಳಿಗೆ ಅಷ್ಟೇನು ನೆರವಾಗಲಾರದು.

ಇದನ್ನೂ ಓದಿ | ಕೇಪ್ ಟೌನ್‌ನಲ್ಲಿ ಒಂದೇ ಒಂದು ಟೆಸ್ಟ್ ಗೆದ್ದಿಲ್ಲ ಭಾರತ; ನ್ಯೂಲ್ಯಾಂಡ್ಸ್‌ ಅಂಕಿ ಅಂಶ, ದಾಖಲೆಗಳು ಹೀಗಿವೆ

ಒಂದು ವೇಳೆ ಆಲ್‌ರೌಂಡರ್‌ ಜಡೇಜಾ ಫಿಟ್ ಆಗಿ ಆಯ್ಕೆಗೆ ಲಭ್ಯವಾದರೆ, ಅನುಭವಿ ಬೌಲರ್‌ ರವಿಚಂದ್ರನ್ ಅಶ್ವಿನ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಸದ್ಯ ಮೂರನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಆವೇಶ್ ಖಾನ್‌ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಮೊದಲ ಟೆಸ್ಟ್‌ನಲ್ಲಿ ದುಬಾರಿಯಾಗಿದ್ದ ಶಾರ್ದೂಲ್ ಮತ್ತು ಪ್ರಸಿದ್ಧ್ ಹೊರಗಿಟ್ಟು ಮುಖೇಶ್ ಕುಮಾರ್ ಮತ್ತು ಆವೇಶ್ ಖಾನ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡುವ ಸಾಧ್ಯತೆಯೂ ಇದೆ.

ಅಕ್ಯುವೆದರ್‌ ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯ ನಡೆಯಲಿರುವ ಎಲ್ಲಾ ಐದು ದಿನಗಳಲ್ಲಿಯೂ ಮಳೆಯ ಮುನ್ಸೂಚನೆ ಇಲ್ಲ. ಹೀಗಾಗಿ ಪಂದ್ಯಕ್ಕೆ ಅನುಕೂಲಕರ ವಾತಾವರಣದ ನಿರೀಕ್ಷೆ ಇದೆ. ಮಳೆ ಮತ್ತು ಮೋಡದ ಸಾಧ್ಯತೆ ಇಲ್ಲ. ಹೀಗಾಗಿ ಮೊದಲ ದಿನವೇ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರೇಕ್ಷಕರು ದಿನವಿಡೀ ಯಾವುದೇ ಅಡೆತಡೆಯಿಲ್ಲದ ಪಂದ್ಯ ಸವಿಯಬಹುದು.

ಇದನ್ನೂ ಓದಿ | Explainer: ಎರಡನೇ ಟೆಸ್ಟ್‌ನಲ್ಲಿ ಭಾರತ ಗೆದ್ದರೂ ದಕ್ಷಿಣ ಆಫ್ರಿಕಾಗೆ ಸಿಗಲಿದೆ ಗಾಂಧಿ-ಮಂಡೇಲಾ ಟ್ರೋಫಿ, ಹೇಗೆ?

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್, ಎಸ್ ಭರತ್, ಅಭಿಮನ್ಯು ಈಶ್ವರನ್.

ದಕ್ಷಿಣ ಆಫ್ರಿಕಾ‌ ತಂಡ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಟೋನಿ ಡಿ ಜೊರ್ಜಿ, ಕೀಗನ್ ಪೀಟರ್‌ಸನ್, ಡೇವಿಡ್ ಬೆಡಿಂಗ್‌ಹ್ಯಾಮ್, ಕೈಲ್ ವೆರೆನ್ನೆ (ವಿಕೆಟ್‌ ಕೀಪರ್), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ನಾಂದ್ರೆ ಬರ್ಗರ್, ಕೇಶವ್ ಮಹಾರಾಜ್, ವಿಯಾನ್ ಮುಲ್ಡರ್, ಜುಬೇರ್ ಹಮ್ಜಾ, ಟ್ರಿಸ್ಟಾನ್ ಸ್ಟಬ್ಸ್.

Whats_app_banner