ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಎರಡನೇ ಟಿ20; ಸರಣಿ ಗೆಲುವಿನ ಮೇಲೆ ಭಾರತ ಮಹಿಳಾ ತಂಡದ ಕಣ್ಣು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಎರಡನೇ ಟಿ20; ಸರಣಿ ಗೆಲುವಿನ ಮೇಲೆ ಭಾರತ ಮಹಿಳಾ ತಂಡದ ಕಣ್ಣು

ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಎರಡನೇ ಟಿ20; ಸರಣಿ ಗೆಲುವಿನ ಮೇಲೆ ಭಾರತ ಮಹಿಳಾ ತಂಡದ ಕಣ್ಣು

  • India Women vs Australia Women 2nd T20I: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ನಡುವೆ ಇಂದು (ಜನವರಿ 7, ಭಾನುವಾರ) ಎರಡನೇ ಟಿ20 ಪಂದ್ಯ ನಡೆಯಲಿದೆ. 

ಮೊದಲ ಟಿ20 ಪಂದ್ಯದಲ್ಲಿ ಅಮೋಘ 9 ವಿಕೆಟ್​​ಗಳ ಗೆಲುವು ದಾಖಲಿಸಿದ್ದ ಭಾರತ ವನಿತಾ ತಂಡ ಇಂದು (ಜನವರಿ 7, ಭಾನುವಾರ) ಎರಡನೇ ಟಿ20 ಪಂದ್ಯ ನಡೆಯಲಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.
icon

(1 / 10)

ಆಸೀಸ್ ವಿರುದ್ಧ ಇಂದು ಸಹ ಸವಾರಿ ಮಾಡುವ ಮೂಲಕ ತವರಿನಲ್ಲಿ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ದಾಖಲೆ ಬರೆಯಲು ಸಜ್ಜಾಗಿದೆ ಭಾರತ ತಂಡ. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
icon

(2 / 10)

ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿತು. ಭಾರತದ ಬೌಲರ್​ಗಳ ದಾಳಿಗೆ ಕುಸಿಯಿತು. 19.1 ಓವರ್​​​​​ಗಳಲ್ಲಿ 141 ರನ್​ಗಳಿಗೆ ಆಲೌಟ್​ ಆಯಿತು.
icon

(3 / 10)

ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ 137 ರನ್​​ಗಳ ಜೊತೆಯಾಟವಾಡಿ 9 ವಿಕೆಟ್​​ಗಳ ಗೆಲುವು ತಂದುಕೊಟ್ಟರು.
icon

(4 / 10)

ಸ್ಮತಿ ಮಂಧಾನ 52 ಎಸೆತಗಳಲ್ಲಿ 54 ರನ್ ಗಳಿಸಿ ಔಟಾದರೆ, ಶಫಾಲಿ ವರ್ಮಾ 44 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯಲ್ಲಿ ಜೆಮಿಮಾ ರೋಡ್ರಿಗಸ್ ಅಜೇಯ 6 ರನ್ ಚಚ್ಚಿದರು.
icon

(5 / 10)

ಈಗಾಗಲೇ ಏಕೈಕ ಪಂದ್ಯದ ಟೆಸ್ಟ್ ಸರಣಿಯನ್ನು ಗೆದ್ದಿರುವ ಭಾರತ, ಏಕದಿನ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದೆ. ಹಾಗಾಗಿ ಚುಟುಕು ಸರಣಿಯನ್ನು ಜಯಿಸಿ ತವರಿನಲ್ಲಿ ಮುಖಭಂಗದಿಂದ ಪಾರಾಗಲು ಕಸರತ್ತು ನಡೆಸುತ್ತಿದೆ.
icon

(6 / 10)

ಮೊದಲ ಟಿ20 ಪಂದ್ಯದಲ್ಲಿ ಟಿಟಾಸ್ ದಾಸ್ 4 ಓವರ್​​ಗಳಲ್ಲಿ 17 ರನ್ ನೀಡಿ 4 ವಿಕೆಟ್​ ಪಡೆದರು. ಆ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇಂದಿನ ಪಂದ್ಯದಲ್ಲೇ ಇದೇ ಲಯ ಮುಂದುವರೆಸುವ ನಿರೀಕ್ಷೆಯಲ್ಲಿದ್ದಾರೆ.
icon

(7 / 10)

ಕನ್ನಡತಿ ಶ್ರೇಯಾಂಕಾ ಪಾಟೀಲ್ ಮತ್ತೊಮ್ಮೆ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡರು. 3.2 ಓವರ್​​ಗಳಲ್ಲಿ 19 ರನ್ ನೀಡಿ 2 ವಿಕೆಟ್ ಕಬಳಿಸಿದರು. ಆಲ್​ರೌಂಡರ್​ ದೀಪ್ತಿ ಶರ್ಮಾ ಸಹ 2 ವಿಕೆಟ್ ಕಬಳಿಸಿದರು.
icon

(8 / 10)

ಎರಡನೇ ಟಿ20 ಪಂದ್ಯಕ್ಕೂ ಅದೇ ತಂಡವನ್ನು ಕಣಕ್ಕಿಳಿಸಲು ಟೀಮ್ ಮ್ಯಾನೇಜ್​ಮೆಂಟ್ ಚಿಂತನೆ ನಡೆಸಿದೆ. ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮಂಜೋತ್ ಕೌರ್, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್, ರೇಣುಕಾ ಠಾಕೂರ್ ಸಿಂಗ್, ಟಿಟಾಸ್ ಸಾಧು
icon

(9 / 10)

ಇಂಡೋ-ಆಸೀಸ್​ ನಡುವಿನ ಕೊನೆಯ ಟಿ20 ಪಂದ್ಯ ಜನವರಿ 9ರಂದು ನಡೆಯಲಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲೇ ಈ ಪಂದ್ಯ ನಡೆಯಲಿದೆ. ಜಿಯೋ ಸಿನಿಮಾದಲ್ಲಿ ಉಭಯ ತಂಡಗಳ ನಡುವಿನ ಸರಣಿಯನ್ನು ಕಣ್ತುಂಬಿಕೊಳ್ಳಬಹುದು.
icon

(10 / 10)

ಇತರ ಗ್ಯಾಲರಿಗಳು