ಐದನೇ ಟೆಸ್ಟ್​ ಗೆದ್ದು ಕೊಹ್ಲಿ, ಧೋನಿ, ಗಂಗೂಲಿ ಸಾಲಿಗೆ ಸೇರಿದ ರೋಹಿತ್ ಶರ್ಮಾ; ಭಾರತದ ಐದನೇ ಯಶಸ್ವಿ ಕ್ಯಾಪ್ಟನ್ ಪಟ್ಟ-rohit sharma joined virat kohli ms dhoni sourav ganguly and mohammad azharuddin in an elite list of indian captains prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಐದನೇ ಟೆಸ್ಟ್​ ಗೆದ್ದು ಕೊಹ್ಲಿ, ಧೋನಿ, ಗಂಗೂಲಿ ಸಾಲಿಗೆ ಸೇರಿದ ರೋಹಿತ್ ಶರ್ಮಾ; ಭಾರತದ ಐದನೇ ಯಶಸ್ವಿ ಕ್ಯಾಪ್ಟನ್ ಪಟ್ಟ

ಐದನೇ ಟೆಸ್ಟ್​ ಗೆದ್ದು ಕೊಹ್ಲಿ, ಧೋನಿ, ಗಂಗೂಲಿ ಸಾಲಿಗೆ ಸೇರಿದ ರೋಹಿತ್ ಶರ್ಮಾ; ಭಾರತದ ಐದನೇ ಯಶಸ್ವಿ ಕ್ಯಾಪ್ಟನ್ ಪಟ್ಟ

Rohit Sharma: ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ರೋಹಿತ್ ಶರ್ಮಾ ಅವರು ಭಾರತದ 5ನೇ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಗೆ ಒಳಗಾದರು.

ಐದನೇ ಟೆಸ್ಟ್​ ಗೆದ್ದು ಕೊಹ್ಲಿ, ಧೋನಿ, ಗಂಗೂಲಿ ಸಾಲಿಗೆ ಸೇರಿದ ರೋಹಿತ್ ಶರ್ಮಾ
ಐದನೇ ಟೆಸ್ಟ್​ ಗೆದ್ದು ಕೊಹ್ಲಿ, ಧೋನಿ, ಗಂಗೂಲಿ ಸಾಲಿಗೆ ಸೇರಿದ ರೋಹಿತ್ ಶರ್ಮಾ

ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್​ ಹಾಗೂ 64 ರನ್​​ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್​ ಸರಣಿಯನ್ನು ರೋಹಿತ್ ಪಡೆ 4-1ರಲ್ಲಿ ಗೆದ್ದುಕೊಂಡಿದೆ. ಈ ಪಂದ್ಯದ ಮತ್ತು ಸರಣಿ ಜಯಿಸಿದ ಬಳಿಕ ನಾಯಕ ರೋಹಿತ್​ ಶರ್ಮಾ ಹೊಸದೊಂದು ದಾಖಲೆಗೆ ಪಾತ್ರರಾಗಿದ್ದು ಭಾರತದ ಯಶಸ್ವಿ ಕ್ಯಾಪ್ಟನ್​​ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಶನಿವಾರ (ಮಾರ್ಚ್ 9) ಟೆಸ್ಟ್‌ ಗೆದ್ದ ನಂತರ ರೋಹಿತ್ ಭಾರತದ 5ನೇ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಗೆ ಒಳಗಾದರು. ಅಲ್ಲದೆ, ದಂತಕಥೆಗಳಾದ ಎಂಎಕೆ ಪಟೌಡಿ ಮತ್ತು ಸುನಿಲ್ ಗವಾಸ್ಕರ್​​ರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂಡ ಮುನ್ನಡೆಸಿದ 16ನೇ ಟೆಸ್ಟ್​ಗಳಲ್ಲಿ 10 ಗೆಲುವು ದಾಖಲಿಸಿದ ರೋಹಿತ್​, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸೌರವ್ ಗಂಗೂಲಿ ಮತ್ತು ಮೊಹಮ್ಮದ್ ಅಜರುದ್ಧೀನ್ ಅವರ ಸಾಲಿಗೆ ಸೇರಿದ್ದಾರೆ.

ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಸುನಿಲ್ ಗವಾಸ್ಕರ್ ಅವರು ನಾಯಕರಾಗಿ 9 ಟೆಸ್ಟ್​​ ಪಂದ್ಯಗಳನ್ನು ಗೆದ್ದಿದ್ದಾರೆ. ಇದೀಗ ರೋಹಿತ್​ 10 ಟೆಸ್ಟ್​​ಗಳ ಜಯದ ನಗೆ ಬೀರುವ ಮೂಲಕ ದಿಗ್ಗಜರಿಬ್ಬರನ್ನೂ ಹಿಂದಿಕ್ಕಿ ಭಾರತದ ನಾಯಕನಾಗಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಐದನೇ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ನಾಯಕನಾಗಿ ಹೆಚ್ಚು ಟೆಸ್ಟ್​ಗಳನ್ನು ಗೆದ್ದಿರುವ ಕೊಹ್ಲಿ, ಮೊದಲ ಸ್ಥಾನದಲ್ಲಿದ್ದಾರೆ.

ವಿರಾಟ್ 68 ಟೆಸ್ಟ್​​ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. 40 ಗೆಲುವು, 17 ಸೋಲು, 11 ಪಂದ್ಯಗಳನ್ನು ಡ್ರಾ ಸಾಧಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಎಂಎಸ್ ಧೋನಿ 60 ಟೆಸ್ಟ್​ಗಳಲ್ಲಿ ನಾಯಕನಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 27 ಗೆಲುವು, 18 ಸೋಲು, 15 ಡ್ರಾ ಸಾಧಿಸಿದೆ. ಸೌರವ್ ಗಂಗೂಲಿ 21 ಗೆಲುವು, ಮೊಹಮ್ಮದ್ ಅಜರುದ್ದೀನ್ 14 ಗೆಲುವು ದಾಖಲಿಸಿದ್ದಾರೆ. ಇದೀಗ ರೋಹಿತ್ 10 ಪಂದ್ಯಗಳಲ್ಲಿ ಜಯ ಸಾಧಿಸಿ ಐದನೇ ಸ್ಥಾನಕ್ಕೇರಿದ್ದಾರೆ.

ಸ್ಥಾನಆಟಗಾರ (ನಾಯಕ)ಪಂದ್ಯಗೆಲುವುಸೋಲುಡ್ರಾಗೆ. ಶೇ.
1.ವಿರಾಟ್ ಕೊಹ್ಲಿ6840171158.82
2.ಎಂಎಸ್ ಧೋನಿ6027181545.00
3.ಸೌರವ್ ಗಂಗೂಲಿ4921131542.85
4.ಮೊಹಮ್ಮದ್ ಅಜರುದ್ದೀನ್4714141929.78
5.ರೋಹಿತ್ ಶರ್ಮಾ16104262.50

ಭಾರತಕ್ಕೆ ಇನ್ನಿಂಗ್ಸ್ ಮತ್ತು 64 ರನ್‌ಗಳ ಜಯ

ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 64 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ 218 ರನ್ ಗಳಿಸಿ ಆಲೌಟ್ ಆಗಿತ್ತು. ಕುಲ್ದೀಪ್ 5, ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು. ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್​​​ನಲ್ಲಿ ಬ್ಯಾಟಿಂಗ್ ನಡೆಸಿದ ಭಾರತ 477 ರನ್ ಕಲೆ ಹಾಕಿತು. ಅಲ್ಲದೆ, 259 ರನ್​ಗಳ ಮುನ್ನಡೆ ಪಡೆಯಿತು.

ಆದರೆ ದ್ವಿತೀಯ ಇನ್ನಿಂಗ್ಸ್​ನಲ್ಲಿ ಈ ರನ್​ಗಳನ್ನು ಮೀರಿಸಲು ಪ್ರಯತ್ನಿಸಿದ ಇಂಗ್ಲೆಂಡ್​ 195 ರನ್​ಗಳಿಗೆ ಸರ್ವಪತನಗೊಂಡಿತು. ಎರಡನೇ ಇನ್ನಿಂಗ್ಸ್​​ನಲ್ಲಿ ಅಶ್ವಿನ್ ಅವರ ಐದು ವಿಕೆಟ್ ಗಳಿಕೆಯ ಹೊರತಾಗಿ, ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರು. ಇಂಗ್ಲೆಂಡ್ ಪರ, ಜೋ ರೂಟ್ 2ನೇ ಇನ್ನಿಂಗ್ಸ್‌ನಲ್ಲಿ 128 ರನ್‌ಗಳಿಂದ 84 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್​ ಆದರು. ಅವರ ಇನ್ನಿಂಗ್ಸ್​​ನಲ್ಲಿ 12 ಬೌಂಡರಿಗಳಿದ್ದವು.

mysore-dasara_Entry_Point