Karnataka Politics: ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಬಿಜೆಪಿಯಲ್ಲಿ ಲೋಕಸಭೆಗೂ ಅವಕಾಶ ಪಡೆದರು, ಆ ಅಭ್ಯರ್ಥಿಗಳು ಯಾರು photos
ಲೋಕಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿಯಲ್ಲಿ ಕಳೆದ ಬಾರಿ ಗೆದ್ದವರಿಗಿಂತ ಸೋತವರಿಗೆ ಹೆಚ್ಚಿನ ಮಣೆ.ವಿಧಾನಸಭೆಯಲ್ಲಿ ಸೋತಿದ್ದ ಆರು ನಾಯಕರಿಗೆ ಈ ಬಾರಿ ಮತ್ತೆ ಟಿಕೆಟ್ ದೊರೆತಿದೆ. ಏನಿದಕ್ಕೆ ಕಾರಣ. ಇಲ್ಲಿದೆ ವಿವರ..
(1 / 6)
ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಆರು ಬಾರಿ ಶಾಸಕ ಸಿಎಂ, ಪಕ್ಷದ ಅಧ್ಯಕ್ಷ, ಸ್ಪೀಕರ್, ಪ್ರತಿಪಕ್ಷ ನಾಯಕ ಆದವರು. ಆದರೆ ಕಳೆದ ಬಾರಿ ಟಿಕೆಟ್ ಸಿಗದೇ ಇದ್ದುದಕ್ಕೆ ಕಾಂಗ್ರೆಸ್ ಸೇರಿ ಸೋತು ನಂತರ ಎಂಎಲ್ಸಿ ಆಗಿದ್ದರು. ಮತ್ತೆ ಬಿಜೆಪಿ ಸೇರಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ದೊರೆತಿದೆ. ಪಕ್ಷದ ನಾಯಕರ ಅಣತಿಯಂತೆ ಅವರಿಗೆ ಲೋಕಸಭೆಗೆ ಟಿಕೆಟ್ ಸಿಕ್ಕಿದೆ.
(2 / 6)
ಗೋವಿಂದ ಕಾರಜೋಳ ಬಾಗಲಕೋಟೆ ಜಿಲ್ಲೆ ಮುಧೋಳ ಕ್ಷೇತ್ರದಲ್ಲಿ ಐದು ಬಾರಿ ಶಾಸಕ, ಸಚಿವ, ಉಪಮುಖ್ಯಮಂತ್ರಿ, ಉಪ ನಾಯಕ ಆದವರು. ಈ ಬಾರಿ ಸೋತಿದ್ದರು. ಚಿತ್ರದುರ್ಗ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಎಡಗೈ ಸಮುದಾಯದ ಕಾರಜೋಳಗೆ ಮಣೆ ಹಾಕಿದೆ,
(3 / 6)
ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ಬಾರಿ ಶಾಸಕ. ಸತತ ಗೆಲುವಿನ ನಂತರ ಸಚಿವ, ಸ್ಪೀಕರ್ ಆಗಿದ್ದವರು ಈ ಬಾರಿ ಸೋತರು. ಕೆನರಾದಲ್ಲಿ ಆರು ಬಾರಿ ಸಂಸದರಾಗಿದ್ದ ವಿವಾದ ಹೇಳಿಕೆ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದ ಅನಂತಕುಮಾರ್ ಹೆಗಡೆ ಬದಲಿಗೆ ಕಾಗೇರಿ ಅವರಿಗೆ ಅವಕಾಶ ದೊರೆಯಿತು.
(4 / 6)
ಸೋಮಣ್ಣ ಕೂಡ ಮೂರು ದಶಕದ ಹಿಂದೆಯೇ ಶಾಸಕ, ಸಚಿವರಾಗಿದ್ದವರು. ಮೂರು ಪಕ್ಷದಲ್ಲಿದ್ದವರು. ಈ ಬಾರಿ ವಿಧಾನಸಭೆಗೆ ಅವರಿಗೆ ಮೈಸೂರಿನ ವರುಣಾ, ಚಾಮರಾಜನಗರ ಸೇರಿ ಎರಡು ಕ್ಷೇತ್ರದಲ್ಲಿ ಅವಕಾಶ ನೀಡಲಾಗಿತ್ತು.ಆದರೆ ಎರಡೂ ಕಡೆ ಸೋಲು ಕಂಡರು. ಕೊನೆಗೆ ಹೈ ಕಮಾಂಡ್ ಅವರಿಗೆ ತುಮಕೂರು ಲೋಕಸಭೆಗೆ ಟಿಕೆಟ್ ನೀಡಿದೆ. ಹಿಂದೆ ಒಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಮಣ್ಣ ಸೋತಿದ್ದರು.
(5 / 6)
ಎರಡು ದಶಕದಿಂದಲೂ ಶಾಸಕ, ಸಚಿವರಾಗಿರುವ ಶ್ರೀರಾಮುಲು ಈ ಬಾರಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸೋತಿದ್ದರು. ಹಿಂದೆ ಅವರಿಗೆ ಒಮ್ಮೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲಾಗಿತ್ತು. ಆಗ ಗೆದ್ದಿದ್ದರು ಕೂಡ. ಈ ಬಾರಿ ಮತ್ತೆ ಬಳ್ಳಾರಿ ಕ್ಷೇತ್ರದಿಂದಲೇ ಟಿಕೆಟ್ ದೊರೆತಿದೆ. ಗೆಲ್ಲುವ ಸಾಮರ್ಥ್ಯ ಆಧರಿಸಿ ರಾಮುಲುಗೆ ಟಿಕೆಟ್ ಸಿಕ್ಕಿದೆ.
ಇತರ ಗ್ಯಾಲರಿಗಳು