ಲೋಕಸಭೆ ಚುನಾವಣೆ 2024 ವೇಳಾಪಟ್ಟಿ
ಲೋಕಸಭೆ ಚುನಾವಣೆ 2024ಕ್ಕೆ ವೇದಿಕೆ ಸಿದ್ಧವಾಗಿದೆ. ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 16 ರಂದು ವೇಳಾಪಟ್ಟಿ ಪ್ರಕಟಿಸಿತು. ಏಪ್ರಿಲ್ 19 ರಂದು ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ. ಈ ಬಾರಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. 2024 ರ ಲೋಕಸಭಾ ಚುನಾವಣೆಯ ಮತಎಣಿಕೆ ಜೂನ್ 4 ರಂದು ನಡೆಯಲಿದ್ದು, ಅಂದೇ ಫಲಿತಾಂಶವೂ ಪ್ರಕಟವಾಗಲಿದೆ. ಹಾಲಿ ಅಸ್ತಿತ್ವದಲ್ಲಿರುವ 17ನೇ ಲೋಕಸಭೆಯ ಅಧಿಕಾರ ಅವಧಿಯು ಜೂನ್ 16, 2024 ರಂದು ಕೊನೆಗೊಳ್ಳಲಿದೆ. ಕರ್ನಾಟಕದಲ್ಲಿ ಒಟ್ಟು 28 ಕ್ಷೇತ್ರಗಳಿದ್ದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ 7 ರಂದು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಈ ವರ್ಷ 5.42 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಈ ಪೈಕಿ ಪುರುಷರು 2.71 ಕೋಟಿ, ಮಹಿಳೆಯರು 2.70 ಕೋಟಿ ಇದ್ದಾರೆ. 3,200 ಮಂದಿ ಸಾಗರೋತ್ತರ ಮತದಾರರು, 4,933 ಲಿಂಗತ್ವ ಅಲ್ಪಸಂಖ್ಯಾತರು ಮತ ಚಲಾವಣೆಯ ಹಕ್ಕು ಪಡೆದಿದ್ದಾರೆ. ಭಾರತದ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದಕ್ಕಾಗಿ 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 55 ಲಕ್ಷ ಇವಿಎಂಗಳನ್ನು ಚುನಾವಣಾ ಆಯೋಗವು ಬಳಸಿಕೊಳ್ಳಲಿದೆ. ಲೋಕಸಭೆಯ ಮ್ಯಾಜಿಕ್ ನಂಬರ್ 272. ಇಷ್ಟು ಸ್ಥಾನಗಳಲ್ಲಿ ಜಯಗಳಿಸಿದ ಪಕ್ಷಕ್ಕೆ ಅಧಿಕಾರ ಒಲಿಯಲಿದೆ. ಭಾರತ ಸಂವಿಧಾನದ ಆಶಯದಂತೆ ಪ್ರತಿ ಐದು ವರ್ಷಗಳಿಗೆ ಒಮ್ಮೆ ಲೋಕಸಭೆ ಚುನಾವಣೆಗಳು ನಡೆಯುತ್ತವೆ. ಈ ಚುನಾವಣೆಯಲ್ಲಿ ಗೆದ್ದ ಸಂಸತ್ ಸದಸ್ಯರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಚುನಾಯಿತ ಸದಸ್ಯರು ಐದು ವರ್ಷಗಳ ಅಧಿಕಾರಾವಧಿ ಹೊಂದಿರುತ್ತಾರೆ. ಭಾರತ ಸಂವಿಧಾನದ 84ನೇ ವಿಧಿಯ ಪ್ರಕಾರ, ಲೋಕಸಭೆಯ ಸದಸ್ಯರಾಗಿ ನಿಲ್ಲಲು ಕೆಲವು ಅರ್ಹತೆಗಳಿವೆ. ಭಾರತೀಯ ಪೌರತ್ವ ಹೊಂದಿರಬೇಕು. ಕನಿಷ್ಠ 25 ವರ್ಷ ವಯಸ್ಸಿನವರಾಗಿರಬೇಕು ಎನ್ನುವುದು ಅವುಗಳ ಪೈಕಿ ಮುಖ್ಯವಾದವು. 2024 ರ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಜನರು ಮತ ಚಲಾಯಿಸಲಿದ್ದಾರೆ? ಭಾರತದ ಸಂವಿಧಾನದ 324 ನೇ ವಿಧಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1950 ರ ಪ್ರಕಾರ, ಕೇಂದ್ರ ಚುನಾವಣಾ ಆಯೋಗವು ಪ್ರತಿ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊಂದಿದೆ. ಇದರ ಭಾಗವಾಗಿ, ಮತದಾರರ ನೋಂದಣಿಯ ವಿಶೇಷ ಪರಿಷ್ಕರಣೆ (Special Summary Revision - SSR) 29ನೇ ಮೇ 2023 ರಂದು ಪ್ರಾರಂಭವಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಲು ಇದುವರೆಗೆ 96.88 ಕೋಟಿ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಅರ್ಹ ಮತದಾರರ ಸಂಖ್ಯೆ ಶೇ. ರಷ್ಟು ಹೆಚ್ಚಾಗಿದೆ. ಈ ಬಾರಿ 18 ರಿಂದ 19 ವರ್ಷದೊಳಗಿನ 1.85 ಕೋಟಿ ಮತದಾರರಿದ್ದಾರೆ. 2019ರಲ್ಲಿ ಅವರ ಸಂಖ್ಯೆ ಕೇವಲ 1.5 ಕೋಟಿ ಇತ್ತು. 2019ರಲ್ಲಿ 43.1 ಕೋಟಿ ಇದ್ದ ಮಹಿಳಾ ಮತದಾರರ ಸಂಖ್ಯೆ 2024ರಲ್ಲಿ 47.1 ಕೋಟಿಗೆ ಏರಿಕೆಯಾಗಿದೆ. ಪುರುಷ ಮತದಾರರ ಸಂಖ್ಯೆ 2019 ರಲ್ಲಿ 48.5 ಕೋಟಿ ಇತ್ತು. ಈ ಸಂಖ್ಯೆಯು ಈ ಬಾರಿ 48.7 ಕೋಟಿಗೆ ಏರಿದೆ. 2019 ರ ಲೋಕಸಭಾ ಚುನಾವಣಾ ವೇಳಾಪಟ್ಟಿ ಯಾವಾಗ ಪ್ರಕಟವಾಗಿತ್ತು? ಮತದಾನದ ದಿನಾಂಕ ಯಾವುದಿತ್ತು?
ಕೇಂದ್ರ ಚುನಾವಣಾ ಆಯೋಗವು 2019 ರ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು 10ನೇ ಮಾರ್ಚ್ 2019 ರಂದು ಬಿಡುಗಡೆ ಮಾಡಿತ್ತು. ಅದೇ ಸಮಯದಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿತ್ತು. 2019ರಲ್ಲಿ ಲೋಕಸಭೆ ಚುನಾವಣೆಯು ಏಳು ಹಂತಗಳಲ್ಲಿ ನಡೆದಿತ್ತು.
ಮೊದಲ ಹಂತದ ಮತದಾನ ಏಪ್ರಿಲ್ 11, 2019 ರಂದು 91 ಕ್ಷೇತ್ರಗಳಿಗೆ ನಡೆಯಿತು. ಏಪ್ರಿಲ್ 18 ರಂದು 95 ಸ್ಥಾನಗಳಿಗೆ ಎರಡನೇ ಹಂತದ ಮತದಾನ ನಡೆದರೆ, ಏಪ್ರಿಲ್ 23 ರಂದು 116 ಸ್ಥಾನಗಳಿಗೆ ಮೂರನೇ ಹಂತದ ಮತದಾನ ನಡೆದಿತ್ತು. ಏಪ್ರಿಲ್ 29 ರಂದು 71 ಸ್ಥಾನಗಳಿಗೆ ನಾಲ್ಕನೇ ಹಂತದ ಮತದಾನ ನಡೆದಿತ್ತು. ಮೇ 6 ರಂದು 50 ಸ್ಥಾನಗಳಿಗೆ ಐದನೇ ಹಂತದ ಮತದಾನ ನಡೆದಿತ್ತು. ಮೇ 12 ರಂದು 59 ಕ್ಷೇತ್ರಗಳಿಗೆ ಆರನೇ ಹಂತದ ಮತದಾನ ನಡೆದಿತ್ತು. ಮೇ 19 ರಂದು 59 ಕ್ಷೇತ್ರಗಳಿಗೆ ಏಳನೇ ಹಂತದ ಮತದಾನ ನಡೆದಿತ್ತು. 2019 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಮೇ 23, 2019 ರಂದು ಘೋಷಿಸಲಾಯಿತು.
2019 ರ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆದುಕೊಂಡಿತು?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 2024 ರ ಚುನಾವಣೆ ಎದುರಿಸಲು ಸಜ್ಜಾಗಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಒಕ್ಕೂಟವಾಗಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಇದೀಗ ಮೂರನೇ ಬಾರಿಗೆ ಸರ್ಕಾರ ರಚಿಸಲು ಶ್ರಮಿಸುತ್ತಿದೆ. ಮೋದಿ ಅವರನ್ನು ಪದಚ್ಯುತಗೊಳಿಸುವ ಉದ್ದೇಶದಿಂದ ವಿರೋಧ ಪಕ್ಷಗಳು 'ಇಂಡಿಯಾ' (I.N.D.I.A) ಮೈತ್ರಿಯಾಗಿ ಒಗ್ಗೂಡಿದವು. 2019ರಲ್ಲಿ ಒಟ್ಟು 542 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 303 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ 353 ಸ್ಥಾನಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ 52 ಸ್ಥಾನಗಳಲ್ಲಿ ಮಾತ್ರವೇ ಜಯಗಳಿಸಿತ್ತು.
(State Wise results 2019)
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳು ಕರ್ನಾಟಕ ಸೇರಿ ಯಾವ ರಾಜ್ಯಗಳಲ್ಲಿ ಎಷ್ಟು ಸ್ಥಾನಗಳನ್ನು ಗೆದ್ದಿತ್ತು?
ಉತ್ತರ ಭಾರತ
ಬಿಹಾರ:
ಒಟ್ಟು ಸೀಟುಗಳು-
40 ಬಿಜೆಪಿ-
17 ಜೆಡಿಯು -
16 ಲೋಕ ಜನಶಕ್ತಿ ಪಕ್ಷ -
6 ಕಾಂಗ್ರೆಸ್ -
1 ಆರ್‌ಜೆಡಿ-0
ರಾಷ್ಟ್ರೀಯ ಲೋಕ ಸಮತಾ ಪಕ್ಷ-0
ಎನ್‌ಸಿಪಿ-0
(ಬಿಜೆಪಿ, ಜೆಡಿಯು, ಲೋಕಜನಶಕ್ತಿ ಪಕ್ಷಗಳು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ)
ಚಂಡೀಗಢ:
ಒಟ್ಟು ಸೀಟುಗಳು- 1
ಬಿಜೆಪಿ - 1 < ಕಾಂಗ್ರೆಸ್ - 0 < ಆಮ್ ಆದ್ಮಿ ಪಾರ್ಟಿ-0 < ಛತ್ತೀಸ್‌ಗಢ:
ಒಟ್ಟು ಸೀಟುಗಳು- 11
ಬಿಜೆಪಿ-9
ಕಾಂಗ್ರೆಸ್ - 2
ದಾದ್ರಾ ಮತ್ತು ನಗರ್ ಹವೇಲಿ:
ಒಟ್ಟು ಸೀಟುಗಳು- 1
ಬಿಜೆಪಿ-0
ಸ್ವತಂತ್ರ - 1
ಡಾಮನ್ ಮತ್ತು ಡಿಯು:
ಒಟ್ಟು ಸೀಟುಗಳು-1
ಬಿಜೆಪಿ - 1
ಕಾಂಗ್ರೆಸ್ - 0
ದೆಹಲಿ
ಒಟ್ಟು ಸೀಟುಗಳು- 7
ಬಿಜೆಪಿ-7
ಆಮ್ ಆದ್ಮಿ ಪಾರ್ಟಿ-0
ಕಾಂಗ್ರೆಸ್ - 0
ಗೋವಾ:
ಒಟ್ಟು ಸೀಟುಗಳು- 2
ಬಿಜೆಪಿ - 1
ಕಾಂಗ್ರೆಸ್ - 1
ಗುಜರಾತ್:
ಒಟ್ಟು ಸೀಟುಗಳು- 26
ಬಿಜೆಪಿ- 26
ಕಾಂಗ್ರೆಸ್ - 0
ಹರಿಯಾಣ:
ಒಟ್ಟು ಸೀಟುಗಳು- 10
ಬಿಜೆಪಿ- 10
ಕಾಂಗ್ರೆಸ್ - 0
ಭಾರತೀಯ ರಾಷ್ಟ್ರೀಯ ಲೋಕದಳ - 0
ಹಿಮಾಚಲ ಪ್ರದೇಶ:
ಒಟ್ಟು ಸೀಟುಗಳು-4
ಬಿಜೆಪಿ- 4
ಕಾಂಗ್ರೆಸ್ - 0
ಜಮ್ಮು ಮತ್ತು ಕಾಶ್ಮೀರ:
ಒಟ್ಟು ಸೀಟುಗಳು- 6
ಬಿಜೆಪಿ- 3
ಕಾಂಗ್ರೆಸ್ - 0
ಪಿಡಿಪಿ-0
ಎನ್‌ಸಿ-3
ಜಾರ್ಖಂಡ್:
ಒಟ್ಟು ಸೀಟುಗಳು- 14
ಬಿಜೆಪಿ - 11
ಆಲ್ ಜಾರ್ಖಂಡ್ ಸ್ಟುಡೆಂಟ್ ಯೂನಿಯನ್- 1
ಕಾಂಗ್ರೆಸ್ - 1
ಜಾರ್ಖಂಡ್ ಮುಕ್ತಿ ಮೋರ್ಚಾ - 1
ಮಧ್ಯಪ್ರದೇಶ:
ಒಟ್ಟು ಸೀಟುಗಳು- 29
ಬಿಜೆಪಿ- 28
ಕಾಂಗ್ರೆಸ್ - 1
ಮಹಾರಾಷ್ಟ್ರ:
ಒಟ್ಟು ಸೀಟುಗಳು- 48
ಬಿಜೆಪಿ- 23
ಶಿವಸೇನೆ- 18
ಕಾಂಗ್ರೆಸ್ - 1
ಎನ್‌ಸಿಪಿ-4
ಎಐಎಂಐಎಂ-1
ಸ್ವತಂತ್ರ - 1
(ಬಿಜೆಪಿ, ಶಿವಸೇನೆ-ಎನ್‌ಡಿಎ ಮೈತ್ರಿಕೂಟ)
ಒಡಿಶಾ:
ಒಟ್ಟು ಸೀಟುಗಳು- 21
ಬಿಜು ಜನತಾ ದಳ - 12
ಬಿಜೆಪಿ-8
ಕಾಂಗ್ರೆಸ್ - 1
ಪಂಜಾಬ್:
ಒಟ್ಟು ಸೀಟುಗಳು- 13
ಕಾಂಗ್ರೆಸ್ - 8
ಶಿರೋಮಣಿ ಅಕಾಲಿದಳ - ೨
ಬಿಜೆಪಿ - 2
ಆಮ್ ಆದ್ಮಿ ಪಕ್ಷ - 1
ರಾಜಸ್ಥಾನ:
ಒಟ್ಟು ಸೀಟುಗಳು- 25
ಬಿಜೆಪಿ- 24
ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ- 1
ಕಾಂಗ್ರೆಸ್ - 0
ಉತ್ತರ ಪ್ರದೇಶ:
ಒಟ್ಟು ಸೀಟುಗಳು- 80
ಬಿಜೆಪಿ- 62
ಅಪ್ನಾ ದಳ (ಎಸ್)- 2
ಬಿಎಸ್‌ಪಿ-10
ಸಮಾಜವಾದಿ ಪಕ್ಷ - 5
ಕಾಂಗ್ರೆಸ್ - 1
ಉತ್ತರಾಖಂಡ:
ಒಟ್ಟು ಸೀಟುಗಳು- 5
ಬಿಜೆಪಿ- 5
ಕಾಂಗ್ರೆಸ್ - 0
ಪಶ್ಚಿಮ ಬಂಗಾಳ:
ಒಟ್ಟು ಸೀಟುಗಳು- 42
ಟಿಎಂಸಿ- 22
ಬಿಜೆಪಿ- 18
ಕಾಂಗ್ರೆಸ್ - 2
ಸಿಪಿಐಎಂ-0
ದಕ್ಷಿಣ ಭಾರತ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು:
ಒಟ್ಟು ಸೀಟುಗಳು- 1
ಕಾಂಗ್ರೆಸ್ - 1
ಬಿಜೆಪಿ-0
ಆಂಧ್ರ ಪ್ರದೇಶ:
ಒಟ್ಟು ಸೀಟುಗಳು- 25
ವೈಸಿಪಿ- 22
ಟಿಡಿಪಿ-3
ಜನಸೇನಾ-0
ಬಿಜೆಪಿ-0
ಕರ್ನಾಟಕ:
ಒಟ್ಟು ಸೀಟುಗಳು- 28
ಬಿಜೆಪಿ- 25
ಸ್ವತಂತ್ರ - 1
ಕಾಂಗ್ರೆಸ್ - 1
ಜೆಡಿಎಸ್-1
ಕೇರಳ:
ಒಟ್ಟು ಸೀಟುಗಳು- 20
ಕಾಂಗ್ರೆಸ್ - 15
ಮುಸ್ಲಿಂ ಲೀಗ್ - 2
ಸಿಪಿಐಎಂ-1
ಕೇರಳ ಕಾಂಗ್ರೆಸ್ (ಎಂ)- 1
ಆರ್‌ಎಸ್‌ಪಿ-1
ಬಿಜೆಪಿ-0
ಸಿಪಿಐ-0
ಲಕ್ಷದ್ವೀಪ:
ಒಟ್ಟು ಸೀಟುಗಳು- 1
ಎನ್‌ಸಿಪಿ-1
ಕಾಂಗ್ರೆಸ್ - 0
ಪುದುಚೇರಿ:
ಒಟ್ಟು ಸೀಟುಗಳು- 1
ಕಾಂಗ್ರೆಸ್ - 1
ಅಖಿಲ ಭಾರತ NR ಕಾಂಗ್ರೆಸ್ - 0
ತಮಿಳುನಾಡು:
ಒಟ್ಟು ಸೀಟುಗಳು- 39
ಡಿಎಂಕೆ- 24
ಕಾಂಗ್ರೆಸ್ - 8
ಸಿಪಿಐ-2
ಸಿಪಿಐಎಂ-2
ಎಐಎಡಿಎಂಕೆ-1
ಮುಸ್ಲಿಂ ಲೀಗ್ - 1
ವಿದುತಲೈ ಚಿರುತೈಗಾಲ್ ಕಚ್ಚಿ- 1
ಬಿಜೆಪಿ-0
ಪಟ್ಟಾಲಿ ಮಕ್ಕಳ್ ಕಚ್ಚಿ- ೦
ತೆಲಂಗಾಣ:
ಒಟ್ಟು ಸೀಟುಗಳು- 17
ಟಿಆರ್ಎಸ್-9
ಕಾಂಗ್ರೆಸ್ - 3
ಬಿಜೆಪಿ- 4
ಎಐಎಂಐಎಂ-1
ಈಶಾನ್ಯ ಭಾರತ
ಅರುಣಾಚಲ ಪ್ರದೇಶ:
ಒಟ್ಟು ಸೀಟುಗಳು- 2
ಬಿಜೆಪಿ - 2
ಕಾಂಗ್ರೆಸ್ - 0
ಅಸ್ಸಾಂ:
ಒಟ್ಟು ಸೀಟುಗಳು- 14
ಬಿಜೆಪಿ-9
ಕಾಂಗ್ರೆಸ್ - 3
ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ - 1
ಸ್ವತಂತ್ರ - 1
ಮಣಿಪುರ:
ಒಟ್ಟು ಸೀಟುಗಳು- 2
ಬಿಜೆಪಿ - 1
ನಾಗಾ ಪೀಪಲ್ಸ್ ಫ್ರಂಟ್ - 1
ಕಾಂಗ್ರೆಸ್ - 0
ಮೇಘಾಲಯ:
ಒಟ್ಟು ಸೀಟುಗಳು- 2
ಬಿಜೆಪಿ-0
ಕಾಂಗ್ರೆಸ್ - 1
ನ್ಯಾಷನಲ್ ಪೀಪಲ್ಸ್ ಪಾರ್ಟಿ - 1
ಮಿಜೋರಾಂ:
ಒಟ್ಟು ಸೀಟುಗಳು- 1
ಮಿಜೋ ನ್ಯಾಷನಲ್ ಫ್ರಂಟ್- 1
ಕಾಂಗ್ರೆಸ್ - 0
ನಾಗಾಲ್ಯಾಂಡ್:
ಒಟ್ಟು ಸೀಟುಗಳು- 1
ಎನ್‌ಡಿಎ-1
ಕಾಂಗ್ರೆಸ್ - 0
ಸಿಕ್ಕಿಂ:
ಒಟ್ಟು ಸೀಟುಗಳು- 1
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ- 1
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ - 0
ತ್ರಿಪುರ:
ಒಟ್ಟು ಸೀಟುಗಳು- 2
ಬಿಜೆಪಿ - 2
ಕಾಂಗ್ರೆಸ್ - 0
ಸಿಪಿಐಎಂ-0
- ಹಂತ 1
- ಹಂತ 1A
- ಹಂತ 2
- ಹಂತ 2A
- ಹಂತ 3
- ಹಂತ 4
- ಹಂತ 5
- ಹಂತ 6
- ಹಂತ 7
ಪದೇಪದೆ ಕೇಳುವ ಪ್ರಶ್ನೆಗಳು (FAQ)
ಪ್ರಸ್ತುತ ಎನ್‌ಡಿಎ ಮೈತ್ರಿಕೂಟದಲ್ಲಿರುವ ಪಕ್ಷಗಳ ಪಟ್ಟಿ ಹೀಗಿದೆ; ಬಿಜೆಪಿ, ನ್ಯಾಷನಲ್ ಪೀಪಲ್ಸ್ ಪಾರ್ಟಿ, ಶಿವಸೇನೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) (ಅಜಿತ್ ಪವಾರ್), ಜನತಾ ದಳ (ಜಾತ್ಯತೀತ), ಎಐಎಡಿಎಂಕೆ (ಒಪಿಎಸ್), ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಪಿಎಂಕೆ), ಪುತಿಯ ನೀದಿ ಕಚ್ಚಿ (ಪಿಎನ್‌ಕೆ), ಜನತಾ ದಳ (ಯು), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ, ಹಿಂದೂಸ್ತಾನಿ ಅವಾಮಿ ಮೋರ್ಚಾ, ರಾಷ್ಟ್ರೀಯ ಲೋಕಜನತಾ ದಳ, ಅಖಿಲ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್, ಅಸೋಮ್ ಗಣ ಪರಿಷತ್, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್, ಅಪ್ನಾ ದಳ (ಸೋನೆಲಾಲ್), ರಾಷ್ಟ್ರೀಯ ಲೋಕದಳ, ನಿಶಾದ್ ಪಾರ್ಟಿ, ಸುಹಲ್‌ದೇವ್ ಭಾರತೀಯ ಸಮಾಜ್ ಪಾರ್ಟಿ, ಅಖಿಲ ಭಾರತ ಎನ್.ಆರ್. ಕಾಂಗ್ರೆಸ್, ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಮಿಜೋನೇಷನಲ್ ಫ್ರಂಟ್, ಜನಾಯಕ್ ಜನತಾ ಪಾರ್ಟಿ, ಹರಿಯಾಣ ಲೋಕಿತ್ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ, ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ, ನಾಗಾ ಪೀಪಲ್ಸ್ ಫ್ರಂಟ್, ಶಿರೋಮಣಿ ಅಕಾಲಿದಳ ಸಂಯುಕ್ತ, ಭಾರತ್ ಧರ್ಮ ರಾಜ್ ಕಾಂಗ್ರೆಸ್, ಕೇರಳ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಅಠಾವಲೆ), ರಾಷ್ಟ್ರೀಯ ಸಮಾಜ ಪಕ್ಷ, ಪ್ರಹಾರ್ ಜನಶಕ್ತಿ ಪಕ್ಷ, ಜನ ಸುರಾಜ್ಯ ಶಕ್ತಿ, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ, ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್.
“ಇಂಡಿಯಾ” ಒಕ್ಕೂಟದಲ್ಲಿ (The Indian National Developmental Inclusive Alliace - I.N.D.I.A) ಕಾಂಗ್ರೆಸ್ ಮುಂಚೂಣಿ ಪಕ್ಷವಾಗಿದೆ. ಈ ಒಕ್ಕೂಟ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು. ಈ ಮೈತ್ರಿಕೂಟದಲ್ಲಿರುವ ಪಕ್ಷಗಳ ಪಟ್ಟಿ ಹೀಗಿದೆ; ಕಾಂಗ್ರೆಸ್ ಪಕ್ಷ, ಆಮ್ ಆದ್ಮಿ ಪಕ್ಷ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನೆನಿಸ್ಟ್) ಲಿಬರೇಶನ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ), ಕೇರಳ ಕಾಂಗ್ರೆಸ್ (ಎಂ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಜನತಾ ದಳ, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ, ಸಮಾಜವಾದಿ ಪಕ್ಷ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ವಿಡುತಲೈ ಚಿರುತೈಗಲ್ ಕಚ್ಚಿ
ದೆಹಲಿ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ “ಇಂಡಿಯಾ” ಮೈತ್ರಿಕೂಟದ ಮಿತ್ರಪಕ್ಷಗಳು ಅಧಿಕಾರದಲ್ಲಿವೆ.
ಕಾಂಗ್ರೆಸ್ 47, ಡಿಎಂಕೆ 24, ತೃಣಮೂಲ ಕಾಂಗ್ರೆಸ್ 23, ಶಿವಸೇನೆ (ಉದ್ದವ್) 6, ಎನ್‌ಸಿಪಿ (ಶರದ್ ಪವಾರ್) 4, ಸಿಪಿಎಂ 3, ಸಮಾಜವಾದಿ ಪಕ್ಷ 3, ಐಯುಎಂಎಲ್ 3, ಜೆಕೆಎನ್‌ಸಿ 3, ಸಿಪಿಐ 2, ಎಎಪಿ 1, ಜೆಎಂಎಂ 1, ಕೆಸಿ(ಎಂ) 1, ಆರ್‌ಎಸ್‌ಪಿ 1 ಮತ್ತು ವಿಸಿಕೆ 1 ಸ್ಥಾನ ಪಡೆದಿದೆ. ಲೋಕಸಭೆಯಲ್ಲಿ “ಇಂಡಿಯಾ” ಮೈತ್ರಿಕೂಟಕ್ಕೆ ಸೇರಿದ 123 ಸದಸ್ಯರಿದ್ದಾರೆ.
ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿವೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು, ಅಂದರೆ ಶೇ 80.24ರಷ್ಟು ಮತದಾನ ನಡೆದಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಕಡಿಮೆ, ಅಂದರೆ ಶೇ 53.48 ರಷ್ಟು ಮತದಾನವಾಗಿತ್ತು. ಕಲಬುರ್ಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ನಾಯಕ ಎಚ್‌ಡಿ ದೇವೇಗೌಡ ಸೋತಿದ್ದರು. ಬಿಜೆಪಿಯು 25, ಕಾಂಗ್ರೆಸ್ 1, ಜೆಡಿಎಸ್ 1 ಸ್ಥಾನದಲ್ಲಿ ಜಯಗಳಿಸಿತ್ತು. ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ 1 ಸ್ಥಾನದಲ್ಲಿ ಜಯಗಳಿಸಿದ್ದರು.
ಆಂಧ್ರಪ್ರದೇಶವು ಒಟ್ಟು 25 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ವೈಎಸ್‌ಆರ್ ಕಾಂಗ್ರೆಸ್ 22 ಮತ್ತು ಟಿಡಿಪಿ 3 ಸ್ಥಾನಗಳನ್ನು ಗೆದ್ದಿವೆ.
ತೆಲಂಗಾಣದಲ್ಲಿ ಪ್ರಸ್ತುತ 17 ಲೋಕಸಭಾ ಕ್ಷೇತ್ರಗಳಿವೆ. 2019ರಲ್ಲಿ ಬಿಆರ್‌ಎಸ್ 9, ಬಿಜೆಪಿ 4, ಕಾಂಗ್ರೆಸ್ 3 ಮತ್ತು ಎಂಐಎಂ 1 ಸ್ಥಾನ ಗೆದ್ದಿತ್ತು.