CFCA Awards 2023: 4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್.. ಯಾವ ಸಿನಿಮಾಗೆ ಯಾವ ಪ್ರಶಸ್ತಿ, ಇಲ್ಲಿದೆ ಡೀಟೆಲ್ಸ್!
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ರಮ್ಯಾ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಇನ್ನಿತರರು ಹಾಜರಿದ್ದರು.
4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 2022ರಲ್ಲಿ ತೆರೆ ಕಂಡ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಚಿತ್ರಕ್ಕೆ 4 ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2' ಚಿತ್ರಕ್ಕೆ 3 ವಿಭಾಗಗಳಲ್ಲಿ ಪ್ರಶಸ್ತಿಗಳು ದೊರೆತಿವೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ರಮ್ಯಾ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಇನ್ನಿತರರು ಹಾಜರಿದ್ದರು. ಹಾಗೇ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅತ್ಯುತ್ತಮ ನಿರ್ಮಾಪಕ (ಡೆಬ್ಯು), ಸಂಚಾರಿ ವಿಜಯ್ ಹೆಸರಿನಲ್ಲಿ ಅತ್ಯುತ್ತಮ ನಟ (ಡೆಬ್ಯು), ತ್ರಿಪುರಾಂಭ ಹೆಸರಿನಲ್ಲಿ ಅತ್ಯುತ್ತಮ ನಟಿ (ಡೆಬ್ಯು), ಕರಾಟೆ ಕಿಂಗ್ ಶಂಕರನಾಗ್ ಹೆಸರಿನಲ್ಲಿ ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹಾಗೂ ಚಿತ್ರ ಸಾಹಿತಿ ಚಿ. ಉದಯ ಶಂಕರ್ ಹೆಸರಿನಲ್ಲಿ ಅತ್ಯುತ್ತಮ ಬರಹಗಾರ (ಡೆಬ್ಯು) ಸೇರಿದಂತೆ ಈ ಬಾರಿ 5 ವಿಶೇಷ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಪ್ರಶಸ್ತಿ ವಿಜೇತರ ಸಂಪೂರ್ಣ ಲಿಸ್ಟ್ ಇಲ್ಲಿದೆ
ಅತ್ಯುತ್ತಮ ಚಿತ್ರ : ಕಾಂತಾರ
ಅತ್ಯುತ್ತಮ ನಾಯಕ : ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ಸಾಹಸ ನಿರ್ದೇಶನ : ವಿಕ್ರಮ್ ಮೋರ್ (ಕಾಂತಾರ)
ಅತ್ಯುತ್ತಮ ಸಂಗೀತ : ಕಾಂತಾರ (ಅಜನೀಶ್ ಲೋಕನಾಥ್)
ಅತ್ಯುತ್ತಮ ಛಾಯಾಗ್ರಹಣ : ಭುವನ್ ಗೌಡ (ಕೆಜಿಎಫ್ 2)
ಅತ್ಯುತ್ತಮ ಸಂಕಲನ : ಉಜ್ವಲ್ ಕುಲಕರ್ಣಿ (ಕೆಜಿಎಫ್ 2)
ಅತ್ಯುತ್ತಮ ವಿಎಫ್ ಎಕ್ಸ್ : ಉದಯ ರವಿ ಹೆಗಡೆ ಯೂನಿಫೈ ಮೀಡಿಯಾ (ಕೆಜಿಎಫ್2)
ಅತ್ಯುತ್ತಮ ನಿರ್ದೇಶಕ : ಕಿರಣ್ ರಾಜ್ (ಚಾರ್ಲಿ)
ಅತ್ಯುತ್ತಮ ನಾಯಕಿ : ಶರ್ಮಿಳಾ ಮಾಂಡ್ರೆ (ಗಾಳಿಪಟ 2)
ಅತ್ಯುತ್ತಮ ಸಂಭಾಷಣೆ : ಮಾಸ್ತಿ (ಗುರು ಶಿಷ್ಯರು)
ಅತ್ಯುತ್ತಮ ಪೋಷಕ ನಟ : ಸುಚೇಂದ್ರ ಪ್ರಸಾದ್ (ವ್ಹೀಲ್ ಚೇರ್ ರೋಮಿಯೋ)
ಅತ್ಯುತ್ತಮ ಪೋಷಕ ನಟಿ : ಸುಧಾರಾಣಿ (ತುರ್ತು ನಿರ್ಗಮನ)
ಅತ್ಯುತ್ತಮ ಚಿತ್ರಕಥೆ : ಡಾರ್ಲಿಂಗ್ ಕೃಷ್ಣ (ಲವ್ ಮಾಕ್‌ಟೇಲ್ 2)
ಅತ್ಯುತ್ತಮ ಬಾಲನಟ/ನಟಿ : ಶಾರ್ವರಿ (ಚಾರ್ಲಿ)
ಅತ್ಯುತ್ತಮ ಹಿನ್ನೆಲೆ ಸಂಗೀತ : ಅನೂಪ್ ಸೀಳಿನ್ (ಮಾನ್ಸೂನ್ ರಾಗ)
ಅತ್ಯುತ್ತಮ ಚಿತ್ರ ಸಾಹಿತ್ಯ : ಶಶಾಂಕ್ (ಲವ್ 350)
ಅತ್ಯುತ್ತಮ ಗಾಯಕ : ಮೋಹನ್ (ಜುಂಜಪ್ಪ, ವೇದ)
ಅತ್ಯುತ್ತಮ ಗಾಯಕಿ : ಐಶ್ವರ್ಯ ರಂಗರಾಜ್ (ಏಕ್ ಲವ್ ಯಾ)
ಅತ್ಯುತ್ತಮ ಕಲಾ ನಿರ್ದೇಶನ : ಶಿವಕುಮಾರ (ವಿಕ್ರಾಂತ್ ರೋಣ)
ಅತ್ಯುತ್ತಮ ನೃತ್ಯ ನಿರ್ದೇಶನ : ಮೋಹನ್ (ಏಕ್ ಲವ್ ಯಾ, ಮೀಟ್ ಮಾಡೋಣ)
ಅತ್ಯುತ್ತಮ ನಟ (ಡೆಬ್ಯು) : ಪೃಥ್ವಿ ಶ್ಯಾಮನೂರು (ಪದವಿ ಪೂರ್ವ)
ಅತ್ಯುತ್ತಮ ನಟಿ (ಡೆಬ್ಯು) : ಯಶಾ ಶಿವಕುಮಾರ್ (ಮಾನ್ಸೂನ್ ರಾಗ)
ಅತ್ಯುತ್ತಮ ನಿರ್ದೇಶಕ (ಡೆಬ್ಯು) : ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)
ಅತ್ಯುತ್ತಮ ಬರಹಗಾರ (ಡೆಬ್ಯು) : ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)
ಅತ್ಯುತ್ತಮ ನಿರ್ಮಾಪಕ (ಡೆಬ್ಯು) : ಪವನ್ ಒಡೆಯರ್ (ಡೊಳ್ಳು)
ಅತ್ಯುತ್ತಮ ಯುಟ್ಯೂಬರ್ : ಕಲಾ ಮಾಧ್ಯಮ (ಪರಮೇಶ್ವರ ಕೆ.ಎಸ್)
ಅತ್ಯುತ್ತಮ ಮನರಂಜನಾ ಸಾಮಾಜಿಕ ಜಾಲತಾಣ : ವಿಕ್ಕಿ ಪೀಡಿಯಾ