ಬಿಗ್‌ಬಾಸ್‌ ಕನ್ನಡ 11: ಜಗದೀಶ್‌ ಲಾಯರ್‌ ಲೈಸನ್ಸ್‌ ರದ್ದುಗೊಳಿಸಿದ ಬಾರ್‌ ಕೌನ್ಸಿಲ್‌;ನಕಲಿ ಅಂಕಪಟ್ಟಿ ಕೊಟ್ಟು ಮೋಸ ಮಾಡಿದ್ರಾ ವಕೀಲ್‌ ಸಾಬ್?
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಜಗದೀಶ್‌ ಲಾಯರ್‌ ಲೈಸನ್ಸ್‌ ರದ್ದುಗೊಳಿಸಿದ ಬಾರ್‌ ಕೌನ್ಸಿಲ್‌;ನಕಲಿ ಅಂಕಪಟ್ಟಿ ಕೊಟ್ಟು ಮೋಸ ಮಾಡಿದ್ರಾ ವಕೀಲ್‌ ಸಾಬ್?

ಬಿಗ್‌ಬಾಸ್‌ ಕನ್ನಡ 11: ಜಗದೀಶ್‌ ಲಾಯರ್‌ ಲೈಸನ್ಸ್‌ ರದ್ದುಗೊಳಿಸಿದ ಬಾರ್‌ ಕೌನ್ಸಿಲ್‌;ನಕಲಿ ಅಂಕಪಟ್ಟಿ ಕೊಟ್ಟು ಮೋಸ ಮಾಡಿದ್ರಾ ವಕೀಲ್‌ ಸಾಬ್?

ಕಳೆದ 4 ದಿನಗಳಿಂದ ಬಿಗ್‌ಬಾಸ್‌ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳೊಂದಿಗೆ ಕಿರಿಕ್‌ ಮಾಡಿಕೊಂಡಿದ್ದ ಜಗದೀಶ್‌, ಲಾಯರ್‌ ಅಲ್ಲವಂತೆ. ಆತ ನಕಲಿ ಪಿಯುಸಿ ಮಾರ್ಕ್ಸ್‌ಕಾರ್ಡ್‌ ತಯಾರಿಸಿ ಡಿಗ್ರಿ ಹಾಗೂ ಲಾಯರ್‌ ಪದವಿ ಮಾಡಿ ದೆಹಲಿ ಬಾರ್‌ ಕೌನ್ಸಿಲ್‌ನಲ್ಲಿ ಲಾಯರ್‌ ಲೈಸನ್ಸ್‌ ಪದವಿ ಪಡೆದಿದ್ದಾರೆ ಎಂದು ಮಾಜಿ ಬಿಗ್‌ಬಾಸ್‌ ಸ್ಪರ್ಧಿ ಪ್ರಶಾಂತ್‌ ಸಂಬರ್ಗಿ ಹೇಳಿದ್ದಾರೆ.

ಬಿಗ್‌ಬಾಸ್‌ ಕನ್ನಡ 11: ಜಗದೀಶ್‌ ಲಾಯರ್‌ ಲೈಸನ್ಸ್‌ ರದ್ದುಗೊಳಿಸಿದ ಬಾರ್‌ ಕೌನ್ಸಿಲ್‌;ನಕಲಿ ಅಂಕಪಟ್ಟಿ ಕೊಟ್ಟು ಮೋಸ ಮಾಡಿದ್ರಾ ವಕೀಲ್‌ ಸಾಬ್?
ಬಿಗ್‌ಬಾಸ್‌ ಕನ್ನಡ 11: ಜಗದೀಶ್‌ ಲಾಯರ್‌ ಲೈಸನ್ಸ್‌ ರದ್ದುಗೊಳಿಸಿದ ಬಾರ್‌ ಕೌನ್ಸಿಲ್‌;ನಕಲಿ ಅಂಕಪಟ್ಟಿ ಕೊಟ್ಟು ಮೋಸ ಮಾಡಿದ್ರಾ ವಕೀಲ್‌ ಸಾಬ್? (PC: K N Jagadish Kumar , Colors Kannada)

ಬಿಗ್‌ಬಾಸ್‌ ಆರಂಭವಾಗಿ 4 ದಿನ ಕಳೆದಿದೆ ಅಷ್ಟೇ. ಮನೆಯಲ್ಲಿ ಲಾಯರ್‌ ಜಗದೀಶ್‌ ಆರ್ಭಟ ಜೋರಾಗಿದೆ. ಎಲ್ಲಾ ಸ್ಪರ್ಧಿಗಳೊಂದಿಗೆ ಲಾಯರ್‌ ಜಗದೀಶ್‌, ಜಗಳ ಮಾಡಿಕೊಳ್ಳುತ್ತಿದ್ದಾರೆ. ಬುಧವಾರದ ಎಪಿಸೋಡ್‌ನಲ್ಲಿ ಕೂಡಾ ಆತ ಧನರಾಜ್‌ ಆಚಾರ್‌, ಮಾನಸಾ ಜೊತೆ ಜಗಳ ಮಾಡಿದ್ದರು. ನಿನ್ನೆ ರಂಜಿತ್‌ ಜೊತೆ ಕೈ ಕೈ ಮಿಲಾಯಿಸಿದ್ದರು. ತಾನು ಲಾಯರ್‌ ಎಂದು ಹೇಳಿಕೊಳ್ಳುತ್ತಿರುವ ಜಗದೀಶ್‌ ನಕಲಿ ಲಾಯರ್‌ ಅಂತೆ. ಇದೇ ವಿಚಾರಕ್ಕೆ ಬಾರ್‌ ಕೌನ್ಸಿಲ್‌, ಜಗದೀಶ್‌ ಲಾಯರ್‌ ಲೈಸನ್ಸ್‌ ರದ್ದುಪಡಿಸಿದೆ.

ನಕಲಿ ಅಂಕಪಟ್ಟಿ ಕೊಟ್ರಾ ಲಾಯರ್‌ ಜಗದೀಶ್‌?

ಬಿಗ್‌ಬಾಸ್‌ನಲ್ಲಿ ನಡೆದ ಜಗಳಕ್ಕೂ ಜಗದೀಶ್‌ ಲಾಯರ್‌ ಲೈಸನ್ಸ್‌ ರದ್ದುಗೊಳಿಸುವುದಕ್ಕೂ ಏನು ಸಂಬಂಧ ಅಂತೀರಾ? ಅಸಲಿಗೆ ಜಗದೀಶ್‌, ನಕಲಿ ಮಾರ್ಕ್ಸ್‌ಕಾರ್ಡ್‌ ಕೊಟ್ಟು ಪದವಿ ಹಾಗೂ ಎಲ್‌ಎಲ್‌ಬಿ ಮಾಡಿ ಬಾರ್‌ ಕೌನ್ಸಿಲ್‌ನಿಂದ ವಕೀಲವೃತ್ತಿ ಮಾಡಲು ಅನುಮತಿ ಪಡೆದಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಅವರ ಲೈಸನ್ಸ್‌ ರದ್ದಾಗಿದೆ. ಜಗದೀಶ್‌ ಪಿಯುಸಿ ಓದದೆ, ನಕಲಿ ಮಾರ್ಕ್ಸ್‌ಕಾರ್ಡ್‌ ತಯಾರಿಸಿದ್ದಾರೆ, ನಂತರ ಅದನ್ನು ಬಳಸಿಕೊಂಡು ಡಿಗ್ರಿ ಮಾಡಿರುವುದಲ್ಲದೆ, ಎಲ್‌ಎಲ್‌ಬಿ ಮುಗಿಸಿದ್ದಾರೆ. ಓದು ಮುಗಿಯುತ್ತಿದ್ದಂತೆ ಬೆಂಗಳೂರು ಬಿಟ್ಟು, ದೆಹಲಿಗೆ ಹೋಗಿ ಬಾರ್‌ ಕೌನ್ಸಿಲ್‌ನಲ್ಲಿ ಲಾಯರ್‌ ಕೆಲಸಕ್ಕೆ ಲೈಸನ್ಸ್‌ ಪಡೆದುಬಂದಿದ್ದರು. ಇದೀಗ ಈ ಲೈಸನ್ಸ್‌ ರದ್ದಾಗಿದೆ.

ಬಾರ್‌ ಕೌನ್ಸಿಲ್‌ ಅಧಿಸೂಚನೆ ಹಂಚಿಕೊಂಡ ಪ್ರಶಾಂತ್‌ ಸಂಬರ್ಗಿ

ಜಗದೀಶ್‌ ಲೈಸನ್ಸ್‌ ರದ್ದತಿ ಕೋರಿ ಹಿಮಾಂಶು ಭಾಟಿ ಎಂಬುವರು ಬಾರ್‌ ಕೌನ್ಸಿಲ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ದೆಹಲಿ ಬಾರ್‌ ಕೌನ್ಸಿಲ್‌ ಜಗದೀಶ್‌ ಅಂಕಪಟ್ಟಿಗಳನ್ನು ಪರಿಶೀಲಿಸಿದೆ. ಜಗದೀಶ್‌ ಅವರು ಕೊಟ್ಟಿರುವ ಅಂಕಪಟ್ಟಿ ನಕಲಿ ಆಗಿರುವುದರಿಂದ ಅವರ ಲಾಯರ್‌ ಲೈಸನ್ಸ್‌ ರದ್ದುಗೊಳಿಸಿರುವುದಾಗಿ ಅಧಿಸೂಚನೆ ಹೊರಡಿಸಿದೆ. ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಪ್ರಶಾಂತ್‌ ಸಂಬರ್ಗಿ ಇದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಗ್‌ಬಾಸ್‌ ಜಗದೀಶನ ಲಾ ಡಿಗ್ರಿ ಕ್ಯಾನ್ಸಲ್ ಆಗಿದೆ. ಆತನ ದ್ವಿತೀಯ ಪಿಯುಸಿ ಮಾರ್ಕ್ಸ್‌ಕಾರ್ಡ್ ನಕಲಿ ಆಗಿರುವುದರಿಂದ, ನಂತರದ ಡಿಗ್ರಿಗಳು (ಕಾನೂನು ಡಿಗ್ರಿ ಸೇರಿ) ಮಾನ್ಯವಲ್ಲದಿದ್ದುದರಿಂದ ಆತನ ಸನ್ನದ್ದು ವಾಪಾಸ್ ಕೊಡುವಂತೆ ಬಾರ್ ಕೌನ್ಸಿಲ್ ಆದೇಶ ನೀಡಿದೆ. ಆತನನ್ನು ಲಾಯರ್‌ ಸಾಹೇಬ್‌ ಎಂದು ಕರೆಯಬೇಡಿ, ಅದು ಇತರ ಲಾಯರ್‌ಗಳಿಗೆ ಮಾಡುವ ಅವಮಾನವಾಗುತ್ತದೆ ಎಂದು ಪ್ರಶಾಂತ್‌ ಸಂಬರ್ಗಿ ಬರೆದುಕೊಂಡಿದ್ದಾರೆ.

ಸಹ ಸ್ಪರ್ಧಿಗಳೊಂದಿಗೆ ಕಿತ್ತಾಡಿಕೊಂಡಿದ್ದ ಜಗದೀಶ್‌

ಬುಧವಾರ ಧನರಾಜ್‌ ಆಚಾರ್‌, ಮಾನಸಾ ಸೇರಿದಂತೆ ಸಹ ಸ್ಪರ್ಧಿಗಳೊಂದಿಗೆ ಕಿತ್ತಾಡಿಕೊಂಡಿದ್ದ ಜಗದೀಶ್‌, ನಂತರ ಬಿಗ್‌ಬಾಸ್‌ಗೆ ಆವಾಜ್‌ ಹಾಕಿದ್ದರು. ಹೊರಗೆ ನನ್ನಗೆ ಒಳ್ಳೆ ಇಮೇಜ್‌ ಇದೆ. ನನಗೆ ಇಲ್ಲಿ ಇರಲು ಇಷ್ಟವಿಲ್ಲ. ಹೊರಗೆ ಕಳಿಸಿ, ಇಲ್ಲವಾದರೆ ಬಿಗ್‌ಬಾಸ್‌ನಲ್ಲಿ ನಡೆಯುತ್ತಿರುವ ಮಾಫಿಯಾವನ್ನು ಬಯಲಿಗೆ ಎಳೆಯುತ್ತೇನೆ. ಆ 50 ಲಕ್ಷಕ್ಕಾಗಿ ಇಲ್ಲಿರುವವರೆಲ್ಲಾ ಮೃಗಗಳಂತೆ ವರ್ತಿಸುತ್ತಿದ್ದಾರೆ. ನನ್ನ ಕೆಪಾಸಿಟಿ ಇಲ್ಲಿ ಯಾರಿಗೂ ಗೊತ್ತಿಲ್ಲ, ಮನಸ್ಸು ಮಾಡಿದರೆ ಹೆಲಿಕಾಪ್ಟರ್‌ನಿಂದ ನಿಮಗೆಲ್ಲಾ ಊಟ ತರಿಸ್ತೀನಿ ಎಂದೆಲ್ಲಾ ಮಾತನಾಡಿದ್ದರು.

Whats_app_banner