Amitabh Bachchan Health: ಶೂಟಿಂಗ್‌ ಸೆಟ್‌ನಲ್ಲಿ ಗಾಯಗೊಂಡಿದ್ದ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಈಗ ಹೇಗಿದ್ದಾರೆ?
ಕನ್ನಡ ಸುದ್ದಿ  /  ಮನರಂಜನೆ  /  Amitabh Bachchan Health: ಶೂಟಿಂಗ್‌ ಸೆಟ್‌ನಲ್ಲಿ ಗಾಯಗೊಂಡಿದ್ದ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಈಗ ಹೇಗಿದ್ದಾರೆ?

Amitabh Bachchan Health: ಶೂಟಿಂಗ್‌ ಸೆಟ್‌ನಲ್ಲಿ ಗಾಯಗೊಂಡಿದ್ದ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಈಗ ಹೇಗಿದ್ದಾರೆ?

ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ನೋವು ಇನ್ನೂ ಕಾಡುತ್ತಿದೆ. ಒಂದು ವಾರದ ವಿಶ್ರಾಂತಿ ಪಡೆಯಬೇಕಿದೆ ಎಂದು ಹೇಳಿದ್ದರು. ಇದೀಗ ಮತ್ತೆ ಬಿಗ್‌ ಬಿ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ.

ಹಿರಿಯ ನಟ ಅಮಿತಾಬ್‌ ಬಚ್ಚನ್
ಹಿರಿಯ ನಟ ಅಮಿತಾಬ್‌ ಬಚ್ಚನ್

ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ 81ನೇ ಹೊಸ್ತಿಲಲ್ಲಿ ಇದ್ಧಾರೆ. ಈ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂತೆ ಹುಮ್ಮಸ್ಸಿನಿಂದ ಅವರು ಕೆಲಸ ಮಾಡುತ್ತಿದ್ದಾರೆ. ಆದರೆ ವಯೋಸಹಜ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡುತ್ತಿದೆ. ಕಳೆದ ವರ್ಷ ಕೆಬಿಸಿ ಸೆಟ್‌ನಲ್ಲಿ ಕಬ್ಬಿಣದ ರಾಡ್‌ ತಗುಲಿ ಗಾಯಗೊಂಡಿದ್ದ ಅಮಿತಾಬ್‌ ಬಚ್ಚನ್‌, ಇತ್ತೀಚೆಗೆ ಮತ್ತೆ ಶೂಟಿಂಗ್‌ ಸೆಟ್‌ನಲ್ಲಿ ಗಾಯಗೊಂಡಿದ್ದಾರೆ.

ಅಮಿತಾಬ್‌ ಬಚ್ಚನ್‌ ಸದ್ಯಕ್ಕೆ 'ಪ್ರಾಜೆಕ್ಟ್‌ ಕೆ' ಸಿನಿಮಾದಲ್ಲಿ ಬ್ಯುಸಿ ಇದ್ಧಾರೆ. ಕೆಲವು ದಿನಗಳಿಂದ ಈ ಸಿನಿಮಾಗೆ ಹೈದರಾಬಾದ್‌ನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಆದರೆ ಚಿತ್ರೀಕರಣದ ಸಮಯದಲ್ಲಿ ಅವರ ಪಕ್ಕೆಲುಬಿಗೆ ಗಾಯವಾಗಿದ್ದು ಶೂಟಿಂಗ್‌ ಕ್ಯಾನ್ಸಲ್‌ ಮಾಡಲಾಗಿತ್ತು. ಹೈದರಾಬಾದ್‌ನಲ್ಲೇ ಆಸ್ಪತ್ರೆಗೆ ತೆರಳಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಅಮಿತಾಬ್‌ ಮುಂಬೈಗೆ ವಾಸಪಾಗಿದ್ದರು. ಅಭಿಮಾನಿಗಳಿಗೆ ಈ ವಿಚಾರವಾಗಿ ಮಾಹಿತಿ ನೀಡಿದ್ದರು. ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ನೋವು ಇನ್ನೂ ಕಾಡುತ್ತಿದೆ. ಒಂದು ವಾರದ ವಿಶ್ರಾಂತಿ ಪಡೆಯಬೇಕಿದೆ ಎಂದು ಹೇಳಿದ್ದರು. ಇದೀಗ ಮತ್ತೆ ಬಿಗ್‌ ಬಿ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ.

''ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಧನ್ಯವಾದಗಳು, ನಿಮ್ಮ ಹಾರೈಕೆಯಿಂದ ನಾನು ಗುಣಮುಖನಾಗುತ್ತಿದ್ದೇನೆ. ವೈದ್ಯರು ನೀಡಿದ ಸಲಹೆ ಅನುಸರಿಸುತ್ತಿದ್ದೇನೆ. ಸಹಜ ಸ್ಥಿತಿಗೆ ಮರಳುವವರೆಗೂ ಚಿತ್ರೀಕರಣದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಈ ಸಮಯದಲ್ಲಿ ನನ್ನೊಂದಿಗೆ ಇದ್ದ ಕುಟುಂಬದ ಸದಸ್ಯರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ವೈದ್ಯರ ಅನುಮತಿ ಪಡೆದು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ. ಅಲ್ಲಿವರೆಗೂ ಹಿತೈಷಿಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಮನೆ ಬಳಿ ಯಾರೂ ಬರಬೇಡಿ'' ಎಂದು ಅಮಿತಾಬ್‌ ಮಾಹಿತಿ ನೀಡಿದ್ದಾರೆ. ಅಮಿತಾಬ್‌ ಅವರ ಆರೋಗ್ಯ ಸ್ಥಿತಿ ತಿಳಿದು ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಿಮ್ಮ ಆರೋಗ್ಯ ನಮಗೆ ಬಹಳ ಮುಖ್ಯ, ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸುತ್ತಿದ್ದಾರೆ.

'ಕಬ್ಜ' ಟ್ರೇಲರ್‌ ಬಿಡುಗಡೆಗೊಳಿಸಿದ್ದ ಅಮಿತಾಬ್‌ ಬಚ್ಚನ್‌

ಉಪೇಂದ್ರ, ಸುದೀಪ್‌, ಶಿವಣ್ಣ ನಟಿಸಿರುವ 'ಕಬ್ಜ' ಸಿನಿಮಾ ಮಾರ್ಚ್‌ 17ರಂದು ತೆರೆ ಕಾಣುತ್ತಿದೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದೇ ಈ ಸಿನಿಮಾ ತೆರೆ ಕಾಣುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ನಿರ್ದೇಶಕ ಆರ್‌. ಚಂದ್ರು, ಅಂದುಕೊಂಡಂತೇ ದೊಡ್ಡ ಮಟ್ಟದಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಚಿತ್ರತಂಡ ಈಗಾಗಲೇ ಟ್ರೇಲರ್‌ ಬಿಡುಗಡೆ ಮಾಡಿದೆ. ಮುಂಬೈನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಟ್ರೇಲರ್‌ ರಿಲೀಸ್‌ ಮಾಡಲು ನಿರ್ದೇಶಕ ಆರ್.‌ ಚಂದ್ರು ಪ್ಲಾನ್‌ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಅಮಿತಾಬ್‌ ಬಚ್ಚನ್‌ ಅವರಿಂದಲೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿಸಲಾಗಿತ್ತು. ತಮ್ಮ ಟ್ವಿಟ್ಟರ್‌ನಲ್ಲಿ ಟ್ರೇಲರ್‌ ಹಂಚಿಕೊಂಡಿದ್ದ ಅಮಿತಾಬ್‌ ಬಚ್ಚನ್‌, ''ಟ್ರೇಲರ್‌ ಬಿಡುಗಡೆ ಮಾಡಲು ಬಹಳ ಖುಷಿಯಾಗುತ್ತಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ'' ಎಂದು ವಿಶ್‌ ಮಾಡಿದ್ದರು.

ನಾಗ್‌ ಅಶ್ವಿನ್‌ ನಿರ್ದೇಶನದ 'ಪ್ರಾಜೆಕ್ಟ್‌ ಕೆ' ಸಿನಿಮಾ

'ಪ್ರಾಜೆಕ್ಟ್‌ ಕೆ' ಸಿನಿಮಾವನ್ನು ವೈಜಯಂತಿ ಮೂವೀಸ್‌ ಬ್ಯಾನರ್‌ ಅಡಿ ಅಶ್ವಿನ್‌ ದತ್‌ ನಿರ್ಮಿಸಿ ನಾಗ್‌ ಅಶ್ವಿನ್‌ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಸುಮಾರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ಹಿಂದಿ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌, ಪ್ರಭಾಸ್‌, ದೀಪಿಕಾ ಪಡುಕೋಣೆ, ದಿಶಾ ಪಠಾನಿ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ 12 ಜನವರಿ 2014ಕ್ಕೆ ರಿಲೀಸ್‌ ಆಗಲಿದೆ.

Whats_app_banner