ಕನ್ನಡ ಸುದ್ದಿ  /  Entertainment  /  Bollywood News Mukesh Khanna Has Reacted To The Ongoing Speculations About Ranveer Singh Playing Shaktimaan Mnk

‘ಶಕ್ತಿಮಾನ್‌ ಪಾತ್ರ ಮಾಡುವಷ್ಟು ಪ್ರಬುದ್ಧತೆ ರಣವೀರ್‌ ಸಿಂಗ್‌ಗೆ ಇಲ್ಲ’; ಮುಕೇಷ್ ಖನ್ನಾ ಬಿರುಸು ಮಾತು

ಶಕ್ತಿಮಾನ್ ಕೇವಲ ಸೂಪರ್ ಹೀರೋ ಅಲ್ಲ. ಅವರು ಸೂಪರ್ ಟೀಚರ್ ಕೂಡ ಹೌದು. ಆ ಪಾತ್ರ ಮಾಡುವ ನಟನಿಗೆ ಆ ಗುಣವಿರಬೇಕು. ಅವರು ಮಾತನಾಡಿದರೆ ಜನ ಕೇಳಬೇಕು. ರಣವೀರ್.. ನಿನಗೆ ಇಷ್ಟವಾದ ಸಿನಿಮಾಗಳನ್ನು ನೀನು ಮಾಡಬಹುದು ಎಂದಿದ್ದಾರೆ ಮುಕೇಶ್‌ ಖನ್ನಾ

‘ಶಕ್ತಿಮಾನ್‌ ಪಾತ್ರ ಮಾಡುವಷ್ಟು ಪ್ರಬುದ್ಧತೆ ರಣವೀರ್‌ ಸಿಂಗ್‌ಗೆ ಇಲ್ಲ’; ಮುಕೇಷ್ ಖನ್ನಾ ಬಿರುಸು ಮಾತು
‘ಶಕ್ತಿಮಾನ್‌ ಪಾತ್ರ ಮಾಡುವಷ್ಟು ಪ್ರಬುದ್ಧತೆ ರಣವೀರ್‌ ಸಿಂಗ್‌ಗೆ ಇಲ್ಲ’; ಮುಕೇಷ್ ಖನ್ನಾ ಬಿರುಸು ಮಾತು

Mukhesh Khanna: ದಶಕಗಳ ಹಿಂದೆ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು 'ಶಕ್ತಿಮಾನ್' ಧಾರಾವಾಹಿ. ಅದೇ ಧಾರಾವಾಹಿಯಲ್ಲಿ ಶಕ್ತಿಮಾನ್‌ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು ಮುಕೇಶ್ ಖನ್ನಾ. ಇದೀಗ ಅದೇ ಕಥೆಯನ್ನು ಆಧರಿಸಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ ಮುಕೇಶ್‌. ಆದರೆ ಈ ಸಿನಿಮಾದಲ್ಲಿ ಶಕ್ತಿಮಾನ್ ಆಗಿ ಮುಖೇಶ್ ನಟಿಸುತ್ತಿಲ್ಲ. ಅಲ್ಲದೆ, ಈ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಈ ಮಧ್ಯೆ, ಶಕ್ತಿಮಾನ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸುಳ್ಳು ಎಂದು ಮುಖೇಶ್ ಖನ್ನಾ ಸ್ಪಷ್ಟಪಡಿಸಿದ್ದಾರೆ.

ಶಕ್ತಿಮಾನ್ ಪಾತ್ರಕ್ಕೆ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡಿಲ್ಲ ಎಂದು ಮುಖೇಶ್ ಖನ್ನಾ ಖಡಕ್‌ ಆಗಿಯೇ ಹೇಳಿದ್ದಾರೆ. "ಶಕ್ತಿಮಾನ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಲಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಆದರೂ ನಾನು ಸುಮ್ಮನಿದ್ದೆ. ಆದರೆ ಟಿವಿ ಚಾನೆಲ್‌ಗಳು ಕೂಡ ರಣವೀರ್ ಸಿಂಗ್ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬ ಸುದ್ದಿಯನ್ನು ಬಿತ್ತರಿಸತೊಡಗಿದವು. ಅದಕ್ಕಾಗಿಯೇ ನಾನು ಮಾತನಾಡಬೇಕಾಯಿತು. ರಣವೀರ್ ಸಿಂಗ್ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಪರವಾಗಿಲ್ಲ. ಆದರೆ ಅಂತಹ ಇಮೇಜ್ ಹೊಂದಿರುವ ವ್ಯಕ್ತಿ ಶಕ್ತಿಮಾನ್ ಆಗಲು ಸಾಧ್ಯವಿಲ್ಲ. ಮುಂದೆ ಏನಾಗುತ್ತದೆ ಎಂದು ನೋಡೋಣ' ಎಂದಿದ್ದಾರೆ ಮುಕೇಶ್ ಖನ್ನಾ.

ಶಕ್ತಿಮಾನ್ ಪಾತ್ರದಲ್ಲಿ ರಣವೀರ್ ಸಿಂಗ್ ಬೇಡವೆಂದು ಮುಕೇಶ್ ಖನ್ನಾ ಹಠಕ್ಕೆ ಬಿದ್ದಿರುವುದಕ್ಕೆ ಕಾರಣವೂ ಇದೆ. ಈ ಹಿಂದೆ ರಣವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್ ಮಾಡಿದ್ದರು. ಇದನ್ನು ಮುಖೇಶ್ ಖನ್ನಾ ಸಾರ್ವಜನಿಕವಾಗಿ ಟೀಕಿಸಿದ್ದರು. ಹೀಗೆ ಬೆತ್ತಲೆಯಾಗಿ ವರ್ತಿಸುವುದು ಭಾರತೀಯ ಸಂಸ್ಕೃತಿಯಲ್ಲ. ಅವರು ಬೆತ್ತಲೆಯಾಗಿ ಕಾಣುವುದು ಸರಿಯಿದ್ದರೆ ಅಂತಹ ದೇಶಕ್ಕೆ ಹೋಗಲಿ' ಎಂದು ಶಕ್ತಿಮಾನ್ ರಣವೀರ್ ವಿರುದ್ಧ ಟೀಕೆ ಮಾಡಿದ್ದರು.

ಹಾಗಾದರೆ ಶಕ್ತಿಮಾನ್ ಪಾತ್ರದಲ್ಲಿ ನಟಿಸೋದು ಯಾರು? ಈ ಬಗ್ಗೆ ಉತ್ತರಿಸುವ ಮುಖೇಶ್‌ ಖನ್ನಾ, ಶಕ್ತಿಮಾನ್ ಕೇವಲ ಸೂಪರ್ ಹೀರೋ ಅಲ್ಲ. ಅವರು ಸೂಪರ್ ಟೀಚರ್ ಕೂಡ ಹೌದು. ಆ ಪಾತ್ರ ಮಾಡುವ ನಟನಿಗೆ ಆ ಗುಣವಿರಬೇಕು. ಅವರು ಮಾತನಾಡಿದರೆ ಜನ ಕೇಳಬೇಕು. ರಣವೀರ್.. ನಿನಗೆ ಇಷ್ಟವಾದ ಸಿನಿಮಾಗಳನ್ನು ನೀನು ಮಾಡಬಹುದು. ಹೆಸರಿಗಷ್ಟೇ ಕೆಲವರು ಸ್ಟಾರ್ ಹೀರೋಗಳು.. ಆದರೆ ಇಮೇಜ್ ತುಂಬಾ ಕಡಿಮೆ. ಆ ಪಾತ್ರಕ್ಕೆ ಅಷ್ಟೇ ಪ್ರಬುದ್ಧತೆಯೂ ಬೇಕು ಎಂದಿದ್ದಾರೆ ಮುಕೇಶ್ ಖನ್ನಾ.