ಕನ್ನಡ ಸುದ್ದಿ  /  Entertainment  /  Social Media News Nam Mansu Namge Valledu Madudre Devru Enantira Fame Young Man New Video Goes Viral Mnk

Viral Video: ‘ನಮ್‌ ಮನ್ಸು ನಮ್ಗೆ ಒಳ್ಳೇದ್‌ ಮಾಡಿದ್ರೆ ದೇವ್ರು, ಏನಂತೀರಾ’ ಖ್ಯಾತಿಯ ಯುವಕನ ಹೊಸ ಹುಚ್ಚಾಟದ ವಿಡಿಯೋ ವೈರಲ್

ನಮ್‌ ಮನ್ಸು ನಮಗೆ ಒಳ್ಳೇದ್‌ ಮಾಡುದ್ರೆ ದೇವ್ರು, ಅಷ್ಟೇ ಸಾಕು. ಮರ ಯಾಕೆ? ನಮ್ಗೆ ಏನಂತೀರಾ? ತಾಯಿಗೆ ಕೈ ಮುಗ್ಸಿ.. ದೇವ್ರು ಒಳ್ಳೇದು ಮಾಡ್ತಾನೆ ನಮ್ಗೆ.. ಏನಂತೀರಾ? ಅಷ್ಟೇ.." ವಿಡಿಯೋ ಮೂಲಕ ಸುದ್ದಿ ಮಾಡಿದ್ದ ಯುವಕನ ಹೊಸ ವಿಡಿಯೋ ಮತ್ತೆ ವೈರಲ್‌ ಆಗಿದೆ. ಮೆಚ್ಚುಗೆ ಜತೆಗೆ ಟೀಕೆಗಳೂ ಕೇಳಿಬರುತ್ತಿವೆ.

Viral Video: ‘ನಮ್‌ ಮನ್ಸು ನಮ್ಗೆ ಒಳ್ಳೇದ್‌ ಮಾಡಿದ್ರೆ ದೇವ್ರು, ಏನಂತೀರಾ’ ಖ್ಯಾತಿಯ ಯುವಕನ ಹೊಸ ಹುಚ್ಚಾಟದ ವಿಡಿಯೋ ವೈರಲ್
Viral Video: ‘ನಮ್‌ ಮನ್ಸು ನಮ್ಗೆ ಒಳ್ಳೇದ್‌ ಮಾಡಿದ್ರೆ ದೇವ್ರು, ಏನಂತೀರಾ’ ಖ್ಯಾತಿಯ ಯುವಕನ ಹೊಸ ಹುಚ್ಚಾಟದ ವಿಡಿಯೋ ವೈರಲ್

Viral Video: ಸೋಷಿಯಲ್‌ ಮೀಡಿಯಾದಲ್ಲಿ ನಿತ್ಯ ಒಂದಲ್ಲ ಒಂದು ಕಂಟೆಂಟ್‌ ವೈರಲ್‌ ಆಗ್ತಾನೇ ಇರುತ್ತೆ. ಇತ್ತೀಚಿನ ಕೆಲ ದಿನಗಳಲ್ಲಿ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಕರಿಮಣಿ ಮಾಲೀಕ ನೀನಲ್ಲ ಹಾಡು. 1999ರಲ್ಲಿ ತೆರೆಕಂಡಿದ್ದ ಉಪೇಂದ್ರ ಸಿನಿಮಾದಲ್ಲಿನ ಈ ಹಾಡು ಆಗಿನ ಕಾಲದಲ್ಲೂ ಕ್ರೇಜ್‌ ಸೃಷ್ಟಿಸಿತ್ತು. ಇದೀಗ ಕೆಲ ತಿಂಗಳಿಂದ ಅದೇ ಹಾಡೇ ಎಲ್ಲರ ಬಾಯಲ್ಲಿ ನಲಿಯುತ್ತಿದೆ. ಅದರ ಜತೆಗೆ ನಮ್‌ ಮನ್ಸು ಒಳ್ಳೇದ್‌ ಮಾಡಿದ್ರೆ ದೇವ್ರು, ಏನಂತೀರಾ ಎಂಬ ಇನ್ನೊಂದು ವಿಡಿಯೋ ಸಹ ಟ್ರೆಂಡ್ ಸೃಷ್ಟಿಸಿತ್ತು. ಈಗ ಅದೇ ವಿಡಿಯೋದಲ್ಲಿ ಕಂಡಾತ ಹೊಸ ಅವತಾರದಲ್ಲಿ ಎದುರಾಗಿದ್ದಾನೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಲು ಎಷ್ಟೋ ಮಂದಿ ಏನೇನೋ ಮಾಡ್ತಾರೆ. ಚಿತ್ರ ವಿಚಿತ್ರ ಸಾಹಸಗಳನ್ನೂ ಮೈಮೇಲೆ ಎಳೆದುಕೊಂಡವರಿದ್ದಾರೆ. ಜೀವಕ್ಕೆ ಸಂಚಕಾರ ತಂದುಕೊಂಡ ಉದಾಹರಣೆಗಳೂ ಇವೆ. ಈ ನಡುವೆ, ವೈರಲ್‌ ಬಗ್ಗೆ ಯಾವುದೇ ಸುಳಿವಿಲ್ಲದೇ, ಹರಿದಾಡಿದ ವಿಡಿಯೋಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಆ ಪೈಕಿ, "ನಮ್‌ ಮನ್ಸು ಒಳ್ಳೇದ್‌ ಮಾಡಿದ್ರೆ ದೇವ್ರು, ಏನಂತೀರಾ" ಅನ್ನೋ ಡೈಲಾಗ್‌ ಹೇಳಿ ಸುದ್ದಿಯಾಗಿದ್ದ ಯುವಕ ಈಗ ಉಲ್ಟಾ ಟೀ ಶರ್ಟ್‌ ಹಾಕಿಕೊಂಡು, ಏನಂತೀರಾ ಎನ್ನುತ್ತಿದ್ದಾನೆ.

ಹೊಸ ವಿಡಿಯೋ ಮೂಲಕ ಆಗಮನ..

"ಮೇಡಂ ನಮ್‌ ಮನ್ಸು, ನಮಗೆ ಒಳ್ಳೇದ್‌ ಮಾಡುದ್ರೆ ದೇವ್ರು. ಅಷ್ಟೇ ಸಾಕು! ಮರ ಯಾಕೆ? ನಮ್ಗೆ ಏನಂತೀರಾ? ತಾಯಿಗೆ ಕೈ ಮುಗ್ಸಿ.. ದೇವ್ರು ಒಳ್ಳೇದು ಮಾಡ್ತಾನೆ ನಮ್ಗೆ.. ಏನಂತೀರಾ? ಅಷ್ಟೇ.." ಅನ್ನೋ ವಿಡಿಯೋ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿರುವ ಯುವಕ, ಈಗ ಮತ್ತೆ ಕಂಡಿದ್ದಾರೆ. ಆದರೆ, ಈ ಬಾರಿ ಶರ್ಟ್‌ ಉಲ್ಟಾ ಹಾಕಿಕೊಂಡು, ತಲೆ ಅಲ್ಲಾಡಿಸಿದ್ದಾರೆ. ವಿಚಿತ್ರವಾಗಿ ಡಾನ್ಸ್‌ ಮಾಡಿದ್ದಾರೆ. ಅಷ್ಟೇ ಅಲ್ಲ ಆರ್‌ಸಿಬಿ ಬಗ್ಗೆಯೂ ಈತನ ಬಾಯಿಂದ ಹೇಳಿಸಿದ್ದಾರೆ. ಈತನ ಡಾನ್ಸ್‌ಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಕೆಲವರು ಇವನನ್ನೂ ಹಾಳು ಮಾಡಿದ್ರಲ್ಲೋ ಎಂದು ಬೇಸರ ಹೊರ ಹಾಕುತ್ತಿದ್ದಾರೆ.

ನೆಟ್ಟಿಗರು ಏನಂದ್ರು?

ಈತನ ಡಾನ್ಸ್‌ ನೋಡಿದ ಎಷ್ಟೋ ಮಂದಿ, ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ವಿಡಿಯೋ ಮಾಡೋ ಜೋಷ್‌ನಲ್ಲಿ ಅಂಗಿ ಉಲ್ಟಾ ಹಾಕ್ಕೊಂಡಿಯಲ್ಲ ಗುರುವೇ ಎಂದು ಕೆಲವರು ಹೇಳಿದರೆ, ಇವನನ್ನೂ ಹಾಳು ಮಾಡಬೇಡ್ರಯ್ಯ.. ಲೇ ಅವ್ನ್ ಪಾಡಿಗ್ ಅವ್ನ್ ನಾ ಬಿಟ್ಟು ಬಿಡ್ರೋ ಹಾಳ್ ಮಾಡ್ಬೇಡಿ.. ಮೇಲಕ್ ಎತ್ಕೊಂಡ್ ಹೋಗಿ ಒಂದಿನ ಕೆಳಗ್ ಬಿಸಾಕ್ತಾರೆ ಅಷ್ಟೆ.. ಇವ್ನು ಹುಚ್ಚ ಆಗೋವರ್ಗು ನೀವೂ ಬಿಡಲ್ಲ ಅನ್ಸುತ್ತೆ.. ಪಾಪ ಹುಡುಗ ಚೆನ್ನಾಗಿದ್ದ ಇವಾಗ ಕಾಫಿನಾಡು ಚಂದು ಸೆಕೆಂಡ್ ಇನ್ನಿಂಗ್ಸ್ ತರ ಆಗ್ತಾನೆ ಅಷ್ಟೇ.. ಎಂಥೆಥವ್ರನ್ನ ಹೊಲಸು ಮಾಡ್ತು ಈ ಸೋಷಿಯಲ್‌ ಮೀಡಿಯಾ ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

ನೆಟ್ಟಿಗರಿಂದ ಕಟು ಟೀಕೆ..

ಸೋಷಿಯಲ್‌ ಮೀಡಿಯಾದಲ್ಲಿ ಚೂರು ಫೇಮಸ್‌ ಆಗ್ತಿದ್ದಂತೆ, ಅವರನ್ನೇ ದಾಳವಾಗಿ ಬಳಸಿಕೊಂಡು, ಅವರ ವಿಡಿಯೋ ಮಾಡಿ ಎಲ್ಲೆಂದರಲ್ಲಿ ಶೇರ್‌ ಮಾಡುವ ಕೆಲಸಗಳಾಗುತ್ತಿವೆ. ಈಗಾಗಲೇ ಅಂಥ ಎಷ್ಟೋ ಉದಾಹರಣೆಗಳು ಕಣ್ಣಮುಂದಿವೆ. ಈಗ ಈ ವ್ಯಕ್ತಿಯನ್ನೂ ವೀವ್ಸ್‌ ಮತ್ತು ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಕೆಲವರು ಬಳಸಿಕೊಳ್ಳುತ್ತಿದ್ದಾರೆ. ಆತನ ವಿಡಿಯೋಗಳನ್ನು ಶೇರ್‌ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಸೋಷಿಯಲ್‌ ಮೀಡಿಯಾದಲ್ಲೂ ಅಸಮಾಧಾನ ಹೊರಹಾಕುತ್ತಿದ್ದಾರೆ. ದಯವಿಟ್ಟು ಇವನನ್ನು ಇಲ್ಲಿಗೆ ಕೈ ಬಿಡಿ ಎಂದೂ ಕೆಲವರು ಮನವಿ ಮಾಡಿಕೊಳ್ಳುತ್ತಿದ್ದಾರೆ.