Rashmika Deepfake: ಡೀಪ್‌ಫೇಕ್ ವಿಡಿಯೋ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ; ತುಂಬಾ ನೋವಾಗುತ್ತಿದೆ, ಇದು 'ಅತ್ಯಂತ ಭಯಾನಕ' ಎಂದ ನಟಿ
ಕನ್ನಡ ಸುದ್ದಿ  /  ಮನರಂಜನೆ  /  Rashmika Deepfake: ಡೀಪ್‌ಫೇಕ್ ವಿಡಿಯೋ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ; ತುಂಬಾ ನೋವಾಗುತ್ತಿದೆ, ಇದು 'ಅತ್ಯಂತ ಭಯಾನಕ' ಎಂದ ನಟಿ

Rashmika Deepfake: ಡೀಪ್‌ಫೇಕ್ ವಿಡಿಯೋ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ; ತುಂಬಾ ನೋವಾಗುತ್ತಿದೆ, ಇದು 'ಅತ್ಯಂತ ಭಯಾನಕ' ಎಂದ ನಟಿ

Rashmika Mandanna's deepfake video: ವೈರಲ್​ ಆಗಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಪ್ರತಿಯೊಬ್ಬರಲ್ಲೂ ಆತಂಕ ಸೃಷ್ಟಿಸಿದೆ. ಈ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.

ಡೀಪ್‌ಫೇಕ್ ವಿಡಿಯೋ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ
ಡೀಪ್‌ಫೇಕ್ ವಿಡಿಯೋ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಕೇವಲ ರಶ್ಮಿಕಾಗೆ ಮಾತ್ರವಲ್ಲ ಎಲ್ಲಾ ಹೆಣ್ಣುಮಕ್ಕಳು, ಮಹಿಳೆಯರಲ್ಲೂ ಆತಂಕ ಸೃಷ್ಟಿಸಿದೆ. ಅಷ್ಟೇ ಅಲ್ಲ ಪುರುಷರು ಕೂಡ ಇದರ ವಿರುದ್ಧ ಜೋರಾದ ಧ್ವನಿ ಎತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಈ ವಿಡಿಯೋ ಬಗ್ಗೆ ಮೌನ ಮುರಿದಿದ್ದಾರೆ. ಇದು 'ಅತ್ಯಂತ ಭಯಾನಕ' ಎಂದ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ರಶ್ಮಿಕಾ, "ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗುತ್ತಿದೆ. ಆನ್‌ಲೈನ್‌ನಲ್ಲಿ ಹರಡಿರುವ ನನ್ನ ಡೀಪ್‌ಫೇಕ್ ವೀಡಿಯೊದ ಬಗ್ಗೆ ಮಾತನಾಡಲೇಬೇಕಾಗಿದೆ. ಈ ರೀತಿಯ ವಿಷಯವು ನನಗೆ ಮಾತ್ರವಲ್ಲ, ಪ್ರಾಮಾಣಿಕವಾಗಿ ಹೇಳುವುದಾದರೆ ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎನ್ನುವುದು ಇಂದು ತುಂಬಾ ತೊಂದರೆಗೆ ಗುರಿಯಾಗುವ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅತ್ಯಂತ ಭಯಾನಕವಾಗಿದೆ" ಎಂದಿದ್ದಾರೆ.

"ನನ್ನ ರಕ್ಷಣೆ ಮತ್ತು ಬೆಂಬಲಕ್ಕೆ ನಿಂತ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಇಂದು ಒಬ್ಬ ಮಹಿಳೆಯಾಗಿ ಮತ್ತು ನಟಿನಾಗಿ ನಾನು ಕೃತಜ್ಞಳಾಗಿದ್ದೇನೆ. ಆದರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಹೀಗಾಗಹಿದ್ದರೆ ನಾನು ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ನನಗೆ ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ" ಎಂದು ರಶ್ಮಿಕಾ ಆತಂಕ ವ್ಯಕ್ತಪಡಿಸಿದ್ದಾರೆ.

"ನಮ್ಮಲ್ಲಿ ಇನ್ನೂ ಹೆಚ್ಚಿನವರು ಇಂತಹ ಐಡೆಂಟಿಟಿ ಥೆಫ್ಟ್​ಗೆ ಗುರಿಯಾಗುವ ಮೊದಲು ನಾವು ಇಂದು ಸಮುದಾಯವಾಗಿ ಇದನ್ನ ತುರ್ತಾಗಿ ಪರಿಹರಿಸಬೇಕಾಗಿದೆ" ಎಂದು ರಶ್ಮಿಕಾ ಮಂದಣ್ಣ ಕರೆ ನೀಡಿದ್ದಾರೆ.

ಡೀಪ್‌ಫೇಕ್ ವಿಡಿಯೋದಲ್ಲಿ ಏನಿದೆ?

ಝರಾ ಪಾಟೀಲ್‌ ಎಂಬ ಬ್ರಿಟಿಷ್‌ ಭಾರತೀಯ ಮಹಿಳೆಯು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋಗೆ ಝರಾ ಪಾಟೀಲ್‌ ಮುಖದ ಬದಲು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್​ ಬಳಸಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಹೊಂದಿಸಲಾಗಿದೆ. ಈ ವಿಡಿಯೋ ಕಂಡಾಕ್ಷಣ ಉಡುಗೆ-ತೊಡುಗೆಯಲ್ಲಿ ಸಭ್ಯ ಎಂದು ಅನಿಸುವುದಿಲ್ಲ.

ಅಮಿತಾಬ್‌ ಬಚ್ಚನ್‌-ಕೇಂದ್ರ ಸಚಿವರ ಪ್ರತಿಕ್ರಿಯೆ

ರಶ್ಮಿಕಾ ಮಂದಣ್ಣರ ವಿಡಿಯೋವನ್ನು ಡೀಪ್‌ಫೇಕ್‌ ಮೂಲಕ ಸೃಷ್ಟಿಸಿರುವುದರ ಕುರಿತು ಅಮಿತಾಬ್‌ ಬಚ್ಚನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ವಿಡಿಯೋಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಇಂಟರ್‌ನೆಟ್‌ ಬಳಸುವ ಡಿಜಿಟಲ್‌ ನಾಗರಿಕರ ಸುರಕ್ಷತೆ ಮತ್ತು ನಂಬಿಕೆ ಉಳಿಸಲು ಬದ್ಧವಾಗಿದೆ ಎಂದ ಅವರು ಹೇಳಿ ಐಟಿ ನಿಯಮವನ್ನು ಒತ್ತಿ ಹೇಳಿದ್ದಾರೆ.

Whats_app_banner