Bigg Boss Kananda 11: ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿಯೇ ಈ ಥರ ಎಲಿಮಿನೇಷನ್ ಆಗಿದ್ದು ಇದೇ ಮೊದಲು!
Bigg Boss Kannada 11 Elimination: ಈ ವಾರ ಮನೆಯಿಂದ ಹೊರಹೋಗಲು ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದರು. ಗೋಲ್ಡ್ ಸುರೇಶ್, ಐಶ್ವರ್ಯಾ ಶಿಂಧೋಗಿ, ಭವ್ಯಾ ಗೌಡ, ಶಿಶಿರ್ ಶಾಸ್ತ್ರಿ, ತ್ರಿವಿಕ್ರಮ್, ಚೈತ್ರಾ ಕುಂದಾಪುರ, ಶೋಭಾ ಶೆಟ್ಟಿ ಇವರ ಪೈಕಿ ಒಬ್ಬರು ಮನೆಯಿಂದ ಹೊರಹೋಗಬೇಕಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಶೋಭಾ ಶೆಟ್ಟಿ ನಿರ್ಗಮಿಸಿದ್ದಾರೆ.
Bigg Boss Kananda 11: ಎಲ್ಲ ಅಂದುಕೊಂಡಂತೆ ಆಗಿದ್ದರೆ ಭಾನುವಾರದ (ಡಿ. 1) ಕಿಚ್ಚನ ಸೂಪರ್ ಸಂಡೆ ವಿಥ್ ಸುದೀಪ್ ಏಪಿಸೋಡ್‌ನಲ್ಲಿ ಐಶ್ವರ್ಯಾ ಶಿಂಧೋಗಿ ಅಥವಾ ಶಿಶಿರ್ ಶಾಸ್ತ್ರಿ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆಯಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ನಡೆದ ಬೆಳವಣಿಗೆಯಲ್ಲಿ ಶೋಭಾ ಶೆಟ್ಟಿ ಮನೆಯಿಂದ ಆಚೆ ನಡೆದಿದ್ದಾರೆ. ಈ ಮೂಲಕ ಇಲ್ಲಿಯವರೆಗಿನ 10 ಸೀಸನ್‌ಗಳ ಪೈಕಿ, ಇದೇ ಮೊದಲ ಸಲ ತಮ್ಮ ಸ್ವ ಇಚ್ಛೇಯಿಂದಲೇ ಮನೆಗೆ ನಡೆದ ಸ್ಪರ್ಧಿಯಾಗಿದ್ದಾರೆ ಶೋಭಾ ಶೆಟ್ಟಿ. ಅಷ್ಟಕ್ಕೂ ಶೋಭಾ ಅವರ ಈ ನಿರ್ಧಾರಕ್ಕೆ ಕಾರಣ ಏನು? ಹೀಗಿದೆ.
ಶೋಭಾ ಶೆಟ್ಟಿ ಔಟ್
ಈ ವಾರ ಮನೆಯಿಂದ ಹೊರಹೋಗಲು ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದರು. ಗೋಲ್ಡ್ ಸುರೇಶ್, ಐಶ್ವರ್ಯಾ ಶಿಂಧೋಗಿ, ಭವ್ಯಾ ಗೌಡ, ಶಿಶಿರ್ ಶಾಸ್ತ್ರಿ, ತ್ರಿವಿಕ್ರಮ್, ಚೈತ್ರಾ ಕುಂದಾಪುರ, ಶೋಭಾ ಶೆಟ್ಟಿ ಇವರ ಪೈಕಿ ಒಬ್ಬರು ಮನೆಯಿಂದ ಹೊರಹೋಗಬೇಕಿತ್ತು. ಅದರಂತೆ, ಶನಿವಾರ ಒಂದಷ್ಟು ಜನ ಸೇವ್ ಆದರು. ಭಾನುವಾರದ ಸೂಪರ್ ಸಂಡೇ ವಿತ್ ಬಾದ್‌ಶಾ ಸುದೀಪ ಸಂಚಿಕೆಯಲ್ಲಿ ಕಿಚ್ಚ ಒಬ್ಬೊಬ್ಬರನ್ನೇ ಸೇವ್ ಮಾಡುತ್ತ ಬಂದರು. ಮೊದಲಿಗೆ ಶೋಭಾ ಶೆಟ್ಟಿಯನ್ನು ಸೇವ್ ಆದರು. ಶೋಭಾ ಸೇವ್ ಆಗ್ತಿದ್ದಂತೆ, ವೋಟ್ ಹಾಕಿದ ಎಲ್ಲರಿಗೂ ಧನ್ಯವಾದ. ನನ್ನ ಆರೋಗ್ಯ ಸರಿಯಿಲ್ಲ. ಮುಂದೆ ಇನ್ನೂ ಚೆನ್ನಾಗಿ ಆಡುವೆ ಎಂದಿದ್ದರು.
ಇತ್ತ ಕೊನೆಗೆ ಉಳಿದವರು ಚೈತ್ರಾ ಕುಂದಾಪುರ, ಐಶ್ವರ್ಯಾ ಶಿಂಧೋಗಿ ಮತ್ತು ಶಿಶಿರ್. ಈ ಮೂವರಲ್ಲಿ ಚೈತ್ರಾ ಬಚಾವಾಗಿ, ಸುದೀರ್ಘ ಭಾಷಣ ನೀಡಿ, ಕರ್ನಾಟಕದ ಜನತೆಗೆ ಧನ್ಯವಾದ ಹೇಳಿದರು. ಇತ್ತ ಶಿಶಿರ್ ಮತ್ತು ಐಶ್ವರ್ಯಾ ಪೈಕಿ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರನಡೆಯಬೇಕಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ, ಶೋಭಾ ಶೆಟ್ಟಿ ಮಾತಿನ ಮಧ್ಯ ಆಗಮಿಸಿ, ನನಗೆ ಇಲ್ಲಿ ಇರಲು ಆಗ್ತಿಲ್ಲ ಎಂದರು. ಇಲ್ಲಿದೆ ಪೂರ್ತಿ ಮಾತುಕತೆ.
ಕೊನೇ ಕ್ಷಣದ ಮಾತುಕತೆ ಹೇಗಿತ್ತು
ಶೋಭಾ: ನಾನು ತುಂಬ ಲೋ ಆಗಿದ್ದೇನೆ. ಬ್ಲಾಂಕ್ ಆಗಿದ್ದೇನೆ. ನನಗೆ ಇಲ್ಲಿ ಇರಲು ಆಗ್ತಿಲ್ಲ. ನಾನು ಹೋಗ್ತಿನಿ ಸರ್
ಸುದೀಪ್: ವೋಟ್ ಹಾಕಿ ವೋಟ್ ಹಾಕಿ ಅಂತ ಮನೆಯಲ್ಲಿ ಎಲ್ಲರೂ ಭಿಕ್ಷೆ ಬೇಡ್ತಿರಿ. ಈಗ ವೋಟ್ ಹಾಕಿದ ಜನರಿಗೆ ನೀವು ಏನು ಮರ್ಯಾದೆ ಕೊಟ್ಟಂಗೆ ಆಯ್ತು? ಆಗಲೇ ಸೇವ್ ಆದಾಗ ಹೇಳಿದ್ದು ಸುಳ್ಳಾ? ಅದು ಡ್ರಾಮಾನಾ? ನನಗನಿಸುತ್ತಿದೆ ಇದು ಡ್ರಾಮಾ ಅಂತ
ಶೋಭಾ: ವೀಕ್ಷಕರ ನಿರೀಕ್ಷೆಯನ್ನು ನನಗೆ ರೀಚ್ ಮಾಡಲು ಆಗಲ್ಲ ಅಂತ ಅನಿಸ್ತಿದೆ ಸರ್.
ಸುದೀಪ್: ಸರಿ ಒಪ್ಪಿಕೊಳ್ತಿನಿ.. ಹಾಗಾದ್ರೆ ಹೊರಗಡೆ ಹೋಗಬೇಕಾ? ಕೊನೇ ಸಲ ಹೇಳ್ತಿದ್ದೀನಿ ಹೋಗಬೇಕಾ? ಸಿಂಪತಿ ಬೇಡ ಇಲ್ಲಿ.
ಸುದೀಪ್: ನನ್ನ ಜನಗಳ ವೋಟ್‌ಗೆ ಯಾರು ಮರ್ಯಾದೆ ಕೊಡಲ್ವೋ, ಅದರ ಸಿಂಪತಿ ಬೇಡಮ್ಮ. ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಇದೆಲ್ಲ ಒಂದು ದೊಡ್ಡ ಡ್ರಾಮಾ.
ಸುದೀಪ್: ಬಿಗ್ ಬಾಸ್‌ನಲ್ಲಿ ಈ ಥರ ಯಾವತ್ತೂ ನಡೆದಿಲ್ಲ. ಶಿಶಿರ್ ಮತ್ತು ಐಶ್ವರ್ಯಾ ನಿಮಗೆ ಇಲ್ಲೊಂದು ಅವಕಾಶ ಸಿಕ್ಕಿದೆ.
ಸುದೀಪ್: ಶೋಭಾ ನಿಮ್ಮ ಮಾತಿಗೆ ನಾನು ಬೆಲೆ ಕೊಟ್ಟೆ, ನೀವು ಜನರ ವೋಟ್‌ಗೆ ಬೆಲೆ ಕೊಡಲಿಲ್ಲ. 11 ವರ್ಷದಿಂದ ಇದನ್ನು ನಡೆಸ್ತಿದ್ದೇನೆ. ಏನು ಅಂತ ನನಗೆ ಗೊತ್ತಾಗಲ್ವಾ?
ಶೋಭಾ: ನನಗೆ ಆಗ್ತಾನೇ ಇಲ್ಲ ಸರ್..
ಸುದೀಪ್: ಶೋಭಾ ಅವರೇ ನಿಮ್ಮ ಮಾತಿಗೆ ಬೆಲೆ ಕೊಟ್ಟು, ನಿಮ್ಮನ್ನು ಮನೆಗೆ ಕಳಿಸಿಕೊಡ್ತಿದ್ದೇನೆ. ನೀವಿನ್ನು ಹೊರಡಬಹುದು.
ಶೋಭಾ: ಸರ್ ನನ್ನ ಹೆಲ್ತ್ ಬಗ್ಗೆ ನನಗೆ ಗೊತ್ತು.
ಸುದೀಪ್: ಶಿಶಿರ್ ಮತ್ತು ಐಶ್ವರ್ಯಾ ನೀವು ಸೇವ್ ಆಗಿದ್ದೀರಿ.. ಕಂಗ್ರಾಜುಲೇಷನ್ಸ್. ಮುಂದಿನ ವಾರ ಮತ್ತೆ ಸಿಗೋಣ. ಅಲ್ಲಿ ವರೆಗೂ ನಮಸ್ಕಾರ.
ವಿಭಾಗ