ಕನ್ನಡ ಸುದ್ದಿ  /  Entertainment  /  Case Registered In National Award Winner And Singer Vani Jairam's Death

Vani Jayaram: ವಾಣಿ ಜಯರಾಮ್‌ ಸಾವು ಸಹಜ ಸಾವಲ್ಲ!; ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಖಾಕಿ ಪಡೆ..

ವಾಣಿ ಜಯರಾಮ್‌ ಸಾವಿನ ಕುರಿತು ಇದೀಗ ಬಗೆಬಗೆ ಅನುಮಾನಗಳು ಮೂಡಿದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾಣಿ ಜಯರಾಮ್‌ ಸಾವು ಸಹಜ ಸಾವಲ್ಲ!; ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಖಾಕಿ ಪಡೆ..
ವಾಣಿ ಜಯರಾಮ್‌ ಸಾವು ಸಹಜ ಸಾವಲ್ಲ!; ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಖಾಕಿ ಪಡೆ..

Singer Vani Jayaram Death: ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಚೆನ್ನೈನ ತಮ್ಮ ನಿವಾಸದಲ್ಲಿ ಫೆ. 4ರಂದು ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಾಣಿ ಅವರ ತಲೆಗೆ ಗಾಯವಾಗಿತ್ತು. ಆ ಗಾಯದ ನೋವಿನಿಂದಲೇ ಅವರು ಸಾವನ್ನಪ್ಪಿರಬಹುದೇ ಎಂದು ಶಂಕಿಸಲಾಗಿದ್ದು, ಅಸಲಿ ಕಾರಣ ಇನ್ನೂ ಹೊರಬಿದ್ದಿಲ್ಲ. ಆದರೆ, ಈ ಸಾವಿನ ಕುರಿತು ಇದೀಗ ಬಗೆಬಗೆ ಅನುಮಾನಗಳು ಮೂಡಿದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

78 ವರ್ಷದ ವಾಣಿ ಜಯರಾಮ್‌ ವಯೋಸಹಜ ತುಂಬ ಕುಗ್ಗಿದ್ದರು. ಪತಿ ನಿಧನದ ಬಳಿಕ ಚೆನ್ನೈನ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅವರೊಂದಿಗೆ ಮನೆ ಕೆಲಸದವರೂ ಜತೆಗಿದ್ದರು. ಅವರ ಆರೈಕೆಯಲ್ಲಿ ತೊಡಗಿದ್ದರು. ಹೀಗಿರುವಾಗ ಫೆ. 4ರಂದು ಬೆಳಗ್ಗೆ ವಾಣಿ ಜಯರಾಮ್‌ ಸಾವನ್ನಪ್ಪಿದ್ದಾರೆ. ಎಂದಿನಂತೆ ಬೆಳಗಿನ ಕೆಲಸಕ್ಕೆ ಬಂದ ಮನೆಕೆಲಸದಾಕೆ ಮಲರ್ಕೊಡಿ, ಹಲವು ಬಾರಿ ಬಾಗಿಲು ತಟ್ಟಿದ್ದಾರೆ. ಆದರೆ, ಬಾಗಿಲು ತೆರೆಯದಿದ್ದಕ್ಕೆ, ಕೂಡಲೇ ತನ್ನ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಅತ್ತ ಮನೆಕೆಲಸದಾಕೆಯ ಪತಿ ಸಹ ವಾಣಿ ಅವರ ಫೋನ್‌ಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದಿದ್ದಕ್ಕೆ ಗಾಬರಿಯಾದ ದಂಪತಿ ಕೂಡಲೇ ಸಂಬಂಧಿಕರಿಗೆ ಮಾಹಿತಿ ರವಾನಿಸಿದ್ದಾರೆ. ವಾಣಿ ಸಹೋದರಿ ಉಮಾ ಅವರಿಗೆ ಘಟನೆ ವಿವರಿಸಿದ್ದಾರೆ. ಬಳಿಕ ನಕಲಿ ಕೀ ಬಳಸಿ ಮನೆ ಪ್ರವೇಶಿಸುತ್ತಿದ್ದಂತೆ, ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಗ ವಾಣಿ ಅವರ ಮೈಮೇಲೆ ಕೆಲವು ಗಾಯದ ಗುರುತುಗಳು ಪತ್ತೆಯಾಗಿವೆ.

ಇದು ಸಹಜ ಸಾವಲ್ಲ ಎಂದು ಅರಿತ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ಚೆನ್ನೈ ಪೊಲೀಸರು ವಾಣಿ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ವಿಧಿ ವಿಜ್ಞಾನ ತಂಡ ಮಾಹಿತಿ ಕಲೆಹಾಕುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ಬಳಿಕವೇ ಈ ಸಾವಿಗೆ ಅಸಲಿ ಕಾರಣ ಹೊರಬೀಳಲಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

78 ವರ್ಷದ ವಾಣಿ ಜಯರಾಮ್ ಅವರಿಗೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕೊಡಮಾಡುವ ಮೂರನೇ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಭೂಷಣ ನೀಡಲಾಗಿತ್ತು. ಆ ಖುಷಿಯ ಕ್ಷಣ ಮಾಸುವ ಮುನ್ನವೇ ಅವರ ಸಾವಿನ ಸುದ್ದಿ ಇದೀಗ ಇಡೀ ಚಿತ್ರರಂಗವನ್ನು ಶಾಕ್‌ಗೆ ದೂಡಿದೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು, ಬೆಂಗಾಲಿ, ಮಲಯಾಳಂ, ಹಿಂದಿ, ಭೋಜಪುರಿ, ಉರ್ದು ಸೇರಿ ಒಟ್ಟು 19 ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳಿಗೆ ವಾಣಿ ಜಯರಾಮ್‌ ಧ್ವನಿಯಾಗಿದ್ದಾರೆ. ಮೂರು ರಾಷ್ಟ್ರ ಪ್ರಶಸ್ತಿಯೂ ಇವರ ಮುಡಿಗೇರಿವೆ.

IPL_Entry_Point