CCL 2023: 8 ತಂಡಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್‌ಗೆ ಎಷ್ಟನೇ ಸ್ಥಾನ.. ಮುಂದಿನ ಪಂದ್ಯ ಯಾರ ಜೊತೆ?
ಕನ್ನಡ ಸುದ್ದಿ  /  ಮನರಂಜನೆ  /  Ccl 2023: 8 ತಂಡಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್‌ಗೆ ಎಷ್ಟನೇ ಸ್ಥಾನ.. ಮುಂದಿನ ಪಂದ್ಯ ಯಾರ ಜೊತೆ?

CCL 2023: 8 ತಂಡಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್‌ಗೆ ಎಷ್ಟನೇ ಸ್ಥಾನ.. ಮುಂದಿನ ಪಂದ್ಯ ಯಾರ ಜೊತೆ?

ಕರ್ನಾಟಕ ಬುಲ್ಡೋಜರ್ಸ್‌ ಇದುವರೆಗೂ ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌, ಚೆನ್ನೈ ರೈನೋಸ್‌ ತಂಡಗಳೊಂದಿಗೆ ಆಡಿದ್ದು, ಈ ಮೂರು ಪಂದ್ಯಗಳಲ್ಲೂ ರೋಚಕ ಗೆಲುವು ಸಾಧಿಸಿ 6 ಪಾಯಿಂಟ್‌ಗಳೊಂದಿಗೆ ಸಿಸಿಎಲ್‌ 2023 ಮ್ಯಾಚ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

ಅಂಕಪಟ್ಟಿನಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕ ಬುಲ್ಡೋಜರ್ಸ್
ಅಂಕಪಟ್ಟಿನಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕ ಬುಲ್ಡೋಜರ್ಸ್ (PC: karnatakabulldozersccl)

ಫೆಬ್ರವರಿ 18 ರಿಂದ ಆರಂಭವಾಗಿರುವ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಪಂದ್ಯಗಳು ರೋಚಕವಾಗಿದ್ದು ಸದ್ಯಕ್ಕೆ ಕರ್ನಾಟಕ ಬುಲ್ಡೋಜರ್ಸ್‌ ತಂಡ ಮೊದಲ ಸ್ಥಾನ ಏರಿ ನಿಂತಿದೆ. ಶನಿವಾರ (ಮಾರ್ಚ್‌ 4) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೂಡಾ ಕರ್ನಾಟಕ ಬುಲ್ಡೋಜರ್ಸ್‌, ಚೆನ್ನೈ ರೈನೋಸ್‌ ವಿರುದ್ಧ ಗೆಲುಗು ಸಾಧಿಸಿದೆ.

ಮೊದಲ ಸ್ಥಾನದಲ್ಲಿ ನಿಂತ ಕರ್ನಾಟಕ ಬುಲ್ಡೋಜರ್ಸ್‌

ಕರ್ನಾಟಕ ಬುಲ್ಡೋಜರ್ಸ್‌ ಇದುವರೆಗೂ ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌, ಚೆನ್ನೈ ರೈನೋಸ್‌ ತಂಡಗಳೊಂದಿಗೆ ಆಡಿದ್ದು, ಈ ಮೂರು ಪಂದ್ಯಗಳಲ್ಲೂ ರೋಚಕ ಗೆಲುವು ಸಾಧಿಸಿ 6 ಪಾಯಿಂಟ್‌ಗಳೊಂದಿಗೆ ಸಿಸಿಎಲ್‌ 2023 ಮ್ಯಾಚ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ. ಆಡಿದ 2 ಪಂದ್ಯಗಳಲ್ಲೂ ಗೆಲುವು ಕಂಡಿರುವ ಭೋಜ್‌ಪುರಿ ದಬಾಂಗ್ಸ್‌ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳಲ್ಲಿ ಎರಡು ಬಾರಿ ಗೆದ್ದಿರುವ ತೆಲುಗು ವಾರಿಯರ್ಸ್‌ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಬಾರಿ ಮಾತ್ರ ಗೆಲುಗು ಸಾಧಿಸಿರುವ ಚೆನ್ನೈ ರೈನೋಸ್‌ 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್‌ ದಿ ಶೇರ್ಸ್‌, ಮುಂಬೈ ಹೀರೋಸ್‌, ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌ ಕ್ರಮವಾಗಿ 5,6,7 ಹಾಗೂ 8ನೇ ಸ್ಥಾನದಲ್ಲಿದೆ.

ಶನಿವಾರದ ಪಂದ್ಯ ಹೇಗಿತ್ತು?

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ರೈನೋಸ್‌, ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಿಗೆ 84 ರನ್‌ ಕಲೆ ಹಾಕಿತು. ನಂತರ ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್‌ ತಂಡ, 109 ರನ್‌ ಬಾರಿಸಿ ಅಮೋಘ ಗೆಲುಗು ಸಾಧಿಸಿತು. ಡಾರ್ಲಿಂಗ್‌ ಕೃಷ್ಣ ಅರ್ಧ ಶತಕ ಬಾರಿಸಿದ್ದು 25 ರನ್‌ಗಳ ಮುನ್ನಡೆ ಸಾಧಿಸಲು ಕಾರಣವಾಯ್ತು . ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಚೆನ್ನೈ ರೈನೋಸ್‌, 6 ವಿಕೆಟ್‌ಗಳ ನಷ್ಟಕ್ಕೆ 125 ರನ್‌ ಗಳಿಸಿತು. ನಂತರ ಬ್ಯಾಟಿಂಗ್‌ ಮಾಡಿದ ಕರ್ನಾಟಕ ಬುಲ್ಡೋಜರ್ಸ್‌ 2 ಓವರ್‌ಗಳವರೆಗೂ ರನ್‌ ಗಳಿಸುವಲ್ಲಿ ವಿಫಲರಾದರೂ ಮುಂದಿನ ಓವರ್‌ಗಳಲ್ಲಿ ಉತ್ತಮ ಆಟ ಆಡಿ ನೀಡಿದ ಗುರಿಯನ್ನು ಪೂರೈಸಿ ಪಂದ್ಯದಲ್ಲಿ ಗೆಲುವು ಸಾಧಿಸಿತು. ಇದೀಗ ಕರ್ನಾಟಕ ಬುಲ್ಡೋಜರ್ಸ್‌ ಸೆಮಿ ಫೈನಲ್‌ ಹಾದಿ ಸುಗಮವಾಗಿದೆ. ಅದಕ್ಕೂ ಮುನ್ನ ಮಾರ್ಚ್‌ 11 ರಂದು ಪಂಜಾಬ್‌ ದಿ ಶೇರ್ಸ್‌ ವಿರುದ್ಧ ಮತ್ತೊಂದು ಪಂದ್ಯ ಆಡಲಿದೆ.

ಮತ್ತಷ್ಟು ಮನರಂಜನೆ/ಕ್ರೀಡಾ ಸುದ್ದಿಗಳು

ಕೆಸಿಸಿ, ಸಿಸಿಎಲ್‌ ಬಳಿಕ ಟಿಪಿಎಲ್‌ಗೆ ಸಿದ್ಧವಾಗ್ತಿದೆ ವೇದಿಕೆ; ಮಾರ್ಚ್‌ನಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ -2

ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಕಳೆದ ಬಾರಿ ಅದ್ದೂರಿಯಾಗಿ ಆರಂಭಗೊಂಡಿದ್ದ ಟಿಪಿಎಲ್ ಇದೀಗ ಸೀಸನ್ -2ಕ್ಕೆ ರೆಡಿಯಾಗಿದೆ. ಮಾರ್ಚ್‌ನಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-2 ಆರಂಭವಾಗುತ್ತಿದೆ. ಸೀಸನ್ 2ಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಮಾರ್ಚ್ 12ರಿಂದ 15ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಈ ಸುದ್ದಿಯನ್ನು ಪೂರ್ತಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಸಿಸಿಎಲ್ ಅಖಾಡದಲ್ಲಿ ಕರ್ನಾಟಕ ಬುಲ್ಡೋಜರ್ಸ್‌... ಈ ಬಾರಿಯ ಪಂದ್ಯಾವಳಿ ಮಾಹಿತಿ ಇಲ್ಲಿದೆ

ಮೊದಲ ದಿನ ಬೆಂಗಾಲ್ ಟೈಗರ್ಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಗೆಲುವು ಸಾಧಿಸಿದೆ. ಬೆಂಗಳೂರು, ಜೈಪುರ್‌, ಹೈದರಾಬಾದ್‌, ರಾಯ್‌ಪುರ್‌, ಜೋಧ್‌ಪುರ್‌ ಹಾಗೂ ತಿರುವನಂತಪುರಂನಲ್ಲಿ ಪಂದ್ಯಗಳು ನಡೆಯಲಿವೆ. ಮಾರ್ಚ್‌ 19 ರಂದು ಫೈನಲ್‌ ನಡೆಯಲಿದೆ. ಕೊರೊನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸಿಸಿಎಲ್‌ ನಡೆದಿರಲಿಲ್ಲ. ಸಿಸಿಎಲ್‌ ಕುರಿತ ಪೂರ್ತಿ ಮಾಹಿತಿಗೆ ಈ ಲಿಂಕ್‌ ಒತ್ತಿ.

Whats_app_banner