Guruprasad Death: ನವರಸ ನಾಯಕ ಜಗ್ಗೇಶ್ ಅವರಿಗೆ ಹತ್ತು ಪ್ರಶ್ನೆಗಳು; ಗುರುಪ್ರಸಾದ್‌ ಸಾವಿಗಿಂತ ನಿಮ್ಮ ಬದುಕೇ ಭಯಾನಕ!
ಕನ್ನಡ ಸುದ್ದಿ  /  ಮನರಂಜನೆ  /  Guruprasad Death: ನವರಸ ನಾಯಕ ಜಗ್ಗೇಶ್ ಅವರಿಗೆ ಹತ್ತು ಪ್ರಶ್ನೆಗಳು; ಗುರುಪ್ರಸಾದ್‌ ಸಾವಿಗಿಂತ ನಿಮ್ಮ ಬದುಕೇ ಭಯಾನಕ!

Guruprasad Death: ನವರಸ ನಾಯಕ ಜಗ್ಗೇಶ್ ಅವರಿಗೆ ಹತ್ತು ಪ್ರಶ್ನೆಗಳು; ಗುರುಪ್ರಸಾದ್‌ ಸಾವಿಗಿಂತ ನಿಮ್ಮ ಬದುಕೇ ಭಯಾನಕ!

Director Guruprasad Death: ನಟ ಜಗ್ಗೇಶ್‌ ಗುರುಪ್ರಸಾದ್‌ ನಿಧನದ ಬೆನ್ನಲ್ಲೇ, ಅವರ ಜತೆಗೆ ಕೆಲಸ ಮಾಡಿದ ಅನುಭವ ಸೇರಿ, ಅನುಭವಿಸಿದ ಯಾತನೆಯನ್ನೂ ಬಿಚ್ಚಿಟ್ಟಿದ್ದಾರೆ. ಈ ನಡುವೆ ಜಗ್ಗೇಶ್‌ ಆಡಿದ ಆ ಮಾತುಗಳ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಈ ನಡುವೆ ಒಂದಷ್ಟು ಪ್ರಶ್ನೆಗಳೂ ಅವರೆಡೆಗೆ ಬಂದಿವೆ.

ನವರಸ ನಾಯಕ ಜಗ್ಗೇಶ್ ಅವರಿಗೆ ಹತ್ತು ಪ್ರಶ್ನೆಗಳು
ನವರಸ ನಾಯಕ ಜಗ್ಗೇಶ್ ಅವರಿಗೆ ಹತ್ತು ಪ್ರಶ್ನೆಗಳು

Guruprasad Death: ಕನ್ನಡ ಚಿತ್ರರಂಗದ ಹಿರಿಯ ನಟರ ಪೈಕಿ ಜಗ್ಗೇಶ್ ಸಹ ಒಬ್ಬರು. ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ನಂತರದಲ್ಲಿ ಅವರು ಮಾಧ್ಯಮದ ಮುಂದೆ ಮಾತನಾಡುತ್ತಿರುವ ರೀತಿ ನೋಡಿದರೆ ಅವರ ಎದುರಾ ಎದುರು ಕೂತು ಕೆಲವು ಪ್ರಶ್ನೆಗಳನ್ನು ಕೇಳಬೇಕು ಅನ್ನಿಸಿತು. ಆದರೆ ಅವರು ಹಿರಿಯ ನಟರು, ಬಿಜೆಪಿ ಮುಖಂಡರು, ರಾಜ್ಯಸಭಾ ಸದಸ್ಯರು ಇಷ್ಟೆಲ್ಲ ಆಗಿರುವವರು ನೇರನೇರ ಮಾತಿಗೆ ಸಿಗುವುದು ಹಾಗೂ ಅವರೆದುರು ನಿಷ್ಠುರವಾಗಿ ಪ್ರಶ್ನೆ ಕೇಳುವುದು ಕಷ್ಟವಾದ್ದರಿಂದ ಈ ರೀತಿ ಒಂದು ಆನ್ ಲೈನ್ ಮಾಧ್ಯಮದ ಮೂಲಕ ಕೇಳುತ್ತಿದ್ದೇನೆ. ಇಲ್ಲಿರುವುದು ಬರೀ ಪ್ರಶ್ನೆಗಳು. ಹಾಗೇ ಇವುಗಳಿಗೆ ಕೆಲವಕ್ಕೆ ಜನರಿಗೆ ಉತ್ತರ ದೊರೆಯಬಹುದು ಅಥವಾ ಜಗ್ಗೇಶ್ ಅವರೇ ಉತ್ತರಿಸಿದರೂ ಸರಿ. ಇಲ್ಲಿವೇ ಶ್ರೀನಿವಾಸ ಮಠ ಅವರು HT ಕನ್ನಡಕ್ಕೆ ನೀಡಿದ 10 ಪ್ರಶ್ನೆಗಳು.

ನಟ ಜಗ್ಗೇಶ್‌ಗೆ ಓದುಗರ 10 ಪ್ರಶ್ನೆ

  1. ತರ್ಲೆ ನನ್ಮಗ ಸಿನಿಮಾದಿಂದ ತೋತಾಪುರಿ- ಒಂದು, ತೋತಾಪುರಿ- ಎರಡು ಇಲ್ಲಿಯ ತನಕ ಜಗ್ಗೇಶ್ ಸಿನಿಮಾಗಳು ಅಂದರೆ ದ್ವಂದ್ವಾರ್ಥ ಸಂಭಾಷಣೆಗೆ ಹೆಸರು ಅಲ್ಲವೆ? ಅದನ್ನು ನಿರಾಕರಿಸುತ್ತೀರಾ? ರಂಗನಾಯಕ ಸಿನಿಮಾದಿಂದ ಮಾತ್ರ ನಿಮಗೆ ಹೆಸರು ಕೆಡ್ತಾ?
  2. ಕಾಳಿದಾಸ ಕನ್ನಡ ಮೇಷ್ಟ್ರು, ನೈನ್ ಎಂ.ಎಂ., ಪ್ರೀಮಿಯರ್ ಪದ್ಮಿನಿ ಜೊತೆಗೆ ನೀರ್ ದೋಸೆ, ತೋತಾಪುರಿಗಳಲ್ಲಿ ಹೇಳಿರುವ ಸಂಭಾಷಣೆ ಬಹಳ ಸಭ್ಯವಾಗಿದೆಯಾ
  3. ವಿಖ್ಯಾತ್ ಅನ್ನೋ ನಿರ್ಮಾಪಕರು ಗುರುಪ್ರಸಾದ್ ಅವರನ್ನು ಕರೆದುಕೊಂಡು ನಿಮ್ಮ ಹತ್ತಿರ ಬಂದರೋ ಅಥವಾ ನೀವು ಗುರುಪ್ರಸಾದ್ ಹತ್ತಿರ ಸಿನಿಮಾ ಮಾಡಿಸುವುದಕ್ಕೆ ಹೋದರಾ?
  4. ಗುರುಪ್ರಸಾದ್ ಅವರಿಗೆ ರಂಗನಾಯಕದಲ್ಲಿ ತೊಂಬತ್ತು ಲಕ್ಷ ಸಂಭಾವನೆ ಸಿಕ್ಕಿತು, ಅದೇ ಸಿನಿಮಾಗೆ ನಿಮಗೆ ಎಷ್ಟು ಸಂಭಾವನೆ ಸಿಕ್ಕಿದೆ?
  5. ನಿಮ್ಮ ಸಿನಿಮಾ ಜೀವನದ ಹತ್ತು ಅತ್ಯುತ್ತಮ ಚಿತ್ರಗಳ ಹೆಸರು ಹೇಳಿ, ಅದರಲ್ಲಿ ಮೊದಲ ಎರಡು ಸಿನಿಮಾ ಯಾವ ನಿರ್ದೇಶಕರದು? ಹಾಗೂ ಆ ಸಿನಿಮಾಗಳು ನಿಮ್ಮ ಸಿನಿ ಜೀವನದ ಎಷ್ಟನೇ ಸಿನಿಮಾಗಳು?
  6. ಮಾರಿಕಣ್ಣು ಹೋರಿ ಮ್ಯಾಗೆ ಅನ್ನೋ ಸಿನಿಮಾದಲ್ಲಿ ನಿಮ್ಮ ಪಾತ್ರ ಹಾಗೂ ಇಡೀ ಕಥೆ ಏನು ಹಾಗೂ ಅದರಲ್ಲಿ ಮಡಿ ಹೆಂಗಸೊಬ್ಬರಿಗೆ ಮದ್ಯ ಕುಡಿಸುವ ದೃಶ್ಯವಿದೆ. ಅವೆಲ್ಲ ಸದಭಿರುಚಿಯಾ?
  7. ಚಿತ್ರರಂಗದ ಎಲ್ಲರನ್ನೂ ತಮ್ಮ ಸಿನಿಮಾದಲ್ಲಿ ಗುರುಪ್ರಸಾದ್ ಕಾಲೆಳೆಯುತ್ತಾ ಇದ್ದರು, ಆದರೆ ಒಂದು ಸಿನಿಮಾಗೆ ವಿರುದ್ಧವಾಗಿ ಮತ್ತೊಂದು ಸಿನಿಮಾವನ್ನೇ ಮಾಡಿದರಲ್ಲ, ಅದೇ ಉಪೇಂದ್ರ ವಿರುದ್ಧ ಜಿತೇಂದ್ರ ಅಂತ. ಆಗ ನಿಮಗೆ ಇದ್ದ ಘನಂಧಾರಿ ಉದ್ದೇಶ ಏನು?
  8. ನಿಮ್ಮ ಅದೆಷ್ಟೋ ಸಿನಿಮಾಗಳು ರೀಮೇಕ್ ಹಕ್ಕನ್ನು ಪಡೆಯದೆ ಇತರ ಭಾಷೆಗಳಿಂದ ಕನ್ನಡಕ್ಕೆ ತಂದಂಥವು, ಆ ವಿಚಾರದಲ್ಲಿ ನಿಮ್ಮ ಬಾಧ್ಯತೆ- ಜವಾಬ್ದಾರಿ, ನೈತಿಕತೆ ಎಷ್ಟು?
  9. ಬಹುತೇಕ ನಿಮ್ಮ ಸಿನಿಮಾ ಕೆರಿಯರ್ ಮುಗಿದೇ ಹೋಗಿದ್ದಾಗ ಬಂದ ಸಿನಿಮಾ ಮಠ. ಗುರುಪ್ರಸಾದ್ ನಿರ್ದೇಶನದ ಆ ಚಿತ್ರ ನಿಮಗೆ ಮತ್ತೆ ಬದುಕು ಕೊಟ್ಟಿತು. ಈ ಹೇಳಿಕೆಯನ್ನು ಒಪ್ಪಿಕೊಳ್ತೀರಾ?
  10. ವೇದಿಕೆ ಮೇಲೆ ನೀವು ಹೊಗಳಿದ ಹಾಗೂ ಪರವಾಗಿ ಮಾತನಾಡಿದ ಎಷ್ಟೋ ವಿಷಯಗಳನ್ನು ಆ ನಂತರ “ಪ್ಲೇಟ್” ಬದಲಾಯಿಸಿದ್ದೀರಾ. ಒಂದು ಉದಾಹರಣೆ ಡ್ರೋಣ್ ಪ್ರತಾಪ್. ಹೊಸ ಸೇರ್ಪಡೆ ಗುರುಪ್ರಸಾದ್. ಈ ಮಧ್ಯೆ ದರ್ಶನ್ ಸೇರಿದಂತೆ ಹಲವು ಹೆಸರಿವೆ. ಇದನ್ನು ಒಪ್ಪುತ್ತೀರಾ ಅಥವಾ ನಿರಾಕರಿಸುತ್ತೀರಾ?

ಪ್ರಶ್ನೆಗಳು: ಶ್ರೀನಿವಾಸ ಮಠ

Whats_app_banner