ಕನ್ನಡ ಸುದ್ದಿ  /  Entertainment  /  Does One More Star Actor Will Act In Arjun Janya Direction 45 Movie

Arjun Janya Direction Movie: '45' ಚಿತ್ರದಲ್ಲಿ ಶಿವಣ್ಣ-ಉಪ್ಪಿ ಜೊತೆಗೆ ಮತ್ತೊಬ್ಬ ಸ್ಟಾರ್‌ ನಟ ಇರಲಿದ್ದಾರಾ...ಯಾರಿರಬಹುದು..?

ಅರ್ಜುನ್‌ ಜನ್ಯಾ ನಿರ್ದೇಶನದ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಹಾಗೂ ರಿಯಲ್‌ ಸ್ಟಾರ್‌ ಉಪೇಂದ್ರ ಜೊತೆಗೆ ಮತ್ತೊಬ್ಬ ಸ್ಟಾರ್‌ ನಟ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಚಿತ್ರತಂಡ ಮಾತ್ರ ಇದನ್ನು ಅಧಿಕೃತವಾಗಿ ಪ್ರಕಟಿಸಿಸಿಲ್ಲ.

ಅರ್ಜುನ್‌ ಜನ್ಯಾ ಚಿತ್ರದಲ್ಲಿ ನಟಿಸಲಿರುವ ಶಿವರಾಜ್‌ಕುಮಾರ್‌, ಉಪೇಂದ್ರ
ಅರ್ಜುನ್‌ ಜನ್ಯಾ ಚಿತ್ರದಲ್ಲಿ ನಟಿಸಲಿರುವ ಶಿವರಾಜ್‌ಕುಮಾರ್‌, ಉಪೇಂದ್ರ

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ ಎಂಬ ವಿಚಾರ ಹೊರ ಬಿದ್ದಾಗಿನಿಂದ ಸಿನಿಪ್ರಿಯರು ಈ ಪ್ರಾಜೆಕ್ಟ್‌ ಬಗ್ಗೆ ಬಹಳ ಕುತೂಹಲ ವ್ಯಕ್ತಪಡಿಸಿದ್ದರು. ಅದರಲ್ಲೂ ಅರ್ಜುನ್‌ ಜನ್ಯಾ, ತಮ್ಮ ಚೊಚ್ಚಲ ಸಿನಿಮಾದಲ್ಲಿ ಶಿವಣ್ಣನಿಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟುಗೊಳಿಸಿತ್ತು.

ಶಿವರಾಜ್‌ಕುಮಾರ್‌ ಜೊತೆಗೆ ಉಪೇಂದ್ರ ಕೂಡಾ ಈ ಚಿತ್ರದಲ್ಲಿ ಇರಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. ಇದೀಗ ಈ ಸುದ್ದಿ ಕೂಡಾ ಕನ್ಫರ್ಮ್‌ ಆಗಿದೆ. ಶಿವರಾಜ್‌ಕುಮಾರ್‌ ಹಾಗೂ ಉಪೇಂದ್ರ ಬಹಳ ವರ್ಷಗಳ ನಂತರ ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ಈ ಜೋಡಿಯನ್ನು ಮೂರನೇ ಬಾರಿ ಒಟ್ಟಾಗಿ ನೋಡಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ. ಜುಲೈ 12, ಶಿವರಾಜ್‌ಕುಮಾರ್‌ ಹುಟ್ಟುಹಬ್ಬದಂದು ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಜೊತೆಗೆ ಚಿತ್ರಕ್ಕೆ 45 ಎಂಬ ಶೀರ್ಷಿಕೆ ಕೂಡಾ ಫೈನಲ್‌ ಮಾಡಲಾಗಿತ್ತು. ಈಗ ಚಿತ್ರದ ಬಗ್ಗೆ ಮತ್ತೊಂದು ಹೊಸ ಸುದ್ದಿ ಹರಿದಾಡುತ್ತಿದೆ.

ಅರ್ಜುನ್‌ ಜನ್ಯಾ ನಿರ್ದೇಶನದ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಹಾಗೂ ರಿಯಲ್‌ ಸ್ಟಾರ್‌ ಉಪೇಂದ್ರ ಜೊತೆಗೆ ಮತ್ತೊಬ್ಬ ಸ್ಟಾರ್‌ ನಟ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಚಿತ್ರತಂಡ ಮಾತ್ರ ಇದನ್ನು ಅಧಿಕೃತವಾಗಿ ಪ್ರಕಟಿಸಿಸಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ, ಇವರಿಬ್ಬರ ಜೊತೆ ನಟಿಸುತ್ತಿರುವ ಆ ನಟ ಯಾರಿರಬಹುದು..? ಎಂಬ ಪ್ರಶ್ನೆ ಸಿನಿಪ್ರಿಯರಿಗೆ ಕಾಡುತ್ತಿದೆ. ಒಟ್ಟಿನಲ್ಲಿ ಇದು ನಿಜವಿರಬಹುದಾ ಅಥವಾ ಗಾಳಿ ಸುದ್ದಿ ಇರಬಹುದಾ ಎಂಬುದನ್ನು ತಿಳಿಯಲು ಸಿನಿಮಾದ ಮುಂದಿನ ಅಪ್‌ಡೇಟ್‌ವರೆಗೂ ಕಾಯಬೇಕು.

ಶಿವಣ್ಣ ಮತ್ತು ಉಪೇಂದ್ರ ಜೊತೆಯಾಗಿ ನಟಿಸುತ್ತಿರುವುದು ಮೂರನೇ ಬಾರಿ , ಆದರೆ ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ 'ಓಂ ' ಚಿತ್ರದಲ್ಲಿ ಶಿವಣ್ಣ ಅವರಿಗೆ ಉಪೇಂದ್ರ ಆಕ್ಷನ್‌ ಕಟ್‌ ಹೇಳಿದ್ದರು. ನಂತರ ಇಬ್ಬರೂ ಒಟ್ಟಾಗಿ 'ಪ್ರೀತ್ಸೇ ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ನಂತರ ಮತ್ತೆ 'ಲವ-ಕುಶ ' ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸಿದ್ದರು. ಈಗ ಸುದೀರ್ಘ ಗ್ಯಾಪ್‌ ನಂತರ ಈ ಇಬ್ಬರೂ ಸ್ಟಾರ್‌ಗಳೂ '45 ' ಚಿತ್ರದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ.

ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಣೆಯಾದ '45 ' ಸಿನಿಮಾ ಈಗ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಡಿಸೆಂಬರ್‌ನಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಕೂಡಾ ಹೊತ್ತಿದ್ದಾರೆ. ಸಿನಿಮಾ ಆರಂಭವಾಗುವುದಕ್ಕೆ ಮುನ್ನವೇ ಚಿತ್ರದ ಆಡಿಯೋ ಹಕ್ಕುಗಳಿಗೆ ಭಾರೀ ಡಿಮ್ಯಾಂಡ್ ಉಂಟಾಗಿದೆ. ಗಾಳಿಪಟ-2 ನಿರ್ಮಾಪಕ ರಮೇಶ್‌ ರೆಡ್ಡಿ, '45' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

IPL_Entry_Point