Ayalaan Review: ಪ್ರಾಣಿಗಳಿಗೆ ಆಗುತ್ತಿರುವ ಹಾನಿ ತಪ್ಪಿಸಲು ರೈತನ ಸಾಹಸ; ಹೇಗಿದೆ ತಮಿಳಿನ ಅಯಲಾನ್ ಸಿನಿಮಾ
Ayalaan Movie Review: ಶಿವಕಾರ್ತಿಕೇಯನ್, ರಾಕುಲ್ ಪ್ರೀತ್ ಸಿಂಗ್ ಜೋಡಿಯಾಗಿ ನಟಿಸಿರುವ ಅಯಲಾನ್ ಈಚೆಗೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಏಲಿಯನ್ ಹಿನ್ನಲೆಯ ಈ ಚಿತ್ರ ಕಾಲಿವುಡ್‌ನಲ್ಲಿ ಸಕ್ಸಸ್ ಆಗಿದೆ.
ನಟ ಶಿಕಾರ್ತಿಕೇಯನ್ (Actor SivaKarthikeyan) ನಟಿಸಿರುವ ತಮಿಳು ಸಿನಿಮಾ ಅಯಲಾನ್ (Ayalaan Movie Review) ಸಂಕ್ರಾಂತಿಯ ಗಿಫ್ಟ್ ಆಗಿ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಏಲಿಯನ್ ಹಿನ್ನಲೆಯನ್ನು ಇಟ್ಟುಕೊಂಡು ಮಾಡಿರುವ ಈ ಕಾಮಿಡಿ ಆ್ಯಕ್ಷನ್ ಎಂಟರ್‌ಟೈನರ್ ಆಗಿ ತೆರೆಕಂಡ ಈ ಚಿತ್ರದ ಮೂಲಕ ಆರ್ ರವಿಕುಮಾರ್ ನಿರ್ದೇಶಕರಾಗಿ ಕಾಲಿವುಡ್ ಪ್ರವೇಶಿಸಿದ್ದಾರೆ.
ಶಿವಕಾರ್ತಿಕೇಯನ್ ಅವರಿಗೆ ಈ ಮೂವಿಯಲ್ಲಿ ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಚಿತ್ರೀಕರಣಕ್ಕೆ ಸುಮಾರು 6 ವರ್ಷಗಳ ಸಮಯ ತೆಗೆದುಕೊಂಡಿದ್ದ ಅಯಲಾನ್ ಥಿಯೇಟರ್‌ಗಳಲ್ಲಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸದ್ಯದಲ್ಲೇ ಸನ್‌ನೆಕ್ಸ್ಟ್ ಮೂಲಕ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಬರಲಿದೆ.
ಪ್ರಕೃತಿಯ ಜೊತೆಗೆ ಪ್ರಾಣಿಗಳೊಂದಿಗೆ ರೈತನ ನಂಟು
ಸಿನಿಮಾದಲ್ಲಿ ತಮಿಜ್ ಹೆಸರಿನ ಶಿವಕಾರ್ತಿಕೇಯನ್ ಒಬ್ಬ ರೈತ. ಪ್ರಕೃತಿಯ ಜೊತೆಗೆ ಪ್ರಾಣಿಗಳೆಂದರೆ ಈತನಿಗೆ ಜೀವ. ಕೀಟಗಳು, ಪ್ರಾಣಿಗಳಿಗೆ ಹಾನಿ ಮಾಡುವ ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಬಳಸುವ ಬದಲು ಸಾವಯವವಾಗಿ ಬೆಳೆಗಳನ್ನು ಬಳೆಯುತ್ತಾರೆ. ಆದರೆ ಇದರಲ್ಲಿ ಲಾಭಕ್ಕಿಂತ ನಷ್ಟವನ್ನೇ ಕಾಣಬೇಕಾಗುತ್ತದೆ. ಆದರೂ ಸಂತೋಷದಿಂದ ಜೀವನ ನಡೆಸುತ್ತಿರುತ್ತಾರೆ. ಈತನ ತಾಯಿ (ಭಾನುಪ್ರಿಯಾ) ಸಾಲಗಳು ಹೆಚ್ಚಾಗುತ್ತಿವೆ ಎಂದು ಸುಳ್ಳು ಹೇಳಿ ತಮಿಜ್‌ನನ್ನು ನಗರಕ್ಕೆ ಕಳುಹಿಸುತ್ತಾಳೆ. ಸರ್ಪ್ರೈಸ್ ಪಾರ್ಟಿ ಏರ್ಪಡಿಸುವ ಗ್ಯಾಂಗ್‌ನಲ್ಲಿ (ಕರುಣಾಕರನ್ ಮತ್ತು ಯೋಗಿಬಾಬು) ಈತ ಸೇರಿಕೊಳ್ಳುತ್ತಾನೆ.
ವಿಜ್ಞಾನಿ ಆರ್ಯನ್ (ಶರದ್ ಖೇಲ್ಕರ್) ಇಂಧನಕ್ಕೆ ಪರ್ಯಾಯವಾಗಿ ನೋವಾ ಅನಿಲವನ್ನು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿರುತ್ತಾರೆ. ನೋವಾ ಅನಿಲವನ್ನು ಹೊರತೆಗೆಯಲು ಸ್ಪಾರ್ಕ್ ಎಂಬ ಕ್ಷುದ್ರಗಹವನ್ನು ಬಳಸುತ್ತಾರೆ. ಆಫ್ರಿಕಾದಲ್ಲಿ ಈತನು ಮಾಡುವ ಪ್ರಯೋಗದಿಂದ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಇದಾದ ಬಳಿಕ ಮತ್ತೊಮ್ಮೆ ಯಾರಿಗೂ ಗೊತ್ತಾಗದಂತೆ ಗಣಿಯಲ್ಲಿ ರಹಸ್ಯವಾಗಿ ನೋವಾ ಗ್ಯಾಸ್ ಪ್ರಯೋಗವನ್ನು ಮಾಡುತ್ತಾರೆ. ವಿಜ್ಞಾನಿ ಬಳಿ ಇರುವ ಸ್ಪಾರ್ಕ್ ಅನ್ನು ಹುಡುಕುತ್ತಾ ಬೇರೆ ಗ್ರಹದಿಂದ ಟ್ಯಾಟೊ ಎಂಬ ಏಲಿಯನ್ ಭೂಮಿಗೆ ಬರುತ್ತದೆ. ತಮಿಜ್ ಮತ್ತು ಏಲಿಯನ್ ಉತ್ತಮ ಸ್ನೇಹಿತರಾಗುತ್ತಾರೆ.
ಅನ್ಯಗ್ರಹವು ಆರ್ಯನ್ ಬಳಿ ಇರುವ ಸ್ಪಾರ್ಕ್ ಅವನ್ನು ಕಿತ್ತುಕೊಂಡು ತನ್ನ ಗ್ರಹಕ್ಕೆ ಹೋಗಲು ನಿರ್ಧರಿಸುತ್ತದೆ. ಈ ಪ್ರಯತ್ನದಲ್ಲಿ ಏಲಿಯನ್‌ಗೆ ಸಹಾಯ ಮಾಡಲು ಹೋಗಿ ತಮಿಜ್ ತನ್ನ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾನೆ. ಕೊನೆ ಉಸಿರಾಟದಲ್ಲಿ ಇರುವ ತಮಿಜ್‌ನನ್ನು ಬದುಕಿಸಲು ತನ್ನಲ್ಲಿರುವ ಶಕ್ತಿಯನ್ನು ಏಲಿಯಾನ್ ಆತನಿಗೆ ವರ್ಗಾಯಿಸುತ್ತದೆ. ತನ್ನ ಶಕ್ತಿಯನ್ನು ಕಳೆದುಕೊಳ್ಳುವ ಆರ್ಯನ್ ಗ್ಯಾಂಗ್ ಏಲಿಯನ್‌ನನ್ನು ಹಿಡಿದು ಬಂಧಿಸುತ್ತಾರೆ.
ಇದನ್ನೂ ಓದಿ: ಬಿಗ್ಬಾಸ್ ಕನ್ನಡಕ್ಕೆ ಭರ್ಜರಿ ಟಿಆರ್ಪಿ
ಆ ನಂತರ ಏನಾಯಿತು? ಆರ್ಯ ಗ್ಯಾಂಗ್ ನಿಂದ ತಮಿಜ್ ಎಲಿಯನ್‌ನನ್ನು ಹೇಗೆ ಕಾಪಾಡಿದ? ಏಲಿಯನ್ ಹೊಡೆದುಹಾಕಿದ ಸ್ಪಾರ್ಕ್ ಅನ್ನು ಆರ್ಯನ್ ಮತ್ತೆ ಹೇಗೆ ಪಡೆದುಕೊಂಡ? ಆರ್ಯನ್ ಅವರನ್ನು ಏಲಿಯಾನ್ ಟಾರ್ಗೆಟ್ ಮಾಡೋಕೆ ಏನು ಕಾರಣ? ಆರ್ಯನ್ ಮಾಡಿದ ಪ್ರಯೋಗದ ಪರಿಣಾಮವಾಗಿ ಚೆನ್ನೈ ನಗರ ಹೇಗೆ ಪರದಾಡಿತು. ತಮಿಜ್ ಮತ್ತು ಏಲಿಯನ್ ಒಟ್ಟಿಗೆ ಸೇರಿ ಆರ್ಯನ್ ಪ್ರಯೋಗವನ್ನ ವಿಫಲಗೊಳಿಸಿವೆಯೇ? ತಮಿಜ್ ಪ್ರೀತಿಸಿದ ಸೈನ್ಸ್ ಟೀಚರ್ ತಾರಾ ಯಾರು? ಇವೆಲ್ಲವೂ ಗೊತ್ತಾಗಬೇಕಾದರೆ ಥಿಯೇಟರ್‌ಗೆ ಹೋಗಿ ಸಿನಿಮಾವನ್ನು ನೋಡಬೇಕು. (This copy first appeared in Hindustan Times Kannada website. To read more like this please logon to kannada.hindustantime.com).