ಕರ್ನಾಟಕದಿಂದ ಕುಂಭಮೇಳ ನಡೆಯುವ ಪ್ರಯಾಗರಾಜ್ ಗೆ ವಿಮಾನದಲ್ಲಿ ಹೋಗುವುದು ಹೇಗೆ? ಟಿಕೆಟ್ ದರ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಕರ್ನಾಟಕದಿಂದ ಕುಂಭಮೇಳ ನಡೆಯುವ ಪ್ರಯಾಗರಾಜ್ ಗೆ ವಿಮಾನದಲ್ಲಿ ಹೋಗುವುದು ಹೇಗೆ? ಟಿಕೆಟ್ ದರ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕದಿಂದ ಕುಂಭಮೇಳ ನಡೆಯುವ ಪ್ರಯಾಗರಾಜ್ ಗೆ ವಿಮಾನದಲ್ಲಿ ಹೋಗುವುದು ಹೇಗೆ? ಟಿಕೆಟ್ ದರ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ

ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಹೋಗುವ ಪ್ಲಾನ್ ಇದಿಯಾ? ಕರ್ನಾಟಕದಿಂದ ಪ್ರಯಾಗರಾಜ್ ಗೆ ವಿಮಾನದಲ್ಲಿ ಹೋಗುವುದು ಹೇಗೆ? ಟಿಕೆಟ್ ದರ ಸೇರಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರಿನಿಂದ ಪ್ರಯಾಗರಾಜ್ ಗೆ ವಿಮಾನದಲ್ಲಿ ಹೋಗುವುದು ಹೇಗೆ ಎಂಬುದನ್ನು ತಿಳಿಯಿರಿ
ಬೆಂಗಳೂರಿನಿಂದ ಪ್ರಯಾಗರಾಜ್ ಗೆ ವಿಮಾನದಲ್ಲಿ ಹೋಗುವುದು ಹೇಗೆ ಎಂಬುದನ್ನು ತಿಳಿಯಿರಿ

ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ, ಲಕ್ಷಾಂತರ ಮಂದಿ ಭಕ್ತರು ಸೇರುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್ ಸಕಲ ರೀತಿಯಲ್ಲೂ ಸಿದ್ದಗೊಳ್ಳುತ್ತಿದೆ. ತಪಸ್ವಿಗಳು, ಸಂತರು, ಸಾಧುಗಳು, ಸಾಧ್ವಿಗಳು ಸೇರಿದಂತೆ ಎಲ್ಲಾ ಹಂತದ ಯಾತ್ರಾರ್ಥಿಗಳು ಈ ಮಹಾಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ. ಭಾರತದ ನಾನಾ ಭಾಗಗಳಿಂದ ಮಾತ್ರವಲ್ಲದೆ, ವಿದೇಶಗಳಿಂದ ಭಕ್ತರ ಬಂದು ಮಹಾ ಕುಂಭಕ್ಕೆ ಸಾಕ್ಷಿಯಾಗಲಿದ್ದಾರೆ.

12 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾ ಕುಂಭಮೇಳ 2025ರ ಜನವರಿ 13 ರಿಂದ 2025ರ ಫೆಬ್ರವರಿ 26 ರವರೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. ಸೂರ್ಯ, ಚಂದ್ರ ಹಾಗೂ ಗುರುವಿನ ವಿಭಿನ್ನವಾದ ಜ್ಯೋತಿಷ್ಯ ಸ್ಥಾನಗಳನ್ನು ಆಧರಿಸಿ ಈ ಅವಧಿಯನ್ನು ನಿಗದಿ ಮಾಡಲಾಗಿದೆ. ಕುಂಭಮೇಳದ ಸಮಯದಲ್ಲಿ ಹವವಾರು ಧಾರ್ಮಿಕ ಕಾರ್ಯಕ್ರಮಗಳ ನಡೆಯುತ್ತವೆ. ಸಾಂಪ್ರದಾಯಿಕ ಮೆರವಣಿಗೆಯ ಜೊತೆಗೆ ಶಾಹಿ ಸ್ನಾನ ಸಮಯದಲ್ಲಿ ನಾಗಾ ಸಾಧುಗಳ ಹೊಳೆಯುವ ಕತ್ತಿಗಳ ಹಾಗೂ ಆಚರಣೆಗಳು ಕುಂಭಮೇದಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಯಾತ್ರಿಕರನ್ನು ಆಕರ್ಷಿಸುತ್ತವೆ. ಸಾಂಸ್ಕೃತಿ ಚಟುವಟಿಕೆಗಳು ಗಮನ ಸೆಳೆಯುತ್ತವೆ.

ಕುಂಭ ಮೇಳದ ಪ್ರಮುಖ ದಿನಗಳು

1. ಜನವರಿ 13 ಸೋಮವಾರ ಪೌಶ್ ಪೂರ್ಣಿಮಾ

2. ಜನವರಿ 14 ಮಂಗಳವಾರ ಮಕರ ಸಂಕ್ರಾಂತಿ

3. ಜನವರಿ 29 ಬುಧವಾರ ಮೌನಿ ಅಮಾವಾಸ್ಯೆ

4. ಫೆಬ್ರವರಿ 3 ಸೋಮವಾರ ವಸಂತ ಪಂಚಮಿ

5. ಫೆಬ್ರವರಿ 12 ಬುಧವಾರ ಮಾಘ ಪೂರ್ಣಿಮಾ

6. ಫೆಬ್ರವರಿ 26 ಬುಧವಾರ ಮಹಾ ಶಿವರಾತ್ರಿ

ಒಂದು ವೇಳೆ ನೀವೇನಾದರೂ ಕರ್ನಾಟಕದಿಂದ ಕುಂಭಮೇಳಕ್ಕೆ ಹೋಗುವ ಪ್ಲಾನ್ ಮಾಡುತ್ತಿದ್ದರೆ ವಿಮಾನದ ಮೂಲಕ ಪ್ರಯಾಗರಾಜ್ ಗೆ ಹೇಗೆ ಹೋಗುವುದು, ಟಿಕೆಟ್ ಎಷ್ಟಾಗುತ್ತೆ ಎಂಬುದರ ವಿವರನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರಿನಿಂದ ಪ್ರಯಾಗರಾಜ್ ವಿಮಾನ ಟಿಕೆಟ್ ದರ

ಕರ್ನಾಟಕದಿಂದ ಪ್ರಮುಖವಾಗಿ ಬೆಂಗಳೂರಿನಿಂದ ಪ್ರಯಾಗರಾಜ್ ಗೆ ನೇರ ವಿಮಾನ ವ್ಯವಸ್ಥೆ ಇದೆ. ದಿನಕ್ಕೆ ಮೂರ್ನಾಲ್ಕು ವಿಮಾನಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಚರಿಸುತ್ತವೆ. ಖಾಸಗಿ ವಿಮಾನ ಸಂಸ್ಥೆ ಇಂಡಿಗೋ ಹೆಚ್ಚಾಗಿ ಹಾರಾಟಗಳನ್ನು ನಡೆಸುತ್ತಿವೆ. ಬೆಂಗಳೂರಿನಿಂದ ಪ್ರಯಾಗ್ ರಾಜ್ ಗೆ ಕನಿಷ್ಠ 5,940 ರೂಪಾಯಿಯಿಂದ 19,500 ರೂಪಾಯಿ ವರೆಗೆ ಟಿಕೆಟ್ ದರಗಳಿವೆ.

ಬೆಂಗಳೂರಿನಿಂದ ಪ್ರಯಾಗರಾಜ್ ಗೆ ನಾನ್ ಸ್ಟಾಪ್ ವಿಮಾನ ಪ್ರಯಾಣಕ್ಕೆ ಕನಿಷ್ಠ 6,765 ರೂಪಾಯಿ ಟಿಕೆಟ್ ದರವಿದ್ದು, ಪ್ರಯಾಣದ ಅವಧಿ 2 ಗಂಟೆ 25 ನಿಮಿಷ ಇರುತ್ತದೆ. ಒಂದು ಸ್ಟಾಪ್ ನೊಂದಿಗೆ ಪ್ರಯಾಗ್ ರಾಜ್ ವಿಮಾನ ಪ್ರಯಾಣ ಕನಿಷ್ಠ 5,940 ರೂಪಾಯಿ ಇರಲಿದೆ. ಒಂದು ಸ್ಟಾಪ್ ನೊಂದಿಗೆ ಬೆಂಗಳೂರಿನಿಂದ ಪ್ರಯಾಗರಾಜ್ ಗೆ ತಲುಪುವ ಅವಧಿ ಯಾವ ನಿಲ್ದಾಣದಲ್ಲಿ ಸ್ಟಾಪ್ ಕೊಟ್ಟು ಪ್ರಯಾಗರಾಜ್ ಗೆ ತಲುಪುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಉದಾಹರಣೆಗೆ ಬೆಂಗಳೂರಿನಿಂದ ಲಕ್ನೋಗೆ ಆ ನಂತರ ಅಲ್ಲಿಂದ ಪ್ರಯಾಗರಾಜ್ ಗೆ ತಲುಪಲು ಕೆಲವು ವಿಮಾನ ಟಿಕೆಟ್ ಬುಕಿಂಗ್ ಸಂಸ್ಥೆಗಳ ಪ್ರಕಾರ, 9 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತವೆ.

Whats_app_banner