ನೋಟಿನಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಫೋಟೋ; ವಂಚಕರ ದಾಳಕ್ಕೆ ಬಲಿಯಾದ ಗುಜರಾತ್‌ ಚಿನ್ನದ ವ್ಯಾಪಾರಿ-gujarat news bollywood actor anupam kher photo in fake currency instead of mahatma gandhi crime news rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನೋಟಿನಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಫೋಟೋ; ವಂಚಕರ ದಾಳಕ್ಕೆ ಬಲಿಯಾದ ಗುಜರಾತ್‌ ಚಿನ್ನದ ವ್ಯಾಪಾರಿ

ನೋಟಿನಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಫೋಟೋ; ವಂಚಕರ ದಾಳಕ್ಕೆ ಬಲಿಯಾದ ಗುಜರಾತ್‌ ಚಿನ್ನದ ವ್ಯಾಪಾರಿ

500 ರೂ. ಮುಖಬೆಲೆಯ ನೋಟಿನಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಫೋಟೋ ಪ್ರಿಂಟ್‌ ಮಾಡಿರುವ ವಂಚಕರು ಚಿನ್ನದ ವ್ಯಾಪಾರಿಗೆ ಮೋಸ ಮಾಡಿದ್ದಾರೆ. ಈ ಸುದ್ದಿಯನ್ನು ನಟ ಅನುಪಮ್‌ ಖೇರ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ನೋಟಿನಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಫೋಟೋ; ವಂಚಕರ ದಾಳಕ್ಕೆ ಬಲಿಯಾದ ಗುಜರಾತ್‌ ಚಿನ್ನದ ವ್ಯಾಪಾರಿ
ನೋಟಿನಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಫೋಟೋ; ವಂಚಕರ ದಾಳಕ್ಕೆ ಬಲಿಯಾದ ಗುಜರಾತ್‌ ಚಿನ್ನದ ವ್ಯಾಪಾರಿ

ಖ್ಯಾತನಾಮರಿಗೆ ಗೌರವ ನೀಡಲೆಂದು ಸರ್ಕಾರ ಅವರ ಫೋಟೋ ಮುದ್ರಿತ ಅಂಚೆ ಚೀಟಿಯನ್ನು, ಬೆಳ್ಳಿ ನಾಣ್ಯಗಳನ್ನು ಬಿಡುಗಡೆ ಮಾಡುತ್ತದೆ. ನಗರಗಳ ಪ್ರಮುಖ ರಸ್ತೆಗಳಿಗೆ ಅವರ ಹೆಸರಿಡುತ್ತದೆ. ಆದರೆ ಗುಜರಾತ್‌ನಲ್ಲಿ ಬಾಲಿವುಡ್‌ ನಟ ಅನುಪಮ್‌ ಖೇರ್‌ ಫೋಟೋವನ್ನು ನೋಟಿನಲ್ಲಿ ಮುದ್ರಣ ಮಾಡಲಾಗಿದೆ. ಗಾಂಧೀಜಿ ಬದಲಿಗೆ ನೋಟಿನಲ್ಲಿ ಅನುಪಮ್‌ ಖೇರ್‌? ಹುಬ್ಬೇರಿಸಬೇಡಿ ಮುಂದೆ ಓದಿ.

ಚಿನ್ನದ ವ್ಯಾಪಾರಿಗೆ ಮೋಸ ಮಾಡಿದ ವಂಚಕರು

ಅಸಲಿಗೆ ಈ ರೀತಿ ನೋಟಿನಲ್ಲಿ ಅನುಪಮ್‌ ಖೇರ್‌ ಫೋಟೋವನ್ನು ಪ್ರಿಂಟ್‌ ಮಾಡಿರುವುದು ಮೂವರು ವಂಚಕರು. ಇದೇ ನೋಟನ್ನು ಬಳಸಿಕೊಂಡು ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ ಕೋಟ್ಯಂತರ ರೂ ಮೋಸ ಮಾಡಿ ಪರಾರಿಯಾಗಿದ್ದಾರೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮೆಹುಲ್‌ ಟಕ್ಕರ್‌ ಎಂಬ ಚಿನ್ನದ ವ್ಯಾಪಾರಿಯೊಬ್ಬರು ಅನುಪಮ್‌ ಖೇರ್‌ ನೋಟು ಪಡೆದು ಮೋಸ ಹೋದವರು. ಮೆಹುಲ್‌, ಸುಮಾರು 15 ವರ್ಷಗಳಿಂದ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಮೂವರು, ಮೆಹುಲ್‌ ಬಳಿ ಬಂದು ತಮಗೆ ಚಿನ್ನಾಭರಣ ಬೇಕೆಂಬುದಾಗಿ ಮಾತುಕತೆ ನಡೆಸಿ ಹಣವನ್ನು ಫೈನಲ್‌ ಮಾಡಿದ್ದಾರೆ. ಸುಮಾರು 2 ಕಿಲೋ ಬಂಗಾರವನ್ನು ಖರೀದಿಸುವುದಾಗಿ ತಿಳಿಸಿದ್ದಾರೆ.

500 ರೂ. ಮುಖಬೆಲೆಯ ನೋಟಿನಲ್ಲಿ ಅನುಪಮ್‌ ಖೇರ್‌ ಫೋಟೋ

ಕೊನೆಗೆ ಒಂದು ದಿನ ಮೆಹುಲ್‌ ಬಳಿ ಬಂದ ವಂಚಕರು ಬಂಗಾರವನ್ನು ಖರೀದಿಸಿ 500 ರೂ. ಮುಖಬೆಲೆಯ ಹಣದ ಕಂತೆಗಳಿರುವ ಬ್ಯಾಗನ್ನು ಕೊಟ್ಟಿದ್ದಾರೆ. ಮೇಲ್ಬಾಗದಲ್ಲಿ ಮಾತ್ರ ಅಸಲಿ ನೋಟುಗಳನ್ನು ಇಟ್ಟು ಒಳಗಡೆ ಅನುಪಮ್‌ ಖೇರ್‌ ಫೋಟೋ ಇರುವ ನೋಟುಗಳನ್ನು ಕಳ್ಳರು ಸೇರಿಸಿದ್ದಾರೆ. ದುಡ್ಡು ಕೊಟ್ಟ ಕೂಡಲೇ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಮತ್ತೊಮ್ಮೆ ಯಂತ್ರದ ಸಹಾಯದಿಂದ ದುಡ್ಡು ಎಣಿಸುವಾಗ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಗಾಂಧೀಜಿ ಬದಲಿಗೆ ಅನುಪಮ್‌ ಖೇರ್‌ ಇರುವ ನೋಟುಗಳನ್ನು ಕಂಡು ಗಾಬರಿ ಆಗಿದ್ದಾರೆ. ತಮ್ಮ ಬಳಿ ಚಿನ್ನ ಖರೀದಿಸಿದವರಿಗೆ ಕರೆ ಮಾಡಿದರೆ ಆ ನಂಬರ್‌ ಸ್ವಿಚ್‌ ಆಫ್‌ ಆಗಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸುಮಾರು ಎರಡೂವರೆ ಕಿಲೋ ಚಿನ್ನವನ್ನು ಮೆಹುಲ್‌ ಕಳೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಮೆಹುಲ್‌ ಚಿನ್ನದ ಅಂಗಡಿ ಬಳಿಯ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಅನುಪಮ್‌ ಖೇರ್‌

ಅನುಪಮ್‌ ಖೇರ್‌ ನಟನೆಯ ದಿ ಸಿಗ್ನೇಚರ್‌ ಚಿತ್ರದ ದೃಶ್ಯವೊಂದಕ್ಕೆ ಲಡ್ಡು ಮುತ್ಯಾನ ಹಾಡನ್ನು ಸೇರಿಸಿ ಈ ಪ್ರಕರಣವನ್ನು ಟ್ರೋಲ್‌ ಮಾಡಲಾಗಿದೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅನುಪಮ್‌ ಖೇರ್‌, ತಮ್ಮ ಫೋಟೋವನ್ನು ನೋಟಿನ ಮೇಲೆ ಪ್ರಿಂಟ್‌ ಮಾಡಿರುವುದನ್ನು ಕಂಡು ಗಹಿ ಗಹಿ ನಕ್ಕಿದ್ದಾರೆ. ಗಾಂಧಿ ಜಯಂತಿ ಹತ್ತಿರ ಇರುವಾಗಲೇ ಈ ಘಟನೆ ನಡೆದಿದ್ದು ನೆಟಿಜನ್ಸ್‌ ಈ ವಿಚಾರವಾಗಿ ನಟ ಅನುಪಮ್‌ ಖೇರ್‌ ಕಾಲೆಳೆದಿದ್ದಾರೆ.

mysore-dasara_Entry_Point