Hamsalekha Health Update: ತಂದೆ ಆರೋಗ್ಯದ ಬಗ್ಗೆ ದಯವಿಟ್ಟು ಸುಳ್ಳುಸುದ್ದಿ ಹರಡಬೇಡಿ..ಹಂಸಲೇಖ ಪುತ್ರಿ ಮನವಿ
ಕನ್ನಡ ಸುದ್ದಿ  /  ಮನರಂಜನೆ  /  Hamsalekha Health Update: ತಂದೆ ಆರೋಗ್ಯದ ಬಗ್ಗೆ ದಯವಿಟ್ಟು ಸುಳ್ಳುಸುದ್ದಿ ಹರಡಬೇಡಿ..ಹಂಸಲೇಖ ಪುತ್ರಿ ಮನವಿ

Hamsalekha Health Update: ತಂದೆ ಆರೋಗ್ಯದ ಬಗ್ಗೆ ದಯವಿಟ್ಟು ಸುಳ್ಳುಸುದ್ದಿ ಹರಡಬೇಡಿ..ಹಂಸಲೇಖ ಪುತ್ರಿ ಮನವಿ

ಹಂಸಲೇಖ ಅವರಿಗೆ ಎದೆನೋವು ಕಾಣಿಸಿದ್ದರಿಂದ ಅವರನ್ನು ಬೆಂಗಳೂರು ರಾಜಾಜಿನರದ ಫಸ್ಟ್‌ ಬ್ಲಾಕ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು ಕುಟುಂಬಸ್ಥರು ಮತ್ತು ಆಪ್ತರು ಆಸ್ಪತ್ರೆಯಲ್ಲೇ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಹಾಗೂ ಸ್ನೇಹಿತರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅವರ ಪುತ್ರಿ ತೇಜಸ್ವಿನಿ ತಂದೆ ಆರೋಗ್ಯದ ವಿಚಾರವಾಗಿ ಮಾಹಿತಿ ನೀಡಿದ್ದು ಇದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ.

<p>ಸ್ಯಾಂಡಲ್‌ವುಡ್‌ ಸಂಗೀತ ನಿರ್ದೇಶಕ ಹಂಸಲೇಖ</p>
ಸ್ಯಾಂಡಲ್‌ವುಡ್‌ ಸಂಗೀತ ನಿರ್ದೇಶಕ ಹಂಸಲೇಖ

ನಾದಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಸುದ್ದಿ ಬೆಳಗ್ಗಿನಿಂದ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಎಷ್ಟೋ ಮಂದಿ ಹಂಸಲೇಖ ಅವರ ಮನೆಗೆ ಕರೆ ಮಾಡಿ ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಹಂಸಲೇಖ ಅವರ ಬಗ್ಗೆ ಪುತ್ರಿ ತೇಜಸ್ವಿನಿ ಒಂದು ಸ್ಪಷ್ಟನೆ ನೀಡಿದ್ದಾರೆ.

ಹಂಸಲೇಖ ಅವರಿಗೆ ಎದೆನೋವು ಕಾಣಿಸಿದ್ದರಿಂದ ಅವರನ್ನು ಬೆಂಗಳೂರು ರಾಜಾಜಿನರದ ಫಸ್ಟ್‌ ಬ್ಲಾಕ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು ಕುಟುಂಬಸ್ಥರು ಮತ್ತು ಆಪ್ತರು ಆಸ್ಪತ್ರೆಯಲ್ಲೇ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಹಾಗೂ ಸ್ನೇಹಿತರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅವರ ಪುತ್ರಿ ತೇಜಸ್ವಿನಿ ತಂದೆ ಆರೋಗ್ಯದ ವಿಚಾರವಾಗಿ ಮಾಹಿತಿ ನೀಡಿದ್ದು ಇದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ.

ಇಂದು ಮುಂಜಾನೆಯಿಂದ ನಮ್ಮ ತಂದೆ, ಡಾ. ಹಂಸಲೇಖಾ ಅವರ ಆರೋಗ್ಯದ ಬಗ್ಗೆ ಹಾಗೂ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಒಂದು ವದಂತಿ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಕಂಡುಬಂದಿದೆ. ಈ ವದಂತಿ ಸುಳ್ಳಾಗಿದೆ. ಇದರಿಂದ ಅಭಿಮಾನಿಗಳು ಆತಂಕ ಪಡಬಾರದು ಹಾಗೂ ಈ ವದಂತಿಯನ್ನು ಇನ್ನೂ ಹರಡದಂತೆ ನೋಡಿಕೊಳ್ಳಬೇಕು ಎಂದು ನಮ್ರತೆಯಿಂದ ಕೇಳಿಕೊಳ್ಳುತೇವೆ ಎಂಬುದಾಗಿ ಹಂಸಲೇಖ ಪುತ್ರಿ ತೇಜಸ್ವಿನಿ ಹಂಸಲೇಖ ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಹೃದಯಾಘಾತದಿಂದ ಹಿರಿಯ ನಟ ಲೋಹಿತಾಶ್ವ ಆಸ್ಪತ್ರೆಗೆ ದಾಖಲು

ಒಂದೆಡೆ ಹಂಸಲೇಖ ಬಗ್ಗೆ ಸುಳ್ಳು ಸುದ್ದಿ ಹಬ್ಬುತ್ತಿದ್ದರೆ ಮತ್ತೊಂದೆಡೆ ಹಿರಿಯ ನಟ ಲೋಹಿತಾಶ್ವ, ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 80 ವರ್ಷದ ಲೋಹಿತಾಶ್ವ ಅವರಿಗೆ ಭಾನುವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸಾಗರ್‌ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದು, ಚಿಕಿತ್ಸೆ ಮುಂದುವರಿಸಿದ್ದಾರೆ.

Whats_app_banner