ಯೂಟ್ಯೂಬ್‌ನಿಂದ ಗಳಿಸಿದ 20 ಲಕ್ಷ ರೂ. ವರ್ಷಾ ಕಾವೇರಿ ಅಕೌಂಟ್‌ನಲ್ಲೇ ಇದೆ, ನನಗೆ ಇನ್ನೂ ಹಣ ಕೊಟ್ಟಿಲ್ಲ; ವರುಣ್‌ ಆರಾಧ್ಯ
ಕನ್ನಡ ಸುದ್ದಿ  /  ಮನರಂಜನೆ  /  ಯೂಟ್ಯೂಬ್‌ನಿಂದ ಗಳಿಸಿದ 20 ಲಕ್ಷ ರೂ. ವರ್ಷಾ ಕಾವೇರಿ ಅಕೌಂಟ್‌ನಲ್ಲೇ ಇದೆ, ನನಗೆ ಇನ್ನೂ ಹಣ ಕೊಟ್ಟಿಲ್ಲ; ವರುಣ್‌ ಆರಾಧ್ಯ

ಯೂಟ್ಯೂಬ್‌ನಿಂದ ಗಳಿಸಿದ 20 ಲಕ್ಷ ರೂ. ವರ್ಷಾ ಕಾವೇರಿ ಅಕೌಂಟ್‌ನಲ್ಲೇ ಇದೆ, ನನಗೆ ಇನ್ನೂ ಹಣ ಕೊಟ್ಟಿಲ್ಲ; ವರುಣ್‌ ಆರಾಧ್ಯ

ವರುಣ್‌ ಆರಾಧ್ಯ , ವರ್ಷಾ ಕಾವೇರಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ರೀಲ್ಸ್‌ ಮಾಡಿ ಯೂಟ್ಯೂಬ್‌ನಿಂದ ಗಳಿಸಿದ ಹಣ ಇನ್ನೂ ವರ್ಷಾ ಕಾವೇರಿ ಅಕೌಂಟ್‌ನಲ್ಲೇ ಇದೆ. ನಾನು ಹಣ ಕೇಳಿದರೂ ಇದುವರೆಗೂ ಅವರು ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ವರುಣ್‌ ಆರಾಧ್ಯ ಆರೋಪಿಸಿದ್ದಾರೆ.

ಯೂಟ್ಯೂಬ್‌ನಿಂದ ಗಳಿಸಿದ 20 ಲಕ್ಷ ಹಣ ವರ್ಷಾ ಕಾವೇರಿ ಅಕೌಂಟ್‌ನಲ್ಲೇ ಇದೆ, ನನಗೆ ಇನ್ನೂ ಹಣ ಕೊಟ್ಟಿಲ್ಲ; ವರುಣ್‌ ಆರಾಧ್ಯ
ಯೂಟ್ಯೂಬ್‌ನಿಂದ ಗಳಿಸಿದ 20 ಲಕ್ಷ ಹಣ ವರ್ಷಾ ಕಾವೇರಿ ಅಕೌಂಟ್‌ನಲ್ಲೇ ಇದೆ, ನನಗೆ ಇನ್ನೂ ಹಣ ಕೊಟ್ಟಿಲ್ಲ; ವರುಣ್‌ ಆರಾಧ್ಯ (PC: Varun Aradhya FB)

ನಟ, ಯೂಟ್ಯೂಬರ್‌ ವರುಣ್‌ ಆರಾಧ್ಯ ಕಳೆದ ಒಂದು ವರ್ಷದಿಂದ ಭಾರೀ ಸುದ್ದಿಯಲ್ಲಿದ್ದಾರೆ. ವರ್ಷಾ ಕಾವೇರಿ ಜೊತೆ ಬ್ರೇಕಪ್‌ ಆದಾಗಿನಿಂದ ಸೋಷಿಯಲ್‌ ಮೀಡಿಯಾದಲ್ಲಿ ವರುಣ್‌ ಅರಾಧ್ಯ ಕುರಿತ ಚರ್ಚೆ ಜೋರಾಗಿದೆ. ಕೆಲವು ದಿನಗಳ ಕಾಲ ತಣ್ಣಗಾಗಿದ್ದ ಸುದ್ದಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಬೃಂದಾವನ ಧಾರಾವಾಹಿ ನಾಯಕನಾಗಿ ನಟಿಸಿದ್ದ ವರುಣ್

ವರುಣ್‌ ಆರಾಧ್ಯ ಬೃಂದಾವನ ಧಾರಾವಾಹಿಗೆ ನಾಯಕನಾಗಿ ಆಯ್ಕೆ ಆದಾಗ ಆತನನ್ನು ಬದಲಿಸುವಂತೆ ಬಹಳಷ್ಟು ಜನರು ಒತ್ತಾಯಿಸಿದ್ದರು. ವಿವಾದ ಆರಂಭವಾದಾಗಿನಿಂದ ಕೆಲವರು ವರುಣ್‌ ವಿರುದ್ಧವಾಗಿ ನಿಂತರೆ ಇನ್ನೂ ಕೆಲವರು ಆತನ ಬೆಂಬಲಕ್ಕೆ ನಿಂತಿದ್ದರು. ಆರಂಭದಲ್ಲಿ ವರ್ಷಾ- ವರುಣ್‌ ಜೋಡಿ ಯೂಟ್ಯೂಬ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಜೋಡಿ ಒಟ್ಟಿಗೆ ರೀಲ್ಸ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಅದರೆ ಇದ್ದಕ್ಕಿದ್ದಂತೆ ಇವರ ಹೊಸ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗಲಿಲ್ಲ. ಇಬ್ಬರಿಗೂ ಬ್ರೇಕ್‌ ಅಪ್‌ ಆಗಿರುವ ವಿಚಾರ ಆಗಷ್ಟೆ ಎಲ್ಲರಿಗೂ ತಿಳಿದದ್ದು.‌

ಯೂಟ್ಯೂಬ್‌ನಿಂದ ಬಂದ ಲಾಭ ಇನ್ನೂ ನನಗೆ ಸಿಕ್ಕಿಲ್ಲ

ವರುಣ್‌ , ಬೇರೆ ಹುಡುಗಿ ಜೊತೆ ಸುತ್ತಾಡುತ್ತಿದ್ದಾನೆ ಎಂದು ವರ್ಷಾ ಆರೋಪ ಮಾಡಿದರೆ, ನಾವಿಬ್ಬರೂ ಒಬ್ಬರಿಗೊಬ್ಬರು ಮಾತನಾಡಿಕೊಂಡೇ ದೂರವಾಗಿದ್ದೇವೆ. ದಯವಿಟ್ಟು ಈ ವಿಚಾರದಲ್ಲಿ ಮನೆಯವರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದ್ದರು. ಅಂದಿನಿಂತ ವಿವಾದ ಸ್ವಲ್ಪ ತಣ್ಣಗಾಗಿತ್ತು. ಇದೀಗ ಮತ್ತೆ ಇದೇ ವಿಚಾರ ಹೆಚ್ಚು ಸುದ್ದಿಯಾಗುತ್ತಿದೆ. ಈ ನಡುವೆ ವರುಣ್‌ ಆರಾಧ್ಯ ವರ್ಷಾ ಕಾವೇರಿ ಮೇಲೆ ಮತ್ತೊಂದು ಆರೋಪ ಮಾಡಿದ್ದಾರೆ. ಯೂಟ್ಯೂಬ್‌ನಿಂದ ಸಂಪಾದಿಸಿದ ಹಣ ನನಗೆ ಸ್ವಲ್ಪವೂ ಸಿಕ್ಕಿಲ್ಲ, ಎಲ್ಲವೂ ವರ್ಷಾ ಅಕೌಂಟ್‌ನಲ್ಲೇ ಇದೆ. ಆಕೆ ನನಗೆ ಕೊಡುತ್ತಾರೋ , ಇಲ್ಲವೋ ಅದೂ ಗೊತ್ತಿಲ್ಲ ಎಂದು ಜಾಯಿಂಟ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

3 ವರ್ಷಗಳಿಂದ ಸಂಪಾದಿಸಿದ್ದು 20 ಲಕ್ಷ ರೂ.

ಇಬ್ಬರೂ ಒಟ್ಟಿಗೆ ಸೇರಿ ಯೂಟ್ಯೂಬ್‌ ಆರಂಭಿಸಿದೆವು. ನಮ್ಮ ಚಾನೆಲ್‌ಗೆ ಸಬ್ಸ್‌ಕ್ರೈಬರ್‌ಗಳು ಹೆಚ್ಚಾಗಿದ್ದರು. ಒಂದೊಂದು ವಿಡಿಯೋ ಕೂಡಾ ಒಳ್ಳೆ ವ್ಯೂವ್ಸ್‌ ಪಡೆಯುತ್ತಿತ್ತು. ಅದರಿಂದ ಬಂದ ಹಣವನ್ನು ವೈಯಕ್ತಿಕ ವಿಚಾರಗಳಿಗೆ ಖರ್ಚು ಮಾಡಿಲ್ಲ. ವಿಡಿಯೋ ಕ್ರಿಯೇಟ್‌ ಮಾಡಲು ಅಗತ್ಯವಿರುವ ಕ್ಯಾಮರಾ, ಲ್ಯಾಪ್‌ಟಾಪ್‌ ಹಾಗೂ ಇನ್ನಿತರ ವಸ್ತುಗಳಿಗಾಗಿ ಖರ್ಚು ಮಾಡಿದ್ದೇವೆ. ಯೂಟ್ಯೂಬ್‌ ಆರಂಭವಾದಾಗ ನನ್ನ ಬಳಿ ಬ್ಯಾಂಕ್‌ ಅಕೌಂಟ್‌ ಇರಲಿಲ್ಲ. ಆದ್ದರಿಂದ ಅದರಿಂದ ಬಂದ ಹಣವೆಲ್ಲಾ ವರ್ಷಾ ಕಾವೇರಿ ಅಕೌಂಟ್‌ಗೆ ಟ್ರಾನ್ಸ್‌ಫರ್‌ ಆಗ್ತುತ್ತಿತ್ತು. 3 ವರ್ಷಗಳಿಂದ ಸುಮಾರು 20 ಲಕ್ಷ ರೂ. ಹಣ ಬಂದಿದೆ. ಅದರೆ ಅದರಲ್ಲಿ ನನಗೆ ಇದುವರೆಗೂ ಸ್ವಲ್ಪವೂ ಹಣ ನೀಡಿಲ್ಲ. ನನಗೂ ಬಹಳ ಕಷ್ಟ ಇದೆ. ನನ್ನ ಅಕ್ಕನ ಮದುವೆಗೆ ಸಾಲ ಮಾಡಿದ್ದೇನೆ, ನಾನು ಈಗಿರುವ ಮನೆ ಅಪ್ಪನ ದುಡಿಮೆಯಿಂದ ಬಂದಿದ್ದು. ಯಾರೂ ನನಗೆ ಒಂದು ಪೈಸೆ ನೀಡಿಲ್ಲ. ನನಗೂ ಆರ್ಥಿಕ ಸಮಸ್ಯೆ ಇದೆ. ಕುಟುಂಬವನ್ನು ನೋಡಿಕೊಳ್ಳಬೇಕು. ಬ್ರೇಕ್‌ ಅಪ್‌ ಆದಾಗಲೇ ಯೂಟ್ಯೂಬ್‌ ಹಣವನ್ನು ಭಾಗ ಮಾಡಬೇಕಿತ್ತು. ಹಣದ ಅವಶ್ಯಕತೆ ಇದೆ ಎಂದು ಆಗಲೇ ಕೇಳಿದ್ದೆ, ಅದರೆ ಇದುವರೆಗೂ ವರ್ಷಾ ನನಗೆ ಹಣ ಕೊಟ್ಟಿಲ್ಲ ಎಂದು ವರುಣ್‌ ಆರಾಧ್ಯ ಹೇಳಿಕೊಂಡಿದ್ದಾರೆ.

ಬಿಗ್‌ ಬಾಸ್‌ಗೆ ಹೋಗುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ವರುಣ್‌ ಆರಾಧ್ಯ, ನನಗೆ ಇದುವರೆಗೂ ವಾಹಿನಿ ಕಡೆಯಿಂದ ಯಾವುದೇ ಕರೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Whats_app_banner