15 ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟ ಜಯಂ ರವಿ; ಆದರ್ಶ ದಂಪತಿಗಳಂತೆ ಇದ್ದವರು ಹೀಗೇಕೆ ಮಾಡ್ತಿದ್ದೀರಿ ಎಂದ ಫ್ಯಾನ್ಸ್‌-kollywood news jayam ravi announced divorce with aarti after 15 years of married life tamil film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  15 ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟ ಜಯಂ ರವಿ; ಆದರ್ಶ ದಂಪತಿಗಳಂತೆ ಇದ್ದವರು ಹೀಗೇಕೆ ಮಾಡ್ತಿದ್ದೀರಿ ಎಂದ ಫ್ಯಾನ್ಸ್‌

15 ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟ ಜಯಂ ರವಿ; ಆದರ್ಶ ದಂಪತಿಗಳಂತೆ ಇದ್ದವರು ಹೀಗೇಕೆ ಮಾಡ್ತಿದ್ದೀರಿ ಎಂದ ಫ್ಯಾನ್ಸ್‌

ತಮಿಳು ನಟ ಜಯಂ ರವಿ 15 ವರ್ಷಗಳ ದಾಂಪತ್ಯ ಜೀವನದಿಂದ ಹೊರ ಬಂದಿದ್ದಾರೆ. ರವಿ ಹಾಗೂ ಆರತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ರವಿ ತಮ್ಮ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದಾರೆ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ನಟ ರವಿ ಮನವಿ ಮಾಡಿದ್ದಾರೆ.

15 ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟ ಜಯಂ ರವಿ; ಆದರ್ಶ ದಂಪತಿಗಳಂತೆ ಇದ್ದವರು ಹೀಗೇಕೆ ಮಾಡ್ತಿದ್ದೀರಿ ಎಂದ ಫ್ಯಾನ್ಸ್‌
15 ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟ ಜಯಂ ರವಿ; ಆದರ್ಶ ದಂಪತಿಗಳಂತೆ ಇದ್ದವರು ಹೀಗೇಕೆ ಮಾಡ್ತಿದ್ದೀರಿ ಎಂದ ಫ್ಯಾನ್ಸ್‌ (PC: Jayam Ravi Facebook)

ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ ಪ್ರೀತಿಸಿ ಮದುವೆಯಾದ ಜೋಡಿಗಳು ಮನಸ್ತಾಪದಿಂದ ದೂರಾಗುತ್ತಿದ್ದಾರೆ. ಎಷ್ಟೋ ಪ್ರಕರಣಗಳಲ್ಲಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಸುದೀರ್ಘ ಕಾಲ ಜೀವನ ನಡೆಸಿದ ಜೋಡಿಗಳ ನಡುವೆ ಬಿರುಕು ಮೂಡುತ್ತದೆ. ನಾವು ಬೇರಾಗುತ್ತಿದ್ದೇವೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರೂ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಇದೀಗ ತಮಿಳು ನಟ ಜಯಂ ರವಿ ಕೂಡಾ ಪತ್ನಿಯಿಂದ ದೂರಾಗಿದ್ದಾರೆ.

15 ವರ್ಷಗಳ ದಾಂಪತ್ಯ ಜೀವನ ಅಂತ್ಯ

ಜಯಂ ರವಿ ತಮಿಳು ಚಿತ್ರರಂಗದ ಖ್ಯಾತ ನಟ. ಕೆಲವು ದಿನಗಳಿಂದ ಜಯಂ ರವಿ ಹಾಗೂ ಪತ್ನಿ ಆರತಿ ರವಿ ನಡುವೆ ಏನೂ ಸರಿ ಇಲ್ಲ ಎಂಬ ವದಂತಿ ಹರಿದಾಡಿತ್ತು. ಇದು ರೂಮರ್‌ ಎಂದೇ ಅಭಿಮಾನಿಗಳು ತಿಳಿದಿದ್ದರು. ಅದರೆ ಸ್ವತಃ ರವಿ ಹಾಗೂ ಪತ್ನಿ ಆರತಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಡಿವೋರ್ಸ್‌ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. 15 ವರ್ಷಗಳ ದಾಂಪತ್ಯ ಜೀವನಕ್ಕೆ ಈ ಜೋಡಿ ತಿಲಾಂಜಲಿ ಇಟ್ಟಿದ್ದಾರೆ. ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ವೈಯಕ್ತಿಕ ವಿಚಾರದ ಕಾರಣ ನಾವಿಬ್ಬರೂ ದೂರಾಗುತ್ತಿರುವುದಾಗಿ ಜಯಂ ರವಿ ಹಾಗೂ ಆರತಿ ಹೇಳಿಕೊಂಡಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಡಿವೋರ್ಸ್‌ಗೆ ಸಂಬಂಧಿಸಿದಂತೆ ತಮಿಳು ಹಾಗೂ ಇಂಗ್ಲೀಷ್‌ನಲ್ಲಿ ನೋಟ್‌ ಹಂಚಿಕೊಂಡಿರುವ ಜಯಂ ರವಿ, ನಿನ್ನ ಪ್ರೀತಿ ಹಾಗೂ ನನ್ನನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಕೃತಜ್ಞತೆಗಳು ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಬಹಳ ಯೋಚಿಸಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಇದು ಆತುರದಿಂದ ತೆಗೆದುಕೊಂಡ ತೀರ್ಮಾನವಲ್ಲ, ಈ ವಿಚಾರದ ಬಗ್ಗೆ ಯಾವುದೇ ಊಹಾಪೋಹಗಳನ್ನು ಹಬ್ಬಿಸಬೇಡಿ, ನಮ್ಮ ಖಾಸಗಿತನಕ್ಕೆ ಗೌರವಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜನರಿಗೆ ಸಂತೋಷ ಮತ್ತು ಮನರಂಜನೆ ನೀಡುವುದು ಯಾವಾಗಲೂ ತನ್ನ ಆದ್ಯತೆಯಾಗಿದೆ ಎಂದು ಹೇಳುವ ಮೂಲಕ ರವಿ, ನೋಟ್‌ ಪೂರ್ಣಗೊಳಿಸಿದ್ದಾರೆ. ವೃತ್ತಿಜೀವನದುದ್ದಕ್ಕೂ ತಮ್ಮ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಅಭಿಮಾನಿಗಳಿಗೆ ಕೂಡಾ ಧನ್ಯವಾದ ಹೇಳಿದ್ದಾರೆ.

ಜಯಂ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದ ರವಿ

ಕಳೆದ ಜೂನ್‌ 4 ರಂದು ರವಿ ಹಾಗೂ ಆರತಿ ದಂಪತಿ, 15ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಒಟ್ಟಿಗೆ ಇದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಕೂಡಾ ಈ ಜೋಡಿಗೆ ಹಾರೈಸಿದ್ದರು. ನೀವು ಜೀವನದ ಕೊನೆವರೆಗೂ ಹೀಗೇ ಇರಿ, ನಿಮ್ಮ ನಡುವೆ ಇನ್ನಷ್ಟು ಪ್ರೀತಿ ಹೆಚ್ಚಾಗಲು ಎಂದು ಹಾರೈಸಿದ್ದರು. ಅದರೆ ಈಗ ಅವರ ಹಾರೈಕೆ ಸುಳ್ಳಾಗಿದೆ. ಆದರ್ಶ ದಂಪತಿಯಂತೆ ಇದ್ದ ಜೋಡಿ ದೂರಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿದ್ದಾರೆ. ಆರತಿ, ಖ್ಯಾತ ನಿರ್ಮಾಪರೊಬ್ಬರ ಪುತ್ರಿ, 2009 ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಜಯಂ ರವಿ , 2003ರಲ್ಲಿ ತೆರೆ ಕಂಡ ಜಯಂ ಸಿನಿಮಾ ಮೂಲಕ ನಾಯಕನಾಗಿ ಗುರುತಿಸಿಕೊಂಡರು. ಈ ಚಿತ್ರದ ಯಶಸ್ಸು ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತು. ದಾಸ್‌ , ದೀಪಾವಳಿ, ಧಾಂ ಧೂಂ, ರೋಮಿಯೋ ಜೂಲಿಯಟ್‌, ಕೊಮಾಲಿ, ಭೂಮಿ, ಇರೈವನ್‌ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರವಿ ನಟಿಸಿದ್ದಾರೆ. ಕಳೆದ ವರ್ಷ ತೆರೆ ಕಂಡ ಪೊನ್ನಿಯನ್‌ ಸೆಲ್ವನ್‌ ಚಿತ್ರದಲ್ಲಿ ಕೂಡಾ ಜಯಂ ರವಿ ನಟಿಸಿದ್ದಾರೆ. ಬ್ರದರ್‌, ಜೀನಿ, ಕಾದಲಿಕ ನೆರಮಿಲಾಲಿ ಸಿನಿಮಾಗಳಲ್ಲಿ ರವಿ ಬ್ಯುಸಿ ಇದ್ದಾರೆ.

mysore-dasara_Entry_Point