Thangalaan OTT: ಈ ದಿನಾಂಕದಂದು ಒಟಿಟಿಗೆ ಬರಲಿದೆ ವಿಕ್ರಮ್ ಅಭಿನಯದ ತಂಗಲಾನ್ ಚಿತ್ರ
Thangalaan OTT: ತಂಗಲಾನ್ ಚಿತ್ರದ ಒಟಿಟಿ ರಿಲೀಸ್ ದಿನಾಂಕ ಅಂತಿಮಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಮೊದಲ ಸ್ಟ್ರೀಮಿಂಗ್ ದಿನಾಂಕ ಬಹಿರಂಗಗೊಂಡಿದೆ. ಆರಂಭದಲ್ಲಿ ಚಿತ್ರತಂಡವು ತಡವಾಗಿ ಒಟಿಟಿಯಲ್ಲಿ ಬಿಡುಗಡೆಗೊಳಿಸುವ ನಿರ್ಧಾರ ಮಾಡಿತ್ತು. ಈಗ ಮುಂಚಿತವಾಗಿ ರಿಲೀಸ್ ಮಾಡುತ್ತಿದೆ.
ತಂಗಲಾನ್ (Thangalaan) ಚಿತ್ರದ ಒಟಿಟಿ ಸ್ಟ್ರೀಮಿಂಗ್ ದಿನಾಂಕ ಅಂತಿಮವಾಗಿದೆ. ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅಭಿನಯದ ತಂಗಲಾನ್ ಚಿತ್ರಮಂದಿರಗಳಲ್ಲಿ ಜನರ ಮೆಚ್ಚುಗೆ ಗಳಿಸಿದೆ. ಸಾಹಸಮಯ ಚಿತ್ರ ಆಗಸ್ಟ್ 15ರಂದು ಬೆಳ್ಳಿತೆರೆಗೆ ಬಂದಿತ್ತು. ಈ ಚಿತ್ರದ ಮೂಲಕ ಮತ್ತೊಮ್ಮೆ ವಿಕ್ರಮ್ ತಮ್ಮ ನಟನೆಯ ವಿವಿಧ ರೂಪಗಳನ್ನು ತೋರಿಸಿದ್ದಾರೆ. ವಿಭಿನ್ನ ಗೆಟಪ್‌ಗಳಲ್ಲಿ ಅತ್ಯುತ್ತಮ ಅಭಿನಯದ ಮೂಲಕ ಮಿಂಚಿದ್ದಾರೆ. ಈ ಪಿರಿಯಾಡಿಕಲ್ ಆಕ್ಷನ್ ಕಥೆಯ ಸಿನಿಮಾವನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ. ಕಮರ್ಷಿಯಲ್ ಆಗಿ ಯಶಸ್ಸು ಕಾಂಡಿರುವ ಚಿತ್ರವು ಕೊನೆಗೂ ಒಟಿಟಿ ವೇದಿಕೆಗೆ ಬರಲು ಸಜ್ಜಾಗುತ್ತಿದೆ
ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ಆಗಿರುವ ನೆಟ್‌ಫ್ಲಿಕ್ಸ್ ತಂಗಲಾನ್ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಚಿತ್ರವು ಸೆಪ್ಟೆಂಬರ್ 20ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ ಎಂದು ವರದಿಯಾಗಿದೆ. ಆದರೆ, ನೆಟ್‌ಫ್ಲಿಕ್ಸ್‌ನಿಂದ ಈ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.
ತಂಗಲಾನ್ ಚಿತ್ರವು ಸೆಪ್ಟೆಂಬರ್ 20ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬರುತ್ತಿದೆ. ತಮಿಳು ಮಾತ್ರವಲ್ಲಿದೆ. ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಸ್ಟ್ರೀಮ್ ಆಗಲಿದೆ ಎಂಬುದು ಸದ್ಯದ ಸುದ್ದಿ. ಆದರೆ, ವಾರದ ನಂತರ ಹಿಂದಿ ಆವೃತ್ತಿ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ. ತಂಗಲಾನ್ ಹಿಂದಿ ಆವೃತ್ತಿಯು ಸೆಪ್ಟೆಂಬರ್ 27ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.
ನಿರ್ಧಾರ ಬದಲಿಸಿದ ಚಿತ್ರತಂಡ
ಆರಂಭದಲ್ಲಿ ಸಿನಿಮಾ ತಂಡವು ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ತಿಂಗಳ ನಂತರ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮ್ ಮಾಡಲು ಯೋಜಿಸಿತ್ತು. ಆದರೆ, ಸದ್ಯ ಈ ಸಿನಿಮಾದ ಥಿಯೇಟರ್ ಓಟವು ಬಹುತೇಕ ಮುಗಿದಿದೆ. ಕೆಲವೇ ಚಿತ್ರಮಂದಿರಗಳಲ್ಲಿ ಮಾತ್ರವೇ ಚಿತ್ರ ಇನ್ನೂ ಓಡುತ್ತಿದೆ. ಹೀಗಾಗಿ ಚಿತ್ರವನ್ನು ಯೋಜಿಸಿದ್ದಕ್ಕಿಂತ ಮೊದಲೇ, ಅಂದರೆ ಸೆಪ್ಟೆಂಬರ್‌ನಲ್ಲಿ ಒಟಿಟಿ ಸ್ಟ್ರೀಮಿಂಗ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ ಎಂದು ಹೇಳಲಾಗಿದೆ. ಸದ್ಯ ಈ ಚಿತ್ರವು ಸೆಪ್ಟೆಂಬರ್ 20ರಂದು ನೆಟ್‌ಫ್ಲಿಕ್ಸ್ ಒಟಿಟಿಗೆ ಬರಲಿದೆಯೇ ಎಂದು ನೋಡಬೇಕಾಗಿದೆ.
ತಂಗಲಾನ್ ಚಿತ್ರವನ್ನು 1850ರ ದಶಕದ ಹಿನ್ನೆಲೆಯ ಬ್ರಿಟಿಷ್ ಆಳ್ವಿಕೆಯ ಕಥೆಯೊಂದಿಗೆ ನಿರ್ಮಿಸಲಾಗಿದೆ. ನಾಯಕಿಯರಾಗಿ ಪಾರ್ವತಿ ತಿರುವೋತ್ತು ಮತ್ತು ಮಾಳವಿಕಾ ಮೋಹನನ್ ನಟಿಸಿದ್ದಾರೆ. ಪಾ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ವಿಕ್ರಮ್ ಐದು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಇರುವ ಕರ್ನಾಟಕದ ಕಥೆ ಹೊಂದಿದ್ದರೂ ಕನ್ನಡದಲ್ಲಿ ಈ ಸಿನಿಮಾ ರಿಲೀಸ್ ಆಗಿಲ್ಲ. ಜಿವಿ ಪ್ರಕಾಶ್ ಕುಮಾರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎ ಕಿಶೋರ್ ಕುಮಾರ್ ಅವರ ಸಿನಿಮಾಟೋಗ್ರಫಿ ಚಿತ್ರದ ಪ್ರಮುಖ ಅಂಶ.
ಬಾಕ್ಸ್‌ಆಫೀಸ್‌ನಲ್ಲಿ ಚಿತ್ರದ ಗಳಿಕೆ
ತಂಗಲಾನ್ ಚಿತ್ರ ಇದುವರೆಗೆ ವಿಶ್ವದಾದ್ಯಂತ ಸುಮಾರು 105 ಕೋಟಿ ರೂ. ಗಳಿಸಿದೆ. ಚಿತ್ರವನ್ನು ಸುಮಾರು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿದೆ. ಒಟ್ಟಾರೆಯಾಗಿ ಚಿತ್ರ ಪೂರ್ಣ ಪ್ರಮಾಣದಲ್ಲಿ ರೂ.110 ಕೋಟಿ ದಾಟುವ ಸಾಧ್ಯತೆ ಇದೆ ಎಂಬ ನಿರೀಕ್ಷೆಗಳಿವೆ.