ಮಾಡಿದುಣ್ಣೋ ಮಾರಾಯ ಎಂಬಂತೆ ಆಗುತ್ತೆ, ಆಕೆ ಮಡಿಕೇರಿಗೆ ವಾಪಸ್‌ ಬರಲೇಬೇಕು; ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಹೀಗೆ ಹೇಳಿದ್ದೇಕೆ?-sandalwood news pramod shetty comment on rashmika mandanna in laughing buddha movie interview kannada cinema rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮಾಡಿದುಣ್ಣೋ ಮಾರಾಯ ಎಂಬಂತೆ ಆಗುತ್ತೆ, ಆಕೆ ಮಡಿಕೇರಿಗೆ ವಾಪಸ್‌ ಬರಲೇಬೇಕು; ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಹೀಗೆ ಹೇಳಿದ್ದೇಕೆ?

ಮಾಡಿದುಣ್ಣೋ ಮಾರಾಯ ಎಂಬಂತೆ ಆಗುತ್ತೆ, ಆಕೆ ಮಡಿಕೇರಿಗೆ ವಾಪಸ್‌ ಬರಲೇಬೇಕು; ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಹೀಗೆ ಹೇಳಿದ್ದೇಕೆ?

ಕನ್ನಡ ಕಡೆಗಣಿಸಿದ ವಿಚಾರವಾಗಿ ನಟಿ ರಶ್ಮಿಕಾ ಮಂದಣ್ಣ ಸಾಕಷ್ಟು ಬಾರಿ ಟ್ರೋಲ್‌ ಆಗಿದ್ದಾರೆ. ಲಾಫಿಂಗ್‌ ಬುದ್ಧ ಸಿನಿಮಾ ವಿಚಾರವಾಗಿ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಮೋದ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದ್ದಾರೆ. ಆಕೆ ಕನ್ನಡ ಬರೊಲ್ಲ ಅಂತ ಹೇಳಿದರೆ ಮನೆ ಇರೋದು ಕರ್ನಾಟಕದಲ್ಲೇ ತಾನೇ ಎಂದಿದ್ದಾರೆ.

ಮಾಡಿದುಣ್ಣೋ ಮಾರಾಯ ಎಂಬಂತೆ ಆಗುತ್ತೆ, ಆಕೆ ಮಡಿಕೇರಿಗೆ ವಾಪಸ್‌ ಬರಲೇಬೇಕು; ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಹೀಗೆ ಹೇಳಿದ್ದೇಕೆ?
ಮಾಡಿದುಣ್ಣೋ ಮಾರಾಯ ಎಂಬಂತೆ ಆಗುತ್ತೆ, ಆಕೆ ಮಡಿಕೇರಿಗೆ ವಾಪಸ್‌ ಬರಲೇಬೇಕು; ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಹೀಗೆ ಹೇಳಿದ್ದೇಕೆ? (PC: Facebook)

ಸ್ಯಾಂಡಲ್‌ವುಡ್‌ ನಟ ಪ್ರಮೋದ್‌ ಶೆಟ್ಟಿ ಈಗ ಲಾಫಿಂಗ್‌ ಬುದ್ದ ಸಿನಿಮಾ ಸಕ್ಸಸ್‌ ಖುಷಿಯಲ್ಲಿದ್ದಾರೆ. ಗೋವರ್ಧನ್‌ ಎಂಬ ಪೊಲೀಸ್‌ ಕಾನ್ಸ್‌ಟೇಬಲ್‌ ಸುತ್ತ ಸುತ್ತ ಸುತ್ತುವ ಕತೆಯನ್ನು ಹೊಂದಿರುವ ಈ ಸಿನಿಮಾ ಸಿನಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಜನರನ್ನು ನಕ್ಕು ನಗಿಸುವಲ್ಲಿ ಪ್ರಮೋದ್‌ ಶೆಟ್ಟಿ ಗೆದ್ದಿದ್ದಾರೆ. ಆಗಸ್ಟ್‌ 30 ರಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಕನ್ನಡದ ವಿಚಾರವಾಗಿ ಬಹಳ ಸಾರಿ ಟ್ರೋಲ್‌ ಆಗಿದ್ದ ರಶ್ಮಿಕಾ

ಚಿತ್ರವನ್ನು ರಿಷಬ್‌ ಶೆಟ್ಟಿ ನಿರ್ಮಿಸಿದ್ದು ಭರತ್‌ ರಾಜಾ ಆಕ್ಷನ್‌ ಕಟ್‌ ಹೇಳಿದ್ದಾರೆ. ಪ್ರಮೋದ್‌ ಶೆಟ್ಟಿ ಸೇರಿದಂತೆ ಲಾಫಿಂಗ್‌ ಬುದ್ದ ಚಿತ್ರತಂಡ ರಾಜ್ಯಾದ್ಯಂತ ಸಂಚರಿಸಿ ಸಿನಿಮಾ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಮಾಧ್ಯಮ, ಯೂಟ್ಯೂಬ್‌ ಚಾನೆಲ್‌ಗಳಿಗೂ ಸಂದರ್ಶನ ನೀಡುತ್ತಿದೆ. ಪ್ರಮೋದ್‌ ಶೆಟ್ಟಿ ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲಾಫಿಂಗ್‌ ಬುದ್ದ ಸಿನಿಮಾ ಸಕ್ಸಸ್‌ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಚಿತ್ರಗಳು ಹಾಗೂ ಕನ್ನಡ ಸಿನಿಮಾ ರಂಗದ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರು ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಬಗ್ಗೆ ಕೂಡಾ ಮಾತನಾಡಿದ್ದಾರೆ. ಗಿಡ ಬೆಳೆಸುವುದು ಮಾತ್ರ ನಮ್ಮ ಕೆಲಸ, ಬೆಳೆಸಿದ ನಂತರ ಅದರ ರೆಂಬೆ ಹಾಗೇ ಇರಬೇಕು , ಹೀಗೇ ಇರಬೇಕು ಎಂದು ನಾವು ಬಯಸಲು ಆಗುವುದಿಲ್ಲ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ರಕ್ಷಿತ್‌ ಶೆಟ್ಟಿ. ಇದಾದ ನಂತರ ಇಬ್ಬರಿಗೂ ಮದುವೆ ಫಿಕ್ಸ್‌ ಆಗಿತ್ತು. ಅದ್ಧೂರಿಯಾಗಿ ನಿಶ್ಚಿತಾರ್ಥ ಕೂಡಾ ಆಗಿತ್ತು. ಒಂದೆರಡು ಸಿನಿಮಾಗಳಲ್ಲಿ ನಟಿಸುವರೆಗೂ ರಶ್ಮಿಕಾಗೆ ಹೇಳಿಕೊಳ್ಳುವಂಥ ಗುರು ಸಿಕ್ಕಿರಲಿಲ್ಲ. ಆದರೆ ತೆಲುಗು ಚಿತ್ರರಂಗಕ್ಕೆ ಹೋಗಿದ್ದೇ ಹೋಗಿದ್ದು, ರಶ್ಮಿಕಾಗೆ ದೊಡ್ಡ ಯಶಸ್ಸು, ಗುರುತು ಸಿಕ್ಕಿತು. ಇನ್ನು ಬಾಲಿವುಡ್‌ಗೆ ಹೋದ ನಂತರವಂತೂ ಆಕೆ ಹಿಂತಿರುಗಿ ನೋಡಿಲ್ಲ. ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಅವರು ಬ್ಯುಸಿ ಇದ್ದಾರೆ. ರಶ್ಮಿಕಾ ಪರಭಾಷೆಗೆ ಹೋದ ನಂತರ ಕನ್ನಡ, ಕನ್ನಡಿಗರನ್ನು ಕಡೆಗಣಿಸಿದ ವಿಚಾರವಾಗಿ ಸಾಕಷ್ಟು ಬಾರಿ ಟ್ರೋಲ್‌ ಆಗಿದ್ದರು.

ಆಕೆ ಮಡಿಕೇರಿಗೆ ಬರಲೇಬೇಕು ಎಂದ ಪ್ರಮೋದ್‌ ಶೆಟ್ಟಿ

ಇದೀಗ ಯೂಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಪ್ರಮೋದ್‌ ಶೆಟ್ಟಿಗೆ ರಶ್ಮಿಕಾ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಆತ, ಗಿಡ ಬೆಳೆಸೋವರೆಗೂ ಮಾತ್ರ ನಮ್ಮ ಕೆಲಸ, ಬೆಳೆದ ನಂತರ ಅದರ ಕೆಲಸ, ರೆಂಬೆ ಹಾಗೆ ಹೋಗಬೇಕು, ಹೀಗೆ ಹೋಗಬೇಕು ಅಂತ ನಾವು ತಿರುಗಿಸಿ, ಮುರಿದು ಕಟ್‌ ಮಾಡೋಕೆ ಆಗೊಲ್ಲ, ಗಿಡ ಬೆಳೆದ ನಂತರ ಹೇಗೆ ಬೇಕಾದರೂ ತಿರುಗುತ್ತೆ, ಆಕೆ ಉತ್ತಮ ನಟಿ, ಕಿರಿಕ್‌ ಪಾರ್ಟಿ ಸಿನಿಮಾ ಮಾಡಿದಾಗಲೇ ಆಕೆ ಚೆನ್ನಾಗಿ ನಟಿಸಿದ್ದರು. ಅದಾದ ನಂತರ ರಕ್ಷಿತ್‌ ಶೆಟ್ಟಿ ಜೊತೆ ಮದುವೆ ಆಗಬೇಕಿತ್ತು, ಕಟ್‌ ಆಯ್ತು. ಇದುವರೆಗೂ ರಕ್ಷಿತ್‌ ಶೆಟ್ಟಿ ಇದರ ಬಗ್ಗೆ ಕಾಮೆಂಟ್‌ ಮಾಡಿಲ್ಲ. ಅವರ ಸ್ನೇಹಿತನಾಗಿ ನಾವೂ ಕೂಡಾ ಅದನ್ನೇ ಫಾಲೋ ಮಾಡುತ್ತಿದ್ದೇವೆ.

ಆದರೆ ಅವರು ಕನ್ನಡ ಬರೊಲ್ಲ ಅಂತ ಕಾಮೆಂಟ್‌ ಮಾಡುವುದೆಲ್ಲಾ ತಪ್ಪು, ಹಾಗೆಲ್ಲಾ ಮಾಡಿದರೆ ಮಾಡಿದುಣ್ಣೋ ಮಾರಾಯ ಎಂಬಂತೆ ಆಗುತ್ತೆ. ಕನ್ನಡ ಬರೊಲ್ಲ ಅಂತ ಎಷ್ಟೇ ಹೇಳಿದರೂ ಇರೋದು ಕರ್ನಾಟಕದಲ್ಲೇ ಅಲ್ವಾ, ಯಾವಾಗಲಾದ್ರೂ ಮಡಿಕೇರಿಗೆ ವಾಪಸ್‌ ಬರಲೇಬೇಕು. ಹೈದರಾಬಾದ್‌, ಮುಂಬೈನಲ್ಲಿ ಮನೆ ಮಾಡಿದರೂ ಕನ್ನಡ ಭೂಮಿಗೆ ಬರಲೇಬೇಕು ಎಂದು ಪ್ರಮೋದ್‌ ಶೆಟ್ಟಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ.

mysore-dasara_Entry_Point