ಕರ್ನಾಟಕದ ಪರ ನಿಂತ ತಮಿಳು ನಟ ಸಿಂಬು, ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ; ವಿಡಿಯೋ
ಕನ್ನಡ ಸುದ್ದಿ  /  ಮನರಂಜನೆ  /  ಕರ್ನಾಟಕದ ಪರ ನಿಂತ ತಮಿಳು ನಟ ಸಿಂಬು, ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ; ವಿಡಿಯೋ

ಕರ್ನಾಟಕದ ಪರ ನಿಂತ ತಮಿಳು ನಟ ಸಿಂಬು, ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ; ವಿಡಿಯೋ

ಕರ್ನಾಟಕದವರಿಗೇ ನೀರಿಲ್ಲ, ಅವರು ನಮಗೆ ಎಲ್ಲಿಂದ ಕೊಡ್ತಾರೆ ಎಂದು ಸಿಂಬು ಮಾತನಾಡಿದ್ದರು. ಈ ಮಾತುಗಳಿಂದ ಸಿಂಬು ಕನ್ನಡಿಗರ ಮನ ಗೆದ್ದಿದ್ದರು. ಆದರೆ ತಮಿಳಿಗರ ವಿರೋಧ ಕಟ್ಟಿಕೊಂಡಿದ್ದರು. ಇದೀಗ ಮತ್ತೆ ಸಿಂಬು ಮಾತುಗಳು ಮುನ್ನೆಲೆಗೆ ಬಂದಿದೆ. #ಕಾವೇರಿನಮ್ಮದು ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್‌ ಅಗುತ್ತಿದ್ದು ಸಿಂಬು ಮಾತನಾಡಿರುವ ವಿಡಿಯೋ ವೈರಲ್‌ ಆಗುತ್ತಿದೆ.

ತಮಿಳು ನಟ ಸಿಂಬು ಹಳೆಯ ವಿಡಿಯೋ ಟ್ರೆಂಡ್‌
ತಮಿಳು ನಟ ಸಿಂಬು ಹಳೆಯ ವಿಡಿಯೋ ಟ್ರೆಂಡ್‌

ಪ್ರತಿ ಬಾರಿಯೂ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ರಾಜ್ಯದಲ್ಲಿ ಬರದ ಪರಿಸ್ಥಿತಿ ಇದ್ದರೂ, ಇಲ್ಲಿನ ರೈತರಿಗೆ ನೀರು ಸಾಲುತ್ತಿಲ್ಲವಾದರೂ ತಮಿಳುನಾಡಿಗೆ ಪ್ರತಿದಿನ ನೀರು ಹರಿಸಲೇಬೇಕಿದೆ. ಇದೇ ವಿಚಾರಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸೆಪ್ಟೆಂಬರ್‌ 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದೆ.

ಕಾವೇರಿ ಹೋರಾಟಕ್ಕೆ ಸೆಲೆಬ್ರಿಟಿಗಳ ಬೆಂಬಲ

ಕನ್ನಡ ಪರ ಸಂಘಟನೆಗಳು, ಸಿನಿಮಾ ನಟ ನಟಿಯರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ದರ್ಶನ್‌ ಕೂಡಾ ಇತ್ತೀಚೆಗೆ ರೈತ ಸಂಘಟನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾವೇರಿ ಹೋರಾಟಕ್ಕೆ ನಾವೆಲ್ಲಾ ಬೆಂಬಲಿಸುತ್ತೇವೆ ಎಂದಿದ್ದರು. ಇಂದು (ಸೆಪ್ಟೆಂಬರ್‌ 26) ಸಿನಿಮಾ ಚಟುವಟಿಕೆಗಳನ್ನು ನಿಲ್ಲಿಸಿ ನಿಮ್ಮ ಬೆನ್ನ ಹಿಂದೆ ನಾವಿದ್ದೇವೆ ಎಂದು ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ತಮಿಳು ನಟ ಸಿಂಬು ಕೆಲವು ವರ್ಷಗಳ ಹಿಂದೆ ಕಾವೇರಿ ವಿಚಾರವಾಗಿ ಹೇಳಿದ್ದ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿದೆ.

ಸೂಪರ್‌ ಸ್ಟಾರ್‌ ರಜನಿಕಾಂತ್‌ ಸೇರಿದಂತೆ ಕಾವೇರಿ ವಿಚಾರದಲ್ಲಿ ತಮಿಳು ನಟರು ತಮಿಳುನಾಡಿನ ಪರ ನಿಂತಿದ್ದಾರೆ. ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಕೂಡಾ ಇತ್ತೀಚೆಗೆ ಪ್ರತಿಕ್ರಿಯಿಸಿ ನಮಗೆ ರಜನಿಕಾಂತ್‌ ಕೂಡಾ ಬೇಡ, ಅವರ ಸಿನಿಮಾಗಳೂ ಬೇಡ, ನೀವು ಕರ್ನಾಟಕದವರಾಗಿ ಇಲ್ಲಿಯವರನ್ನು ಬೆಂಬಲಿಸುತ್ತೀರಾ? ತಮಿಳುನಾಡಿನವರನ್ನು ಬೆಂಲಿಸುತ್ತೀರಾ? ಎಂದು ಕೇಳಿದ್ದರು. ಆದರೆ 2018ರಲ್ಲಿ ಕಾವೇರಿ ಹೋರಾಟ ತಾರಕಕ್ಕೆ ಏರಿತ್ತು. ಆ ಸಮಯದಲ್ಲಿ ತಮಿಳು ನಟ ಸಿಂಬು ಕರ್ನಾಟಕದ ಪರ ಮಾತನಾಡಿದ್ದರು.

ಸಿಂಬು ಹಳೆಯ ವಿಡಿಯೋ ಮತ್ತೆ ಟ್ರೆಂಡ್‌

ಹೋರಾಟಕ್ಕಿಂತ ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬೇಕಿದೆ. ಇದು ಮಹಾತ್ಮ ಗಾಂಧಿ ಹುಟಿದ ನಾಡು. ಈ ರೀತಿ ಜಗಳ ಆಡುವ ಬದಲಿಗೆ ಅಹಿಂಸಾ ಮಾರ್ಗ ಅನುಸರಿಸಬೇಕಿದೆ. ಕರ್ನಾಟಕದವರಿಗೇ ನೀರಿಲ್ಲ, ಇನ್ನು ಅವರು ನಮಗೆ ಎಲ್ಲಿಂದ ಕೊಡ್ತಾರೆ ಎಂದು ಸಿಂಬು ಮಾತನಾಡಿದ್ದರು. ಈ ಮಾತುಗಳಿಂದ ಸಿಂಬು ಕನ್ನಡಿಗರ ಮನ ಗೆದ್ದಿದ್ದರು. ಆದರೆ ತಮಿಳಿಗರ ವಿರೋಧ ಕಟ್ಟಿಕೊಂಡಿದ್ದರು. ಇದೀಗ ಮತ್ತೆ ಸಿಂಬು ಮಾತುಗಳು ಮುನ್ನೆಲೆಗೆ ಬಂದಿದೆ. #ಕಾವೇರಿನಮ್ಮದು ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್‌ ಅಗುತ್ತಿದ್ದು ಸಿಂಬು ಮಾತನಾಡಿರುವ ವಿಡಿಯೋ ವೈರಲ್‌ ಆಗುತ್ತಿದೆ.

ನಟ ಸಿಲಂಬರಸನ್‌, ತಮಿಳುನಾಡಿನಲ್ಲಿ ಸಿಂಬು ಎಂದೇ ಫೇಮಸ್.‌ 1984ರಲ್ಲಿ ಸಿಂಬು ಉರವೈ ಕಾಥಾ ಕಿಲಿ ಎಂಬು ಸಿನಿಮಾ ಮೂಲಕ ಬಾಲನಟನಾಗಿ ಚಿತ್ರರಂಗಕ್ಕೆ ಬಂದರು. ನಂತರ ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದರು. 2002ರಲ್ಲಿ ಕಾದಲ್‌ ಅಳಿವತಿಲೈ ಸಿನಿಮಾ ಮೂಲಕ ನಾಯಕನಾಗಿ ಪ್ರಮೋಷನ್‌ ಪಡೆದರು. ಸದ್ಯಕ್ಕೆ ಕೊರೊನಾ ಕುಮಾರ್‌ ಹಾಗೂ ಹೆಸರಿಡದ ಹೊಸ ಸಿನಿಮಾದಲ್ಲಿ ಸಿಂಬು ನಟಿಸುತ್ತಿದ್ದಾರೆ.

Whats_app_banner