ವೆಟ್ಟೈಯಾನ್ ಟ್ವಿಟರ್ ರಿವ್ಯೂ: ರಜನಿಕಾಂತ್‌ ಫ್ಯಾನ್ಸ್‌ಗೆ ಖುಷಿಕೊಟ್ಟ ಸಿನಿಮಾ,ಜ್ಞಾನವೇಲ್ ಚಿತ್ರಕಥೆ, ಅನಿರುದ್ಧ್ ಸಂಗೀತಕ್ಕೆ ಹ್ಯಾಟ್ಸ್‌ಆಫ್‌
ಕನ್ನಡ ಸುದ್ದಿ  /  ಮನರಂಜನೆ  /  ವೆಟ್ಟೈಯಾನ್ ಟ್ವಿಟರ್ ರಿವ್ಯೂ: ರಜನಿಕಾಂತ್‌ ಫ್ಯಾನ್ಸ್‌ಗೆ ಖುಷಿಕೊಟ್ಟ ಸಿನಿಮಾ,ಜ್ಞಾನವೇಲ್ ಚಿತ್ರಕಥೆ, ಅನಿರುದ್ಧ್ ಸಂಗೀತಕ್ಕೆ ಹ್ಯಾಟ್ಸ್‌ಆಫ್‌

ವೆಟ್ಟೈಯಾನ್ ಟ್ವಿಟರ್ ರಿವ್ಯೂ: ರಜನಿಕಾಂತ್‌ ಫ್ಯಾನ್ಸ್‌ಗೆ ಖುಷಿಕೊಟ್ಟ ಸಿನಿಮಾ,ಜ್ಞಾನವೇಲ್ ಚಿತ್ರಕಥೆ, ಅನಿರುದ್ಧ್ ಸಂಗೀತಕ್ಕೆ ಹ್ಯಾಟ್ಸ್‌ಆಫ್‌

ಬಹುನಿರೀಕ್ಷಿತ ವೆಟ್ಟೈಯಾನ್‌ ಚಿತ್ರ ರಿಲೀಸ್‌ ಆಗಿದೆ. ಸಿನಿಮಾ ನೋಡಿದವರು ಟಿಜೆ ಜ್ಞಾನವೇಲ್‌ ಸ್ಕ್ರೀನ್‌ ಪ್ಲೇ, ಅನಿರುದ್ಧ್‌ ಸಂಗೀತಕ್ಕೆ ಹ್ಯಾಟ್‌ ಆಫ್‌ ಹೇಳುತ್ತಿದ್ದಾರೆ. ರಜನಿಕಾಂತ್‌ ಇಷ್ಟಪಡದವರು ಕೂಡಾ ಈ ಸಿನಿಮಾ ನೋಡಿ ಇಷ್ಟಪಡುತ್ತಾರೆ. ಸಿನಿಮಾ ಥ್ರಿಲ್ಲರ್‌ ಮಾತ್ರವಲ್ಲದೆ ಮಾಸ್‌ ಆಗಿದೆ ಎಂದು ಸಿನಿಪ್ರಿಯರು ಟ್ವಿಟರ್‌ ರಿವ್ಯೂ ಬರೆದುಕೊಂಡಿದ್ದಾರೆ.

ಇಂದು ತೆರೆ ಕಂಡ ರಜನಿಕಾಂತ್‌ ಅಭಿನಯದ ವೆಟ್ಟೈಯಾನ್‌ ಸಿನಿಮಾಗೆ ತಲೈವಾ ಅಭಿಮಾನಿಗಳು ಚಪ್ಪಾಳೆ ತಟ್ಟಿದ್ದಾರೆ. ಜ್ಞಾನವೇಲ್ ನಿರ್ದೇಶನ-ಚಿತ್ರಕಥೆ, ಅನಿರುದ್ಧ್ ಸಂಗೀತಕ್ಕೆ ಹ್ಯಾಟ್ಸ್‌ಆಫ್‌ ಹೇಳಿದ್ದಾರೆ.
ಇಂದು ತೆರೆ ಕಂಡ ರಜನಿಕಾಂತ್‌ ಅಭಿನಯದ ವೆಟ್ಟೈಯಾನ್‌ ಸಿನಿಮಾಗೆ ತಲೈವಾ ಅಭಿಮಾನಿಗಳು ಚಪ್ಪಾಳೆ ತಟ್ಟಿದ್ದಾರೆ. ಜ್ಞಾನವೇಲ್ ನಿರ್ದೇಶನ-ಚಿತ್ರಕಥೆ, ಅನಿರುದ್ಧ್ ಸಂಗೀತಕ್ಕೆ ಹ್ಯಾಟ್ಸ್‌ಆಫ್‌ ಹೇಳಿದ್ದಾರೆ. (PC: Lyca Productions Facebook)

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ವೆಟ್ಟೈಯಾನ್‌ ಇಂದು ರಿಲೀಸ್‌ ಆಗಿದೆ. ಟಿಜೆ ಜ್ಞಾನವೇಲ್‌ ನಿರ್ದೇಶನದ ಸಿನಿಮಾ ತಮಿಳು ಸೇರಿದಂತೆ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ರಿಲೀಸ್‌ ಆಗಿದೆ. ವಿದೇಶಗಳಲ್ಲೂ ರಜನಿಕಾಂತ್‌ಗೆ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದು ಅಲ್ಲೂ ಸಿನಿಮಾ ಕ್ರೇಜ್‌ ಹೆಚ್ಚಾಗಿದೆ. ಅಡ್ವಾನ್ಸ್‌ ಬುಕ್ಕಿಂಗ್‌ನಿಂದಲೇ ಸಿನಿಮಾ ಕೋಟ್ಯಂತರ ರೂ. ಲಾಭ ಮಾಡಿದೆ. ಫಸ್ಟ್‌ ಡೇ ಫಸ್ಟ್‌ ಶೋ ನೋಡಿದವರು ಏನಂದ್ರು? ಸಿನಿಮಾಗೆ ಎಷ್ಟು ಮಾರ್ಕ್ಸ್‌ ಕೊಟ್ಟಿದ್ದಾರೆ? ಟ್ವಿಟರ್‌ ರಿವ್ಯೂ ಇಲ್ಲಿದೆ.

ಸಿನಿಮಾ ಫಸ್ಟ್‌ ಆಫ್‌ ಬಹಳ ಚೆನ್ನಾಗಿದೆ. ಅದರಲ್ಲೂ ಇಂಟರ್‌ವೆಲ್‌ ಸಮಯದಲ್ಲಿನ 4 ನಿಮಿಷದ ಆ ಟ್ವಿಸ್ಟ್‌ ಅಂತೂ ನೋಡುಗರನ್ನು ಕುತೂಹಲಕ್ಕೆ ತಳ್ಳುತ್ತದೆ. ಟಿಜೆ ಜ್ಞಾನವೇಲ್‌ ಚೆನ್ನಾಗಿ ಕಥೆ ಬರೆದಿದ್ದಾರೆ ಎಂದು @Searching4ligh1 ಟ್ವಿಟರ್‌ ಯೂಸರ್‌ ಒಬ್ಬರು ಬರೆದುಕೊಂಡಿದ್ದಾರೆ.

ಅನಿರುದ್ಧ್‌ ರವಿಚಂದರ್‌ ಸಂಗೀತದ ಬಗ್ಗೆ ಹೇಳುವಂತೇ ಇಲ್ಲ.‌ ಆತ ತಮ್ಮ ಸಂಗೀತದ ಮೂಲಕ ನಮ್ಮನ್ನು ಯಾವಾಗಲೂ ಮೋಡಿ ಮಾಡುತ್ತಾರೆ ಎಂದು ಮತ್ತೊಬ್ಬರು ಯೂಸರ್‌ ಸಿನಿಮಾ ಮ್ಯೂಸಿಕ್‌ ಬಗ್ಗೆ ಬರೆದುಕೊಂಡಿದ್ದಾರೆ.

ಗ್ರೇಟ್‌ ಸಿನಿಮಾ, ಫಸ್ಟ್‌ ಹಾಫ್‌ ಚೆನ್ನಾಗಿದೆ, ಎಂದಿನಂತೆ ರಜನಿಕಾಂತ್‌ ಆಕ್ಟಿಂಗ್‌ ಚೆನ್ನಾಗಿದೆ, ಟಿಜೆ ಜ್ಞಾನವೇಲ್‌ ಸ್ಕ್ರೀನ್‌ ಪ್ಲೇ ಸಖತ್‌ ಇದೆ, ಸೆಕೆಂಡ್‌ ಆಫ್‌ ಕೂಡಾ ನೋಡುಗರನ್ನು ಕುರ್ಚಿ ತುದಿಗೆ ತಂದು ಕೂರಿಸುತ್ತದೆ ಎಂದು @TamilJournalist ಯೂಸರ್‌ ರಿವ್ಯೂ ಬರೆದುಕೊಂಡಿದ್ದಾರೆ.

 

ಮೊದಲಾರ್ಧ ಸೂಪರ್‌, ಸ್ಕ್ರೀನ್‌ ಪ್ಲೇ ಮಸ್ತ್‌, ಸಿನಿಮಾಟೋಗ್ರಫಿ ಹಾಗೂ ಸಂಗೀತ ಟಾಪ್‌ನಲ್ಲಿದೆ, ರಜನಿಕಾಂತ್‌ ಇಷ್ಟಪಡದವರೂ ಈ ಸಿನಿಮಾವನ್ನು ಇಷ್ಟಪಡುತ್ತಾರೆ. ಇದು ಥ್ರಿಲ್ಲರ್‌ ಸಿನಿಮಾ ಮಾತ್ರವಲ್ಲ, ಮಾಸ್‌ ಸಿನಿಮಾ ಕೂಡಾ, ನಿರ್ದೇಶಕ ಜ್ಞಾನವೇಲ್‌ ಸೂಪರ್‌ ಎಂದು @s7IaM ಹೆಸರಿನ ಟ್ವಿಟರ್‌ ಯೂಸರ್‌ , ಸಿನಿಮಾವನ್ನು ಹೊಗಳಿದ್ದಾರೆ.

ಇಂಟರ್‌ವೆಲ್‌ ಬೆಂಕಿ, ಟಿಜೆ ಜ್ಞಾನವೇಲ್‌ ಬಹಳ ಬ್ರಿಲಿಯಂಟ್‌, ಹೀರೋ ಇಂಟ್ರೊಡಕ್ಷನ್‌ ಬಿಜಿಎಂ ಸೂಪರ್‌, ತಲೈವಾ ರಜನಿಕಾಂತ್‌ ಆಕ್ಟಿಂಗ್‌ ಸೂಪರ್‌ ಎಂದು @msdjleo ಎಂಬ ಯೂಸರ್‌ ರಿವ್ಯೂ ನೀಡಿದ್ದಾರೆ.

ಆದರೆ ಕೆಲವರು ನೆಗೆಟಿವ್‌ ರಿವ್ಯೂ ಕೂಡಾ ಬರೆದುಕೊಂಡಿದ್ದು ಸಿನಿಮಾ ನೋಡಿ ರಜನಿಕಾಂತ್‌ ಅಭಿಮಾನಿಗಳಿಗೆ ಬಹಳ ನಿರಾಶೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ವೆಟ್ಟೈಯಾನ್ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಸುಭಾಸ್ಕರನ್‌ ನಿರ್ಮಿಸಿದ್ದು ಜೈ ಭೀಮ್‌, ಒರುವನ್‌ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲು ನಿರ್ದೇಶನ ಮಾಡಿದ್ದಾರೆ. ಕನ್ನಡದ ಖ್ಯಾತ ನಟ ಕಿಶೋರ್‌ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಮಲಯಾಳಂನ ಫಹಾದ್‌ ಫಾಸಿಲ್‌, ತೆಲುಗಿನ ರಾವ್‌ ರಮೇಶ್‌, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್‌ ಹಾಗೂ ಇನ್ನಿತರ ಕಲಾವಿದರು ಇದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್‌ ರವಿಚಂದರ್‌ ಚಿತ್ರದ ಹಾಡೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Whats_app_banner