ಬಿಗ್ ಬಾಸ್ ಮನೆಯಲ್ಲಿ ದೆವ್ವದ ಕಾಟ, ಇದ್ದಕ್ಕಿಂದ್ದಂತೆ ಒಡೀತಿವೆ ತಟ್ಟೆಗಳು! ನೆಗೆಟಿವ್ ಎನರ್ಜಿ ಬಗ್ಗೆ ಸ್ಪರ್ಧಿಗಳ ಎದೆಯಲ್ಲಿ ಢವ ಢವ
ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದ್ಯಾ!? ಇಂಥದ್ದೊಂದು ಪ್ರಶ್ನೆ ಇದೀಗ ಮನೆ ಮಂದಿಯನ್ನು ಭಯಭೀತಗೊಳಿಸಿದೆ. ಸುಖಾಸುಮ್ಮನೆ ಮನೆಯಲ್ಲಿನ ಪಿಂಗಾಣಿ ತಟ್ಟೆಗಳು ಕೆಳಕ್ಕೆ ಬಿದ್ದು ಒಡೆಯುತ್ತಿವೆ. ಈ ನಿಗೂಢಕ್ಕೆ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.
Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಶುರುವಾಗಿ ಹತ್ರತ್ರ ಎರಡು ವಾರಗಳ ಸನಿಹಕೆ ಬಂದು ನಿಂತಿದೆ. ಆರಂಭದಿಂದಲೂ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ನಡುವೆ ಶಾಂತಿ, ನೆಮ್ಮದಿ ಎಂಬುದೇ ಇಲ್ಲ. ಮೊದಲ ದಿನದಿಂದಲೂ ಕಿತ್ತಾಟ, ವಾಕ್ಸಮರ ಮುಂದುವರಿಯುತ್ತಲೇ ಬಂದಿದೆ. ಅದರಲ್ಲೂ ಲಾಯರ್ ಜಗದೀಶ್ ಅವರ ವರ್ತನೆ ಇಡೀ ಮನೆಮಂದಿಗೆ ಅಸಹನೀಯ ಎನಿಸತೊಡಗಿದೆ. ಕಂಟೆಂಟ್ ಸಲುವಾಗಿ ಅನಿಸಿದ್ದೆಲ್ಲವನ್ನು ಮಾಡ್ತಿದ್ದಾರೆ ಎಂದು ಮನೆಯ ಸ್ಪರ್ಧಿಗಳೇ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರೊಬ್ಬರಿಂದ ಇಡೀ ಮನೆಯವರ ಮನಸ್ಥಿತಿಯೇ ಬದಲಾಗಿದೆ. ಈ ನಡುವೆ, ಬಿಗ್ ಬಾಸ್ ಮನೆಯಲ್ಲಿ ದೆವ್ವದ ಕಾಟ ಶುರುವಾಗಿದ್ಯಾ?
ಹೀಗೊಂದು ಪ್ರಶ್ನೆಯನ್ನು ಸ್ವತಃ ಬಿಗ್ ಬಾಸ್ ಮನೆ ಮಂದಿಯೇ ಊಹಿಸಿದ್ದಾರೆ. ಅದಕ್ಕೆ ಕಾರಣವಾಗಿದ್ದು, ಮನೆಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ನಡೆದ ಒಂದಷ್ಟು ಘಟನಾವಳಿಗಳು. ಬಿಗ್ ಬಾಸ್ ಶುರುವಾಗಿ ಎರಡು ವಾರದ ಹತ್ತಿರ ಬಂದರೂ, ಇಲ್ಲಿಯವರೆಗೂ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಒಂದಷ್ಟು ಅಚ್ಚರಿಗಳಿಗೆ ಈಗ ಪ್ರೋಮೋ ಮೂಲಕ ಉತ್ತರ ನೀಡಿದ್ದಾರೆ ಬಿಗ್ ಬಾಸ್. ಹಾಗಾದರೆ ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದೇನು? ಸ್ಪರ್ಧಿಗಳ ಎದೆಯಲ್ಲಿ ನಡುವ ಶುರುವಾಗಿದ್ದಾದರೂ ಏಕೆ? ಇಲ್ಲಿದೆ ನೋಡಿ ವಿವರ.
ಏಕಾಏಕಿ ಕೆಳಕ್ಕೆ ಬಿದ್ದು ಒಡೆದ ತಟ್ಟೆ
ಸ್ವರ್ಗ ನಿವಾಸಿಗಳಾದ ಹಂಸ, ಭವ್ಯಾ, ತ್ರಿವಿಕ್ರಮ್, ರಂಜಿತ್, ಧನರಾಜ್, ಕೀರ್ತಿ, ಗೌತಮಿ ಜಾಧವ್ ಒಂದೆಡೆ ಕೂತು ಚರ್ಚೆ ಮಾಡುತ್ತ ಕೂತಿದ್ದಾರೆ. ಇದೇ ವೇಳೆ ಅಡುಗೆ ಮನೆಯಲ್ಲಿನ ಪಿಂಗಾಣಿ ತಟ್ಟೆಯೊಂದು ಕೆಳಕ್ಕೆ ಬಿದ್ದು ಒಡೆದಿದೆ. ತಟ್ಟೆ ಬಿದ್ದ ಸಪ್ಪಳಕ್ಕೆ ಗಾಬರಿಯಲ್ಲಿಯೇ ಮನೆಮಂದಿ ಎದ್ದು ಅಡುಗೆ ಕೋಣೆಯತ್ತ ನೋಡಿದ್ದಾರೆ. ಅಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಕಿಚನ್ಗೆ ಎಲ್ಲರೂ ತೆರಳಿದ್ದಾರೆ. "ಅಯ್ಯೋ ಈ ಮನೆಯಲ್ಲಿ ದೆವ್ವ ಇದೆಯಾ ಅಂತ ಅನಿಸ್ತಿದೆ" ಎಂದು ಐಶ್ವರ್ಯಾ ಸಿಂಧೋಗಿ ಹೇಳಿದ್ದಾರೆ.
ಬೆಚ್ಚಿ ಬಿದ್ದ ಐಶ್ವರ್ಯಾ, ಭವ್ಯಾ
"ನನ್ನ ತಲೆಯಲ್ಲಿ ಅದೇ ಓಡ್ತಿದೆ. ನನಗೆ ಈ ಮನೆಯಲ್ಲಿ ಯಾವುದೂ ಸೂಪರ್ ನ್ಯಾಚುಲರ್ ಆಕ್ಟಿವಿಟಿ ಆಗ್ತಿದೆಯಾ ಎಂದು ಅನಿಸ್ತಿದೆ ಎಂದಿದ್ದಾರೆ. ನೆಗೆಟಿವ್ ಎನರ್ಜಿ ಡೆಸ್ಟ್ರಾಯ್ ಆಗ್ತಿದೆ ಅಂತ ಅಂದುಕೊಳ್ಳಿ, ದೆವ್ವ ಗಿವ್ವ ಇಲ್ಲ. ಯಾವುದೇ ಸ್ಥಳದಲ್ಲಿಯೂ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿ ಇದ್ದೇ ಇರುತ್ತದೆ ಎಂದು ಗೌತಮಿ ಹೇಳಿದ್ದಾರೆ. ಸುಮ್ ಸುಮ್ನೆ ಒಡೆಯುತ್ತಿದ್ದರೆ ಒಂಥರಾ ಆಗುತ್ತೆ ಎಂದು ಭವ್ಯಾ ಗೌಡ ಕೊಂಚ ಅಳುಕಿನಲ್ಲಿಯೇ, ಒಡೆದ ತಟ್ಟಿಯನ್ನು ಡಸ್ಟ್ ಬಿನ್ಗೆ ಹಾಕಿದ್ದಾರೆ. ಎರಡೆರಡು ಸಲ ಹೀಗೆ ಏಕೆ ಆಗ್ತಿದೆ ಎಂದು ಕೊಂಚ ಅಚ್ಚರಿಯಲ್ಲಿದ್ದಾರೆ ಮನೆ ಮಂದಿ. ಹೀಗೆ ಬಿದ್ದ ತಟ್ಟೆಯ ತುಣುಕುಗಳನ್ನು ತುಂಬಿ ಡಸ್ಟ್ಬಿನ್ಗೆ ಹಾಕಿ ಇತ್ತ ಬರುತ್ತಿದ್ದಂತೆ, ಮತ್ತೊಂದು ತಟ್ಟೆ ಬಿದ್ದ ಸದ್ದಾಗಿದೆ. ಮತ್ತೆ ಎಲ್ಲರೂ ಕೊಂಚ ಗಾಬರಿಯಾಗಿದ್ದಾರೆ. ಕಿಚನ್ನಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ.
8 ಮಂದಿ ನಾಮಿನೇಟ್
ಇನ್ನು ಮುಖಕ್ಕೆ ಮಸಿ ಹಚ್ಚಿಸಿಕೊಳ್ಳುವ ಸ್ಪರ್ಧಿಗಳು ಈ ವಾರದ ನಾಮಿನೇಟ್ ಆಗಲಿದ್ದಾರೆ ಎಂದು ಹೇಳಿದ್ದರು ಬಿಗ್ ಬಾಸ್. ಅದರಂತೆ, ಎರಡನೇ ವಾರ ಮನೆಯಿಂದ ಹೊರ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಸ್ವರ್ಗ ನಿವಾಸಿಗಳಾದ ತ್ರಿವಿಕ್ರಮ್, ಐಶ್ವಯಾ, ಧನ್ರಾಜ್ ಮತ್ತು ರಂಜಿತ್ ನಾಮಿನೇಟ್ ಆದರೆ, ನರಕ ನಿವಾಸಿಗಳಲ್ಲಿ ಅನುಷಾ ರೈ, ಗೋಲ್ಡ್ ಸುರೇಶ್, ಜಗದೀಶ್, ಮಾನಸಾ ಸಂತೋಷ್ ನಾಮಿನೇಟ್ ಆಗಿ ಮುಖಕ್ಕೆ ಮಸಿ ಬಳಿಸಿಕೊಂಡರು. ಈ ಮೂಲಕ ಈ ವಾರ ಒಟ್ಟು 8 ಮಂದಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.
ವಿಭಾಗ