ನಯನತಾರಾ ಅಭಿಮಾನಿಗಳಿಗೆ ಹಬ್ಬ; ನೆಟ್ಫ್ಲಿಕ್ಸ್ನಲ್ಲಿ ಬರ್ತಿದೆ ಲೇಡಿ ಸೂಪರ್ಸ್ಟಾರ್ ಜೀವನದ ಡಾಕ್ಯುಮೆಂಟರಿ ಬಿಯಾಂಡ್ ದಿ ಫೇರಿ ಟೇಲ್
ನಯನತಾರಾ ಬಿಯಾಂಡ್ ದಿ ಫೇರಿ ಟೇಲ್ ಟ್ರೈಲರ್ ಬಿಡುಗಡೆಯಾಗಿದೆ. ನೆಟ್ಫ್ಲಿಕ್ಸ್ ಈ ಟ್ರೇಲರ್ ಹಂಚಿಕೊಂಡಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ವೈಯಕ್ತಿಕ ಜೀವನದ ಒಂದು ನೋಟವನ್ನು ನಾವು ಈ ಟ್ರೇಲರ್ನಲ್ಲಿ ನೋಡಬಹುದು.
ನಯನತಾರಾ ಬಿಯಾಂಡ್ ದಿ ಫೇರಿ ಟೇಲ್ ಟ್ರೈಲರ್ ಬಿಡುಗಡೆಯಾಗಿದೆ. ಲೇಡಿ ಸೂಪರ್ಸ್ಟಾರ್ ಎಂದೇ ಜನಪ್ರಿಯವಾಗಿರುವ ನಟಿ ನಯನತಾರಾ ತಮ್ಮ ಖಾಸಗೀ ಜೀವನದ ಕುರಿತು ಇದರಲ್ಲಿ ಹೇಳಿಕೊಂಡಿದ್ದಾರೆ. ಹಲವಾರು ನಟರೂ ಸಹ ಅವರ ಬಗ್ಗೆ ಮಾತನಾಡಿದ್ದಾರೆ. ಅವರ ಜೀವನ ಹೇಗಿತ್ತು? ಏನೆಲ್ಲ ಕಷ್ಟಗಳನ್ನು ಅನುಭವಿಸಬೇಕಾಗಿ ಬಂತು? ಅವರ ವೈವಾಹಿಕ ಜೀವನ ಹೀಗೆ ಹತ್ತು ಹಲವು ವಿಚಾರಗಳನ್ನು ಇದರಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಫ್ಯಾಮಿಲಿಯನ್ನು ತುಂಬಾ ಪ್ರೀತಿಸುವ ನಯನತಾರಾ ತನ್ನ ಬಗ್ಗೆ ತಾನೇ ಮಾತನಾಡಿದ್ದಾರೆ.
ಶನಿವಾರ ಬಿಡುಗಡೆಯಾದ ಟ್ರೇಲರ್ ಪ್ರೇಕ್ಷಕರಿಗೆ ನಯನತಾರಾ ಜೀವನದಲ್ಲಿ ಏನೆಲ್ಲ ಆಗಿದೆ ಎಂಬುದರ ಬಗ್ಗೆ ಒಂದು ಸಣ್ಣ ಇಣುಕು ನೋಟವನ್ನು ನೀಡುತ್ತದೆ. ರಾಣಾ ದಗ್ಗುಬಾಟಿ, ತಾಪ್ಸಿ ಪನ್ನು, ಮತ್ತು ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳೂ ಸಹ ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಹಿರಿಯ ನಿರ್ದೇಶಕ ಗೌತಮ್ ಮೆನನ್ ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ನವೆಂಬರ್ 18 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಹಿನ್ನಲೆಯಲ್ಲಿ ನೆಟ್ಫ್ಲಿಕ್ಸ್ ಟ್ರೇಲರ್ ಬಿಡುಗಡೆ ಮಾಡಿದೆ. ನಯನತಾರಾ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದು ಹೇಗೆ ಎನ್ನುವ ಕುರಿತು ಇದರಲ್ಲಿದೆ. ಅವರು ತಮ್ಮ ಸಿನಿಮಾಗಳಲ್ಲಿ ಪವರ್ ಫುಲ್ ರೋಲ್ ಲುಕ್ನಲ್ಲಿ ಮಿಂಚಿದ ಬಗೆಯನ್ನು ಇದರಲ್ಲಿ ತೋರಿಸಲಾಗಿದೆ. ಆ ನಂತರ ಕನ್ನಡದ ಹೀರೋ ಉಪೇಂದ್ರ ನಯನತಾರಾ ಅವರ ಬಗ್ಗೆ ಮಾತನಾಡಿದ್ದಾರೆ. ಎಲ್ಲರೂ ಅವರನ್ನು ಲೇಡಿ ಸೂಪರ್ಸ್ಟಾರ್ ಎಂದು ಕರೆಯುತ್ತಾರೆ ನಮಗೆಲ್ಲಾ ಗೋತ್ತೇ ಇದೆ ಎನ್ನುವ ರೀತಿಯಲ್ಲಿ ಅವರ ಮಾತು ಆರಂಭವಾಗುತ್ತದೆ.
ನಿರ್ದೇಶಕ ಅಟ್ಲಿ ಕೂಡ ಅವರನ್ನು ಲೇಡಿ ಸೂಪರ್ಸ್ಟಾರ್ ನಯನತಾರಾ ಎಂದು ಹೊಗಳಿದ್ದಾರೆ. ಮಹಿಳಾ ನಟಿ ಎಂದರೇ ಹೀಗೇ ಇರಬೇಕು ಎನ್ನುವ ಕಟ್ಟಳೆಗಳನ್ನು ಬ್ರೇಕ್ ಮಾಡಿದರವರು ನಯನತಾರಾ ಎಂದು ಇನ್ನೊಬ್ಬರು ಹೇಳಿದ್ದಾರೆ. ಇನ್ನು ಅವರ ತಾಯಿ ಹಾಗೂ ಕುಟುಂಬದ ಬಗ್ಗೆ ಮಾತನಾಡುತ್ತಾ ಅವರು ಭಾವುಕರಾಗಿದ್ದಾರೆ. ಹಿಂದೆಲ್ಲ ನಯತಾರಾ ಅವರ ಬಗ್ಗೆ ನೆಗಟಿವ್ ಸುದ್ದಿಗಳಾದಾಗ ಅವರು ಏನು ಮಾಡಿದ್ರು. ಅವರ ಫ್ಯಾಮಿಲಿ ಎಷ್ಟೆಲ್ಲ ನೋವು ಅನುಭವಿಸಿತ್ತು ಎಂಬುದರ ಕುರಿತು ನಯನತಾರಾ ಮಾತನಾಡಿದ್ದಾರೆ.
ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿಯಾಗಿ ತರಲು ಕಾರಣವೇನು ಎಂದು ಕೇಳಿದಾಗ.. ಜನರು ಸಂತೋಷವಾಗಿರಬೇಕು ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಹಾಗೆಯೇ ಪ್ರತಿಯೊಬ್ಬರೂ ಇತರರ ಸಂತೋಷವನ್ನು ನೋಡಿ ಸಂತೋಷವನ್ನು ಅನುಭವಿಸಲು ಬಯಸುತ್ತಾರೆ. ಅದಕ್ಕೇ ಡಾಕ್ಯುಮೆಂಟರಿ ಮಾಡಲು ಒಪ್ಪಿಕೊಂಡೆ ಎಂದು ನಯನತಾರಾ ಹೇಳಿದ್ದಾರೆ. ಟ್ರೇಲರ್ ಕೊನೆಯಲ್ಲಿ, ವಿಘ್ನೇಶ್ ಶಿವನ್ ನಯನ ಮದುವೆಯ ಬಗ್ಗೆ ಪ್ರತಿಕ್ರಿಯಿಸಿ ನಯನತಾರಾ ನನ್ನ ಜೀವನದಲ್ಲಿ ಬಂದ ಪವಾಡ ಎಂದು ಹೇಳಿದ್ದಾರೆ.