ಬರಿ ಅಶ್ಲೀಲ, ಡಬಲ್ ಮೀನಿಂಗ್; ಬಿಗ್​ ಬಾಸ್ ಶೋ ನಿಷೇಧಕ್ಕೆ ಒತ್ತಾಯ, ಕನ್ನಡಿಗರಿಗೆ ಹೆಚ್ಚಿದ ಆತಂಕ
ಕನ್ನಡ ಸುದ್ದಿ  /  ಮನರಂಜನೆ  /  ಬರಿ ಅಶ್ಲೀಲ, ಡಬಲ್ ಮೀನಿಂಗ್; ಬಿಗ್​ ಬಾಸ್ ಶೋ ನಿಷೇಧಕ್ಕೆ ಒತ್ತಾಯ, ಕನ್ನಡಿಗರಿಗೆ ಹೆಚ್ಚಿದ ಆತಂಕ

ಬರಿ ಅಶ್ಲೀಲ, ಡಬಲ್ ಮೀನಿಂಗ್; ಬಿಗ್​ ಬಾಸ್ ಶೋ ನಿಷೇಧಕ್ಕೆ ಒತ್ತಾಯ, ಕನ್ನಡಿಗರಿಗೆ ಹೆಚ್ಚಿದ ಆತಂಕ

Tamil Bigg Boss Ban: ತಮಿಳುನಾಡಿನ ಖಾಸಗಿ ಟಿವಿ ಚಾನೆಲ್​ಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್​ ಬಾಸ್ 8ರ ಆವೃತ್ತಿಯನ್ನು ನಿಷೇಧಿಸುವಂತೆ ಕರುತುರಿಮೈ ಪಾತುಕಪ್ಪು ಕೂಟಮೈಪ್ಪು ಸಂಘಟನೆಯ ಸದಸ್ಯರು ಆಗ್ರಹಿಸಿದ್ದಾರೆ.

ಬಿಗ್​ ಬಾಸ್ ಶೋ ನಿಷೇಧಕ್ಕೆ ಒತ್ತಾಯ, ಕನ್ನಡಿಗರಿಗೆ ಹೆಚ್ಚಿದ ಆತಂಕ
ಬಿಗ್​ ಬಾಸ್ ಶೋ ನಿಷೇಧಕ್ಕೆ ಒತ್ತಾಯ, ಕನ್ನಡಿಗರಿಗೆ ಹೆಚ್ಚಿದ ಆತಂಕ

ತೂತುಕುಡಿ (ತಮಿಳುನಾಡು): ಖಾಸಗಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ 'ಬಿಗ್ ಬಾಸ್' ಕಾರ್ಯಕ್ರಮವನ್ನು ಸಂಪೂರ್ಣ ನಿಷೇಧಿಸುವಂತೆ ಆಗ್ರಹಿಸಿ ಕರುತುರಿಮೈ ಪಾತುಕಪ್ಪು ಕೂಟಮೈಪ್ಪು ಸಂಘಟನೆಯ ಸದಸ್ಯರು ಇಲ್ಲಿನ ಕೋವಿಲ್‌ಪಟ್ಟಿ ಆರ್‌ಡಿಒಗೆ ಮನವಿ ಸಲ್ಲಿಸಿದ್ದಾರೆ. ಬಿಗ್​ ಬಾಸ್ ನೋಡಲು ಅಸಹ್ಯವಾಗುತ್ತಿದೆ. ಕುಟುಂಬ ಸಮೇತ ವೀಕ್ಷಿಸಲು ಆಗುತ್ತಿಲ್ಲ. ಅಶ್ಲೀಲವೇ ಜೀವನ ಎನ್ನುವಂತೆ ಬಿಂಬಿಸಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದ್ದು, ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದೆ. ಹೌದು, ತಮಿಳಿನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ನಿಷೇಧಕ್ಕೆ ಒತ್ತಾಯಿಸಿದ್ದಾರೆ. ಸೀಸನ್ 8ರ ಶೋವನ್ನು ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ನಿರೂಪಿಸುತ್ತಿದ್ದಾರೆ. ಇದಕ್ಕೂ ಮುನ್ನ ಕಮಲ್ ಹಾಸನ್ ಶೋ ನಡೆಸಿಕೊಡುತ್ತಿದ್ದರು.

ಕೂಟಮೈಪ್ಪು ಅಧ್ಯಕ್ಷ ತಮಿಳರಸನ್ ಅವರು, 100 ದಿನಗಳ ಕಾಲ ಸೆರೆಯಲ್ಲಿರುವ ಪುರುಷ ಮತ್ತು ಮಹಿಳಾ ಕಲಾವಿದರ ದೈನಂದಿನ ಚಟುವಟಿಕೆಗಳು ಮತ್ತು ಖಾಸಗಿ ವ್ಯವಹಾರಗಳು ರಹಸ್ಯ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ದೃಶ್ಯಗಳನ್ನು ಡಬಲ್ ಮೀನಿಂಗ್​​ಗಳೊಂದಿಗೆ ಪ್ರಸಾರ ಮಾಡಲಾಗುತ್ತಿದೆ. ಕುಟುಂಬ ಸದಸ್ಯರೊಂದಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ವೀಕ್ಷಿಸಲು ಆಗುವುದಿಲ್ಲ. ಇದು ಜನರನ್ನು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತದೆ ಎಂದು ಕಿಡಿಕಾರಿದ್ದಾರೆ. ಈ ಸುದ್ದಿ ಕೇಳಿದ ತಕ್ಷಣ ಕನ್ನಡದಲ್ಲೂ ಬ್ಯಾನ್ ಆಗುತ್ತಾ ಎಂಬ ಆತಂಕದಲ್ಲಿದ್ದಾರೆ ಫ್ಯಾನ್ಸ್. ಆದರೆ, ಮನವಿ ಸಲ್ಲಿಸುವುದು ತಮಿಳಿನಲ್ಲಿ ಬ್ಯಾನ್ ಮಾಡುವಂತೆ. ಹಾಗಾಗಿ ಕನ್ನಡಿಗರು ಯಾವುದೇ ಆತಂಕ ಪಡುವಂತಿಲ್ಲ.

ಸೆನ್ಸಾರ್ ಮಂಡಳಿಯ ಅನುಮೋದನೆಗೆ ಒತ್ತಾಯ

ಹೀಗಾಗಿ 'ಬಿಗ್ ಬಾಸ್' ಕಾರ್ಯಕ್ರಮದ ಪ್ರಸಾರವನ್ನು ನಿಷೇಧಿಸಬೇಕು ಎಂದು ಸಂಘಟನೆಯ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಣ್ಣ ಪರದೆಯಲ್ಲಿ ಪ್ರಸಾರವಾಗುವ ಸಂಚಿಕೆಗಳಿಗೆ ಸೆನ್ಸಾರ್ ಮಂಡಳಿಯ ಅನುಮೋದನೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅವರ ಉಡುಪುಗಳು ಸಾಂಸ್ಕೃತಿಕ ಉಡುಪುಗಳಿಗೆ ವಿರುದ್ಧವಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ. ಈ ಕುರಿತು ಮನವಿ ಸಲ್ಲಿಸುವ ಮುನ್ನ ಸದಸ್ಯರು ಕೋವಿಲ್‌ಪಟ್ಟಿ ಆರ್‌ಡಿಒ ಕಚೇರಿ ಎದುರು ಧರಣಿ ನಡೆಸಿದರು. ಅಧ್ಯಕ್ಷ ತಮಿಳರಸನ್, ಕಾರ್ಯದರ್ಶಿ ಅಡ್ವ ಬೆಂಜಮಿನ್ ಫ್ರಾಂಕ್ಲಿನ್, ಖಜಾಂಚಿ ಸುಬೇತಾರ್ ಕರುಪಸಾಮಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಮಿಳು ಬಿಗ್ ​ಬಾಸ್ 8ರ ಸ್ಪರ್ಧಿಗಳು

ಆರ್ ಜೆ ಅನಂತಿ

ವಿಜೆ ಜಾಕ್ವೆಲಿನ್

ಸಂಚನಾ ನಮಿದಾಸ್

ದರ್ಶ ಗುಪ್ತಾ

ಸುನೀತಾ ಗೊಗೊಯ್

ರವೀಂದರ್ ಚಂದ್ರಶೇಖರನ್

ಮುತ್ತುಕುಮಾರನ್ ಜೆಗತೀಸನ್

ಸೌಂದರ್ಯ ನಂಜುಂಡನ್

ದೀಪಕ್ ದಿನಕರ್

ಜೆಫ್ರಿ

ರಂಜಿತ್

ವಿಜೆ ವಿಶಾಲ್

ಅರ್ನವ್

ಪವಿತ್ರಾ ಜನನಿ

ಅಂಶಿತಾ ಅಕ್ಬರ್ಷ

ಅರುಣ್ ಪ್ರಸಾದ್

ತರ್ಷಿಕಾ

ಸತ್ಯ

Whats_app_banner