Malaika with Arbaaz Khan: ಮಾಜಿ ಪತಿಯೊಂದಿಗೆ ಡಿನ್ನರ್‌ಗೆ ಹೋದ ಮಲೈಕಾ...ಅರ್ಜುನ್ ಕಪೂರ್ ಬೈಯ್ಯೋದಿಲ್ವಾ ಎಂದ ನೆಟಿಜನ್ಸ್..ವಿಡಿಯೋ!
ಮಲೈಕಾ ( Malaika Arora)ಹಾಗೂ ಅರ್ಬಾಜ್ ಖಾನ್ ( Arbaaz Khan) ಜೊತೆಯಾಗಿ ರೆಸ್ಟೋರೆಂಟ್ ಒಳಗೆ ಹೋಗುತ್ತಿರುವ ವಿಡಿಯೋವನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಈ ವಿಡಿಯೋಗೆ ನೆಟಿಜನ್ಸ್ ನಾನಾ ರೀತಿ ಕಮೆಂಟ್ ಮಾಡುತ್ತಿದ್ದಾರೆ.
ಡಿವೋರ್ಸ್ ಆದ ಸೆಲೆಬ್ರಿಟಿಗಳು ಮತ್ತೆ ಒಟ್ಟಿಗೆ ತಿರುಗಾಡುವುದು ಈಗ ಬಾಲಿವುಡ್‌ನಲ್ಲಿ ಟ್ರೆಂಡ್ ಆಗಿದೆ. ನಾವು ಬೇರೆಯಾಗುತ್ತಿದ್ದೇವೆ ಎಂದು ಘೋಷಿಸಿದ್ದ ಆಮೀರ್ ಖಾನ್ (Aarmir Khan) ಹಾಗೂ ಕಿರಣ್ ರಾವ್ (Kiran Rao) ಇತ್ತೀಚೆಗೆ ಪೂಜೆ ಕಾರ್ಯಕ್ರಮವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಮಲೈಕಾ ಅರೋರ ಹಾಗೂ ಅರ್ಬಾಜ್ ಖಾನ್ ಕೂಡಾ ಇದೀಗ ಎರಡನೇ ಬಾರಿ ಸಾರ್ವಜನಿಕವಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಕಾಫಿ ಜಾಹೀರಾತೊಂದರ ಚಿತ್ರೀಕರಣದಲ್ಲಿ ಮೊದಲ ಬಾರಿಗೆ ಭೇಟಿ ಆಗಿದ್ದ ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್, ಕೆಲವು ದಿನಗಳ ಕಾಲ ಪ್ರೀತಿಸಿ 1998 ರಲ್ಲಿ ಧಾಂ ಧೂಂ ಅಂತ ಮದುವೆಯಾದರು. ಆದರೆ 2016 ರಲ್ಲಿ ನಾವಿಬ್ಬರೂ ಬೇರೆಯಾಗುತ್ತಿದ್ದೇವೆ ಎಂದು ಘೋಷಿಸಿದ ಈ ಜೋಡಿ ಮರು ವರ್ಷ (2017) ಅಧಿಕೃತವಾಗಿ ವಿಚ್ಛೇದನ ಪಡೆದರು. ಈ ದಂಪತಿಗೆ ಅರ್ಹಾನ್ ಖಾನ್ ಎಂಬ 21 ವರ್ಷದ ಪುತ್ರ ಇದ್ದಾನೆ. ಮಲೈಕಾ ಅರೋರ ಈಗ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಒಟ್ಟಿಗೆ ಅನೇಕ ಬಾರಿ ಫಾರಿನ್ ಟ್ರಿಪ್ ಮಾಡಿ ಬಂದಿದ್ದಾರೆ. ಕಳೆದ ವರ್ಷ ಪುತ್ರ ಅರ್ಹಾನ್ ಖಾನ್‌ನನ್ನು ಬೀಳ್ಕೊಡಲು ಈ ಜೋಡಿ ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಾಪಸ್ ಹೋಗುವಾಗ ಇಬ್ಬರೂ ಹಗ್ ಮಾಡಿ ಮಾಧ್ಯಮಗಳಿಗೆ ಒಟ್ಟಿಗೆ ಪೋಸ್ ನೀಡಿದ್ದರು. ಈ ನಡುವೆ ಮಲೈಕಾ ಮತ್ತೊಮ್ಮೆ ತಮ್ಮ ಮಾಜಿ ಪತಿ ಜೊತೆ ಕಾಣಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಮಲೈಕಾ ತಮ್ಮ ಮಾಜಿ ಪತಿ ಜೊತೆ ಮುಂಬೈನ ಬಾಂದ್ರಾದ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆ ತೆರಳಿದ್ದಾರೆ. ಮಲೈಕಾ ಹಾಗೂ ಅರ್ಬಾಜ್ ಖಾನ್ ಜೊತೆಯಾಗಿ ರೆಸ್ಟೋರೆಂಟ್ ಒಳಗೆ ಹೋಗುತ್ತಿರುವ ವಿಡಿಯೋವನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಈ ವಿಡಿಯೋಗೆ ನೆಟಿಜನ್ಸ್ ನಾನಾ ರೀತಿ ಕಮೆಂಟ್ ಮಾಡುತ್ತಿದ್ದಾರೆ. ನೀವಿಬ್ರೂ ಬೇರೆಯಾಗಿದ್ದರೂ ಯಾವ ಕಾರಣಕ್ಕೆ ಈ ರೀತಿ ಜೊತೆಯಾಗಿ ಸುತ್ತುತ್ತಿದ್ದೀರಾ? ಒಂದು ವೇಳೆ ಮಗನಿಗಾಗಿ ಎಂಬ ಉತ್ತರ ಆಗಿದ್ದರೆ ಡಿವೋರ್ಸ್ ಏಕೆ ಬೇಕಿತ್ತು? ಮಗನಿಗಾಗಿ ಮನಸ್ತಾಪ ಮರೆತು ಜೊತೆಯಾಗಿರಬೇಕಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು, ಮಾಜಿ ಪತಿ ಜೊತೆ ಈ ರೀತಿ ಸುತ್ತಾಡಿದ್ರೆ ಅರ್ಜುನ್ ಕಪೂರ್ ಬೇಸರ ಮಾಡಿಕೊಳ್ಳುವುದಿಲ್ವಾ? ಎಂದು ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಮಲೈಕಾ, ಸಖತ್ ಟ್ರೋಲ್ ಆಗ್ತಿರೋದಂತೂ ನಿಜ.
ಅರ್ಜುನ್ ಕಪೂರ್ ಜೊತೆ ಎರಡನೇ ಮದುವೆಯಾಗುತ್ತೇನೆ ಎಂದ ಮಲೈಕಾ
ಅರ್ಜುನ್ ಕಪೂರ್ ಜೊತೆ ರಿಲೇಶನ್‌ಶಿಪ್‌ನಲ್ಲಿರುವ ಮಲೈಕಾ, ಇತ್ತೀಚೆಗೆ ತಮ್ಮ ಎರಡನೇ ಮದುವೆ ಬಗ್ಗೆ ಮಾತನಾಡಿದ್ದರು. ತಾವು ನಡೆಸಿಕೊಡುತ್ತಿರುವ ' ಮೂವಿಂಗ್ ಇನ್ ವಿತ್ ಮಲೈಕಾ' ಕಾರ್ಯಕ್ರಮಕ್ಕೆ ಮಲೈಕಾ, ತಮ್ಮ ಸಹೋದರಿ ಅಮೃತಾ ಅರೋರ ಅವರನ್ನು ಕರೆ ತಂದಿದ್ದರು. ಈ ವೇಳೆ ಮದುವೆ ಬಗ್ಗೆ ಮಾತನಾಡಿದ್ದ ಮುನ್ನಿ, ''ನಾನು ಮತ್ತೊಂದು ಮದುವೆಗೆ ಅರ್ಹಳಿದ್ದೇನೆ. ಆದರೆ, ನಾನು ಮದುವೆ ಆಗುವುದು ಅರ್ಜುನ್ ಕಪೂರ್‌ಗಾಗಿ ಅಲ್ಲ, ನನ್ನ ತಾಯಿ ನನಗೆ ನೀಡಿರುವ ನನ್ನ ವಂಶದ ಬಳೆಗಳಿಗಾಗಿ, ಅದನ್ನು ನಾನು ಮತ್ತೆ ಧರಿಸಬೇಕಿದೆ. ಆದ್ದರಿಂದ ನಾನು ಮತ್ತೊಂದು ಮದುವೆಯಾಗುತ್ತೇನೆ'' ಎಂದು ಹೇಳುವ ಮೂಲಕ ಗಮನ ಸೆಳೆದಿದ್ದರು.