Martin OTT: ಮಾರ್ಟಿನ್ ಚಿತ್ರಕ್ಕೆ ಗಾಯದ ಮೇಲೆ ಬರೆ! ಧ್ರುವ ಸರ್ಜಾ ಸಿನಿಮಾಕ್ಕೆ ವಿದೇಶಿ ಒಟಿಟಿ ವೀಕ್ಷಕರಿಂದ ಮುಂದುವರಿದ ಕಟು ಟೀಕೆ
Martin OTT Review: ಮಾರ್ಟಿನ್ ಸಿನಿಮಾ ಬಿಡುಗಡೆಯಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಿಂತ ನೆಗೆಟಿವ್ ವಿಚಾರಗಳೇ ಹೆಚ್ಚು ಹೈಲೈಟ್ ಆಗಿದ್ದವು. ಪರಭಾಷಿಕರೂ ಈ ಸಿನಿಮಾ ಬಗ್ಗೆ ಕಟುವಾಗಿಯೇ ವಿಮರ್ಶೆ ನೀಡಿದ್ದರು. ಈಗ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಅಲ್ಲಿಯೂ ಅದೇ ಟೀಕೆಗಳು ಮುಂದುವರಿದಿವೆ.
Martin OTT: ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸಿರುವ ಮಾರ್ಟಿನ್ ಸಿನಿಮಾ ಅಕ್ಟೋಬರ್ 11ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಎ.ಪಿ ಅರ್ಜುನ್ ನಿರ್ದೇಶನದ ಈ ಸಿನಿಮಾವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದರು ನಿರ್ಮಾಪಕ ಉದಯ್ ಕೆ ಮೆಹ್ತಾ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಈ ಸಿನಿಮಾ ದೊಡ್ಡ ಮಟ್ಟದ ಹೈಪ್‌ನೊಂದಿಗೆ ಬಿಡುಗಡೆ ಆಗಿತ್ತು. ಆದರೆ, ಬಿಡುಗಡೆ ಬಳಿಕ ಸಿನಿಮಾದ ಬಗ್ಗೆ ನೆಗೆಟಿವ್ ಟಾಕ್‌ಗಳೇ ಕೇಳಿಬಂದವು. ಸೋಷಿಯಲ್ ಮೀಡಿಯಾದಲ್ಲಿಯೂ ಸಿನಿಮಾವನ್ನು ಟ್ರೋಲ್ ಮಾಡಲಾಯ್ತು. ಈಗ ಇದೇ ಸಿನಿಮಾ ಒಟಿಟಿಗೆ ಬಂದಿದೆ. ಅಲ್ಲಿಯೂ ಚಿತ್ರವನ್ನು ಹುರಿದು ಮುಕ್ಕುವವರೇ ಹೆಚ್ಚಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟಾಕ್
ಮಾರ್ಟಿನ್ ಸಿನಿಮಾ ಬಿಡುಗಡೆಯಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಿಂತ ನೆಗೆಟಿವ್ ವಿಚಾರಗಳೇ ಹೆಚ್ಚು ಹೈಲೈಟ್ ಆಗಿದ್ದವು. ತೆಲುಗಿನಿಂದ ಹಿಡಿದು, ಹಿಂದಿವರೆಗೂ ಬಹುತೇಕ ಯೂಟ್ಯೂಬರ್‌ಗಳು ಈ ಸಿನಿಮಾವನ್ನು ಚೆನ್ನಾಗಿಲ್ಲ ಎಂದೇ ವಿಮರ್ಶೆ ಮಾಡಿದ್ದರು. ಆದರೆ, ಸಿನಿಮಾ ಮಾತ್ರ ಕಟು ವಿಮರ್ಶೆಗಳಿಂದ ಮೇಲೆ ಏಳಲೇ ಇಲ್ಲ. ಮೊದಲ ವಾರವಿದ್ದ ಕಲೆಕ್ಷನ್ ಓಟ, ಎರಡನೇ ವಾರಕ್ಕೆ ಕುಸಿತ ಕಂಡಿತು. ಈ ಮೂಲಕ ಈ ವರ್ಷದ ಹೈಪ್ ಸೃಷ್ಟಿಸಿ ಸೋತ ಕನ್ನಡದ ದೊಡ್ಡ ಬಜೆಟ್‌ನ ಸಿನಿಮಾ ಎಂಬ ಹಣೆಪಟ್ಟಿಯನ್ನೂ ಮಾರ್ಟಿನ್ ಸಿನಿಮಾ ಪಡೆದುಕೊಂಡಿತು.
ಸಾಗರೋತ್ತರ ಪ್ರೈಂ ಬಳಕೆದಾರರಿಗೆ ಲಭ್ಯ
ಎ.ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಈಗಾಗಲೇ ಸ್ಟ್ರೀಮ್ ಆಗುತ್ತಿದೆ. ಆದರೆ, ಈ ಸಿನಿಮಾವನ್ನು ಭಾರತದಲ್ಲಿರುವವರು ನೋಡಲು ಸಾಧ್ಯವಿಲ್ಲ. ಏಕೆಂದರೆ, ಸಾಗರೋತ್ತರ ವೀಕ್ಷಕರಿಗೆ ಮಾತ್ರ ಈ ಸಿನಿಮಾ ಲಭ್ಯವಿದೆ. ಅಮೆರಿಕಾ ಮತ್ತು ಲಂಡನ್‌ನಲ್ಲಿ ಈ ಸಿನಿಮಾ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಅಲ್ಲಿಯೂ ಬಾಡಿಗೆ ಆಧಾರದ ಮೇಲೆ ಈ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಹೀಗೆ ಪ್ರೈಂಗೆ ಬಂದ ಸಿನಿಮಾವನ್ನು ವೀಕ್ಷಿಸಿದ ಸಾಗರೋತ್ತರ ವೀಕ್ಷಕರು, ಚಿತ್ರದ ಬಗ್ಗೆ ನೆಗೆಟಿವ್ ರಿವ್ಯೂವ್ ಶೇರ್ ಮಾಡುತ್ತಿದ್ದಾರೆ. ಚಿತ್ರದ ಕೆಲ ದೃಶ್ಯಗಳನ್ನು ಶೇರ್ ಮಾಡಿಕೊಂಡು, ಕಟುವಾಗಿಯೇ ಟೀಕೆ ಮಾಡುತ್ತಿದ್ದಾರೆ.
ಪ್ರೈಂ ಅಥವಾ ಜೀ5
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾವನ್ನು ಅದ್ದೂರಿ ನಿರ್ದೇಶಕ ಎ.ಪಿ ಅರ್ಜುನ್ ನಿರ್ದೇಶನ ಮಾಡಿದರೆ, ಉದಯ್ ಕೆ ಮೆಹ್ತಾ ನಿರ್ಮಾಣದ ಈ ಆಕ್ಷನ್ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದರು. ಈಗ ಇದೇ ಸಿನಿಮಾ ಒಟಿಟಿ ಸ್ಟ್ರೀಮಿಂಗ್ ವಿಚಾರದಲ್ಲಿಯೂ ಗೊಂದಲ ಸೃಷ್ಟಿಸಿದೆ. ಮಾರ್ಟಿನ್ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಈಗಾಗಲೇ ಮಾರ್ಟಿನ್, ಸಾಗರೋತ್ತರ ದೇಶಗಳಲ್ಲಿ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಅದೇ ರೀತಿ, ಭಾರತದಲ್ಲಿಯೂ ನ. 23ರಿಂದ ಇದೇ ಸಿನಿಮಾ ಜೀ 5 ಒಟಿಟಿಯಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ. ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯರಾಗಿ ವೈಭವಿ ಶಾಂಡಿಲ್ಯ ಮತ್ತು ಅನ್ವೇಶಿ ಜೈನ್ ನಟಿಸಿದ್ದಾರೆ.
ವಿಭಾಗ