Jothe Jotheyali Serial:ಆಕ್ಸಿಡೆಂಟ್‌, ಪ್ಲಾಸ್ಟಿಕ್‌ ಸರ್ಜರಿ ನಂತ್ರ ಕಥೆಗೆ ಮತ್ತೊಂದು ಟ್ವಿಸ್ಟ್‌ ಕೊಟ್ಟು ಗೊಂದಲ ಮೂಡಿಸಿದ ಆರೂರು ಜಗದೀಶ್
ಕನ್ನಡ ಸುದ್ದಿ  /  ಮನರಂಜನೆ  /  Jothe Jotheyali Serial:ಆಕ್ಸಿಡೆಂಟ್‌, ಪ್ಲಾಸ್ಟಿಕ್‌ ಸರ್ಜರಿ ನಂತ್ರ ಕಥೆಗೆ ಮತ್ತೊಂದು ಟ್ವಿಸ್ಟ್‌ ಕೊಟ್ಟು ಗೊಂದಲ ಮೂಡಿಸಿದ ಆರೂರು ಜಗದೀಶ್

Jothe Jotheyali Serial:ಆಕ್ಸಿಡೆಂಟ್‌, ಪ್ಲಾಸ್ಟಿಕ್‌ ಸರ್ಜರಿ ನಂತ್ರ ಕಥೆಗೆ ಮತ್ತೊಂದು ಟ್ವಿಸ್ಟ್‌ ಕೊಟ್ಟು ಗೊಂದಲ ಮೂಡಿಸಿದ ಆರೂರು ಜಗದೀಶ್

ಈ ನಡುವೆ ಆರ್ಯವರ್ಧನ್‌ಗೆ ಅಪಘಾತವಾಗಲು ಪತ್ನಿ ಅನು ಸಿರಿಮನೆಯೇ ಕಾರಣ ಎಂಬ ಆರೋಪ ಹೊರಿಸಲಾಗಿದೆ. ಅರ್ಯವರ್ಧನ್‌ ಸಾಯಿಸಲು ಅನುನೇ ಸುಪಾರಿ ಕೊಟ್ಟಿದ್ದು ಎಂಬ ಆರೋಪ ಹೊರಿಸಿ ಸ್ಮಶಾನದಲ್ಲೇ ಅನುವನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ.

<p>ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್‌</p>
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್‌ (PC: Zee Kannada Facebook)

'ಜೊತೆ ಜೊತೆಯಲಿ' ಧಾರಾವಾಹಿ ಈಗ ಗೊಂದಲದ ಗೂಡಾಗುತ್ತಿದೆ. ಹಾಗಂತ ನಾವು ಹೇಳ್ತಿಲ್ಲ, ಧಾರಾವಾಹಿ ವೀಕ್ಷಕರು ಹೇಳ್ತಿದ್ದಾರೆ. ನಟಿ ಅನಿರುದ್ಧ್‌ ಜತ್ಕರ್‌ ಧಾರಾವಾಹಿಯಿಂದ ಹೊರ ಹೋದ ನಂತರ ಕಥೆಯನ್ನು ಉಳಿಸಿಕೊಳ್ಳಲು ನಿರ್ದೇಶಕ ಆರೂರು ಜಗದೀಶ್‌ ನಾನಾ ಟ್ವಿಸ್ಟ್‌ ಕೊಟ್ಟಿದ್ದರು. ಆದರೆ ಇದು ವೀಕ್ಷಕರಲ್ಲಿ ಗೊಂದಲ ಮೂಡಿಸಿದೆ. ಜೊತೆಗೆ ಬೇಸರ ಉಂಟು ಮಾಡಿದೆ.

ಅನಿರುದ್ಧ್‌ , ಆರ್ಯವರ್ಧನ್‌ ಪಾತ್ರದಿಂದ ಹೊರ ಹೋದ ನಂತರ ವೀಕ್ಷಕರಿಗೂ ಕಥೆ ಹೇಗೆ ಮುಂದುವರೆಯಬಹುದು ಎಂಬ ಕುತೂಹಲ ಇತ್ತು. ಬೇರೊಬ್ಬ ನಟ ಈ ಪಾತ್ರಕ್ಕೆ ಬರಬಹುದು ಎನ್ನಲಾಗಿತ್ತು. ಆದರೆ ಹರೀಶ್‌ ರಾಜ್‌, ವಿಶ್ವಾಸ್‌ ದೇಸಾಯಿ ಆಗಿ ಬಂದರು, ಬರುತ್ತಿದ್ದಂತೆ ಆ ಪಾತ್ರ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಯ್ತು. ಇತ್ತ ಆರ್ಯವರ್ಧನ್‌ಗೆ ಅಪಘಾತವಾಗಿ ಆಸ್ಪತ್ರೆ ಸೇರಿ ಆತನ ಮುಖಕ್ಕೆ ವಿಶ್ವಾಸ್‌ ದೇಸಾಯಿ ಮುಖವನ್ನು ಪ್ಲಾಸ್ಟಿಕ್‌ ಸರ್ಜರಿ ಕೂಡಾ ಮಾಡಲಾಗಿದೆ. ಮನೆಯವರು, ಆರ್ಯವರ್ಧನ್‌ ಸತ್ತಿದ್ದಾರೆ ಎಂದು ತಿಳಿದಿದ್ದಾರೆ.

ಈ ನಡುವೆ ಆರ್ಯವರ್ಧನ್‌ಗೆ ಅಪಘಾತವಾಗಲು ಪತ್ನಿ ಅನು ಸಿರಿಮನೆಯೇ ಕಾರಣ ಎಂಬ ಆರೋಪ ಹೊರಿಸಲಾಗಿದೆ. ಅರ್ಯವರ್ಧನ್‌ ಸಾಯಿಸಲು ಅನುನೇ ಸುಪಾರಿ ಕೊಟ್ಟಿದ್ದು ಎಂಬ ಆರೋಪ ಹೊರಿಸಿ ಸ್ಮಶಾನದಲ್ಲೇ ಅನುವನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಆದರೆ ಇದೆಲ್ಲವನ್ನೂ ನೋಡುತ್ತಿರುವ ವೀಕ್ಷಕರು ಮಾತ್ರ ತಲೆಗೆ ಹುಳು ಬಿಟ್ಟವರಂತೆ ಆಡುತ್ತಿದ್ದಾರೆ. ಕಥೆಗೆ ಇಲ್ಲಸಲ್ಲದ ಟ್ವಿಸ್ಟ್‌ ಕೊಟ್ಟು ಗೊಂದಲ ಉಂಟುಮಾಡುವ ಬದಲಿಗೆ ಅನಿರುದ್ಧ್‌ ಅವರನ್ನು ಪಾತ್ರಕ್ಕೆ ಉಳಿಸಿಕೊಳ್ಳಬಹುದಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಕಥೆ ಮತ್ತೆ ಎತ್ತೆತ್ತ ಸಾಗಲಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

ಇತ್ತ ಅನಿರುದ್ಧ್‌ ಏನು ಮಾಡ್ತಿದ್ದಾರೆ ಎಂದು ಕಿರುತೆರೆ ಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಅನಿರುದ್ಧ್‌ ಕೆಲವೊಂದು ದೇವಸ್ಥಾನಗಳಿಗೆ ಭೇಟಿ ನೀಡಿ ಬಂದಿದ್ದರು. ನಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅನಿರುದ್ಧ್‌, ಸದ್ಯಕ್ಕೆ ನಟನೆಯ ಬಗ್ಗೆ ಏನೂ ನಿರ್ಧರಿಸಿಲ್ಲ. ಒಂದು ವೇಳೆ ಯಾವುದಾದರೂ ಒಳ್ಳೆಯ ಅವಕಾಶ ಸಿಕ್ಕರೆ, ಕಥೆ ನೋಡಿಕೊಂಡು ಮುಂದುವರಿಯುತ್ತೇನೆ. ಧಾರಾವಾಹಿಯಿಂದ ಹೊರಬಂದ ಬಳಿಕ ಸಿನಿಮಾ ಅವಕಾಶ ಬರುತ್ತಿವೆ. ಈಗಾಗಲೇ ಒಬ್ಬರು ಕಥೆ ಹೇಳಿದ್ದಾರೆ. ಪೂರ್ತಿ ಸಂಭಾಷಣೆ ಬರೆದು ತರುವ ಬಗ್ಗೆ ಹೇಳಿದ್ದಾರೆ. ಆ ಸ್ಕ್ರಿಪ್ಟ್‌ ನೋಡಿಕೊಂಡು ನನ್ನ ನಿರ್ಧಾರ ತಿಳಿಸುತ್ತೇನೆ.

ಈಗಾಗಲೇ ಭಾರತೀ ಅಮ್ಮಾವ್ರ ಕುರಿತಾದ ಸಾಕ್ಷ್ಯಚಿತ್ರ ಮಾಡಿದ್ದೇನೆ. ಅದಕ್ಕೆ ಪ್ರಶಸ್ತಿಯೂ ಸಿಕ್ಕಿದೆ. ಇದೀಗ ಅದೇ ರೀತಿ ಕಿರುಚಿತ್ರ ನಿರ್ದೇಶಿಸಬೇಕೆನ್ನುವ ಪ್ರಯತ್ನದಲ್ಲಿದ್ದೇನೆ. ಅದಕ್ಕೆ ಕಥೆ ಬರೆದು ನಿರ್ದೇಶನ ಮಾಡುವ ಪ್ಲಾನ್‌ ಕೂಡಾ ನಡೆಯುತ್ತಿದೆ. ಶೀಘ್ರದಲ್ಲೇ ಒಂದಷ್ಟು ಕೆಲಸಗಳು ಕಾರ್ಯ ರೂಪಕ್ಕೆ ಬರಲಿವೆ. ಇದೆಲ್ಲದರ ಜೊತೆಗೆ 'ಸ್ವಚ್ಛತೆಗಾಗಿ ನಾನೂ ಸಹಭಾಗಿ" ಅಭಿಯಾನ ಮುಂದುವರಿಸಿದ್ದೇನೆ. ಸ್ವಚ್ಛತೆ ಕುರಿತಾದ ಜಾಗೃತಿ ಮೂಡಿಸುವ ಕೆಲಸ ಮುಂದುವರಿದಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಜೀ ವಾಹಿನಿ ಹಂಚಿಕೊಳ್ಳುತ್ತಿರುವ ಜೊತೆ ಜೊತೆಯಲಿ ಪ್ರತಿ ಧಾರಾವಾಹಿ ಪೋಸ್ಟ್‌ಗೂ, ದಯವಿಟ್ಟು ಮತ್ತೆ ಅನಿರುದ್ಧ್‌ ಸರ್‌ ಅವರನ್ನು ಕರೆ ತನ್ನಿ ಎಂದು ಹಲವರು ಕಮೆಂಟ್‌ ಮಾಡುತ್ತಲೇ ಇದ್ದಾರೆ.

Whats_app_banner