ಐಸಿ- 814 ವೆಬ್‌ಸರಣಿಯ ಕಥೆ ಸರಿಯಿಲ್ಲ, ಕಂದಹಾರ್‌ ಹೈಜಾಕ್‌ ಸಂದರ್ಭ ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿ ಮುಖ್ಯಸ್ಥ ಅನಿಲ್‌ ಶರ್ಮಾ ಬೇಸರ-ott news cabin crew chief slams netflix series makers they have compromised the whole story pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಐಸಿ- 814 ವೆಬ್‌ಸರಣಿಯ ಕಥೆ ಸರಿಯಿಲ್ಲ, ಕಂದಹಾರ್‌ ಹೈಜಾಕ್‌ ಸಂದರ್ಭ ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿ ಮುಖ್ಯಸ್ಥ ಅನಿಲ್‌ ಶರ್ಮಾ ಬೇಸರ

ಐಸಿ- 814 ವೆಬ್‌ಸರಣಿಯ ಕಥೆ ಸರಿಯಿಲ್ಲ, ಕಂದಹಾರ್‌ ಹೈಜಾಕ್‌ ಸಂದರ್ಭ ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿ ಮುಖ್ಯಸ್ಥ ಅನಿಲ್‌ ಶರ್ಮಾ ಬೇಸರ

IC-814 row: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ IC 814: The Kandahar Hijack ವೆಬ್‌ಸರಣಿ ವಿವಾದದ ಸಂದರ್ಭದಲ್ಲಿ 1999ರಲ್ಲಿ ಕಂದಹಾರ್‌ ಹೈಜಾಕ್‌ ಆದ ಸಂದರ್ಭದಲ್ಲಿ ವಿಮಾನದಲ್ಲಿ ಕ್ಯಾಬಿನ್‌ ಸಿಬ್ಬಂದಿ ಮುಖ್ಯಸ್ಥ ಅನಿಲ್‌ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೆಬ್‌ ಸರಣಿಯಲ್ಲಿ ಘಟನೆಯನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಂದಹಾರ್‌ ಹೈಜಾಕ್‌ ಸಂದರ್ಭ ವಿಮಾನದಲ್ಲಿದ್ದ ಕ್ಯಾಬಿನ್‌ ಸಿಬ್ಬಂದಿ ಮುಖ್ಯಸ್ಥ  ಅನಿಲ್‌ ಶರ್ಮಾ
ಕಂದಹಾರ್‌ ಹೈಜಾಕ್‌ ಸಂದರ್ಭ ವಿಮಾನದಲ್ಲಿದ್ದ ಕ್ಯಾಬಿನ್‌ ಸಿಬ್ಬಂದಿ ಮುಖ್ಯಸ್ಥ ಅನಿಲ್‌ ಶರ್ಮಾ (Twitter)

IC-814 row: ಐಸಿ 814: ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿಗೆ ಸಂಬಂಧಪಟ್ಟ ವಿವಾದ ತುಸು ತಣ್ಣಗಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಮನ್ಸ್‌ಗೆ ನೆಟ್‌ಫ್ಲಿಕ್ಸ್‌ ಇಂಡಿಯಾದ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌ ಉತ್ತರ ನೀಡಿದ್ದಾರೆ. ಇದೀಗ ಆ ವೆಬ್‌ ಸರಣಿಯಲ್ಲಿದ್ದ ಹೈಜಾಕರ್‌ಗಳ ಹೆಸರನ್ನು ಬದಲಾಯಿಸಲು ನೆಟ್‌ಫ್ಲಿಕ್ಸ್‌ ಸಮ್ಮತಿ ನೀಡಿದೆ. ಇದೇ ಸಮಯದಲ್ಲಿ ಅಂದು ಈ ಘಟನೆ ನಡೆದ ಸಮಯದಲ್ಲಿ ವಿಮಾನದಲ್ಲಿದ್ದ ಕ್ಯಾಬಿನ್‌ ಸಿಬ್ಬಂದಿ ಮುಖ್ಯಸ್ಥರೇ ಈ ವೆಬ್‌ ಸರಣಿಯ ಗುಣಮಟ್ಟದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಅಪಹರಣಕ್ಕೊಳಗಾದ ವಿಮಾನದ ಕ್ಯಾಬಿನ್ ಸಿಬ್ಬಂದಿಯ ಮುಖ್ಯಸ್ಥ ಅನಿಲ್ ಶರ್ಮಾ ಈ ಒಟಿಟಿ ವೆಬ್‌ ಸರಣಿಯನ್ನು ಟೀಕಿಸಿದ್ದಾರೆ. ವೆಬ್‌ ಸರಣಿ ತಯಾರಕರು ಕಥೆಯ ವಿಷಯದಲ್ಲಿ ರಾಜಿಯಾಗಿದ್ದಾರೆ. ತಮ್ಮ ಕಂಫರ್ಟ್‌ಗಾಗಿ ಕಳಪೆ ಬೆಳಕಿನಲ್ಲಿ ವೆಬ್‌ ಸರಣಿ ನಿರ್ಮಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ನ್ಯೂಸ್‌9 ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವೆಬ್‌ ಸರಣಿ ಕುರಿತು ಬೇಸರವ್ಯಕ್ತಪಡಿಸಿದ್ದಾರೆ.

ಅಪಹರಣಕಾರರ ಬದಲಾದ ಹೆಸರುಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಜನರು ಆಕ್ರೋಶಕೊಂಡಿದ್ದಾರೆ. ಹೌದು ಈ ರೀತಿ ಮಾಡಬಾರದಿತ್ತು ಎಂದು ಅನಿಲ್‌ ಶರ್ಮಾ ಹೇಳಿದ್ದಾರೆ. "ನಾನು ಈ ವೆಬ್‌ ಸರಣಿ ನೋಡಲು ಆರಂಭಿಸಿದೆ. ಆದರೆ, ಪೂರ್ತಿ ನೋಡಲು ನನ್ನಿಂದ ಸಾಧ್ಯವಾಗಲಿಲ್ಲ. ಏಕೆಂದರೆ, ಅದು ನೋವಿನಿಂದ ಕೂಡಿದೆ" ಎಂದು ಅವರು ಹೇಳಿದ್ದಾರೆ.

"ಕಂಫರ್ಟ್‌ಗಾಗಿ ಈ ವೆಬ್‌ ಸರಣಿಯಲ್ಲಿ ಕಥೆಯಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುವೆ. ಈ ವಿವಾದ ಆರಂಭಗೊಂಡಾಗ ಸ್ವಲ್ಪ ಜನರು ಈ ವೆಬ್‌ ಸೀರಿಸ್‌ ಕುರಿತು ಆಕ್ರೋಶಗೊಂಡಿದ್ದಾರೆ ಎಂದುಕೊಂಡೆ. ಆದರೆ, ಈ ವಿಷಯದ ಕುರಿತು ನಿಜವಾಗಿಯೂ ಏಕೆ ಗಲಾಟೆಯಾಗುತ್ತಿದೆ ಎಂದು ಬಳಿಕ ಅರ್ಥವಾಯಿತು. ಈ ಸರಣಿಯಲ್ಲಿ ವಿಷಯಗಳನ್ನು ಪ್ರಸ್ತುತಪಡಿಸಿದ ರೀತಿ ನನಗೆ ಇಷ್ಟವಾಗಲಿಲ್ಲ" ಎಂದು ಅವರು ಹೇಳಿದ್ದಾರೆ.

ಈ ಒಟಿಟಿ ವೆಬ್‌ ಸರಣಿಯಲ್ಲಿ ಅಧಿಕಾರಶಾಹಿ ಅಂಶಗಳ ಕುರಿತ ಚಿತ್ರಣ ನನಗೆ ಮನವರಿಕೆಯಾಗಿಲ್ಲ. ""ವೆಬ್ ಸರಣಿಯಲ್ಲಿ ಚಿತ್ರಿಸಲಾದ ಸಂಧಾನಕಾರರಲ್ಲಿಶ್ರೀ ಅಜಿತ್ ದೋವಲ್ ಒಬ್ಬರಾಗಿದ್ದಾರೆ. ನಾನು ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಅವರು ನನ್ನ ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ.  ಜನರೊಂದಿಗೆ ಸಂವಹನ ನಡೆಸುವಾಗ ಅವರು ಎಷ್ಟು ಗಂಭೀರ ವ್ಯಕ್ತಿ ಎಂದು ನನಗೆ ತಿಳಿದಿದೆ. ಆದರೆ, ಈ ವೆಬ್‌ಸರಣಿಯಲ್ಲಿ ಈ ಪಾತ್ರವನ್ನು ಸ್ವಲಪ್ಪ ಬಫೂನರಿ ರೀತಿ ತೋರಿಸಿದ್ದಾರೆ" ಎಂದು ಅನಿಲ್‌ ಶರ್ಮಾ ಹೇಳಿದ್ದಾರೆ.

ವೆಬ್‌ ಸರಣಿಯಲ್ಲಿ ತೋರಿಸಿರುವುದಕ್ಕೆ ವಿರುದ್ಧವಾಗಿ ಜೂನಿಯರ್ ಮೋಸ್ಟ್ ಫ್ಲೈಟ್ ಪರ್ಸರ್ ಹೊರತುಪಡಿಸಿ ಅಪಹರಣಕಾರರು ಯಾರ ಮೇಲೂ ಹಲ್ಲೆ ನಡೆಸಿಲ್ಲ. ಆದರೆ, ವೆಬ್‌ ಸರಣಿಯಲ್ಲಿ ಹಲ್ಲೆ ನಡೆಸಿರುವಂತೆ ತೋರಿಸಲಾಗಿದೆ. ಇಂತಹ ವಿಷಯಗಳು ಸ್ಕ್ರಿಪ್ಟ್‌ ಆಕರ್ಷಕವಾಗಿಸಲು ಮಾಡಿರಬಹುದು. ಆದರೆ, ನನಗೆ ಇದನ್ನು ಹೆಚ್ಚು ಹೊತ್ತು ನೋಡಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದ್ದಾರೆ.

ಏನಿದು ಐಸಿ 814 ದಿ ಕಂದಹಾರ್‌ ಹೈಜಾಕ್‌ ವೆಬ್‌ಸರಣಿ ವಿವಾದ?

ಐಸಿ 814 ದಿ ಕಂದಹಾರ್‌ ಹೈಜಾಕ್‌ ವೆಬ್‌ಸರಣಿಯಲ್ಲಿ ಅಪಹರಣಕಾರರ ಹೆಸರನ್ನು ಬದಲಾಯಿಸಿದ ಕಾರಣ ನೆಟ್‌ಫ್ಲಿಕ್ಸ್‌ ಸಾಕಷ್ಟು ಹಿನ್ನಡೆ ಅನುಭವಿಸಿದೆ. #BoycottNetflix, #BoycottBollywood ಮತ್ತು #IC814 ಮುಂತಾದ ಹ್ಯಾಷ್‌ಟ್ಯಾಗ್‌ಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ನೆಟ್‌ಫ್ಲಿಕ್ಸ್‌ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದರು. ಬಳಕೆದಾರರು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಭಯೋತ್ಪಾದಕರನ್ನು ರಕ್ಷಿಸಲು ಹೈಜಾಕರ್‌ಗಳ ಹೆಸರನ್ನು 'ಶಂಕರ್' ಮತ್ತು 'ಭೋಲಾ' ಎಂದು ಬದಲಾಯಿಸಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್‌ಫ್ಲಿಕ್ಸ್ ಇಂಡಿಯಾದ ವಿಷಯ ಮುಖ್ಯಸ್ಥರನ್ನು ಮಂಗಳವಾರ ಕರೆದು ಮಾತನಾಡಿತ್ತು. ಕೆಲವು ಗಂಟೆಯ ಮಾತುಕತೆಯ ಬಳಿಕ ನೆಟ್‌ಫ್ಲಿಕ್ಸ್ ಅಪಹರಣಕಾರರ ನೈಜ ಮತ್ತು ಕೋಡ್ ಹೆಸರುಗಳನ್ನು ಸೇರಿಸಲು ನೆಟ್‌ಫ್ಲಿಕ್ಸ್‌ ಒಪ್ಪಿಗೆ ನೀಡಿತ್ತು. ಈ ವೆಬ್‌ ಸರಣಿಯು ಕ್ಯಾಪ್ಟನ್ ದೇವಿ ಶರಣ್ ಮತ್ತು ಸೃಂಜಯ್ ಚೌಧರಿ ಬರೆದಿರುವ 'ಫ್ಲೈಟ್ ಇನ್‌ಟು ಫಿಯರ್: ದಿ ಕ್ಯಾಪ್ಟನ್ಸ್ ಸ್ಟೋರಿ' ಪುಸ್ತಕವನ್ನು ಆಧರಿಸಿದೆ.