IC 814 ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ ವಿವಾದ; ಕೊನೆಗೂ ಉಗ್ರರ ನಿಜವಾದ ಹೆಸರನ್ನು ಸೇರಿಸಲು ಒಪ್ಪಿದ ನೆಟ್‌ಫ್ಲಿಕ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  Ic 814 ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ ವಿವಾದ; ಕೊನೆಗೂ ಉಗ್ರರ ನಿಜವಾದ ಹೆಸರನ್ನು ಸೇರಿಸಲು ಒಪ್ಪಿದ ನೆಟ್‌ಫ್ಲಿಕ್ಸ್‌

IC 814 ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ ವಿವಾದ; ಕೊನೆಗೂ ಉಗ್ರರ ನಿಜವಾದ ಹೆಸರನ್ನು ಸೇರಿಸಲು ಒಪ್ಪಿದ ನೆಟ್‌ಫ್ಲಿಕ್ಸ್‌

IC 814 ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ ವಿವಾದ ಕೊನೆಗೂ ತಣ್ಣಗಾಗಿದೆ. ವೆಬ್‌ ಸರಣಿಯಲ್ಲಿ ಪಾಕಿಸ್ತಾನಿ ಉಗ್ರರಿಗೆ ಹಿಂದೂಗಳ ಹೆಸರಿಟ್ಟಿದ್ದನ್ನು ಕೇಂದ್ರ ಖಂಡಿಸಿತ್ತು. ಇದೀಗ ಸರ್ಕಾಋದ ಸಮನ್ಸ್‌ಗೆ ಉತ್ತರಿಸಿರುವ ನೆಟ್‌ಫ್ಲಿಕ್ಸ್‌ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌, ಉಗ್ರರ ನಿಜ ಹೆಸರನ್ನು ಸೇರಿಸಲು ಒಪ್ಪಿದ್ದಾರೆ.

IC 814 ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ ವಿವಾದ; ಕೊನೆಗೂ ಉಗ್ರರ ನಿಜವಾದ ಹೆಸರನ್ನು ಸೇರಿಸಲು ಒಪ್ಪಿದ ನೆಟ್‌ಫ್ಲಿಕ್ಸ್‌
IC 814 ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ ವಿವಾದ; ಕೊನೆಗೂ ಉಗ್ರರ ನಿಜವಾದ ಹೆಸರನ್ನು ಸೇರಿಸಲು ಒಪ್ಪಿದ ನೆಟ್‌ಫ್ಲಿಕ್ಸ್‌ (PC: Twitter)

1999ರ ನೈಜ ಘಟನೆಯನ್ನು ಆಧರಿಸಿ ತಯಾರಾದ IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ನಿರ್ದೇಶಕ ಅನುಭವ್‌ ಸಿನ್ಹಾ ಹಾಗೂ ನೆಟ್‌ಫ್ಲಿಕ್ಸ್‌ ಮುಖ್ಯಸ್ಥರ ವಿರುದ್ಧ ಸಿನಿಪ್ರಿಯರುಂ ಗರಂ ಆಗಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡಾ ನೆಟ್‌ಫಿಕ್ಸ್ಸ ಮುಖ್ಯಸ್ಥೆಗೆ ಸಮನ್ಸ್‌ ನೀಡಿದೆ.

24 ಡಿಸೆಂಬರ್ 1999 ರಂದು ನಡೆದಿದ್ದ ಘಟನೆ

24 ಡಿಸೆಂಬರ್ 1999 ರಂದು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ದೆಹಲಿಗೆ ಹೊರಟ ವಿಮಾನವನ್ನು ಸುಮಾರು 40 ನಿಮಿಷಗಳ ನಂತರ ಐವರು ಉಗ್ರರು ಹೈಜಾಕ್ ಮಾಡಿದ್ದರು. ವಿಮಾನದಲ್ಲಿ 154 ಪ್ರಯಾಣಿಕರು ಮತ್ತು ಸಿಬ್ಬಂದಿಗಳಿದ್ದರು. ಭಾರತದಲ್ಲಿದ್ದ ಉಗ್ರರನ್ನು ತಮಗೆ ವಾಪಸ್‌ ನೀಡುವಂತೆ ಹರ್ಕತ್‌ ಉಲ್‌ ಮುಜಾಹಿದ್ದೀನ್‌ ಉಗ್ರರು ಭಾರತ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ವಿಮಾನದಲಿದ್ದ ಜನರು, ಸಿಬ್ಬಂದಿಯನ್ನು ಉಳಿಸುವ ಉದ್ದೇಶದಿಂದ ಅಂತಿಮವಾಗಿ ಭಯೋತ್ಪಾದಕರ ಬೇಡಿಕೆಗೆ ಒಪ್ಪಿಗೆ ನೀಡಿ ಉಗ್ರರನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಆಗ ವಿದೇಶಾಂಗ ಸಚಿವರಾಗಿದ್ದ ಜಸ್ವಂತ್ ಸಿಂಗ್, ಖುದ್ದಾಗಿ ಭಯೋತ್ಪಾದಕರನ್ನು ಕಂದಹಾರ್‌ಗೆ ಕರೆದೊಯ್ದಿದ್ದರು. ಈ ವಿಚಾರ ಆಗ ಬಹಳ ಸದ್ದು ಮಾಡಿತ್ತು.

ಇದೇ ವಿಚಾರವನ್ನು ಆಧಾರವಾಗಿಟ್ಟುಕೊಂಡು ಅನುಭವ್‌ ಸಿನ್ಹಾ ವೆಬ್‌ ಸೀರೀಸ್‌ ತಯಾರಿಸಿದ್ದರು. ಆದರೆ ಚಿತ್ರದಲ್ಲಿ ನಿಜವಾದ ಉಗ್ರರ ಹೆಸರನ್ನು ಮರೆ ಮಾಚಲಾಗಿತ್ತು. ಜೊತೆಗೆ ಇಬ್ಬರು ಉಗ್ರರಿಗೆ ಹಿಂದೂಗಳ ಹೆಸರು ಇಡಲಾಗಿತ್ತು. ಇದೇ ವಿಚಾರ ಹಿಂದೂಗಳನ್ನು ಕೆರಳಿಸಿತ್ತು. ವೆಬ್‌ ಸೀರಿಸ್‌ನಲ್ಲಿ ವಿಮಾನ ಅಪಹರಣ ಮಾಡಿದ್ದ ಉಗ್ರರಿಗೆ ಚೀಫ್‌, ಡಾಕ್ಟರ್, ಬರ್ಗರ್, ಭೋಲಾ, ಶಂಕರ್ ಎಂಬ ಹೆಸರನ್ನು ಇಡಲಾಗಿತ್ತು. ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಭೋಲಾ ಮತ್ತು ಶಂಕರ್ ಎಂಬ ಹಿಂದೂ ಹೆಸರನ್ನು ಇಟ್ಟಿರುವುದನ್ನು ಕೇಂದ್ರ ಪ್ರಶ್ನಿಸಿತ್ತು. ನೆಟ್‌ಫ್ಲಿಕ್ಸ್ ಇಂಡಿಯಾ ವಿಷಯದ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌ ಅವರಿಗೆ ಕೇಂದ್ರವು ಸಮನ್ಸ್‌ ನೀಡಿತ್ತು. ಇಷ್ಟೆಲ್ಲಾ ಬೆಳವಣಿಗೆ ನಂತರ ಈಗ ವೆಬ್‌ ಸೀರೀಸ್‌ ತಂಡ, ಪಾಕಿಸ್ತಾನ್‌ ಉಗ್ರರ ನಿಜವಾದ ಹೆಸರುಗಳನ್ನು ವೆಬ್‌ ಸೀರೀಸ್‌ನಲ್ಲಿ ಸೇರಿಸಲು ಒಪ್ಪಿಕೊಂಡಿದೆ.

ಉಗ್ರರ ನಿಜ ಹೆಸರು ಸೇರಿಸಲು ಒಪ್ಪಿದ ನೆಟ್‌ಫ್ಲಿಕ್ಸ್

ವೆಬ್‌ ಸೀರೀಸ್‌ ಆರಂಭದ ಟೈಟಲ್‌ ಕಾರ್ಡಿನಲ್ಲಿ ಕೂಡಾ ಹೈಜಾಕರ್‌ಗಳ ನಿಜವಾದ ಹೆಸರನ್ನು ಸೇರಿಸಲಾಗುವುದು ಎಂದು ನೆಟ್‌ಫಿಕ್ಸ್‌ ಇಂಡಿಯಾ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌, ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇಬ್ರಾಹಿಂ ಅಥರ್‌, ಸನ್ನಿ ಅಹ್ಮದ್‌ ಕಾಜಿ, ಜಹೂರ್‌ ಇಬ್ರಾಹಿಂ, ಶಾಹಿತ್‌ ಅಖ್ತರ್‌ ಹಾಗೂ ಸಯ್ಯದ್‌ ಶಕೀರ್‌, ಈ ಐವರೂ ಉಗ್ರರು 1999 ರಲ್ಲಿ ವಿಮಾನವನ್ನು ಹೈಜಾಕ್‌ ಮಾಡಿದ್ದರು. ಅವರ ಬೇಡಿಕೆಯ ಮೇರೆಗೆ, ಪ್ರಯಾಣಿಕರನ್ನು ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ ಸರ್ಕಾರವು ಮಸೂದ್‌ ಅಜರ್‌, ಒಮರ್‌ ಶೇಖ್‌ ಹಾಗೂ ಮುಸ್ತಾಕ್‌ ಅಹ್ಮದ್‌ ಜರ್ಗರ್‌ ಉಗ್ರರನ್ನು ಬಿಡುಗಡೆ ಮಾಡಿತ್ತು.

IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ನಲ್ಲಿ ವಿಜಯ್‌ ವರ್ಮಾ, ನಾಸಿರುದ್ದೀನ್‌ ಶಾ, ಪಂಕಜ್ ಕಪೂರ್, ದಿಯಾ ಮಿರ್ಜಾ, ಅರವಿಂದ್ ಸ್ವಾಮಿ, ಮನೋಜ್ ಪಹ್ವಾ, ಕುಮುದ್ ಮಿಶ್ರಾ, ಆದಿತ್ಯ ಶ್ರೀವಾಸ್ತವ್‌ ಹಾಗೂ ಇನ್ನಿತರರು ನಟಿಸಿದ್ದಾರೆ.

Whats_app_banner