ಕನ್ನಡ ಸುದ್ದಿ  /  Entertainment  /  Ott News Netflix Top Trending Movies And Web Series What Is The Top 10 Movies On Netflix India Right Now Mnk

Netflix Top Trending Movies: ನೆಟ್‌ಫ್ಲಿಕ್ಸ್‌ ಇಂಡಿಯಾದಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ, ವೆಬ್‌ಸಿರೀಸ್‌ಗಳಿವು

ನೆಟ್‌ಫ್ಲಿಕ್ಸ್‌ ಇಂಡಿಯಾದಲ್ಲಿ ಈ ಸಲ ಸಾಕಷ್ಟು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಟಾಪ್‌ 10ರಲ್ಲಿ ಸ್ಥಾನ ಪಡೆದುಕೊಂಡಿದೆ. ಆ ಸಿನಿಮಾಗಳ್ಯಾವವು, ವೆಬ್‌ಸಿರೀಸ್‌ಗಳ್ಯಾವವು ಎಂಬ ಕಿರು ಮಾಹಿತಿ ಇಲ್ಲಿದೆ.

ನೆಟ್‌ಫ್ಲಿಕ್ಸ್‌ ಇಂಡಿಯಾದಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ, ವೆಬ್‌ಸಿರೀಸ್‌ಗಳಿವು
ನೆಟ್‌ಫ್ಲಿಕ್ಸ್‌ ಇಂಡಿಯಾದಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ, ವೆಬ್‌ಸಿರೀಸ್‌ಗಳಿವು

Netflix India Top Trending Movies: ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಒಂದಕ್ಕಿಂತ ಒಂದು ಟಾಪ್‌ ಸಿನಿಮಾ ಮತ್ತು ವೆಬ್‌ ಸಿರೀಸ್‌ಗಳು ಪ್ರಸಾರ ಕಾಣುತ್ತಿವೆ. ಹತ್ತು ಹಲವು ಭಾಷೆಗಳ ಸಿನಿಮಾಗಳು ನೋಡುಗರ ಗಮನ ಸೆಳೆಯುತ್ತಿವೆ. ಮಾರ್ಚ್ 25 ರಿಂದ ಮಾರ್ಚ್ 31 ರವರೆಗೆ ನೆಟ್‌ಫ್ಲಿಕ್ಸ್ ಇಂಡಿಯಾ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಬಾಲಿವುಡ್‌ನ ಎನಿಮಲ್ ಮತ್ತು ಡಂಕಿ ಸಿನಿಮಾಗಳೂ ಇನ್ನೂ ಟಾಪ್ 10 ಟ್ರೆಂಡಿಂಗ್ ಸಿನಿಮಾ ಪಟ್ಟಿಯಲ್ಲಿವೆ. 

ರಣಬೀರ್‌ ಕಪೂರ್‌ ನಟನೆಯ ಎನಿಮಲ್‌ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ. ಶಾರುಖ್‌ ಖಾನ್‌ ಅಭಿನಯದ ಡಂಕಿ ಸಿನಿಮಾವನ್ನು ರಾಜ್‌ಕುಮಾರ್‌ ಹಿರಾನಿ ನಿರ್ದೇಶನ ಮಾಡಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಡೀಸೆಂಟ್‌ ಗಳಿಕೆ ಕಂಡಿದ್ದ ಈ ಸಿನಿಮಾ, ನೆಟ್‌ಫ್ಲಿಕ್ಸ್‌ನಲ್ಲಿ ಇನ್ನೂ ತನ್ನ ಟಾಪ್‌ ಓಟ ಮುಂದುವರಿಸಿದೆ. ಅದೇ  ರೀತಿ ಹೃತಿಕ್‌ ರೋಷನ್‌ ನಟನೆಯ ಫೈಟರ್ ಸಿನಿಮಾ ಸಹ ಟಾಪ್‌ನಲ್ಲಿದ್ದರೆ, ಮರ್ಡರ್ ಮುಬಾರಕ್, ರೆಡ್ ಐ, ಡ್ಯಾಮ್ಸೆಲ್, ಮಲಯಾಳಂನ ಅನ್ವೇಶಿಪ್ಪಿನ್ ಕಂಡೆತುಂ ಸಿನಿಮಾಗಳೂ ಟಾಪ್‌ 10ರಲ್ಲಿವೆ. ಹಾಗಾದರೆ ಭಾರತದಲ್ಲಿ ಯಾವೆಲ್ಲ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಟಾಪ್‌ ಟ್ರೆಂಡಿಂಗ್‌ನಲ್ಲಿವೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

ನೆಟ್‌ಫ್ಲಿಕ್ಸ್ ಇಂಡಿಯಾದ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳು

1. ಫೈಟರ್

2. ಮರ್ಡರ್ ಮುಬಾರಕ್

3. ರೆಡ್‌ ಐ

4. ಡ್ಯಾಮ್ಸೆಲ್

5. ಏನಿಮಲ್

6. ಅನ್ವೆಶಿಪ್ಪಿನ್ ಕಂಡೆಟುಮ್

7. ಡಂಕಿ

8. ದಿ ವೇಜಸ್‌ ಆಫ್‌ ಫಿಯರ್

9. ಮೆರ್ರಿ ಕ್ರಿಸ್ಮಸ್ (ಹಿಂದಿ)

10. ದಿ ಕರ್ಸ್ ಆಫ್ ಲಾ ಲೊರೊನಾ

ಇವು ನೆಟ್‌ಫ್ಲಿಕ್ಸ್ ಇಂಡಿಯಾದ ಟಾಪ್ 10 ವೆಬ್ ಸರಣಿಗಳಾಗಿವೆ

ನೆಟ್‌ಫ್ಲಿಕ್ಸ್ ಇಂಡಿಯಾ ವೆಬ್ ಸರಣಿಯ ಪಟ್ಟಿಯಲ್ಲಿ, ಇತ್ತೀಚೆಗೆ ಒಟಿಟಿ ಪ್ರವೇಶಿಸಿರುವ ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ ಅಗ್ರಸ್ಥಾನಕ್ಕೆ ಜಿಗಿದಿದೆ. ಹಾಗಾದರೆ ಟಾಪ್ 10ರಲ್ಲಿ ಯಾವೆಲ್ಲ ಸಿರೀಸ್‌ಗಳಿವೆ, ಮುಂದೆ ಓದಿ.

1. ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ: ಸೀಸನ್ 1

2. 3 ಬಾಡಿ ಪ್ರಾಬ್ಲಂ: ಸೀಸನ್ 1

3. ಮಾಮ್ಲಾ ಲೀಗಲ್ ಹೈ: ಸೀಸನ್ 1

4. ಟೆಸ್ಟಮೆಂಟ್: ದಿ ಸ್ಟೋರಿ ಆಫ್ ಮೋಸೆಸ್: ಸೀಸನ್ 1

5. ಕಪಿಲ್ ಶರ್ಮಾ: ಐ ಆಮ್‌ ನಾಟ್‌ ಡನ್‌ ಯಟ್

6. ದಿ ಜಂಟಲ್‌ಮೆನ್: ಸೀಸನ್ 1

7. ಕ್ವೀನ್‌ ಆಫ್‌ ಟಿಯರ್ಸ್‌: ಲಿಮಿಟೆಡ್‌ ಸರಣಿ

8. ಅವತಾರ್ ದಿ ಲಾಸ್ಟ್ ಏರ್‌ಬೆಂಡರ್: ಸೀಸನ್ 1

9. ಇಂದ್ರಾಣಿ ಮುಖರ್ಜಿ ಸ್ಟೋರಿ : ಸೀಸನ್ 1

10. ಬ್ಯಾಂಡಿಡೋಸ್: ಸೀಸನ್1

ನೆಟ್‌ಫ್ಲಿಕ್ಸ್‌ ತೆಕ್ಕೆಗೆ ಟಿಲ್ಲು ಸ್ಕ್ವೇರ್‌

ಇತ್ತೀಚೆಗಷ್ಟೇ ಆರಂಭವಾದ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಜಾಗತಿಕ ಮಟ್ಟದಲ್ಲೂ ಇಂಗ್ಲೀಷೇತರ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿರುವುದು ಗಮನಾರ್ಹ. ಸಿನಿಮಾ ಪಟ್ಟಿಯಲ್ಲಿ, ಜಾಗತಿಕ ಮಟ್ಟದ ಇಂಗ್ಲಿಷ್ ಅಲ್ಲದ ಸಿನಿಮಾಗಳಲ್ಲಿ ಫೈಟರ್ ಸಿನಿಮಾ ಮೂರನೇ ಸ್ಥಾನದಲ್ಲಿದೆ. ಚಿತ್ರಮಂದಿರದಲ್ಲಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಪಟ್ಟಿಯಲ್ಲಿ ಫೈಟರ್ ಸಹ ಒಂದು. ಈ ಟಾಪ್ ಟ್ರೆಂಡಿಂಗ್ ಸಿನಿಮಾಗಳ ಜೊತೆಗೆ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿನ ಹಲವು ದೊಡ್ಡ ದೊಡ್ಡ ಸಿನಿಮಾಗಳನ್ನೂ ಸಹ ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಇದೇ ನೆಟ್‌ಫ್ಲಿಕ್ಸ್‌ ಪುಷ್ಪ 2 ಮತ್ತು ಟಿಲ್ಲು ಸ್ಕ್ವೇರ್‌ ಸಿನಿಮಾಗಳ ಡಿಜಿಟಲ್ ಹಕ್ಕುಗಳನ್ನೂ ಸಹ ಪಡೆದುಕೊಂಡಿದೆ.

IPL_Entry_Point