ಕನ್ನಡ ಸುದ್ದಿ  /  ಮನರಂಜನೆ  /  ಚಿತ್ರಮಂದಿರದಲ್ಲಿ ಶಾಖಾಹಾರಿ ಸಿನಿಮಾ ನೋಡಲು ಆಗಿಲ್ವಾ? ಹಾಗಾದ್ರೆ ಒಟಿಟಿಯಲ್ಲಿ ಮಿಸ್‌ ಮಾಡ್ಬೇಡಿ; ವೀಕ್ಷಣೆ ಕುರಿತ ಮಾಹಿತಿ ಹೀಗಿದೆ

ಚಿತ್ರಮಂದಿರದಲ್ಲಿ ಶಾಖಾಹಾರಿ ಸಿನಿಮಾ ನೋಡಲು ಆಗಿಲ್ವಾ? ಹಾಗಾದ್ರೆ ಒಟಿಟಿಯಲ್ಲಿ ಮಿಸ್‌ ಮಾಡ್ಬೇಡಿ; ವೀಕ್ಷಣೆ ಕುರಿತ ಮಾಹಿತಿ ಹೀಗಿದೆ

ಫೆಬ್ರವರಿಯಲ್ಲಿ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದ್ದ ಶಾಖಾಹಾರಿ ಸಿನಿಮಾ, ಇದೀಗ ಸದ್ದಿಲ್ಲದೆ ಒಟಿಟಿ ಅಂಗಳ ಪ್ರವೇಶಿಸಿದೆ. ಕನ್ನಡ ವೀಕ್ಷಕರ ಜತೆಗೆ ಪರಭಾಷೆಯ ನೋಡುಗರಿಂದಲೂ ಸಿನಿಮಾಕ್ಕೆ ಮೆಚ್ಚುಗೆ ಸಿಕ್ಕಿದೆ.

ಚಿತ್ರಮಂದಿರದಲ್ಲಿ ಶಾಖಾಹಾರಿ ಸಿನಿಮಾ ನೋಡಲು ಆಗಿಲ್ವಾ? ಹಾಗಾದ್ರೆ ಒಟಿಟಿಯಲ್ಲಿ ಮಿಸ್‌ ಮಾಡ್ಬೇಡಿ; ವೀಕ್ಷಣೆ ಕುರಿತ ಮಾಹಿತಿ ಹೀಗಿದೆ
ಚಿತ್ರಮಂದಿರದಲ್ಲಿ ಶಾಖಾಹಾರಿ ಸಿನಿಮಾ ನೋಡಲು ಆಗಿಲ್ವಾ? ಹಾಗಾದ್ರೆ ಒಟಿಟಿಯಲ್ಲಿ ಮಿಸ್‌ ಮಾಡ್ಬೇಡಿ; ವೀಕ್ಷಣೆ ಕುರಿತ ಮಾಹಿತಿ ಹೀಗಿದೆ

Shakhahaari On OTT: ಕೆಲ ತಿಂಗಳ ಹಿಂದಷ್ಟೇ ಬಿಡುಗಡೆ ಆಗಿದ್ದ ಶಾಖಾಹಾರಿ ಸಿನಿಮಾ, ನೋಡುಗರಿಂದ ಮೆಚ್ಚುಗೆ ಪಡೆದಿತ್ತು. ಮರ್ಡರ್‌ ಮಿಸ್ಟರಿ ಎಳೆಯ ಈ ಸಿನಿಮಾದಲ್ಲಿ ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ವಿಮರ್ಶೆ ದೃಷ್ಟಿಯಿಂದ ಸೈ ಎನಿಸಿಕೊಂಡಿದ್ದ ಈ ಸಿನಿಮಾ, ಗಳಿಕೆ ವಿಚಾರದಲ್ಲಿ ಕೊಂಚ ಮಂಕಾಗಿತ್ತು. ಆದರೆ, ಚೊಚ್ಚಲ ನಿರ್ದೇಶನದಲ್ಲಿಯೇ ಭರವಸೆಯ ನಿರ್ದೇಶಕ ಎನಿಸಿಕೊಂಡಿದ್ದರು ಸಂದೀಪ್‌ ಸುಂಕದ್.‌ ಅಚ್ಚುಕಟ್ಟಾಗಿಯೇ ಕಥೆಯನ್ನು ನೋಡುಗರ ಎದೆಗಿಳಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಫೆ. 16ರಂದು ಶಾಖಾಹಾರಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಸುದೀರ್ಘ ಮೂರು ತಿಂಗಳ ಬಳಿಕ ಇದೇ ಸಿನಿಮಾ ಒಟಿಟಿಗೆ ಎಂಟ್ರಿಕೊಟ್ಟಿದೆ. ಸದ್ದು ಗದ್ದಲ ಮಾಡದೇ ಒಟಿಟಿಯಲ್ಲಿ ಕಂಡ ಈ ಚಿತ್ರವನ್ನು ಕನ್ನಡದ ಸಿನಿಮಾ ವೀಕ್ಷಕರಷ್ಟೇ ಅಲ್ಲದೆ, ಪರಭಾಷಿಕರೂ ವೀಕ್ಷಣೆ ಮಾಡಿ ಹೌದೌದು ಎನ್ನುತ್ತಿದ್ದಾರೆ. ಮರ್ಡರ್‌ ಮಿಸ್ಟರಿಗೆ ಮನಸೋತಿದ್ದಾರೆ. ಹಾಗಾದರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಜುಗಲ್‌ಬಂದಿಯ ಈ ಸಿನಿಮಾ ಯಾವ ಒಟಿಟಿಯಲ್ಲಿ ನೋಡಬಹುದು? ಇಲ್ಲಿದೆ ಮಾಹಿತಿ.

ಈ ಒಟಿಟಿಯಲ್ಲಿ ವೀಕ್ಷಿಸಿ

ಚಿತ್ರಮಂದಿರಗಳಲ್ಲಿ ಪಾಸಿಟಿವ್ ಟಾಕ್ ಪಡೆದಿರುವ ಶಾಖಾಹಾರಿ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಶುಕ್ರವಾರದಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಈ ಸಿನಿಮಾ ಥಿಯೇಟ್ರಿಕಲ್ ಬಿಡುಗಡೆಯಾದ ಮೂರು ತಿಂಗಳ ನಂತರ OTTಯಲ್ಲಿ ವೀಕ್ಷಣೆಗೆ ಸಿಕ್ಕಿದೆ. ಮರ್ಡರ್ ಮಿಸ್ಟರಿ ಥ್ರಿಲ್ಲರ್ ಆಗಿ ತೆರೆಕಂಡ ಈ ಸಿನಿಮಾದಲ್ಲಿ ರಂಗಾಯಣ ರಘು ಅವರ ಅಭಿನಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಚ್ಚರಿಯ ತಿರುವುಗಳಿರುವ ಈ ಕಥೆಯನ್ನು ನಿರ್ದೇಶಕರು ತೆರೆಗೆ ತಂದಿರುವ ರೀತಿಯೂ ಅಷ್ಟೇ ಸೊಗಸಾಗಿದೆ ಎಂದೇ ವಿಮರ್ಶಕರು ಚಿತ್ರವನ್ನು ಹೊಗಳಿದ್ದರು.

ಏನಿದು ಶಾಖಾಹಾರಿ ಕಥೆ

ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್‌ ಸುಬ್ಬಣ್ಣ (ರಂಗಾಯಣ ರಘು) ಮಲೆನಾಡಿನ ಒಂದು ಸಣ್ಣ ಪಟ್ಟಣದಲ್ಲಿ ಸಸ್ಯಾಹಾರಿ ಹೋಟೆಲ್ ನಡೆಸುತ್ತಿರುತ್ತಾನೆ. ಮಧ್ಯವಯಸ್ಕ ಸುಬ್ಬಣ್ಣ ಅವಿವಾಹಿತ. ಏಕಾಂಗಿ ಜೀವನ. ಹೀಗಿರುವಾಗಲೇ ಸುಬ್ಬಣ್ಣನ ಸಸ್ಯಾಹಾರಿ ಹೊಟೇಲ್‌ಗೆ ಅನಿರೀಕ್ಷಿತವಾಗಿ ವಿನಯ್‌ ಎಂಟ್ರಿಯಾಗುತ್ತಾನೆ. ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಆರೋಪಿ ವಿನಯ್ ಪೊಲೀಸರಿಂದ ತಪ್ಪಿಸಿಕೊಂಡು ಸುಬ್ಬಣ್ಣನ ಹೋಟೆಲ್‌ನಲ್ಲಿ ತಲೆಮರೆಸಿಕೊಳ್ಳುತ್ತಾನೆ.

ಕಣ್ಮರೆಯಾದ ವಿನಯ್‌ನನ್ನು ಹುಡುಕುವ ಪೊಲೀಸ್‌ ಅಧಿಕಾರಿ ಮಲ್ಲಿಕಾರ್ಜುನ್‌ (ಗೋಪಾಲಕೃಷ್ಣ ದೇಶಪಾಂಡೆ) ಸುಬ್ಬಣ್ಣನ ಬಗ್ಗೆ ಕೆಲವು ಆಘಾತಕಾರಿ ಸಂಗತಿಗಳನ್ನು ತಿಳಿದುಕೊಳ್ಳುತ್ತಾನೆ. ಆ ಘಟನೆಗಳೇನು? ತನ್ನ ಹೋಟೆಲ್‌ಗೆ ಬರುವವರನ್ನು ಸುಬ್ಬಣ್ಣ ಏಕೆ ಕೊಲ್ಲುತ್ತಿದ್ದಾನೆ? ಸುಬ್ಬಣ್ಣನ ಹಿನ್ನೆಲೆ ಏನು? ಸಸ್ಯಾಹಾರಿ ಹೊಟೇಲ್‌ ಶಾಖಾಹಾರಿಯಾಗಿ ಬದಲಾಗುತ್ತದೆ. ಹೀಗೆ ಕಥೆ ಪದರಗಳಾಗಿ ತೆರೆದುಕೊಳ್ಳುತ್ತ ಹೋಗುತ್ತದೆ.

IMDbಯಲ್ಲಿ 8.3 ರೇಟಿಂಗ್

ಸಸ್ಯಾಹಾರಿ ಚಿತ್ರಕ್ಕೆ IMDbಯಲ್ಲಿ 8.3 ರೇಟಿಂಗ್ ಸಿಕ್ಕಿದೆ. ಈ ಚಿತ್ರವನ್ನು ತೆಲುಗು ಮತ್ತು ತಮಿಳು ಭಾಷೆಗಳಿಗೆ ರಿಮೇಕ್ ಮಾಡುವ ಪ್ರಯತ್ನ ನಡೆಯುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಒಂದು ವೇಳೆ ರಿಮೇಕ್‌ ಆದರೂ, ರಂಗಾಯಣ ರಘು ಮಾಡಿದ ಪಾತ್ರ ಯಾರ ಪಾಲಾಗಲಿದೆ ಎಂಬ ಕೌತುಕವೂ ಮನೆ ಮಾಡಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024